Home Crime ವಾಹನಗಳಲ್ಲಿ ಹಣ ಸಾಗಿಸಿ ಹಂಚಿದ್ರೆ ಗಾಡಿ ಸೀಜ್ ಹಾಗುತ್ತೆ ಅಂತಾ ಏನ್ ಮಾಸ್ಟರ್ ಪ್ಲಾನ್ ಗೊತ್ತಾ...

ವಾಹನಗಳಲ್ಲಿ ಹಣ ಸಾಗಿಸಿ ಹಂಚಿದ್ರೆ ಗಾಡಿ ಸೀಜ್ ಹಾಗುತ್ತೆ ಅಂತಾ ಏನ್ ಮಾಸ್ಟರ್ ಪ್ಲಾನ್ ಗೊತ್ತಾ ಇದು..!?! “ಮೋದಿ ಹೆಲ್ಪ್”..???

1977
0
SHARE

ಬೆಂಗಳೂರಿನ ಹೊರವಲಯದಲ್ಲಿ ದಾಖಲೆ ಇಲ್ಲದ ಕೋಟಿ ಕೋಟಿ ಹಣವನ್ನ ಚುನಾವಣಾಧಿಕಾರಿಗಳು ಸೀಜ್ ಮಾಡ್ತಿದ್ದಾರೆ. ಕೆಲವರು ಬಿಜೆಪಿ, ಇನ್ನು ಕೆಲವರು ಕಾಂಗ್ರೆಸ್ ಕಡೆ ದುಡ್ಡು ಅಂತಾರೆ. ಆದ್ರೆ, ಹಣ ತಂದೋರು ಮಾತ್ರ ವಾಹನ ಬಿಟ್ಟು ಕಾಲ್ಕೀಳ್ತಾರೆ. ಇದೆಲ್ಲದಕ್ಕೂ ಪ್ಲಾನ್ ಮಾಡಿರುವ ಪಕ್ಷದ ಕೆಲ ಅಭ್ಯರ್ಥಿಗಳು, ಪ್ರಧಾನಿ ಮಾಡಿಸಿಕೊಟ್ಟ ಪ್ರೀ ಜಿರೋ ಬ್ಯಾಲೆನ್ಸ್ ಅಕ್ಕೌಂಟ್‌ ಗೆ ಹಣ ಹಾಕೋ ಮೂಲಕ ಹೈಟೆಕ್ ಪ್ಲಾನ್ ಮಾಡಿದ್ದಾರೆ…
ರಾಜ್ಯ ವಿಧಾನಸಭಾ ಚುನಾವಣೆಗೆ ಈ ಬಾರಿ ಹಣದ ಹೊಳೆಯೇ ಹರಿದಾಡುತ್ತಿದೆ.. ಚುನಾವಣಾಧಿಕಾರಿಗಳು ಹಾಗೂ ಐಟಿ ಅಧಿಕಾರಿಗಳು ಕೋಟಿ ಕೋಟಿ ಹಣವನ್ನು ದಿನ ನಿತ್ಯ ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಚುನಾವಣಾ ಆಯೋಗದ ಕಣ್ತಪ್ಪಿಸಿ ಅಭ್ಯರ್ಥಿಗಳು ಡಿಜಿಟಲೀಕರಣದ ಮೊರೆ ಹೋಗಿದ್ದಾರೆ…

ಈಗಾಗಲೇ ಕ್ಷೇತ್ರದಲ್ಲಿರೋ ಮತದಾರರ ಅಕೌಂಟ್ ನಂಬರ್ ಪಡೆದಿರೋ ಅಭ್ಯರ್ಥಿಗಳು, ಒಬ್ಬೊಬ್ಬ ಮತದಾರರಿಗೂ ಒಂದೊಂದು ಸಾವಿರ ರೂಪಾಯಿಯನ್ನು ಹಾಕಲಾಗಿದೆ. ವೋಟ್ ಹಾಕಿದ್ಮೇಲೆ ಇನೊಂದು ಸಾವಿರ ಹಾಕೋ ಭರವಸೆಯನ್ನು ನೀಡಿದ್ದಾರೆ…
ಹೌದು, ಪ್ರಧಾನಿ ನರೇಂದ್ರ ಮೋದಿ, ಪ್ರತಿಯೊಬ್ಬ ಭಾರತೀಯನು ಜನ್ ಧನ್ ಮೂಲಕ ಅಕೌಂಟ್ ಮಾಡಿಸೋ ಆಫರ್ ಕೊಟ್ಟಿದ್ರು. ಇದಕ್ಕಾಗಿ ಜಿರೋ ಬ್ಯಾಲೆನ್ಸ್ ಮೂಲಕ ಖಾತೆ ತೆರೆಯಬಹುದು ಅನ್ನೋ ಆಫರ್ ಕೊಟ್ಟಿದ್ರು. ಆದ್ರೆ ಅಂದು ಒಪನ್ ಆದ ಅಕೌಂಟ್ ನಲ್ಲಿ ಕೆಲ ಜನ್ರು ಒಂದೇ ಒಂದು ರೂಪಾಯಿ ಟ್ರಾಂಜಾಕ್ಷನ್ ಮಾಡಿಲ್ಲ…

ಇದೀಗ ರಾಜ್ಯದಲ್ಲಿ ಚುನಾವಣೆಗೆ ಇದೇ ಖಾತೆಗಳು ಬಳಕೆ ಆಗುತ್ತಿವೆ. ಅಲ್ಲದೆ ಮತದಾರನ ಇತರೆ ಬ್ಯಾಂಕ್ ಅಕೌಂಟ್‌ಗಳಿಗೂ ಹಣ ಸಂದಾಯ ಮಾಡಲಾಗುತ್ತಿದೆ. ರಾಜ್ಯದಲ್ಲಿ ಚುನಾವಣಾ ಆಯೋಗ ಅಕ್ರಮ ಚುಟುವಟಿಕೆಗೆ ಬ್ರೇಕ್ ಹಾಕಿರೋದ್ರಿಂದ ಅಭ್ಯರ್ಥಿಗಳ ಹೈಟೆಕ್ ಪ್ಲಾನ್ ಇದಾಗಿದೆ…

ಬೆಂಗಳೂರಿನ ದಾಸರಹಳ್ಳಿ, ರಾಜಾಜಿನಗರ, ಯಶವಂತಪುರ, ಹೆಬ್ಬಾಳ, ಯಲಹಂಕ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಡಿಜಿಟಲ್ ಕಳ್ಳಾಟದ ದಾರಿ ಹಿಡಿದಿದ್ದಾರೆ. ಕ್ಷೇತ್ರದಲ್ಲಿರೋ ಪದಾಧಿಕಾರಿಗಳು ಹಾಗೂ ಮಂಡಲ ಅಧ್ಯಕ್ಷರು ಬ್ಯಾಂಕ್ ಅಕೌಂಟ್ ನಂಬರ್ ಗಳನ್ನು ಕಲೆಕ್ಟ್ ಮಾಡಿಕೊಂಡಿದ್ದಾರೆ. ಜೊತೆಗೆ ಖಾತೆಗಳಿಗೆ ಬಿಜೆನೆಸ್ ಮ್ಯಾನ್ ಹಾಗೂ ಆಪ್ತರಿಂದ ಆನ್ ಲೈನ್ ಮೂಲಕ ಹಣ ಸಂದಾಯ ಮಾಡಲಾಗುತ್ತಿದ್ರೆ, ಇನ್ನು ಕೆಲವರು ನೇರವಾಗಿ ಬ್ಯಾಂಕ್‌ಗೆ ಹೋಗಿ ಖಾತೆಗೆ ಹಣ ಹಾಕುತ್ತಿದ್ದಾರೆ…

ಒಟ್ಟಾರೆ, ಚುನಾವಣಾ ಆಯೋಗದ ಹದ್ದಿನ ಕಣ್ಣು ತಪ್ಪಿಸಿ, ಅಭ್ಯರ್ಥಿಗಳು ಲೀಗಲ್ ಆಗೇ ಇಲ್ಲಿಗಲ್ ಮತ ಖರೀದಿ ಮಾಡುತ್ತಿದ್ದಾರೆ. ಅದಷ್ಟು ಬೇಗ ಚುನಾವಣಾಧಿಕಾರಿಗಳು ಇದಕ್ಕೆ ಬ್ರೇಕ್ ಹಾಕದೇ ಹೋದ್ರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಅಕ್ರಮ ಚಟುವಟಿಕೆಗೆ ದಾರಿ ಮಾಡಿಕೊಟ್ಟಂತಾಗುತ್ತೆ…

LEAVE A REPLY

Please enter your comment!
Please enter your name here