Home District ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೇ ಹೋಗುತ್ತಿದ್ದರಿಂದ ಬಸ್ ಡ್ರೈವರ್ ಹಾಗೂ ಕಂಡಕ್ಚರ್‌ಗೆ ಶಾಸಕಿ ಫುಲ್ ಕ್ಲಾಸ್..?!

ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೇ ಹೋಗುತ್ತಿದ್ದರಿಂದ ಬಸ್ ಡ್ರೈವರ್ ಹಾಗೂ ಕಂಡಕ್ಚರ್‌ಗೆ ಶಾಸಕಿ ಫುಲ್ ಕ್ಲಾಸ್..?!

456
0
SHARE

ಬಸ್​ ಪಾಸ್ ಹೊಂದಿದ್ದ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಬಸ್​​ನಲ್ಲಿ ಹತ್ತಿಸಿಕೊಳ್ಳದೇ ನಿರ್ಲಕ್ಷ್ಯ ತೋರಿದ ಸರ್ಕಾರಿ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್​ ತರಾಟೆಗೆ ತೆಗೆದುಕೊಂಡ‌ರು. ಬಸ್ ನಿಲುಗಡೆ ಆಗದ ಕಾರಣ ಸಮಸ್ಯೆ ಆಗುತ್ತಿದೆ ಎಂದು ವಿದ್ಯಾರ್ಥಿಗಳು ಹಲವು ಸಲ ಪ್ರತಿಭಟನೆ ನಡೆಸಿದ್ದರು.

ಶಾಸಕಿ ಕೂಡ ಈ ಸಂಬಂಧ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ‌ ಪ್ರಯೋಜನ ಆಗಿರಲಿಲ್ಲ. ವಿದ್ಯಾರ್ಥಿಗಳ ಜತೆಗೆ ಬಂದ ಶಾಸಕಿ ಬಸ್ ತಡೆದು ಚಾಲಕ, ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡರು.

ಖಾನಾಪುರ ಕ್ಷೇತ್ರದ ಗ್ರಾಮೀಣ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ನಿಲುಗಡೆ ಮಾಡುತ್ತಿಲ್ಲ ಎಂದು ಶಾಸಕಿ ಕೋಪಗೊಂಡಿದ್ದರು. ಹಲವಾರು ಬಾರಿ ಸೂಚಿಸಿದರು ಬಸ್ ನಿಲುಗಡೆಯಾಗದ್ದಕ್ಕೆ ಕಾರಣವೇನು ಎಂದು ರಸ್ತೆಯಲ್ಲೇ ಬಸ್ ನಿಲ್ಲಿಸಿ ಶಾಸಕಿ ಕೇಳಿದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಜನತೆಗೆ ಕೈ ತೋರಿಸಿದ್ರೆ ನಿಲ್ಲಿಸಿ ಮಾನವೀಯ ನೆಲೆಯಲ್ಲಿ ಅವರ ಜಾಗಕ್ಕೆ ತಲುಪಿಸಬೇಕು. ಇಲ್ಲದಿದ್ರೆ ನೋಟಿಸ್ ಕೊಡದೆ ಸಸ್ಪೆಂಡ್ ಮಾಡುವುದಾಗಿ ಶಾಸಕಿ ಅಂಜಲಿ ನಿಂಬಾಳ್ಕರ್ ಎಚ್ಚರಿಕೆ ನೀಡಿದ್ರು.

LEAVE A REPLY

Please enter your comment!
Please enter your name here