Home Cinema ವಾಟ್..! ಕುರುಕ್ಷೇತ್ರದ ಬಳಿಕ ಶುರುವಾಗಲಿದೆಯಾ ರಾಮಾಯಣ..? 4 ಭಾಷೆಗಳಲ್ಲಿ ಬರುತ್ತಾ ಮರ್ಯಾದಾ ಪುರುಷೋತ್ತಮನ ಕಥನ..?

ವಾಟ್..! ಕುರುಕ್ಷೇತ್ರದ ಬಳಿಕ ಶುರುವಾಗಲಿದೆಯಾ ರಾಮಾಯಣ..? 4 ಭಾಷೆಗಳಲ್ಲಿ ಬರುತ್ತಾ ಮರ್ಯಾದಾ ಪುರುಷೋತ್ತಮನ ಕಥನ..?

1543
0
SHARE

ಯಸ್. ಬಿಡುಗಡೆಗೂ ಮುಂಚೆಯೇ ಸೌತ್ ಇಂಡಿಯಾವನ್ನೇ ಲೈಟಾಗಿ ಅಲ್ಲಾಡಿಸಿಬಿಟ್ಟಿರುವ ಕುರುಕ್ಷೇತ್ರ ಸಿನಿಮಾದ ಭರಾಟೆಯ ಬೆನ್ನಲ್ಲೇ ಬಾಲಿವುಡ್‌ನಲ್ಲೂ ಮೈಥಾಲಾಜಿಕಲ್ ಸಿನಿಮಾ ಫೀವರ್ ಹೆಚ್ಚಾಗಿದೆ. ಈಗ ಬಿ-ಟೌನ್ ಮಂದಿ ಕೂಡ ನಾವೇನೂ ಯಾರಿಗೂ ಕಮ್ಮಿಯಿಲ್ಲ ಅನ್ನೋಹಾಗೇ ಇಡೀ ವಿಶ್ವವೇ ಬೆರಗಾಗಿ ನೋಡುವಂಥ ಸಿನಿಮಾ ನಿರ್ಮಾಣದ ಸ್ಕೆಚಿಂಗ್‌ನಲ್ಲಿ ಬಿಜಿಯಾಗಿಟ್ಟಿದೆ.

ಇದು ಹಿಂದಿಯ ಕಂಪ್ಲೀಟ್ 3-ಡಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋದು ಮತ್ತೊಂದು ವಿಶೇಷ. ಹಾಲಿವುಡ್ ನಾಚಿನೀರಾಗುವಂತೆ ಸಿನಿಮಾ ನಿರ್ಮಿಸಲು ಪ್ಲಾನ್ ಮಾಡಿರುವ ಈ ಸಿನಿಮಾದ ಸ್ಟಾರ್‌ಕಾಸ್ಟ್ ಹಾಗೂ ನಿರ್ಮಾಪಕರನ್ನ ನೋಡಿದ್ರೆ ಇದೊಂದು ಸೌಂಡ್‌ಬ್ರೇಕಿಂಗ್ ಚಿತ್ರವಾಗೋದ್ರಲ್ಲಿ ಡೌಟೇ ಬೇಡ ಅಂತಿದೆ ಬಾಲಿವುಡ್ ಮೂಲಗಳು.

ಚಿತ್ರದ ಹೆಸರೇ ರಾಮಾಯಣ. ಅರೆ, ರಾಮಾಯಣ ಸ್ಟೋರಿಲೈನ್ ಇರೋ ಸುಮಾರು ಸಿನಿಮಾಗಳು ಬಂದುಹೊಗಿವೇಯಲ್ಲ ಎನ್ನುವ ಆಲೋಚನೆ ಎಲ್ಲರಿಗೂ ಬಂದೇಬರುತ್ತೆ. ಆದರೆ ಈ ರಾಮಾಯಣ ಕೊಂಚ ಡಿಫ್‌ರೆಂಟ್. ಈ ಕಥೆಯಲ್ಲಿ ಪ್ರೇಕ್ಷಕನಿಗೆ ಹೊಸ ಸರ್‌ಪ್ರೈಸ್ ಇರುತ್ತೆ. ಇದರ ಮೇಕಿಂಗ್ ಹಾಗೂ ಸ್ಟೋರಿಬೇಸ್‌ನ್ನ ಊಹಿಸೋಕು ಸಾಧ್ಯವಿಲ್ಲವಂತೆ. ತೆಲುಗು ಚಿತ್ರರಂಗದ ಮೈನ್‌ಪಿಲ್ಲರ್ ಎನಿಸಿಕೊಂಡಿರೋ ಅಲ್ಲು ಅರವಿಂದ್ ಈ ಬೃಹತ್ ರಾಮಾಯಣಕ್ಕೆ ಬಂಡವಾಳ ಹೂಡ್ತಿದಾರೆ. ಮೊದಲಬಾರಿಗೆ ಮಗಧೀರದಂತಹ ಆಫ್‌ಬೀಟ್ ಕಥೆಯನ್ನ ಸಿನಿಮಾಮಾಡಿ ಬಾಕ್ಸ್‌ಆಫೀಸ್ ಕೊಳ್ಳೆಹೊಡೆದ ಕೀರ್ತಿ ಈ ಅಲ್ಲು ಅರವಿಂದ್‌ರದ್ದು. ಇವರು ದುಡ್ಡ ಹಾಕ್ತಾರೆ ಎಂದ ಮೇಲೆ ಸಿನಿಮಾ ಬೇರೆ ರೇಂಜ್‌ಗೆ ಹೋಗುತ್ತೆ ಎನ್ನುವ ಮಾತು ಬಾಲಿವುಡ್‌ನಲ್ಲಿ ಹರಿದಾಡೋಕೆ ಶುರುವಾಗಿಬಿಟ್ಟಿದೆ.

ಸಹನಿರ್ಮಾಪಕರಾಗಿ ನಮಿತ್ ಮಲ್ಹೋತ್ರಾ ಹಾಗೂ ಮಧು ಮಂತೆನ ಈ ಭಾರೀ ಬಿಗ್‌ಬಜೆಟ್ ಚಿತ್ರಕ್ಕೆ ಕೈ ಜೋಡಿಸಲಿದ್ದಾರೆ. ದಂಗಲ್ ಖ್ಯಾತಿಯ ನಿತೀಶ್ ತಿವಾರಿ ಈ ಮಹಾಪ್ರಯತ್ನಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ. ಅಂದಹಾಗೇ ಫಸ್ಟ್‌ಟೈಮ್ ಈ ರಾಮಾಯಣದಲ್ಲಿ ರಾಮನಾಗಿ ಹ್ಯಾಂಡ್‌ಸಮ್ ಹಂಕ್ ಹೃತಿಕ್ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸೂಪರ್-೩೦ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲ್ತಿರೋ ಹೃತಿಕ್, ಕೈ ಹಾಕಿದ್ರೆ ದೊಡ್ಡ ಸಿನಿಮಾಗೆ ಕೈ ಹಾಕಬೇಕು ಅನ್ನೋ ಐಡಿಯದಲ್ಲಿದ್ರು. ಅದಕ್ಕೆ ತಕ್ಕಹಾಗೇ ಈ ರಾಮಾಯಣ ಹೃತಿಕ್ ಮಡಿಲಿಗೆ ಬಿದ್ದಿದೆ. ಈ ಹಿಂದೆ ಪೌರಣಿಕ ಚಿತ್ರಗಳ ಆಫರ್‌ಗಳು ಬಂದಿದ್ರೂ ಹೃತಿಕ್ ಅಷ್ಟು ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಆದರೆ ಈಗ ಮನಸ್ಸು ಬದಲಾಯಿಸಿರೋ ಹೃತಿಕ್ ರಾಮನ ವೇಷ ಹಾಕೋಕೆ ಜೈ ಎಂದಿದ್ದಾರೆ.

ಹೃತಿಕ್ ಅಭಿಮಾನಿಗಳು ಈ ವಿಷಯ ಕೇಳಿ ಸಕತ್ ಥ್ರಿಲ್ ಆಗಿದಾರೆ. ಯಾಕಂದ್ರೆ ಆಕ್ಷನ್ ಹಾಗೂ ಡ್ಯಾನ್ಸ್‌ನಲ್ಲಿ ಸೈ ಎನಿಸಿಕೊಂಡಿರೋ ಹೃತಿಕ್, ಮಾರ್ಯದಾ ಪುರೋಷೊತ್ತಮನಾಗಿ ಹೇಗೆ ಕಾಣಿಸ್ತಾರೆ ಎನ್ನುವ ಕಾತರ ಮನೆ ಮಾಡಿಬಿಟ್ಟಿದೆ.೫೦೦ಕೋಟಿಯ ರಾಮಾಯಣದಲ್ಲಿ ಸೀತೆಯಾಗಲಿದ್ದಾಳೆ ಕನ್ನಡತಿ..? ಇನ್ನು ಈ ಶ್ರೀರಾಮಚಂದ್ರನಿಗೆ ಸೀತೆಯಾಗಿ ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ಧಿ ಎಲ್ಲರ ಕಣ್ಣರಳಿಸಿಬಿಟ್ಟಿದೆ. ಸೀತಾಮಾತೆಯಾಗಿ ದೀಪಿಕಾ ನಟಿಸೋದು ನಿಜವೇ ಅಂತ ಕಣ್‌ಕಣ್ ಮಿಟುಕಿಸ್ತಿದಾರೆ. ಯಾಕಂದ್ರೆ ಈ ಹಿಂದೆ ನಿರ್ಮಾಪಕ ಅಲ್ಲು ಅರ್‌ವಿಂದ್ ದಕ್ಷಿಣ ಭಾರತದ ಬ್ಯೂಟಿಗಳಾದ ತಮನ್ನಾ, ಅನುಷ್ಕಾ ಹಾಗೂ ನಯನತಾರಾರನ್ನ ಸೀತೆಯ ಕ್ಯಾರೆಕ್ಟರ್‌ಗೆ ಸೂಟ್ ಆಗಬಹುದು ಅಂತ ಡಿಸೈಡ್ ಮಾಡಿದ್ರು. ಆದರೆ ದೀಪಿಕಾ ಯಾವಾಗ ಸೀತೆ ಪಾತ್ರದಲ್ಲಿ ದೀಪಿಕಾರನ್ನ ನೆನೆಸಿಕೊಂಡ್ರೋ ಬೇರೆ ಹೀರೊಯಿನ್‌ಗಳಿಗೆ ಟಾಟಾ ಹೇಳಿಬಿಟ್ರು.

ಅಂತೂ ಈಗ ಸೀತಾಮಾತೆಯ ಪಾತ್ರವನ್ನ ಮಾಡಿದ್ರೆ ದೀಪಿಕಾ ಕೈಯಲ್ಲೇ ಮಾಡಿಸಬೇಕು ಅಂತ ಚಿತ್ರತಂಡನೂ ಫಿಕ್ಸ್ ಆಗಿಬಿಟ್ಟಿದೆ. ಚಪಕ್ ಹಾಗೂ ೮೩ ಚಿತ್ರಗಳ ಶೂಟಿಂಗ್‌ನಲ್ಲಿ ಬಿಜಿಯಾಗಿರೋ ದೀಪಿಕಾ ಸಸ್ಯದಲ್ಲೇ ರಾಮಾಯಣದ ಸ್ಕ್ರೀಪ್ಟ್‌ನ್ನ ಕೈಗೆತ್ತಿಕೊಳ್ತಾರೆ.ಇಷ್ಟೆಲ್ಲಾ ಟಾಕ್ ಕ್ರಿಯೆಟ್ ಮಾಡಿರೋ ರಾಮಾಯಣದ ಚಿತ್ರೀಕರಣ ಡಿಸೆಂಬರ್‌ನಿಂದ ಶುರುವಾಗಲಿದೆ. ವಾರ್ ಹಾಗೂ ಧೂಮ್-೪ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿರೋ ಹೃತಿಕ್ ಕೂಡ ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಎಲ್ಲವೂ ಕನ್ಫರ್ಮ್ ಆದಮೇಲೆ ಹೇಳುವ ಪ್ಲಾನ್ ಹೃತಿಕ್‌ರದ್ದು. ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ತಯಾರಾಗ್ತಿರೋ ರಾಮಾಯಣದ ಬಜೆಟ್ ಸರಿಸುಮಾರು ೫೦೦ ಕೋಟಿ ದಾಟಲಿದೆ.

ಅಷ್ಟೇಅಲ್ಲದೇ, ಚಿತ್ರವನ್ನ ಮೂರು ಭಾಗಗಳಲ್ಲಿ ನಿರ್ಮಿಸುವ ಯೋಜನೆ ನಿರ್ಮಾಪಕ ಅಲ್ಲು ಅರವಿಂದ್‌ರದ್ದು. ಅದೇ ಕಾರಣಕೋಸ್ಕರ ಎಲ್ಲವೂ ಸೇರಿ ೧೫೦೦ ಕೋಟಿ ಬಜೆಟ್ ಮೀರುವ ಚಾನ್ಸ್‌ಗಳು ದಟ್ಟವಾಗಿವೆ. ಚಿತ್ರಕ್ಕೆ ಇನ್ನಷ್ಟು ಘಟನುಘಟಿ ಸ್ಟಾರ್‌ಗಳು ಎಂಟ್ರಿ ಕೋಡೊ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಟೆಕ್ನಿಕಲ್ ಶ್ರೀಮಂತಿಕೆಯ ಗಡಿಗಳನ್ನ ದಾಟಿ ಬೆಳಿತಿರೋ ಪ್ಯಾನ್ ಇಂಡಿಯಾ ಅಪ್ರೋಚ್‌ಗೆ ಈ ಬಿಗ್‌ಬಜೆಟ್‌ನ ರಾಮಾಯಣ ಹೊಸ ಟಚ್ ಕೊಟ್ಟಿದೆ ಎನ್ನಬಹುದು ಅಲ್ವಾ..?

LEAVE A REPLY

Please enter your comment!
Please enter your name here