Home Cinema ವಿಜಯ್ ದೇವರಕೊಂಡನೇ ಆಗ್ತಾನಂತೆ ರಶ್ಮಿಕಾ ಗಂಡ..? ರಶ್ಮಿಕಾ ಹೇಳಿದ ಪ್ರೀತಿ ಕಥನಕ್ಕೆ ರಕ್ಷಿತ್ ಫ್ಯಾನ್ಸ್ ಕೆಂಡ..!

ವಿಜಯ್ ದೇವರಕೊಂಡನೇ ಆಗ್ತಾನಂತೆ ರಶ್ಮಿಕಾ ಗಂಡ..? ರಶ್ಮಿಕಾ ಹೇಳಿದ ಪ್ರೀತಿ ಕಥನಕ್ಕೆ ರಕ್ಷಿತ್ ಫ್ಯಾನ್ಸ್ ಕೆಂಡ..!

1697
0
SHARE

ರಶ್ಮಿಕಾ ಮಂದಣ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ಅದು, ಓನ್ಸ್ ಅಗೈನ್ ರಕ್ಷಿತ್ ಶೆಟ್ಟಿ & ವಿಜಯ್ ದೇವರಕೊಂಡ ಕಾರಣದಿಂದ.ಹೌದು, ಕೊಡಗಿನ ಕಿನ್ನರಿ.. ಇದೀಗ, ನ್ಯಾಶನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

ಇದ್ರ ಕೈಗನ್ನಡಿ ಅನ್ನುವಂತೆ ಕನ್ನಡ ಚಿತ್ರರಂಗದಿಂದ ಬಹುತೇಕ ಕಾಣೆಯಾಗಿರುವ ರಶ್ಮಿಕಾರ ಡಿಯರ್ ಕಾಮ್ರೇಡ್ ಚಿತ್ರ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಸ್ಥಿತಿ ಹೀಗಿರುವಾಗ್ಲೇ.. ರಶ್ಮಿಕಾ ಮೇಲೆ ರಕ್ಷಿತ್ ಶೆಟ್ಟಿ ಫ್ಯಾನ್ಸ್ ಮತ್ತೆ ಕೆಂಡ ಕಾರುತ್ತಿದ್ದಾರೆ.ಯಸ್, ರಶ್ಮಿಕಾ ಮಂದಣ್ಣ ಮೇಲೀಗ ರಕ್ಷಿತ್ ಶೆಟ್ಟಿ ಭಕ್ತಗಣ ಮುನಿಸಿಕೊಂಡಿದೆ. ಇದಕ್ಕೆ ಕಾರಣ.. ರಶ್ಮಿಕಾ ಮಾಡಿದ ಅದೊಂದು ಟ್ವೀಟ್. ಹೌದು, ನಿಮಗೆ ಗೊತ್ತಿರಲಿ ರಶ್ಮಿಕಾ ಮಂದಣ್ಣ..

ಇತ್ತೀಚಿಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಾಲ್ಕು ಸಾಲುಗಳನ್ನ ಗೀಚಿಕೊಂಡಿದ್ದಾರೆ. ಅದು, ಮಾಮೂಲಿ ಸಾಲುಗಳಲ್ಲ.. ಚಿತ್ರಕ್ಕೆ ಸಂಬಂಧಪಟ್ಟ ಸಾಲುಗಳೂ ಅಲ್ಲ. ಅದು, ಪ್ರೀತಿಯ ಅಮಲಿನ ಸಾಲುಗಳು.ಇದು ನಾನು ಪ್ರೀತಿಸುವ ಸಮಯ. ನಿಜವಾದ ಪ್ರೀತಿಯನ್ನು ಪರೀಕ್ಷಿಸುವುದು ಇಲ್ಲಿ. ಮತ್ತು ಈ ಬಾರಿ ನಿಮ್ಮನ್ನು ನಿಜವಾಗಿಯೂ ಪ್ರೀತಿಸುವವರು ಹಾಗೂ ನಿಮ್ಮ ಬಗ್ಗೆ ಕಾಳಜಿ ವಹಿಸುವವರು ಯಾರೆಂಬುದುನ್ನು ತಿಳಿದುಕೊಳ್ಳುವ ಸಮಯವಿದು. ಅವರು ಈ ಜಗತ್ತಿನಲ್ಲಿ ನಿಜವಾಗಿಯೂ ನಿಮ್ಮ ಎಲ್ಲಾ ಪ್ರೀತಿ ಮತ್ತು ಆರೈಕೆಗೆ ಅರ್ಹರು.

ಹಾಗೆಯೇ ಯಾರು ನಿಮ್ಮನ್ನು ಪ್ರೀತಿಸುವುದಿಲ್ಲವೂ ಇರಲಿ ಬಿಡಿ. ಅವರಿಗೂ ಒಳ್ಳೆಯದಾಗಲಿ ಎಂದು ಹರಿಸಿ ಬಿಡಿ”ಇದು, ರಶ್ಮಿಕಾ ಬರೆದ ಸಾಲುಗಳು. ಇದೇ ಸಾಲುಗಳು ಇದೀಗ ರಕ್ಷಿತ್ ಶೆಟ್ಟಿ ಅಭಿಮಾನಿಗಳನ್ನ ಕೆರಳಿಸಿದೆ. ಅಷ್ಟೇ ಅಲ್ಲ ವಿಜಯ್ ದೇವರಕೊಂಡ ಮೇಲೆ ರಶ್ಮಿಕಾಗೇನಾದ್ರೂ ನಿಜಕ್ಕೂ ಪ್ರೀತಿಯಾಯ್ತಾ ಅನ್ನುವ ಅನುಮಾನಕ್ಕೂ ಎಡೆ ಮಾಡಿಕೊಟ್ಟಿದೆ.ನಿಮಗೆ ಗೊತ್ತಿರಲಿ ರಶ್ಮಿಕಾ ಇಲ್ಲಿ ನಿಜವಾದ ಪ್ರೀತಿ ಬಗ್ಗೆ ಮಾತನಾಡಿದ್ದಾರೆ. ಆರೈಕೆಗೆ ಅರ್ಹರ‍್ಯಾರು ಅನ್ನುವದ್ರ ಬಗ್ಗೆಯೂ ಮಾತನಾಡಿದ್ದಾರೆ.

ಪ್ರೀತ್ಸುವ ಸಮಯ ಅಂದಿದ್ದಾರೆ. ಇದು, ಸಹಜವಾಗಿ ರಕ್ಷಿತ್ ಫ್ಯಾನ್ಸ್ ಕೋಪಕ್ಕೆ ಕಾರಣವಾಗಿದ್ದರೆ, ವಿಜಯ್ ದೇವರಕೊಂಡ ಹಾಗೂ ರಶ್ಮಿಕಾರನ್ನ ಇಷ್ಟಪಡುವ ಮನಸುಗಳ ಸಂಭ್ರಮಕ್ಕೂ ಕಾರಣವಾಗಿದೆ. ಹಾಗಾಗೇ, ರಕ್ಷಿತ್ ಭಕ್ತಗಣ.. ಸಾನ್ವಿ ನಿಜ ಹೇಳು ಕರ್ಣ ನಿನ್ನ ಪ್ರೀತ್ಸೇ ಇಲ್ವಾ.. ರಕ್ಷಿತ್ ಅವ್ರದ್ದು ನಿಜವಾದ ಪ್ರೀತಿಯಾಗಿರಲಿಲ್ವಾ ಅನ್ನುವ ಪ್ರಶ್ನೆಗಳನ್ನೂ ಕೇಳ್ತಿದ್ದಾರೆ.ಇನ್ನೂ ಇತ್ತ, ರಶ್ಮಿಕಾ ಬರೆದ ಇದೇ ಸಾಲುಗಳನ್ನ ಕಂಡ ರಶ್ಮಿಕಾ ಫ್ಯಾನ್ಸ್, ವಿಜಯ್ ದೇವರಕೊಂಡನೇ ನಿನ್ನ ಗಂಡ ಅನ್ನುತ್ತಿದ್ದಾರೆ. ವಿಜಯ್ ಥರ ಪ್ರೀತಿ ಮಾಡೋರ‍್ಯಾರಿಲ್ಲ..

ವಿಜಯ್ ಹಾಗೂ ನಿಮ್ಮ ಕೆಮೆಸ್ಟ್ರೀಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಅನ್ನುವ ಮಾತುಗಳನ್ನಾಡ್ತಿದ್ದಾರೆ. ಅಷ್ಟೇ ಅಲ್ಲ ಬೇಗ ಮದುವೆಯಾಗಿ ಅನ್ನುವ ಮಾತುಗಳನ್ನಾಡ್ತಾನೇ ಆಶಿರ್ವಾದನೂ ಮಾಡ್ತಿದ್ದಾರೆ.
ಇದೆಲ್ಲದ್ರ ನಡುವೆ, ಇನ್ನೊಂದು ವಿಚಾರನೂ.. ರಶ್ಮಿಕಾ & ವಿಜಯ್ ಜೋಡಿನೇ ಬೆಸ್ಟ್ ಅನ್ನುವದಕ್ಕೆ, ಸಾಕ್ಷಿಯ ರೂಪದಲ್ಲಿ ಕಾಣಸಿಗುತ್ತಿದೆ. ಅದುವೇ ಡಿಯರ್ ಕಾಮ್ರೇಡ್ ಚಿತ್ರದ ಟೀಸರ್.
ಯಸ್, ಮೊನ್ನೆಯಷ್ಟೇ ಟೀಸರ್‌ನೊಂದಿಗೆ ಡಿಯರ್ ಕಾಮ್ರೇಡ್ ಬಂದಾಗ, ಒಂದು ವಿಚಾರ ತುಂಬಾನೇ ಚರ್ಚೆಗೀಡಾಗಿತ್ತು. ಅದುವೇ ಟೀಸರ್‌ನಲ್ಲಿನ ಲಿಪ್ ಲಾಕ್ ಸನ್ನಿವೇಶ.
ಹೌದು, ಅಸಲಿಗೆ.. ಗೀತ ಗೋವಿಂದಂ ಚಿತ್ರದ ಲಿಪ್ ಲಾಕ್ ಸನ್ನಿವೇಶ ಲೀಕ್ ಆಗಿತ್ತಲ್ಲಾ, ಆಗ.. ರಶ್ಮಿಕಾ ಅನೇಕ ಪ್ರಶ್ನೆಗಳನ್ನ ಎದುರಿಸಿದ್ದರು.

ರಕ್ಷಿತ್ ಎದೆಗೆ ಕೊಳ್ಳಿ ಇಟ್ಟು ರಶ್ಮಿಕಾ ಮಾಡ್ತಿರೋದು ಸರೀನಾ ಅನ್ನುವ ಚರ್ಚೆಯನ್ನೂ ಅನೇಕರು ಮಾಡಿದ್ದರು. ಇದೀಗ ಇಂಥಹದ್ದೇ ಚರ್ಚೆ ಡಿಯರ್ ಕಾಮ್ರೇಡ್ ವಿಚಾರದಲ್ಲೂ ನಡಿತಿದೆ. ಅಷ್ಟೇ ಅಲ್ಲ ಇಲ್ಲಿನ ಲಿಪ್ ಲಾಕ್ ಪಕ್ಕಾ ಪ್ರಚಾರದ ಒಂದು ಭಾಗ ಅನ್ನುವ ಮಾತುಗಳನ್ನೂ ಒಂದು ವರ್ಗ ಮಾತನಾಡುತ್ತಿದೆ. ಹೀಗೆ ಅದ್ಯಾವಾಗ.. ಮತ್ತೊಮ್ಮೆ ಲಿಪ್ ಲಾಕ್‌ನ ಸನ್ನಿವೇಶದಿಂದ, ಪ್ರಶ್ನೆಗಳೂ ಕೇಳಿ ಬರಲು ಶುರುವಾದ್ವೋ, ಆಗ ಕೆರಳಿದಂತಾದ ರಶ್ಮಿಕಾ.. ಸ್ಪಷ್ಟೀಕರಣ ನೀಡಿದ್ದಾರೆ. ಮೊದಲು ಸಿನಿಮಾ ನೋಡಿ ಆಮೇಲೆ ಮಾತನಾಡಿ ಅಂದಿದ್ದಾರೆ.

ಅಷ್ಟೇ ಅಲ್ಲ.. ನಾಯಕಿಯಾಗಿ ಪಾತ್ರಕ್ಕೆ ನ್ಯಾಯ ಸಲ್ಲಿಸಬೇಕಾದ ಜವಾಬ್ದಾರಿ ನನ್ನದು, ಹಾಗಾಗಿ.. ಪಾತ್ರಕ್ಕೆ ಅನುಗುಣವಾಗಿ ನಟಿಸಿದ್ದೇನೆ ಅಂದಿದ್ದಾರೆಒಟ್ನಲ್ಲಿ.. ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡಿದಾಗಲೆಲ್ಲಾ, ರಕ್ಷಿತ್ ಶೆಟ್ಟಿ ಹೆಸರನ್ನೂ ಎಳೆದುಕೊಂಡು ಬರುವ ಪದ್ಧತಿ ಮುಂದುವರೆದಿದೆ. ಅಷ್ಟೇ ಅಲ್ಲ ವಿಜಯ್ ದೇವರಕೊಂಡನೇ ರಶ್ಮಿಕಾಗೆ ಪರ್ಫೆಕ್ಟ್ ಗಂಡ ಅನ್ನುವ ಚರ್ಚೆಗೂ ವೇದಿಕೆ ಸಿದ್ಧವಾಗ್ತಿದೆ. ಮುಂದಿನ ದಿನಗಳಲ್ಲಿ ಇದೇ ಚರ್ಚೆ ಇನ್ನೆಲ್ಲಿ ಹೋಗಿ ಮುಟ್ಟುತ್ತೋ ಕಾದು ನೋಡಬೇಕು…

LEAVE A REPLY

Please enter your comment!
Please enter your name here