Home Cinema ವಿಜಯಲಕ್ಷ್ಮೀ ಕೈ ಮುಗಿದಿದ್ದೇಕೆ, ಅಭಿನಯ ಚಕ್ರವರ್ತಿಗೆ..?

ವಿಜಯಲಕ್ಷ್ಮೀ ಕೈ ಮುಗಿದಿದ್ದೇಕೆ, ಅಭಿನಯ ಚಕ್ರವರ್ತಿಗೆ..?

871
0
SHARE

ಬಣ್ಣದ ದುನಿಯಾನೇ ಹೀಗೆ, ಬೇಕಾದಾಗ ಪ್ರತಿಭೆಗಳನ್ನ ಬಾಚಿ ತಬ್ಬಿಕೊಳ್ಳುತ್ತೆ. ಆದರೆ ಬೇಡ ಅಂದಾಗ ಮುಲಾಜಿಲ್ಲದೇ ತನ್ನ ಎಡಗಾಲಿನಿಂದ ಒದ್ದುಬಿಡುತ್ತೆ. ನಟಿ ವಿಜಯಲಕ್ಷ್ಮಿ ಬದುಕಿನಲ್ಲಿ ನಡೆದಿದ್ದು ಸೇಮ್ ಸ್ಟೋರಿ.

ಚಿತ್ರರಂಗದ ಘಟನುಘಟಿಗಳ ಜೊತೆ ನಟಿಸಿ ಸೈ ಎನಿಸಿಕೊಂಡ ವಿಜಯಲಕ್ಷ್ಮೀಗೆ ಲಕ್ ಅನ್ನೋದು ಬಹಳ ಬೇಗ ಕೈ ಕೊಟ್ಟುಬಿಡ್ತು. ಪರ್ಸನಲ್ ಲೈಫ್ ಹಳ್ಳ ಹಿಡಿದ ದಾರಿಯಲ್ಲೇ ವೃತ್ತಿಜೀವನ ಕೂಡ ನಿಧಾನವಾಗಿ ಸೈಡಿಗೆ ಸರಿದುಕೊಂಡಿದ್ದು ವಿರ್ಪಯಾಸ. ಅವಕಾಶಗಳ ಕೊರತೆಯಿಂದನೋ ಅಥವಾ ನಿರಂತರ ಸೋಲುಗಳಿಂದಲೊ ಏನೋ ವಿಜಯಲಕ್ಷ್ಮೀ ನಸೀಬು ದಿ ಎಂಡ್ ಎಂದುಬಿಡ್ತು. ನಾಗಮಂಡಲ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ವಿಜಯಲಕ್ಷ್ಮೀಗೆ ಸಕ್ಸಸ್ ಬಹಳ ಬೇಗ ದಕ್ಕಿಬಿಡ್ತು. ನಂತರ ನೋಡುನೋಡುತ್ತಿದಂತೆ ವಿಜಯಲಕ್ಷ್ಮೀ ಬಹುಬೇಡಿಕೆನಟಿ ಎನಿಸಿಕೊಂಡ್ರು. ಆದರೆ ವಿಧಿಯೇ ಬೇರೆ ಡಿಸೈಡ್ ಮಾಡಿತ್ತು ಬಿಡಿ.

ಬರ‍್ತಾಬರ‍್ತಾ ವಿಜಯಲಕ್ಷ್ಮೀಗೆ ಜಯ ಸಿಕ್ಕಲಿಲ್ಲ. ಹೊಟ್ಟೆಪಾಡಿಗೋಸ್ಕರ ಟಿವಿ ಸೀರಿಯಲ್‌ಗಳಲ್ಲಿ ಬಣ್ಣ ಹಚ್ಚಬೇಕಾಯ್ತು. ಸೃಜನ್ ಲೋಕೆಶ್ ಜೊತೆಗಿನ ಎಂಗೇಜ್‌ಮೆಂಟ್ ಮುರಿದಮೇಲಂತೂ ವಿಜಯಲಕ್ಷ್ಮೀ ಅಕ್ಷರಶಃ ಯಾರ ಕಣ್ಣಿಗೂ ಕಾಣದಂತೆ ಮಾಯಾವಾಗಿಬಿಟ್ರು. ಆದರೆ ಆಮೇಲೆ ಜನರ ಮುಂದೆ ಪ್ರತ್ಯಕ್ಷವಾಗಿದ್ದು ಬೇರೆ ಯಾವ ರೂಪದಲ್ಲಿ ಅಂತ ಕೇಳಿದ್ರೆ ನಿಜಕ್ಕೂ ಬೇಜರಾಗುತ್ತೆ ಕಣ್ರೀ.ನನ್ನ ಕಂಡಿಶನ್ ತುಂಬಾ ಕ್ರಿಟಿಕಲ್ ಆಗಿದೆ. ನನಗೆ ಯಾರಾದ್ರೂ ಸಿನಿಮಾಗಳಲ್ಲಿ ಚಾನ್ಸ್ ಕೊಡಿ ಅಂತ ಮಾಧ್ಯಮಾದವರ ಮುಂದೆ ಬಂದು ಗೋಳಾಡಿದಾಗಲೇ ಎಲ್ಲರಿಗೂ ಮತ್ತೊಮ್ಮೆ ವಿಜಯಲಕ್ಷ್ಮೀ ಎನ್ನುವ ಹಿರೋಯಿನ್ ಇದ್ದಳು ಅಂತ ನೆನಪಾಗಿದ್ದು. ಗೆದ್ದಾಗ ಎಲ್ಲರೂ, ಸೋತಾಗ ಯಾರು ಇಲ್ಲ ಎನ್ನುವ ಮಾತಿನಂತೆ ವಿಜಯಲಕ್ಷ್ಮೀ ತಮ್ಮ ಲೋ ಬಿಪಿಯಿಂದ ಮಲ್ಯ ಆಸ್ಪತ್ರೆಗೆ ಸೇರಿದಾಗ ಯಾರು ಸಹಾಯಕ್ಕೆ ಬರಲಿಲ್ಲ.

ವಿಜಯಲಕ್ಷ್ಮೀ ಸಹೋದರಿ ಉಷಾರಾಣಿ ತನ್ನ ತಂಗಿ ಆರ್ಥಿಕ ಕಷ್ಟದಲ್ಲಿದ್ದಾಳೆ. ಅವಳಿಗೆ ನಿಮ್ಮ ಕೈಲಾದ ಸಹಾಯ ಮಾಡಿ. ಅವಳು ಸಿನಿಮಾ ಮಾಡಿ ನಿಮ್ಮ ಋಣ ತೀರಿಸ್ತಾಳೆ ಅಂತ ಪರಿಪರಿಯಾಗಿ ಬೇಡಿಕೊಳ್ಳುವ ದೃಶ್ಯ ಎಲ್ಲರ ಮನಸ್ಸು ಕದಡಿಬಿಟ್ಟಿತ್ತು.ಆಗಲೇ ಆಸ್ಪತ್ರೆಗೆ ಭೇಟಿ ಕೊಟ್ಟ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೆದರಬೇಡಿ. ಏನೇ ಆದ್ರೂ ನಿಮ್ಮ ಜೊತೆ ನಾವಿರ‍್ತೀವಿ ಅಂತ ಥಮ್ಸ್‌ಅಪ್ ಮಾಡ್ತು. ಫಿಲಂ ಚೆಂಬರ್ ವಿಜಯಲಕ್ಷ್ಮೀಯನ್ನ ಮೀಟ್ ಮಾಡಿದ ವಿಷಯ ಕಿಚ್ಚನ ಮನ ತಟ್ಟಿದೆ. ನಟಿ ವಿಜಯಲಕ್ಷ್ಮೀಯ ಮನದಾಳದ ಕೂಗು ಕೊನೆಗೂ ಎಲ್ಲರ ಕಿವಿಗೆ ಕೇಳಿಸಿದೆ.

ಅದರಲ್ಲೂ ಕಿಚ್ಚನ ಒಂದು ಸಹಾಯ ಈಗ ವಿಜಯಲಕ್ಷ್ಮೀಯ ಕಣ್ಣೀರನ್ನ ಕೊಂಚ ಮಟ್ಟಿಗೆ ಕಡಿಮೆ ಮಾಡಿದೆ. ಸಾಮಾನ್ಯವಾಗಿ ನೊಂದವರ ಕಷ್ಟಗಳಿಗೆ ಬೇಗನೇ ಸ್ಪಂದಿಸುವ ಸುದೀಪ್ ಒಳ್ಳೆತನ ಇಲ್ಲೂ ತನ್ನ ಕಾರ್ಯ ಮುಂದುವರೆಸಿದೆ. ಕಿಚ್ಚನ ಮಾನವಿಯತೆಯ ದೊಡ್ಡಗುಣ ವಿಜಯಲಕ್ಷ್ಮೀಯ ಬಾಳಿನಲ್ಲಿ ಹೊಸ ಬೆಳಕು ಮೂಡಿಸಿದೆ. ಸುದೀಪ್ ಮಾಡಿದ ಒಂದು ಕೆಲಸಕ್ಕೆ ವಿಜಯಲಕ್ಷ್ಮೀ ಮನಸ್ಸು ಸಲಾಮ್ ಹೊಡಿತಿದೆ.ಜೀವನದಲ್ಲಿ ಕೆಟ್ಟ ಘಳಿಗೆ ತನ್ನ ಆಟವನ್ನ ಪ್ರದರ್ಶಿಸಿದ್ರೆ ಯಾರು ಏನು ಮಾಡೋಕೆ ಆಗಲ್ಲ. ಈಟ್ ವಾಸ್ ಎ ರಿಯಾಲಿ ಬ್ಯಾಡ್ ಟೈಮ್ ಫಾರ್ ವಿಜಯಲಕ್ಷ್ಮೀ. ಕಿಚ್ಚನ ಒಂದು ಸಹಾಯದಿಂದ ವಿಜಯಲಕ್ಷ್ಮೀಗೆ ಹೊಸ ಉತ್ಸಾಹ ಹುಟ್ಟಿಕೊಂಡಿದೆ.

ಆರೋಗ್ಯ ಸರಿ ಹೋದ ಮೇಲೆ ಮತ್ತೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಆಸೆ ಹೊಂದಿರೋ ವಿಜಯಲಕ್ಷ್ಮೀಗೆ ಅದೃಷ್ಟನೂ ಸಾಥ್ ಕೊಡಬೇಕಿದೆ. ವಿಜಯಲಕ್ಷ್ಮೀಯ ಆರೋಗ್ಯ ಸುಧಾರಿಸಲಿ, ಆಕೆ ಮತ್ತೆ ತನ್ನ ಬದುಕನ್ನ ಗಟ್ಟಿಯಾಗಿ ಕಟ್ಟಿಕೊಳ್ಳಲಿ ಎನ್ನುವುದೇ ಸ್ಯಾಂಡಲ್‌ವುಡ್‌ನ ಆಶಯ..

LEAVE A REPLY

Please enter your comment!
Please enter your name here