Home Cinema ವಾಟ್..! ಕನ್ನಡದಲ್ಲಿ ಬರುತ್ತಾ ಮೋದಿ ಜೀವನಾಧಾರಿತ ಚಿತ್ರ..! ನರೇಂದ್ರ ಮೋದಿಯವ್ರ ಜೀವನ ಇದೀಗ ಸಿನಿಮಾ ರೂಪ..!?

ವಾಟ್..! ಕನ್ನಡದಲ್ಲಿ ಬರುತ್ತಾ ಮೋದಿ ಜೀವನಾಧಾರಿತ ಚಿತ್ರ..! ನರೇಂದ್ರ ಮೋದಿಯವ್ರ ಜೀವನ ಇದೀಗ ಸಿನಿಮಾ ರೂಪ..!?

621
0
SHARE

ಭವಿಷ್ಯದಲ್ಲಿ ಕರ್ನಾಟಕದಲ್ಲಿ ಡಬ್ಬಿಂಗ್ ಮಾರ್ಕೆಟ್, ಓಪನ್ ಆಗುತ್ತೆ.. ಅದು, ಅನಾಯಾಸವಾಗಿ ಅನ್ನುವದಕ್ಕೆ ಇನ್ನೊಂದು ಸಾಕ್ಷಿಯಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವ್ರ ಜೀವನಾಧಾರಿತ ಸಿನಿಮಾ ಕಾಣ್ಸುತ್ತೆ.ಯಸ್, ನರೇಂದ್ರ ಮೋದಿಯವ್ರ ಜೀವನ ಇದೀಗ ಸಿನಿಮಾ ರೂಪ ಪಡೆದುಕೊಳ್ತಿದೆ. ಕರ್ನಾಟಕದ ಅಳಿಯ ವಿವೇಕ್ ಓಬೆರಾಯ್ ನರೇಂದ್ರ ಮೋದಿ ಪಾತ್ರದಲ್ಲಿ ಕಾಣಸಿಗಲಿದ್ದಾರೆ.

ಇನ್ನೂ.. ಇದು, ಪ್ರಧಾನ ಮಂತ್ರಿ ಮೋದಿಯವ್ರ ಜೀವನಕಥೆ. ಹಾಗಾಗೇ, ಭಾರತದ ಮೂಲೆ ಮೂಲೆಯನ್ನೂ ಸಿನಿಮಾ ತಲುಪಬೇಕೆನ್ನುವ ಆಶಯ ಚಿತ್ರತಂಡಕ್ಕಿದೆ. ಇದೇ ಕಾರಣಕ್ಕೆ.. ಚಿತ್ರವನ್ನ ೨೩ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಬೇಕೆನ್ನುವ ಪ್ರಯತ್ನ ಈಗಿನಿಂದನೇ ನಡೆಯುತ್ತಿದೆ. ಇದ್ರಲ್ಲಿ ಕನ್ನಡನೂ ಒಂದು.

ಇದಕ್ಕೆ ಸಾಕ್ಷಿ ಅನ್ನುವಂತೆ ಉಮಂಗ್ ಕುಮಾರ್ ನಿರ್ದೇಶನದಲ್ಲಿ ಬರಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸಿನಿಮಾದ ಫಸ್ಟ್ ಲುಕ್‌ನ್ನ ಇತ್ತೀಚಿಗೆ ಬಿಡುಗಡೆ ಮಾಡಲಾಗಿದೆ. ಅದು, ಭರ್ತಿ ೨೩ ಭಾಷೆಗಳಲ್ಲಿ. ಇದೇ ೨೩ ಭಾಷೆಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಿನಿಮಾದ ಫಸ್ಟ್ ಲುಕ್ ಕನ್ನಡದಲ್ಲೂ ಕಂಗೊಳಿಸುತ್ತಿದೆ.

ದೇಶಭಕ್ತಿಯೇ ನನ್ನ ಶಕ್ತಿ ಅನ್ನುವ ಸಾಲುಗಳೂ, ಆಗ್ಲೇ.. ಡಬ್ಬಿಂಗ್ ಪ್ರಿಯರ ಮನಸೂರೆಗೊಂಡಿವೆ. ಕನ್ನಡದಲ್ಲಿ ಚಿತ್ರದ ಫಸ್ಟ್‌ಲುಕ್. ಇಷ್ಟೊಂದು ಕಿಕ್ ಕೊಡ್ತಿದೆ ಅಂದ್ರೆ ಸಿನಿಮಾ ಇನ್ನೆಷ್ಟು ಕಿಕ್ ಕೊಡಬಹುದು ಅನ್ನುವ ಲೆಕ್ಕಾಚಾರನೂ ಶುರುವಾಗಿದೆ. ಅದೇನೆ ಇರ‍್ಲಿ, ಸದ್ಯ ಪೆಟ್ಟಾ ಕನ್ನಡದಲ್ಲಿ ಪರಾಕ್ರಮ ಪ್ರದರ್ಶನ ಮಾಡುವ ಸಾಧ್ಯತೆಗಳಿವೆ.

ಇತ್ತ, ಪ್ರಧಾನಮಂತ್ರಿ ನರೇಂದ್ರ ಮೋದಿಯವ್ರ ಸಿನಿಮಾನೂ ಕನ್ನಡಿಗರು ಕಣ್ತುಂಬಿಕೊಳ್ಳುವ ಕಾಲ ಬರ‍್ತಿದೆ. ಮುಂದಿನ ದಿನಗಳಲ್ಲಿ.. ಇವೆರಡು ಸಿನಿಮಾಗಳು ಬರೆಯಲಿರುವ ಡಬ್ಬಿಂಗ್ ಶರಾಗೆ, ಡಬ್ಬಿಂಗ್ ಸುನಾಮಿನೇ ಗಾಂಧಿನಗರಕ್ಕೆ ಅಪ್ಪಳಿಸಿದ್ರೆ ಅಚ್ಚರಿ ಇಲ್ಲ.

LEAVE A REPLY

Please enter your comment!
Please enter your name here