Home Cinema ವಾಟ್…! ‘ರಾಜಮೌಳಿ’ ಆಫರ್‌ನ್ನೇ ಎಡಗಾಲಿನಲ್ಲಿ ಒದ್ದಳಾ ‘ಆಲಿಯಾ’..? B-ಟೌನ್ ಅಚ್ಚರಿಯ ಕಂಗಳಿಂದ ತನ್ನತ್ತ ತಿರುಗಿ ನೋಡುವಂತೆ...

ವಾಟ್…! ‘ರಾಜಮೌಳಿ’ ಆಫರ್‌ನ್ನೇ ಎಡಗಾಲಿನಲ್ಲಿ ಒದ್ದಳಾ ‘ಆಲಿಯಾ’..? B-ಟೌನ್ ಅಚ್ಚರಿಯ ಕಂಗಳಿಂದ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಆಲಿಯಾ.!!!

2292
0
SHARE

ಆಲಿಯಾಭಟ್… ಗಲ್ಲಿಬಾಯ್ ಚಿತ್ರದ ಮೂಲಕ ಬಾಲಿವುಡ್ ಅಂಗಳದಲ್ಲಿ ಸಕ್ಸಸ್‌ನ ಗುಲಾಬ್ ಜಾಮೂನ್ ಸವಿಯುತ್ತಿರುವ ಚೆಂದುಳ್ಳಿ ಚೆಲುವೆ. ಸದ್ಯ ಬಿಂದಾಸ್ ಪಾತ್ರಗಳ ಮೂಲಕ ಸಕ್ಸಸ್ ರೇಟಿಂಗ್ ಹೆಚ್ಚಿಸಿಕೊಂಡಿರುವ ಆಲಿಯಾ, ಸಿನಿಮಾ ಮಾಂತ್ರಿಕ ರಾಜಮೌಳಿಯ ಆ ಒಂದು ಮಾತಿಗೆ ನೋ ಅಂದಿದ್ದಾರೆ.

ಈ ಮೂಲಕ ಬಿ-ಟೌನ್ ಅಚ್ಚರಿಯ ಕಂಗಳಿಂದ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾಳೆ.ಯಸ್… ಬಾಹುಬಲಿ ದಕ್ಷಿಣ ಭಾರತದ ಬಿಗೆಸ್ಟೆ ಸಿನಿಮಾ. ಅಂತಹ ಯಶಸ್ವಿ ಸಿನಿಮಾವನ್ನು ನಿರ್ದೇಶಿಸಿ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರಾಜಮೌಳಿ. ಸದ್ಯ ತಮ್ಮ ಆರ್. ಆರ್. ಆರ್ ಚಿತ್ರಕ್ಕಾಗಿ ನಾಯಕಿಯ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ.

ಹಾಗಾಗಿನೇ.. ಬಿ-ಟೌನ್‌ನ ಬಟ್ಟಳು ಕಣ್ಣುಗಳ ಚೆಲುವೆಯಾಗಿರುವ ಆಲಿಯಾಗೆ ರಾಜಮೌಳಿ ಚಿತ್ರ ಆರ್. ಆರ್. ಆರ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಆಫರ್‌ನ್ನು ನೀಡಿದ್ರು.. ಆದ್ರೆ ಬಿಗ್ ಬಜೆಟ್ ಸಿನಿಮಾಗೆ ಬಂದಿದ್ದ ಅದ್ಭುತ ಅವಕಾಶವನ್ನು ಆಲಿಯಾ ಭಟ್ ನಿರಾಯಾಸವಾಗಿ ತಳ್ಳಿ ಹಾಕಿದ್ದು. ಆರ್. ಆರ್. ಆರ್ ಸಿನಿಮಾದಲ್ಲಿ ನಟಿಸಲು ನೋ ನೋ ಅಂದಿದ್ದಾರೆ. ಹೌದು.. ಈಗಾಗಲ್ಲೇ ಆಲಿಯಾ ಭಟ್ ಆರ್. ಆರ್. ಆರ್ ಚಿತ್ರದಲ್ಲಿ ನಟಿಸೋದು ಬಹುತೇಕ ಕನ್ಫರ್ಮ್ ಎನ್ನುವ ಮಾತುಗಳು ಬಿ-ಟೌನ್ ಅಂಗಳದಲ್ಲಿ ಸಾಕಷ್ಟು ದಿನಗಳಿಂದ ಕೇಳಿಬರ್ತಿತ್ತು.

ಇನ್ನೇನ್ನು ಕೆಲವೇ ದಿನಗಳಲ್ಲಿ ಚಿತ್ರದ ಅಡ್ಡಾದಲ್ಲಿ ಆಲಿಯಾ ಪ್ರತ್ಯಕ್ಷರಾಗುತ್ತಾರೆನ್ನುವಾಗ್ಲೇ ಆಲಿಯಾ ಭಟ್ ಕೊನೆಯ ಹಂತದಲ್ಲಿ ಚಿತ್ರದ ಆಫರ್ ತಿರಸ್ಕರಿಸಿದ್ದು. ಡೇಟ್ಸ್ ಹೊಂದಾಣಿಕೆಯಾದ ಕಾರಣ ನೀಡಿ ದೊಡ್ಡ ಅವಕಾಶ ತಿರಸ್ಕರಿಸಿರೋದು ಬಾಲಿವುಡ್ ಮಂದಿಗೆ ಅಚ್ಚಿರಿಯುಂಟಾಗುವಂತೆ ಮಾಡಿದ್ದಾರೆ..ಈಗಾಗಲ್ಲೇ ಆಲಿಯಾ ಭಟ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಝೀಯಾಗಿದ್ದು. ಕಳಂಕ್, ಬ್ರಹ್ಮಾಸ್ತ್ರ, ತಕ್ತ್ ಹೀಗೆ ಸಾಲು ಸಾಲು ವಿಭಿನ್ನ ಪಾತ್ರಗಳ ಮೂಲಕ ಸಿನಿ ಪ್ರೇಕ್ಷಕರಿಗೆ ಅದ್ಭುತ ಮನೋರಂಜನೆ ನೀಡಲು ಸಜ್ಜಾಗಿದ್ದಾರೆ.

ಇನ್ನು ಸೂಪರ್ ಹಿಟ್ ಸಿನಿಮಾಗಳಲ್ಲಿ ಬಿಝೀಯಾಗಿರುವುದರಿಂದ ಸಿನಿಮಾದ ರೆಮ್ಯೂನರೇಷನ್ ವಿಷಯದಿಂದ ಅಲಿಯಾ ಈ ಪ್ರಾಜೆಕ್ಟ್ ರಿಜೆಕ್ಟ್ ಮಾಡಿದ್ದಾರೆನ್ನಲಾಗ್ತಿದೆ.ಇನ್ನು, ಬಾಹುಬಲಿ ನಂತ್ರ ನಿರ್ದೇಶಕ ರಾಜಮೌಳಿ ಆರ್. ಆರ್. ಆರ್. ಸಿನಿಮಾ ಮಾಡುತ್ತಿದ್ದು. ಚಿತ್ರದ ಮೇಲೆ ನಿರೀಕ್ಷೆಯ ದೊಡ್ಡ ಮಟ್ಟದಲ್ಲೇ ಸೃಷ್ಟಿಯಾಗಿದೆ. ಬಹುನಿರೀಕ್ಷೆಯ ಈ ಚಿತ್ರದಲ್ಲಿ ರಾಮ್ ಚರಣ್ ತೇಜ ಮತ್ತು ಜ್ಯೂ ಎನ್ ಟಿ ಆರ್ ಒಟ್ಟಿಗೆ ನಟಿಸುತ್ತಿದ್ದಾರೆ. ಇಷ್ಟು ಬಿಟ್ಟರೆ ಈ ಚಿತ್ರದ ಬಗ್ಗೆ ಏನು ಮಾಹಿತಿ ಬಿಟ್ಟುಕೊಡ್ಡದ ರಾಜಮೌಳಿ.

ಚಿತ್ರದ ನಾಯಕಿಯರ ಆಯ್ಕೆ ವಿಚಾರ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದು. ಸದ್ಯ ಸೂಕ್ತವಾದ ನಾಯಕಿಯ ತಲಾಷ್‌ನಲ್ಲಿ ತೊಡಗಿಕೊಂಡಿದ್ದಾರೆ. ಈ ಹಿಂದೆ ಕೂಡ ರಾಮ್ ಚರಣ್ ಮತ್ತು ಜ್ಯು ಎನ್.ಟಿ.ಆರ್ ಗೆ ಯಾರು ನಾಯಕಿ ಆಗ್ತಾರೆ ಎಂಬುದಕ್ಕೆ ಹಲವು ನಟಿಮಣಿಯರ ಹೆಸರು ಕೇಳಿಬಂದಿತ್ತು. ಬಿ-ಟೌನ್‌ನ ದೊಡ್ಡ ನಟಿಮಣಿಯರ ಹೆಸರುಗಳು ಈ ಒಂದು ಚಿತ್ರದಲ್ಲಿ ಕೇಳಿಬಂದಿತ್ತು. ನಟಿ ಕೀರ್ತಿ ಸುರೇಶ್, ಪೂಜಾ ಹೆಗಡ್ಡೆ , ದೀಪಿಕಾ ಪಡುಕೋಣೆ, ಪರಿಣೀತಿ ಛೋಪ್ರಾ ಹೆಸರುಗಳು ಚಿತ್ರತಂಡದ ಜೊತೆಗೆ ತಳುಕು ಹಾಕಿಕೊಂಡಿತ್ತು.

ಆದ್ರೆ ಇದೆಲ್ಲವನ್ನು ಹೊರತು ಪಡಿಸಿ ಚಿತ್ರತಂಡ ಆಲಿಯಾಗೆ ಆಫರ್ ನೀಡಿತ್ತು. ಈಗ ಆ ಆಫರನ್ನು ಆಲಿಯಾ ತಿರಸ್ಕರಿಸಿದ್ದು. ಚಿತ್ರತಂಡ ಸದ್ಯ ಹೊಸ ನಾಯಕಿಯ ಹುಡುಕಾಟದಲ್ಲಿ ಬಿಝೀಯಾಗಿದೆ. ಈಗಾಗಲ್ಲೇ ಆರ್.ಆರ್. ಆರ್ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ಸಾಕ್ತಿದ್ದು. ಎರಡನೇ ಶೆಡ್ಯೂಲ್‌ನಲ್ಲಿ ಸಹ ನಾಯಕಯ ಭಾಗದ ಶೂಟಿಂಗ್‌ನಲ್ಲಿ ಚಿತ್ರತಂಡ ನಿರತವಾಗಿದ್ದು.ನಾಯಕಿ ಪಕ್ಕಾ ಆದ ಬಳಿಕ ಜೂನಿಯರ್ ಎನ್ ಟಿ.ಆರ್ ಮತ್ತು ರಾಮ್ ಚರಣ್ ಜೊತೆಗಿನ ನಾಯಕಿಯ ದೃಶ್ಯಗಳು ಚಿತ್ರೀರಕರಿಸಲಾಗುತ್ತದೆ.

ಟೀಸರ್ ಮೂಲಕ ಆರ್. ಆರ್. ಆರ್ ಮೋಡಿ ಮಾಡ್ತಿದೆ. ಅದೇನೆ ಇರ‍್ಲಿ, ಸದ್ಯ ಆಲಿಯಾ ಭಟ್ ರಾಜಮೌಳಿ ಸಿನಿಮಾದಿಂದ ಔಟ್ ಆಗಿರುವ ಸುದ್ದಿ ಬಾಲಿವುಡ್ ತುಂಬೆಲ್ಲಾ ಪಸರ್ ಆಗಿದ್ದು. ನಿಜಕ್ಕೂ ಇಂಥಹದ್ದೊಂದು ಅವಕಾಶವನ್ನು ಆಲಿಯಾ ಎಡಗಾಲಿನಲ್ಲಿ ಒದ್ದಿದ್ದ್ಯಾಕೆ.. ಅನ್ನುವ ಪ್ರಶ್ನೆ ನಡುವೆನೇ, ರಾಜ್‌ಮೌಳಿ ಆಲಿಯಾ ಭಟ್ ತಿರಸ್ಕಾರದಿಂದ ಗರ್ವಭಂಗವಾಗಿರೋದು ಸುಳ್ಳಲ್ಲ.

LEAVE A REPLY

Please enter your comment!
Please enter your name here