Home Cinema ವಾಟ್..! “ಅಭಿನಂದನ್” ಕಥೆಗೆ “ಪುನೀತ್” ಆಗ್ತಾರಾ ನಾಯಕ..? ಅಜಯ್, ರಣ್ವೀರ್, ಅಕ್ಷಯ್, ಸೂರ್ಯ, ಯಾರಾಗ್ತಾರೆ “ಸೈನಿಕ”..?

ವಾಟ್..! “ಅಭಿನಂದನ್” ಕಥೆಗೆ “ಪುನೀತ್” ಆಗ್ತಾರಾ ನಾಯಕ..? ಅಜಯ್, ರಣ್ವೀರ್, ಅಕ್ಷಯ್, ಸೂರ್ಯ, ಯಾರಾಗ್ತಾರೆ “ಸೈನಿಕ”..?

2673
0
SHARE

ದೇಶದ್ಯಾಂತ ಕಳೆದ ಕೆಲ ದಿನಗಳಿಂದ ಅಭಿನಂದನ್ ದೇಶಾಭಿಮಾನಕ್ಕೆ ಜೈಕಾರ ಮೊಳಗುತ್ತಿದೆ. ಪಾಪಿ ಪಾಕಿಸ್ತಾನದಿಂದ ಸುರಕ್ಷಿತವಾಗಿ ಭಾರತ ಸೇರಿರುವ ವಿಂಗ್ ಕಮಾಂಡರ್ ಅಭಿನಂದನ್ ಪರಾಕ್ರಮದ ಕಡೆಗೆ ಬಾಲಿವುಡ್ ದೃಷ್ಟಿ ನೆಟ್ಟಿತ್ತು.

ಅಭಿನಂದನ್ ಪರಾಕ್ರಮವನ್ನು ತೆರೆಮೇಲೆ ತರಲು ಟೈಟಲ್‌ಗಾಗಿ ನೂಗು ನುಗ್ಗಲ್ಲು ಉಂಟಾಗಿತ್ತು. ಇದಾಗಿ ಒಂದೆರಡು ದಿನ ಕಳೆಯುವ ಹೊತ್ತಿನಲ್ಲೇ, ಇದೀಗ ಬಾಲಿವುಡ್ & ಸ್ಯಾಂಡಲ್‌ವುಡ್‌ನಲ್ಲಿ ಅಭಿನಂದನ್ ಪಾತ್ರಕ್ಕೆ ದೊಡ್ಡ ದೊಡ್ಡ ಸ್ಟಾರ್‌ಗಳ ಹೆಸರು ಕೇಳಿಬಂದಿದ್ದು. ಬಿ-ಟೌನ್ ಅಂಗಳದಲ್ಲಿ ಮಟ್ಟದ ಸಂಚಲನವನ್ನೇ ಸೃಷ್ಟಿಸುತ್ತಿದೆ. ಯಸ್.. ದೇಶದಾದ್ಯಂತ ಅಭಿನಂದನ್ ದೇಶಾಭಿಮಾನ ವನ್ನು ಮೆರೆಯುತ್ತಿದ್ದಾರೆ.

ಅವರ ಸಾಧನೆಗೆ ಸಲಾಂ ಹೊಡೆಯುತ್ತಿದ್ದಾರೆ. ಈ ವೀರ ಸೈನಿಕ ಕಥೆ ಸಿನಿಮಾ ಆಗ್ತಿದ್ದು. ಪಾತ್ರವನ್ನು ಯಾವ ಸ್ಟಾರ್ ಮಾಡಿದ್ರೆ ನ್ಯಾಯ ಒದಗಿಸಬಲ್ಲರು ಎಂಬ ಲೆಕ್ಕಾಚಾರಗಳು ಬಾಲಿವುಡ್ ಅಂಗಳದಲ್ಲಿ ನಡೀಯುತ್ತಿದೆ. ಹೀಗೀರುವಾಗ್ಲೇ ಚಂದನವನದ ಯುವರತ್ನ ಪುನೀತ್ ರಾಜ್‌ಕುಮಾರ್ ಅಭಿನಂದನ್ ಪಾತ್ರಕ್ಕೆ ಅವಕಾಶ ಬಂದ್ರೆ ನಟಿಸೋದಕ್ಕೆ ಸಿದ್ದ ಎಂದಿದ್ದಾರೆ.ನಟಸಾರ್ವಭೌಮ ಸಿನಿಮಾದ ಸಕ್ಸಸ್‌ನಿಂದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸೇರಿ ಚಿತ್ರತಂಡದ ಸದಸ್ಯರು ರಾಜ್ಯಾದ್ಯಂತ ವಿಜಯ್ ಯಾತ್ರೆ ಕೈಗೊಂಡಿದ್ರು.

ಈ ವೇಳೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪಾಕ್ ಕಪಿ ಮುಸ್ಠಿಯಿಂದ ಹೊರಬಂದ ಏರ್ ವಿಂಗ್ ಕಮಾಂಡರ್ ಅಭಿನಂದನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು. ಅವರು ನಿಜವಾದ ಹೀರೋ.. ಇನ್ನು ಅವರ ಬಗ್ಗೆ ಸಿನಿಮಾ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಯೋಚಿಸುವುದಾಗಿ ಹೇಳಿದ್ದಾರೆ. ಈ ಸಮಯದಲ್ಲಿ ಅಭಿನಂದನ್ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

ಇನ್ನು ಪುಲ್ವಾಮಾ ಅಟ್ಯಾಕ್ ನಡೆದ ಮರುದಿನದಿಂದ್ಲೇ ಅಟ್ಯಾಕ್‌ಗೆ ಸಂಬಂಧಿಸಿದ ಟೈಟಲ್‌ಗಳಿಗಾಗಿ ಬಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್‌ನಲ್ಲಿ ನೊಂದಣಿಗಾಗಿ ನೂಕು ನುಗ್ಗಲು ಉಂಟಾಗಿತ್ತು. ಸದ್ಯ ಟೈಟಲ್ ಸಮಸ್ಯೆ ಬಗೆಹರಿದಿದ್ದು, ಈಗ ಅಭಿನಂದನ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಬೇಕೆಂಬ ಚರ್ಚೆ ಬಾಲಿವುಡ್‌ನಲ್ಲಿ ಬೇಜಾನ್ ಸದ್ದು ಮಾಡ್ತಿದೆ. ಆ ಒಂದು ರೇಸ್‌ನಲ್ಲಿ ಬಾಲಿವುಡ್‌ನ ಸ್ಟಾರ್ ನಟರುಗಳಾದ ಅಜಯ್ ದೇವಗನ್, ರಣವೀರ್ ಸಿಂಗ್, ಅಕ್ಷಯ್ ಕುಮಾರ್ ಅವರ ಹೆಸರು ಹೆಜ್ಜಾಗಿ ಚಾಲ್ತಿಯಲ್ಲಿದ್ದು.

ಯಾವ ಸ್ಟಾರ್ ಅಭಿನಂದನ್ ಆಗಿ ನಟಿಸಲಿದ್ದಾರೆಂಬ ಕುತೂಹಲ ತೀವ್ರವಾಗಿ ಕಾಡೊದಕ್ಕೆ ಶುರುವಾಗಿದೆ. ಅಕ್ಷಯ್, ರಣವೀರ್, ಅಜಯ್ ದೇವಗನ್ ಈ ಹಿಂದೆ ಯಾವುದೇ ಸೈನಿಕನ ಜೀವನಕಥೆಯಾಧಾರಿತ ಚಿತ್ರಗಳಲ್ಲಿ ನಟಿಸಿರಲಿಲ್ಲ. ಈಗ ಖಡಕ್ ಪಾತ್ರಕ್ಕೆ ನಟಿಸುವ ಅವಕಾಶ ಈ ನಟರ ಪಾಲಿಗೆ ಒದಗಿ ಬಂದಿದ್ದು. ಯಾರಿಗೆ ಅಭಿನಂದನ್ ಪಾತ್ರ ಒದಗಿಬರಲಿದೆ ಎಂಬ ಕುತೂಹಲ ಹೆಚ್ಚಾಗಿಸಿದೆ.ಹೌದು, ಬಾಲಿವುಡ್ ಮಾತ್ರವಲ್ಲದೆ, ಕಾಲಿವುಡ್‌ನಲ್ಲೂ ವೀರ ಯೋಧನ ಸಿನಿಮಾಕ್ಕಾಗಿ ಬೇಡಿಕೆ ಹೆಚ್ಚಾಗಿದೆ.

ಹಾಗಾಗಿನೇ ನಟ ಸೂರ್ಯಗೂ ಅಭಿನಂದನ್ ಪಾತ್ರಕ್ಕೆ ಬಣ್ಣ ಅಚ್ಚಲು ನಿರ್ಮಾಪಕರು ಹಿಂದೆ ಬಿದ್ದಿದ್ದಾರೆನ್ನುವ ಮಾತುಗಳು ಕೇಳಿಬರ್ತಿದೆ. ಈಗಾಗಲ್ಲೇ ದೇಶಾಭಿಮಾನ ಹೆಚ್ಚಿಸುವ ಅನೇಕ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ರಿಲೀಸ್ ಆಗಿದೆ. ಇತ್ತೀಚೆಗೆ ತೆರೆಕಂಡ ಉರಿ ಸಿನಿಮಾ ಆ ಸಾಲಿನಲ್ಲಿ ಹೊಸ ಸೇರ್ಪಡೆಗೊಂಡಿದ್ದು. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡ್ತಿದ್ದೆ. ನಮ್ಮ ವೀರ ಯೋಧರ ಶ್ರಮದ ಅನಾವರಣವಿರುವ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ಹೀಗಿರುವಾಗ್ಲೇ ಉರಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಹಣದೋಚ್ಚುತ್ತಿದ್ದ ಬೆನ್ನಲ್ಲೆ.

ಅದೇ ಜಾನರ್‌ನ ಸಿನಿಮಾ ಮಾಡುವ ಯೋಚನೆಯಲ್ಲಿದ್ದಾರೆ ನಿರ್ಮಾಪಕರು. ಈಗಾಲ್ಲೇ ಪುಲ್ವಾಮಾ, ದಿ ಡೆಡ್ಲಿ ಅಟ್ಯಾಕ್, ಪುಲ್ವಾಮಾ ಅಟ್ಯಾಕ್ ವರ್ಸಸ್ ಸರ್ಜಿಕಲ್ ಸ್ಟ್ರೈಕ್ ೨.೦ಎಂಬ ಹೆಸರಿನಲ್ಲಿ ಸಿನಿಮಾ ಟೈಟಲ್‌ಗಳು ರಿಜಿಸ್ಟರ್ ಆಗಿದೆ.ಹಾಗೇ, ಕೆಲವು ನಿರ್ಮಾಪಕರು ಇಂಡಿಯಾ- ಪಾಕ್ ಆಧಾರಿತವಾದ ವೆಬ್ ಸರಣಿಗಳನ್ನು ನಿರ್ಮಿಸಲು ಮುಂದಾಗಿದ್ದಾರೆನ್ನಲಾಗ್ತಿದೆ. ಒಟ್ಟಾರೆ. ಅಭಿನಂದನ್ ದೇಶಾಭಿಮಾನ ಸಿನಿಮಾ ರೂಪ ಪಡೆದುಕೊಂಡಿದ್ದು. ವೀರಯೋಧನಾಗಿ ಯಾವ ಸ್ಟಾರ್ ಬಣ್ಣ ಹಚ್ಚಲಿದ್ದಾರೆಂದು ಸಿನಿಮಾ ಪ್ರಿಯರು ಕುತೂಹಲದ ಕಣ್ಣುಗಳಿಂದ ನೋಡುವಂತೆ ಮಾಡ್ತಿದೆ.

LEAVE A REPLY

Please enter your comment!
Please enter your name here