Home Crime ವಾಮಾಚಾರಕ್ಕೆ ರಾತ್ರೋರಾತ್ರಿ ಕತ್ತರಿಸಿದ್ರು ಸತ್ತ ವ್ಯಕ್ತಿಯ ತಲೆ..! ಸಮಾಧಿಯ ಬಳಿ ಹೆಣ ಕಿತ್ತು, ತಲೆ ಹೊತ್ತು,...

ವಾಮಾಚಾರಕ್ಕೆ ರಾತ್ರೋರಾತ್ರಿ ಕತ್ತರಿಸಿದ್ರು ಸತ್ತ ವ್ಯಕ್ತಿಯ ತಲೆ..! ಸಮಾಧಿಯ ಬಳಿ ಹೆಣ ಕಿತ್ತು, ತಲೆ ಹೊತ್ತು, ಮಾಡಿದ್ರು ಮಾಟ-ಮಂತ್ರ..?! “ರುಂಡ” (ಅಮವಾಸ್ಯೆ ರಹಸ್ಯ)

3053
0
SHARE

ಅಮವಾಸ್ಯೆ ಅದ್ರಲ್ಲೂ ರಾತ್ರಿ 12ಗಂಟೆಯ ಅಮವಾಸ್ಯೆಯಿದೆಯಲ್ಲಾ ಅದು ದುಷ್ಟಶಕ್ತಿಗಳ ಪಾಲಿಗೆ ಎನರ್ಜಿ ಕೊಡುವ ಸಮಯ. ಬ್ಯಾಟರಿ ಖಾಲಿಯಾಗಿರೋ ಶಕ್ತಿಗಳು ಅವತ್ತೇ ಮತ್ತೆ ರೀಚಾರ್ಜ್ ಆಗೋದು. ಅಮವಾಸ್ಯೆ ಅದೊಂದು ಚಂದಿರನಿಲ್ಲದ ಸಾಮಾನ್ಯ ರಾತ್ರಿಯಲ್ಲ, ಅವತ್ತು ಕತ್ತಲ ರಾತ್ರಿಯಲ್ಲಿ ಈ ಪ್ರಕೃತಿಯಲ್ಲಿ ಅಸಮಾನ್ಯ ಬದಲಾವಣೆಗಳು ನಡೆಯುತ್ತೆ.

ಚಂದಿರನಿಲ್ಲದ ನಿಶ್ಯಬ್ದ, ಭಯಂಕರ ಕತ್ತಲು ಮನುಷ್ಯನಿಗೆ ಹೆದರಿಕೆ ಹುಟ್ಟಿಸಿದ್ರೆ ಅತೃಪ್ತ ಆತ್ಮಹಳು, ಅತೀಂದ್ರ ಶಕ್ತಿಗಳು, ಕ್ಷುದ್ರದೇವತೆಗಳು ಆ ರಾತ್ರಿಯನ್ನ ಸಂಭ್ರಮಿಸುತ್ತವೆ. ಅವತ್ತೇ ನೋಡಿ ಆ ಕ್ಷುದ್ರ ಶಕ್ತಿಗಳಿಗೆ ಬೇಕಾದ ನೈವೇದ್ಯವನ್ನ ಅರ್ಪಿಸಿ ಬಿಟ್ರೆ ಅವು ತಮ್ಮ ಕೈಯಲ್ಲಿ ಆಗುವಂತಹ ಯಾವ ಕೆಲಸವನ್ನಾದ್ರು ಮಾಡಿಕೊಡುತ್ತವೆ. ಇದನ್ನ ನೀವು ನಂಬುವುದಾದ್ರೆ ಅದು ನಿಮ್ಮ ನಂಬಿಕೆ. ನಂಬದೇ ಇದ್ರೆ ಮೂಢನಂಬಿಕೆಯೆ.ಮೊನ್ನೆ ಅಂದ್ರೆ ಎರಡು ಅಮವಾಸ್ಯೆಯ ಹಿಂದಿನ ದಿನ ನೆಲಮಂಗಲದ ಭೈರನಹಳ್ಳಿಯಲ್ಲಿ ಜನ ಗುಸುಗುಸು ಅಂತ ಮಾತನಾಡೋದಕ್ಕೆ ಶುರುಮಾಡಿದ್ರು. ಯಾರ ಮಾತಿನಲ್ಲೂ ಗಟ್ಟಿಸ್ವರವಿರಲಿಲ್ಲ. ಅವರಿಗೆ ಆ ವಿಷಯವನ್ನ ಮಾತನಾಡಬೇಕೋ ಬೇಡ್ವೋ ಅನ್ನೋದೆ ದೊಡ್ಡ ಆತಂಕವಾಗಿ ಹೋಗಿತ್ತು.

ಯಾಕಂದ್ರೆ ಅಲ್ಲಿ ನಡೆದದ್ದು ಸಾಮಾನ್ಯ ವಿಷಯವಲ್ಲ. ಹಳ್ಳಿಯ ಜನ ಬೇರೆ ಅವರಿಗೆ ಮುಂದೇನು ಅನಾಹುತ ಕಾದಿದೆಯೋ ಅನ್ನೋ ಭಯ ಬೇರೆ ಕಾಡ್ತಿತ್ತು. ಆ ಊರಿನವರಿಗೆ ಈ ವಿಷಯದ ಬಗ್ಗೆ ಯಾರಲ್ಲಾದ್ರು ಹೇಳಿಕೊಳ್ಳಬೇಕು ಅನ್ನೋ ಬಯಕೆ. ಆದ್ರೆ ಆ ವಿಷಯವನ್ನ ಹ್ಯಾಗೆ ಮಾತನಾಡೋದು ಅನ್ನೋ ಅಂಜಿಕೆ ಕೂಡಾ ಇತ್ತು. ಹೀಗಾಗಿ ಅವರು ಸುಮ್ಮನಿರಲು ಆಗದೆ ಅತ್ತ ಮಾತನಾಡೋದಕ್ಕೂ ಆಗದೆ ಮಾನಸಿಕ ತೊಳಲಾಟಕ್ಕೆ ಸಿಕ್ಕಿಕೊಂಡಿದ್ರು.ಭೈರನಹಳ್ಳಿಯ ಊರ ಹೊರಗೆ ಒಂದು ಸ್ಮಶಾನವಿದೆ. ಅಲ್ಲಿ ಅವತ್ತು ಬೆಳ್ಳಂಬೆಳ್ಳಗ್ಗೆಯೇ ಜನ ಸೇರಿದ್ರು. ಆದ್ರೆ ಅವರ್ಯಾರಿಗೂ ಆ ಸ್ಮಶಾನದ ಒಳಗೆ ಹೋಗೋದಕ್ಕಾಗಲಿ ಅಥವಾ ಅಲ್ಲಿ ನಡೆದಿರೋ ಕೃತ್ಯವನ್ನ ನೋಡೋದಕ್ಕಾಗಲಿ ಧೈರ್ಯವೇ ಇರಲಿಲ್ಲ.

ಆದ್ರೆ ಎಲ್ಲರ ಮನಸ್ಸಲ್ಲು ಅಲ್ಲಿಗೆ ಹೋಗಬೇಕು ಅಂತ ಅನಿಸಿತ್ತು. ಅವತ್ತು ಆ ಭೈರನಹಳ್ಳಿಯ ಸ್ಮಶಾನದಲ್ಲಿ ಇಲ್ಲಿವರೆಗೂ ಆ ಊರಿನವರು ಕಂಡುಕೇಳರಿಯದ ಒಂದು ಕೃತ್ಯ ನಡೆದು ಹೋಗಿತ್ತು. ಒಂದು ಸಮಾಧಿ ಒಪನ್ ಆಗಿತ್ತು. ಅಷ್ಟೇ ಅಲ್ಲ ಆ ಸಮಾಧಿಯ ಒಳಗೆ ಮಲಗಿದ್ದ ವ್ಯಕ್ತಿಯ ಶವದ ತಲೆಯನ್ನ ಕತ್ತರಿಸಿ ತೆಗೆದುಕೊಂಡು ಹೋಗಿದ್ರು. ಇದೇ ಕಾರಣಕ್ಕೆ ಜನ ಅಲ್ಲಿ ಒಳಗೆ ಹೋಗೋದಕ್ಕೆ ಹೆದರ್ತಿದ್ರು.ಆ ಸಮಾಧಿಯ ಒಳಗೆ ಹೂತಿದ್ದ ವ್ಯಕ್ತಿಯನ್ನ ಒಂದುವರೆ ತಿಂಗಳ ಹಿಂದೆ ಅಂತ್ಯಕ್ರಿಯೆಯನ್ನ ನಡೆಸಲಾಗಿತ್ತು. ಆದ್ರೆ ಆ ವ್ಯಕ್ತಿಯ ಶವವನ್ನ ಈಗ ಹೊರಗೆ ತೆಗೆಯಲಾಗಿತ್ತು. ಅಲ್ಲಿ ಸಮಾಧಿ ಮಾಡಿದ್ದ ವ್ಯಕ್ತಿಯ ಹೆಸರು ಅರಸಯ್ಯ ಅಂತ. ಅರಸಯ್ಯರಿಗೆ 85ವರ್ಷ ವಯಸ್ಸಾಗಿತ್ತು. ಅವರು ವಸೋಸಹಜ ಖಾಯಿಲೆಯಿಂದ ಬಳಲುತ್ತಿದ್ರು.

ತಿಂಗಳ ಹಿಂದೆ ಹೀಗೆ ಮನೆಯಲ್ಲಿ ನಡೆಯುವಾಗ ಕೆಳಗೆ ಬಿದ್ದವರು ಮತ್ತೆ ಮೇಲೆ ಏಳಲೇ ಇಲ್ಲ. ನಂತ್ರ ಅವರ ಮಕ್ಕಳು ಮತ್ತು ಕುಟುಂಬದವರು ಸೇರಿ ಶಾಸ್ತ್ರೋಕ್ತವಾಗಿ ಅವರ ಅಂತ್ಯಕ್ರಿಯನ್ನ ಮಾಡಿದ್ರು. ನಂತ್ರ 11ನೇ ದಿನದ ವಿಧಿವಿದಾನಗಳನ್ನ ನಡೆಸಿದ ಬಳಿಕ ಅವರ್ಯಾರು ಮತ್ತೆ ಸಮಾಧಿಯ ಬಳಿ ಬಂದಿರಲಿಲ್ಲ.ನಿನ್ನೆ ಬೆಳಗ್ಗೆ ಯಾರೋ ಹೊಲಕ್ಕೆ ಹೊರಟವರು ಸ್ಮಶಾನದ ಕಡೆಯಿಂದ ಹೊರಟಿದ್ದಾರೆ. ಹಾಗೆ ನೋಡ್ತಿರೋವಾಗ ಆ ಸಮಾಧಿಯ ಬಳಿ ಏನೋ ನಡೆದ ಹಾಗೆ ಇತ್ತು. ಅಲ್ಲದೆ ಸಮಾಧಿಯ ಮಣ್ಣನ್ನ ಕೂಡಾ ಕಿತ್ತಿರುವಂತೆ ಕಾಣಿಸಿತ್ತು. ಮೊದಲಿಗೆ ಯಾವುದೋ ಪ್ರಾಣಿ ವಾಸನೆಗೆ ಅಲ್ಲಿರೋ ಮಣ್ಣನ್ನ ಕೆದಕಿರಬಹುದು ಅಂತ ಅಂದುಕೊಂಡಿದ್ರು.

ಯಾವುದಕ್ಕು ಇರಲಿ ಅಂತ ಆ ಸಮಾಧಿಯನ್ನ ನೋಡಿದ ವ್ಯಕ್ತಿ ಅರಸಯ್ಯರ ಮಗ ರಾಮಯ್ಯರಿಗೆ ಫೋನ್ ಮಾಡಿ ತಿಳಿಸಿದ್ರು. ನಿಮ್ಮ ಅಪ್ಪನ ಸಮಾಧಿಯನ್ನ ಯಾರೋ ಅಗೆದಿದ್ದಾರೋ ನೋಡೋ ಮಾರಾಯ ಅಂತ ಫೋನ್ ಮಾಡಿ ಹೇಳಿದ್ರು. ಇದನ್ನ ಕೇಳ್ತಿದ್ದ ಹಾಗೆ ರಾಮಯ್ಯರು ತಮ್ಮ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಅವ್ರಿಗೆ ಏನು ಮಾಡಬೇಕು ಅನ್ನೋದು ಕೂಡಾ ತೋಚಲಿಲ್ಲ. ವಿಷಯ ಗೊತ್ತಾಗ್ತಿದ್ದ ಹಾಗೆ ರಾಮಯ್ಯ ತಮ್ಮ ಫ್ಯಾಮಿಲಿಯ ಜೊತೆ ಅಲ್ಲಿಗೆ ಬಂದಿದ್ದಾರೆ. ಅವರಿಗೆ ಆಗ ಅಷ್ಟೇನು ಆತಂಕವಾಗಿರಲಿಲ್ಲ. ಸಮಾಧಿಯ ಮೇಲಿನ ಮಣ್ಣನ್ನ ಯಾರಾದ್ರು ಕೆದಕಿರಬಹುದು ಅಂತ ಅಂದುಕೊಂಡಿದ್ರು. ಆದ್ರೆ ಅಲ್ಲಿ ಬಂದು ನೋಡಿದಾಗ ವಿಷಯ ಬೇರೆಯದ್ದೇ ಆಗಿತ್ತು. ಅವರಿಗೆ ತಾವು ನೋಡ್ತಿರೋ ದೃಶ್ಯ ನಿಜವೋ ಸುಳ್ಳೋ ಅನ್ನೋದು ಕೂಡಾ ಗೊತ್ತಾಗಲಿಲ್ಲ.

ಅಷ್ಟೇ ಅಲ್ಲಿ ಇದು ನಮ್ಮ ತಂದೆಯ ಸಮಾಧಿನ ಅಂತ ಕೂಡಾ ಅವರಿಗೆ ಅನಿಸಿತ್ತು. ಇನ್ನೊಂದು ಸ್ವಲ್ಪ ದಿನಕ್ಕೆ ಇಲ್ಲೇ ಒಂದು ಗೋರಿಯನ್ನ ಸಮಾಧಿಗೆ ಕಟ್ಟಿಸಬೇಕು ಅಂತ ಅಂದುಕೊಂಡಿದ್ವಿ ಅಂತ ಅಂದುಕೊಂಡಿದ್ರು. ಆದ್ರೆ ಈಗ ಆ ಸಮಾಧಿಯ ಪರಿಸ್ಥಿತಿ ಮತ್ತು ಅಲ್ಲಿ ನಡೆದ ಕೃತ್ಯವನ್ನ ಅವ್ರು ದಂಗಾಗಿ ಹೋಗಿದ್ರು. ಅಲ್ಲದೆ ಅವರಿಗೆ ಆ ದೃಶ್ಯವನ್ನ ನೋಡಿ ಮಾತೇ ಹೊರಡದ ಹಾಗೆ ಆಗಿತ್ತು.ಆ ಸಮಾಧಿಯ ಒಂದು ಭಾಗವನ್ನ ಮಾತ್ರ ಯಾರೋ ಕೆದಕಿದ್ರು. ಅಲ್ಲದೆ ಒಂದೇ ಭಾಗದ ಮಣ್ಣನ್ನ ಎತ್ತಿ ಅಂದ್ರೆ ತಲೆಯ ಭಾಗದ ಮಣ್ಣನ್ನ ಎತ್ತಿ ಶವದ ತಲೆಯನ್ನ ಕತ್ತರಿಸಿ ತೆಗೆದುಕೊಂಡು ಹೋಗಿದ್ರು. ಅಷ್ಟೇ ಅಲ್ಲ ಆ ಶವದ ಮೇಲಿನ ಮಣ್ಣನ್ನ ತೆಗೆಯುವ ಮುನ್ನ ತಲೆಯನ್ನ ಕತ್ತರಿಸುವ ಮುನ್ನ ಆ ಸಮಾಧಿಗೆ ವಿವಿಧ ಪೂಜೆಗಳನ್ನ ಮಾಡಿದ್ದಾರೆ.

ಅದರ ಗುರುತುಗಳೆಲ್ಲವು ಅಲ್ಲೇ ಸಮಾಧಿಯ ಬಳಿಯೇ ಇತ್ತು. ಹೀಗಾಗಿ ಅವರಿಗೆ ಹೆದರಿಕೆ ಶುರುವಾಗಿತ್ತು. ಅವರಿಗೆ ಏನು ಮಾಡಬೇಕು ಅಂತಾನೆ ಗೊತ್ತಾಗಲಿಲ್ಲ. ನಂತ್ರ ತಕ್ಷಣವೇ ನೆಲಮಂಗಲ ಗ್ರಾಮಾಂತರ ಪೊಲೀಸ್ರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸ್ರು ಕೂಡಾ ಸ್ಥಳಕ್ಕೆ ಆಗಮಿಸಿದ್ರು. ಆ ಶವದ ತಲೆಯನ್ನ ಕತ್ತರಿಸಿಕೊಂಡು ಹೋಗಿದ್ದಾರೆ ಅಂದ್ರೆ ಅಲ್ಲಿ ಅನುಮಾನಗಳಿಗೆ ಅವಕಾಶವಿರಲಿಲ್ಲ. ಅಲ್ಲದೆ ಅವತ್ತು ಯಾವ ದಿನ ಅನ್ನೋದನ್ನ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವ ಅವಶ್ಯಕತೆಯಿರಲಿಲ್ಲ ಯಾಕಂದ್ರೆ ಅದು ಅಮವಾಸ್ಯೆಯ ರಾತ್ರಿ ನಡೆದಿದ್ದ ಘಟನೆಯಾಗಿತ್ತು.ಹೀಗೆ ಪೊಲೀಸ್ರು, ಗ್ರಾಮಸ್ಥರು ಎಲ್ಲಾ ಅಲ್ಲಿಗೆ ಬಂದು ಸ್ಥಳವನ್ನ ಪರಿಶೀಲನೆ ಮಾಡಿದ್ದಾರೆ. ಅಲ್ಲಿ ಶವ ಹೊರಗೆ ತೆಗೆಯದೆ ಕೇವಲ ತಲೆಯ ಭಾಗವನ್ನ ಮಾತ್ರವೇ ಕತ್ತರಿಸಿಕೊಂಡು ಹೋಗಿರೋದು ಗೊತ್ತಾಗಿತ್ತು.

ಆ ಸ್ಮಶಾನದಲ್ಲಿ ತಲೆ ತೆಗೆದ ನಂತ್ರ ಮಣ್ಣಿನ ಮಡಕೆಗಳನ್ನ ಇಟ್ಟು ಅಲ್ಲಿ ಪೂಜೆ ನೆರವೇರಿಸಲಾಗಿತ್ತು. ಆ ಮಡಕೆಯ ಪಕ್ಕದಲ್ಲೇ ಮನುಷ್ಯನ ಆಕಾರದ ಗೊಂಬೆಗಳು ಕೂಡಾ ಸಿಕ್ಕಿತ್ತು. ಅಂದ್ರೆ ಅಲ್ಲಿ ವಾಮಾಚಾರ ನಡೆದಿರೋದು ಎಲ್ಲರಿಗೂ ಗೊತ್ತಾಗಿತ್ತು. ಆದ್ರೆ ಯಾರ ಮೇಲೆ ಆ ವಾಮಾಚಾರವನ್ನ ಪ್ರಯೋಗ ಮಾಡಲಾಗಿದೆ. ಯಾರು ಆ ಕೃತ್ಯವನ್ನ ಮಾಡಿದ್ದಾರೆ ಅನ್ನೋದು ಗೊತ್ತೇ ಆಗಲಿಲ್ಲ. ಹೀಗೆ ಇಂತಹದ್ದೇ ನೂರಾರು ಪ್ರಶ್ನೆಗಳನ್ನ ಜನರ ಮನಸ್ಸನ್ನ ಕೊರೆಯೋದಕ್ಕೆ ಶುರುಮಾಡಿತ್ತು.ವಾಮಾಚಾರವನ್ನ ಮಾಡುವ ಆರಾಧಕರಿಗೆ ಆ ಪೂಜೆಯನ್ನ ಮಾಡೋದಕ್ಕೆ ಸಾಕಷ್ಟು ವಸ್ತುಗಳ ಅಗತ್ಯವಿರುತ್ತೆ. ಅದ್ರಲ್ಲಿ ಶಕ್ತಿಯುತವಾದ ಪೂಜೆಯನ್ನ ಮಾಡುವ ಹೊತ್ತಿಗೆ ಮನುಷ್ಯನ ದೇಹದ ಭಾಗಗಳ ಅವಶ್ಯಕತೆಯಿರುತ್ತೆ.

ಇದೇ ಕಾರಣಕ್ಕೆ ವಾಮಾಚಾರಿಗಳು ಒಂದು ಕಣ್ಣನ್ನ ಯಾವಾಗ್ಲು ಸ್ಮಶಾನದ ಮೇಲೆ ಇಟ್ಟಿರ್ತಾರೆ. ಅದ್ರಲ್ಲೂ ಅಲ್ಲಿಗೆ ಯಾವಾಗ ಹೆಣ ಬರುತ್ತೆ. ಅದು ಗಂಡೋ ಹೆಣ್ಣೋ ಅನ್ನೋದನ್ನ ಅವ್ರು ಗಮನಿಸ್ತಾನೆ ಇರ್ತಾರೆ. ಅದ್ರಲ್ಲೂ ಅವರಿಗೆ ಹೂಳುವ ಶವಗಳ ಮೇಲೆ ಕಣ್ಣು ಜಾಸ್ತಿ. ಅಲ್ಲದೆ ಆ ಶವ ಕೊಳೆಯೋದಕ್ಕೆ ಮೊದಲೆ ಅದನ್ನ ಎತ್ತಿಕೊಳ್ಳೋದಕ್ಕೆ ಬೇಕಾದ ತಯಾರಿಯನ್ನ ನಡೆಸಿರ್ತಾರೆ. ಯಾಕಂದ್ರೆ ಪೂರಾ ಕೊಳೆತು ಶವ ಮಣ್ಣಾದ ಮೇಲೆ ಅದ್ರಿಂದ ಯಾವುದೇ ಉಪಯೋಗವಾಗೋದಿಲ್ಲ ಹೀಗಾಗಿ ಅವ್ರು ಇತ್ತೀಚೆಗೆ ಹೂತಿರೋ ಶವಗಳನ್ನ ಎತ್ತೋದರ ಬಗ್ಗೆ ಯೋಚನೆ ಮಾಡಿರ್ತಾರೆ.ಅರಸಯ್ಯರ ಶವ ಕೂಡಾ ಇತ್ತೀಚೆಗೆ ಹೂತಿದ್ದರಿಂದಾಗಿ ಅವ್ರು ಆ ಶವದ ಮೇಲೆ ಕಣ್ಣು ಹಾಕಿದ್ರು. ಅಲ್ಲದೆ ಶಿವರಾತ್ರಿ ಅಮವಾಸ್ಯೆ ಬೇರೆ ಆಗಿದ್ರಿಂದ ಆ ಶವವನ್ನ ತೆಗೆಯೋದಕ್ಕೆ ಮೊದಲೆ ಪ್ಲಾನ್ ಮಾಡಿಕೊಂಡ ಹಾಗೆ ಕಾಣುತ್ತೆ.

ಶಿವರಾತ್ರಿ ಅಮವಾಸ್ಯೆ ತುಂಬಾ ಶ್ರೇಷ್ಠವಾದದ್ದು ಅವತ್ತು ಕ್ಷುದ್ರ ಶಕ್ತಿಗಳ ಆರಾಧನೆ ಮಾಡಿದ್ರೆ ವಿಶಿಷ್ಠ ಶಕ್ತಿಯ ಸಂಪಾದನೆಯಾಗುತ್ತೆ. ಹೀಗಾಗಿಯೆ ಅವ್ರು ಅದೇ ದಿನ ಶವದ ತಲೆಯನ್ನ ಕಡಿದು ಅದೇ ಸ್ಮಶಾನದಲ್ಲಿ ಪೂಜೆಯನ್ನ ಮಾಡಿದ್ದಾರೆ. ಆ ಶಕ್ತಿ ಸಂಪಾದನೆ ಆಗುತ್ತೋ ಇಲ್ವೋ ಅನ್ನೋದು ಅವರವರ ನಂಬಿಕೆ. ಆದ್ರೆ ಅದನ್ನ ನಂಬಿರೋರು ಮಾತ್ರ ಚಾಚು ತಪ್ಪದೆ ಅದನ್ನ ಮಾಡ್ತಾರೆ. ಹೀಗೆ ಹಳ್ಳಿಯೊಳಗಿನ ಸ್ಮಶಾನವಾದ್ರೆ ಅದು ಪ್ರಶಸ್ತವಾದ ಸ್ಥಳವಾಗಿರುತ್ತೆ. ಯಾರ ಭಯವು ಇರೋದಿಲ್ಲ. ಜೊತೆಗೆ ಆಗಾಗ ಅಲ್ಲಿಗೆ ಯಾರು ಬಂದು ಹೋಗೋದಿಲ್ಲ ಇದೇ ಕಾರಣಕ್ಕೆ ಈ ಸ್ಮಶಾನವನ್ನ ಅವ್ರು ಆಯ್ಕೆ ಮಾಡ್ಕೊಂಡಿರಬಹುದು.ಇಲ್ಲಿ ಊರಿನವರ ಸಪೋರ್ಟ್ ಇಲ್ಲದೆ ಆ ಶವದ ಬಗ್ಗೆ ವಾಮಾಚಾರಿಗಳಿಗೆ ಮಾಹಿತಿ ಸಿಗೋದಿಲ್ಲ. ಅಥವಾ ಊರಿನಲ್ಲೇ ಇರೋ ವ್ಯಕ್ತಿಗಳು ಈ ವಾಮಾಚಾರವನ್ನ ಮಾಡಿರೋ ಸಾಧ್ಯತೆಯಿದೆ.

ಇಲ್ಲದಿದ್ರೆ ಅದೇ ಹೆಣವನ್ನ ಅವರು ತೆಗೆಯೋದಕ್ಕೆ ಸಾಧ್ಯವಿರೋದಿಲ್ಲ. ಅಥವಾ ಸ್ಮಶಾನದಲ್ಲಿ ಬಂದು ಹುಡುಕಿದ್ರೆ ಎಲ್ಲಾ ಸಮಾಧಿಗಳನ್ನ ಕಿತ್ತು ಹಾಕಬೇಕಿತ್ತು. ಆದ್ರೆ ಒಂದೇ ಸಮಾಧಿಯನ್ನ ಕಿತ್ತು ಹಾಕಿದ್ದಾರೆ ಅಂದ್ರೆ ಅವ್ರು ಮೊದಲೇ ಈ ಹೆಣವನ್ನ ಟಾರ್ಗೆಟ್ ಮಾಡಿಕೊಂಡಿರ್ತಾರೆ. ಇನ್ನು ಇದೇ ಕುಟುಂಬಕ್ಕೆ ಆಗದವರು ಕೂಡಾ ಈ ಕೆಲಸವನ್ನ ಮಾಡಿರೋ ಸಾಧ್ಯತೆಯಿದೆ. ಹೀಗಾಗಿಯೇ ಆ ಫ್ಯಾಮಿಲಿಯರು ಟೆನ್ ಷನ್ ಮಾಡ್ಕೊಂಡಿರೋದು. ಯಾರಿಗೆ ಗೊತ್ತು ಇವತ್ತಿನ ಕಾಲದಲ್ಲೂ ಇಂತಹ ಪೂಜೆಗಳು ವರ್ಕೌಟ್ ಆದ್ರು ಆಗಬಹುದು. ಅದ್ರಿಂದ ಪಾಸಿಟಿವ್ ಕೆಲಸಗಳು ಆಗೋದಕ್ಕಿಂತ ಹೆಚ್ಚಾಗಿ ನೆಗೆಟಿವ್ ಕೆಲಸಗಳು ಆಗೋದು ಹೆಚ್ಚು. ಹೀಗಾಗಿ ಗ್ರಾಮಸ್ಥರಿಗೂ ವಾಮಚಾರಿಗಳು ತಮ್ಮ ಊರಿನವರೆಗೆ ಬಂದಿದ್ದಾರೆ ಅಂತ ಟೆನ್ ಷನ್ ಮಾಡ್ಕೊಂಡಿದ್ದಾರೆ.

ಈಗಾಗ್ಲೇ ನೆಲಮಂಗಲ ಗ್ರಾಮಾಂತರ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದಾರೆ, ಪೊಲೀಸ್ರ ತನಿಖೆಯಲ್ಲಿ ಯಾರು ಯಾಕಾಗಿ ಹೆಣದ ತಲೆ ಎತ್ತಿ ಒಯ್ದಿದ್ದಾರೆ ಅನ್ನೋದು ಗೊತ್ತಾಗತ್ತೆ. ಮನುಷ್ಯ ಸತ್ತಾಗ ತನ್ನ ಕೋರಿಕೆಗಳಿಗಾಗಿ ಏನೆಲ್ಲಾ ಪೂಜೆ ಮಾಡ್ತಾನೆ. ಆದ್ರೆ ಸತ್ತ ಮೇಲೆ ಬೇರೆಯರ ಕೋರಿಗಳ ಈಡೇರಿಕೆಗಾಗಿ ಇಂತಹದ್ದೆಲ್ಲಾ ನಡೆಯುತ್ತೆ. ವಾಮಚಾರ ಅನ್ನೋದು ಹಳ್ಳಿಗಳಿಗಿಂತ ಹೆಚ್ಚಾಗಿ ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರೋದೆ ಆತಂಕ ತರೋ ವಿಷಯ. ಯಾಕಂದ್ರೆ ಇಲ್ಲಿ ವಿದ್ಯಾವಂತರಿದ್ದಾರೆ ಅವರಿಗೆ ವಿಜ್ಞಾನದ ಬಗ್ಗೆ ಅರಿವಿರುತ್ತೆ. ಅಲ್ಲದೆ ಮೂಢನಂಬಿಕೆಗಳ ನಂಬುವರು ಕೂಡಾ ಕಡಿಮೆಯಿದ್ದಾರೆ. ಇದೊಂದೇ ಕಾರಣಕ್ಕೆ ಇಲ್ಲಿ ಅಂತಹದ್ದೆಲ್ಲಾ ನಡೆಯೋದಿಲ್ಲ ಅಂತ ಅಂದುಕೊಂಡಿದ್ವಿ.

ಪಾಪ ಅರಸಯ್ಯರ ಆತ್ಮ ಸ್ವರ್ಗ ಸೇರಿದೆಯೋ ನರಕ ಸೇರಿದೆಯೋ ಗೊತ್ತಿಲ್ಲ. ಅವರು ಸತ್ತ ಮೇಲೆ ಮಾತ್ರ ಆ ದೇಹಕ್ಕೊಂದು ಸರಿಯಾದ ಮುಕ್ತಿ ಸಿಗದೇ ಇರೋದಕ್ಕೆ ಗ್ರಾಮಸ್ಥರು ಕಣ್ಣೀರು ಹಾಕ್ತಿದ್ದಾರೆ. ಸ್ಮಶಾನದಲ್ಲಿ ನಡೆಯುವಂತಹ ಇಂತಹ ಆಚರಣೆಗಳ ಮೇಲೆ ಒಂದಷ್ಟು ಎಚ್ಚರಿಕೆಯನ್ನ ವಹಿಸಬೇಕು. ಇಲ್ಲದಿದ್ರೆ ಮೂಢನಂಬಿಕೆಯ ಹೆಸರಲ್ಲಿ ಸ್ಮಶಾನಗಳಲ್ಲಿರೋ ಹೆಣಗಳು ಹೊರಗೆ ಬರೋದಕ್ಕೆ ಶುರುವಾಗುತ್ತೆ. ಆಗ ಪ್ರಾಣಿಗಳ ಮತ್ತು ಮನುಷ್ಯರ ಶವಗಳಿಗೆ ವ್ಯತ್ಯಾಸವೇ ಇಲ್ಲದಂತಾಗುತ್ತೆ.

LEAVE A REPLY

Please enter your comment!
Please enter your name here