Home District ವಿಜಯಪುರ: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ -ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ...

ವಿಜಯಪುರ: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ -ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ತಾಯಿ

1018
0
SHARE

ಗಂಡು ಮಗು ಬಯಸಿ ಟೆಸ್ಟ್​ಟ್ಯೂಬ್(ಪ್ರನಾಳ ಶಿಶು) ಮೊರೆಹೋಗಿದ್ದ ಮಹಿಳೆಯೊಬ್ಬಳು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಕುತೂಹಲಕಾರಿ ಘಟನೆ ವಿಜಯಪುರದ ಮುದನೂರ ಆಸ್ಪತ್ರೆಯಲ್ಲಿ ನಡೆದಿದೆ. ದಾಲಿಬಾಯಿ ಸಗನಲಾಲ್ ಸಂದೇಶ ಎಂಬುವರೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಮಹಾತಾಯಿ. ಸಿಜೇರಿಯನ್​ ಮೂಲಕ ಶಿಶುಗಳನ್ನು ಹೊರತೆಗೆಯಲಾಗಿದ್ದು, ಅವುಗಳಲ್ಲಿ ಎರಡು ಹೆಣ್ಣು ಮತ್ತು ಎರಡು ಗಂಡು ಮಕ್ಕಳಿವೆ.

ಮೂಲತಃ ರಾಜಸ್ಥಾನದ ಜಾಲೋರ್ ಜಿಲ್ಲೆಯ ನೌಸ್ರಾ ಗ್ರಾಮದವರಾದ ದಾಲಿಬಾಯಿ, ಪ್ರೇಶರ್ ಕುಕ್ಕರ್​, ಸೇಲ್ಸ್​ ಅಂಡ್​ ಸರ್ವೀಸ್ ಮಾಡಿಕೊಂಡಿದ್ದಾರೆ. ಇವರಿಗೆ ಮೊದಲೇ ಒಂದು ಗಂಡು ಹಾಗೂ ಎರಡು ಹೆಣ್ಣುಮಕ್ಕಳು ಇದ್ದರು. ಲಲಿತ್ ಎಂಬ 16 ವರ್ಷದ ಮಗ ಮೃತಪಟ್ಟಿದ್ದ. ಹೀಗಾಗಿ ತಮ್ಮನ್ನು ನೋಡಿಕೊಳ್ಳಲು ಗಂಡು ಮಗು ಬೇಕೆಂದು. ಟೆಸ್ಟ್​ಟ್ಯೂಬ್ ಚಿಕಿತ್ಸೆ ತೆಗೆದುಕೊಂಡಿದ್ದರು. ಇದೀಗ 8 ತಿಂಗಳು ಕೊನೆಯಲ್ಲಿ ನಾಲ್ಕು ಮಕ್ಕಳಿಗೆ ದಾಲಿಬಾಯಿ ಜನ್ಮ ನೀಡಿದ್ದಾರೆ.

ಮೂರು ಮಕ್ಕಳ ಬಳಿಕ ಆಪರೇಷನ್ ಮಾಡಿಸಿದ್ದರು. ಆದರೆ, ಗಂಡು ಮಗು ಸತ್ತಾಗ ಪುನರ್ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಸದ್ಯ ತಾಯಿ‌-ಮಕ್ಕಳು ಆರೋಗ್ಯಯುತವಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here