Home Crime ವಿದ್ಯಾರ್ಥಿನಿಯರನ್ನು ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ ಕಾಮುಕನಿಗೆ ಅಟ್ಟಾಡಿಸಿದ ಬಾಲ ವಿದ್ಯಾರ್ಥಿನಿಯರು ಮತ್ತು ಪೋಷಕರು…

ವಿದ್ಯಾರ್ಥಿನಿಯರನ್ನು ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ ಕಾಮುಕನಿಗೆ ಅಟ್ಟಾಡಿಸಿದ ಬಾಲ ವಿದ್ಯಾರ್ಥಿನಿಯರು ಮತ್ತು ಪೋಷಕರು…

578
0
SHARE

ಇತ್ತೀಚಿಗೆ ರಾಜ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ದೌರ್ಜನ್ಯ ಮಾಡಿ ಓಡಿಹೋದವರ ಗ್ರಹಚಾರವನ್ನೇ ಬಿಡಿಸೋ ನಮ್ಮ ಜನ, ರೆಡ್‌ಹ್ಯಾಂಡಾಗಿ ಕೈಗೆ ಸಿಕ್ಕಿದ್ರೆ ಬಿಡ್ತಾರಾ.. ಕುಂದಾನಗರಿಯಲ್ಲಿ ಆಗಿದ್ದೂ ಅದೇ, ಬಾಲಕಿಯರ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ ಕಾಮುಕನಿಗೆ ಸಾರ್ವಜನಿಕರು ಸರಿಯಾಗೇ ಚಪ್ಪಲಿಸೇವೆ ಮಾಡಿದ್ದಾರೆ. ಅಷ್ಟೇ ಅಲ್ಲ ಕಾಮುಕನನ್ನ ವಶಕ್ಕೆ ಪಡೆದಿರುವ ಪೋಲಿಸರು ಸಖತ್ ಆಗೇ ಡ್ರೀಲ್ ಮಾಡಿಸಿದ್ದಾರೆ…

ದೌರ್ಜನ್ಯ ನಡೆಸಿ ತಲೆಮರೆಸಿಕೊಂಡ ಕಾಮುಕರನ್ನೇ ನಮ್ಮ ಜನ ಹುಡುಕಿ ಹೊಡೀತಾರೆ, ಅಂತಹದರಲ್ಲಿ ಎದುರಿಗೆ ಸಿಕ್ಕ ಕಾಮುಕನನ್ನ ಜನ ಸುಮ್ನೆ ಬಿಡ್ತಾರಾ, ಬೆಳಗಾವಿಯಲ್ಲಿ ಆಗಿದ್ದೂ ಅದೇ. ಸಾರಥಿ ನಗರದಲ್ಲಿರೋ ಸರಕಾರಿ ಪ್ರಾಥಮಿಕ ಶಾಲೆಗೆ ಬಿಸಿಯೂಟ ನೀಡಲು ಬರುವ ಕಾಮುಕನೋರ್ವ ನಾಲ್ಕನೇ ತರಗತಿಯ ಇಬ್ಬರು ವಿದ್ಯಾರ್ಥೀನಿಯರ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ…

ವಿಷಯ ತಿಳಿದ ಪೋಷಕರು ಅವನಿಗೆ ಚಪ್ಪಲಿ ಸೇವೆ ಮಾಡಿದ್ದಾರೆ.ಎಂದಿನಂತೆ ನಿನ್ನೆ ಕೂಡ ಕಾಮುಕ ಪ್ರವೀಣ ಬಿಸಿಯೂಟ ನೀಡಲು ಸಾರಥಿ ನಗರದ ಸರಕಾರಿ ಪ್ರಾಥಮಿಕ ಶಾಲೆಗೆ ಬಂದಿದ್ದ. ಈ ವೇಳೆ ನಾಲ್ಕನೇ ತರಗತಿಯ ವಿದ್ಯಾರ್ಥೀನಿಯರ ಎದೆಯ ಭಾಗಕ್ಕೆ ಕೈಹಾಕಿ ವಿಕೃತಿ ಮೆರೆದಿದ್ದ, ಕೂಡಲೇ ಬಾಲಕಿಯರು ಕಿರುಚಿದ್ದರಿಂದ ಕಾಮುಕ ಕಾಲ್ಕಿತ್ತಿದ್ದ, ಬಳಿಕ ಕಾಮುಕನ ದೌರ್ಜನ್ಯದ ವಿಷಯವನ್ನ ಬಾಲಕಿಯರು ಪೋಷಕರಿಗೆ ತಿಳಿಸಿದ್ರು…

ವಿಷಯ ಕೇಳಿ ಕೆರಳಿದ ಪೋಷಕರು ಇಂದು ಬಿಸಿಯೂಟ ನೀಡಲು ಶಾಲೆಗೆ ಬಂದ ಪ್ರವೀಣನನ್ನ ಹಿಡಿದು ಹಿಗ್ಗಾ ಮುಗ್ಗಾ ಥಳಿಸಿ ಚಪ್ಪಲಿ ಸೇವೆ ಮಾಡಿದ್ದಾರೆ. ಇತ್ತ ಪೋಷಕರು ಕಾಮುಕ ಪ್ರವೀಣನನ್ನ ಥಳಿಸುತ್ತಿದ್ದಾಗ ಆಕ್ರೋಶ ಭರಿತರಾದ ಬಾಲಕಿಯರು ಕೂಡ ಪೋಷಕರೊಂದಿಗೆ ಸೇರಿಕೊಂಡು ಕಾಮುಕನಿಗೆ ಚಪ್ಪಲಿ ಸೇವೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಕ್ಕಳ ಸಹಾಯವಾಣಿ ತಂಡ ಕೂಡ ಸ್ಥಳಕ್ಕೆ ಬಂದು ಬಾಲಕಿಯರಿಂದ ಮಾಹಿತಿ ಪಡೆದುಕೊಂಡಿದೆ…

ಇನ್ನು ಬಿಜೆಪಿ ಸ್ಥಳೀಯ ಮುಖಂಡ ವಿರೇಶ ಕಿವಡಸಣ್ಣವರ ಎಂಬಾತನಿಗೆ ಸೇರಿದ ಸಮೃದ್ದಿ ಸೇವಾ ಸಂಸ್ಥೆಯಲ್ಲಿ ಈ ಕಾಮುಕ ಪ್ರವೀಣ ಕೆಲಸ ಮಾಡುತ್ತಿದ್ದು ಸಮೃದ್ದಿ ಸಂಸ್ಥೆಯಿಂದಲೇ ಸರಕಾರಿ ಶಾಲೆಗಳಿಗೆ ಬಿಸಿಯೂಟ ಪೂರೈಸಲಾಗುತ್ತಿದೆ.. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಎ.ಪಿ.ಎಂ.ಸಿ ಪೋಲಿಸರು ಕಾಮುಕ ಪ್ರವೀಣನನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ…

LEAVE A REPLY

Please enter your comment!
Please enter your name here