Home Crime ವಿಜಯಪುರದಲ್ಲಿ ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ.! ಭೀಕರ ರಸ್ತೆ ಅಪಘಾತಕ್ಕೆ ಸ್ಥಳದಲ್ಲೇ 9 ಜನ ದುರ್ಮರಣ.! ಹೋಳಿ...

ವಿಜಯಪುರದಲ್ಲಿ ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ.! ಭೀಕರ ರಸ್ತೆ ಅಪಘಾತಕ್ಕೆ ಸ್ಥಳದಲ್ಲೇ 9 ಜನ ದುರ್ಮರಣ.! ಹೋಳಿ ಹಬ್ಬದ ಬಣ್ಣದಿಂದ ಪಾರಾಗಲು ಗೋವಾಗೆ ಟೂರ್ ಹೋಗಿ ಪ್ರಾಣವನ್ನೆ ಕಳೆದುಕೊಂಡ ಯುವಕರ ಗುಂಪು..!

1677
0
SHARE

ಹೋಳಿ ಹಬ್ಬದ ಬಣ್ಣದಿಂದ ಪಾರಾಗಲು ಗೋವಾಗೆ ಟೂರ್ ಹೋಗಿದ್ದ ಯುವಕರ ಗುಂಪೊಂದು ತಮ್ಮ ಪ್ರಾಣವನ್ನೆ ಕಳೆದುಕೊಂಡಿದೆ. ಗೋವಾಗೆ ತೆರಳಿದ್ದ 13 ಜನರ ಪೈಕಿ 9 ಜನರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಬೆಳ್ಳಂಬೆಳಿಗ್ಗೆ ವಿಜಯಪುರದ ಸಿಂಧಗಿ ತಾಲೂಕಿನ ಚಿಕ್ಕಸಿಂಧಗಿ ಗ್ರಾಮದ ಬಳಿ ಕ್ಯಾಂಟರ್ ಹಾಗೂ ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಅಪಘಾತದಲ್ಲಿ ಕ್ರೂಸರ್ ನಲ್ಲಿದ್ದ 9 ಜನ್ರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಮೂವರಿಗೆ ಗಂಭಿರ ಗಾಯಗಳಾಗಿವೆ. ಇನ್ನು ಕ್ಯಾಂಟರ್ ನಲ್ಲಿದ್ದ ಇಬ್ಬರಿಗೂ ಗಾಯಗಳಾಗಿದ್ದು ಎಲ್ಲರಿಗೂ ಸಿಂಧಗಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಮೃತರು ಎಲ್ಲರು ಕಲಬುರ್ಗಿ ಜಿಲ್ಲೆ ಚಿತ್ತಾಪುರ ಗ್ರಾಮದವರು ಎಂದು ತಿಳಿದುಬಂದಿದೆ. ನಿನ್ನೆ ನಡೆದ ಹೋಳಿ ಹಬ್ಬದ ಬಣ್ಣದಾಟದ ಗೋಜಿನಿಂದ ಹೊರಗುಳಿಯಲು ನಿರ್ಧರಿಸಿದ್ದ ಈ ಯುವಕರೆಲ್ಲರು ಕಳೆದ ದಿನಾಂಕ 19 ರಂದು ಮೋಜಿಗಾಗಿ ಗೋವಾಗೆ ತರಳಿದ್ದರು ಎನ್ನಲಾಗಿದೆ. ಗೋವಾದಿಂದ ಮರಳಿ ಚಿತ್ತಾಪುರಕ್ಕೆ ತೆರಳುವಾಗ ಬೆಳಿಗ್ಗೆ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.

ಈ ಅಪಘಾತದಲ್ಲಿ ಸಾಗರ, ಚಾಂದಬಾಶಾ, ಅಜೀಮ್, ಅಂಬರೀಶ, ಶಕೀರ, ಗುರು, ಕ್ರೂಸರ್ ಚಾಲಕ ಶ್ರೀನಾಥ, ಯುನೂಸ್ ,ಮಂಗಸಾಬ ಮೃತರಾದವರಾಗಿದ್ದು, ಮಲ್ಲಿಕಾರ್ಜುನ,ಮಂಜು ಸದ್ದಾಂ,S K ಸಾಜೀದ್ ಎಂಬುವರಿಗೆ ಗಾಯಗಳಾಗಿವೆ. ಇನ್ನು ಕ್ಯಾಂಟರ್ ಚಾಲಕ ಆಕಾಶ ದೊರೆ ,ಆನಂದ ಗೆ ಕೂಡ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಕ್ರುಸರ್ ವಾಹನ ಚಾಲಕ ಕುಡಿದ ಮತ್ತಿನಲ್ಲಿ, ನಿದ್ರೆ ಗೆ ಜಾರಿದ್ದೆ ಅಪಘಾತ ಕ್ಕೆ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

LEAVE A REPLY

Please enter your comment!
Please enter your name here