Home Crime “ವಿಧವೆಯರು ಬೇಕು” ಅಂತ ಪತ್ರಿಕೆಯಲ್ಲಿ ಜಾಹೀರಾತು..! ಯಾಮಾರಿದ್ರೆ ಮಹಿಳೆಯರ ಶೀಲ ಹಾಗೂ ಹಣದೊಂದಿಗೆ ಪರಾರಿ..!

“ವಿಧವೆಯರು ಬೇಕು” ಅಂತ ಪತ್ರಿಕೆಯಲ್ಲಿ ಜಾಹೀರಾತು..! ಯಾಮಾರಿದ್ರೆ ಮಹಿಳೆಯರ ಶೀಲ ಹಾಗೂ ಹಣದೊಂದಿಗೆ ಪರಾರಿ..!

687
0
SHARE

ಈತನಿಗೆ ವಿಚ್ಚೇಧಿತ ಹಾಗೂ ವಿಧವೆ ಮಹಿಳೆಯರೇ ಟಾರ್ಗೇಟ್.. ಕೊಂಚ ಯಾಮಾರಿದ್ರು ಮಹಿಳೆಯರ ಶೀಲಕ್ಕೂ ಕಂಟಕ ಅವರ ಬಳಿ ಇರುವ ಹಣಕ್ಕೂ ಕತ್ರಿ.. ಈ ಕಾಮುಕನ ವಿರುದ್ದ ಚಿಕ್ಕಮಗಳೂರು ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ದಾಖಲಾಗಿತ್ತು 16 ಕೇಸ್ ಗಳು… ಪತ್ರಿಕೆಯಲ್ಲಿ ಜಾಹೀರಾತು ನೀಡಿ ವಂಚಿಸುತ್ತಿದ್ದ ಕಾಮುಕ ಕೊನೆಗೂ ಅಂದರ್…

ಈ ಪೋಟೋದಲ್ಲಿರೋ ವ್ಯಕ್ತಿ ಹೆಸ್ರು ಡಿ ಎಂ ರಾಮಕೃಷ್ಣ.. ಮೂಲತಹ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ದೊಡ್ಡಮುಳಗೋಡು ಗ್ರಾಮದವ… ಈ ಕಾಮುಕ ವಿಚ್ಚೇದಿತ ಹಾಗೂ ವಿಧವೆ ಮಹಿಳೆಯರು ಬೇಕಾಗಿದ್ದಾರೆ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ಜಾಹೀರಾತಿಗೆ ಮರುಳಾಗಿ ಬಂದ ಮಹಿಳೆಯರನ್ನ ಲೈಂಗಿಕವಾಗಿ ಬಳಸಿಕೊಂಡಿದ್ದು,ಮದುವೆಯಾಗುವುದಾಗಿ ನಂಬಿಸಿ ಲಕ್ಷ ಲಕ್ಷ ದೋಚಿದ್ದಾನೆ.. ಇದೇ ರಿತಿ ಸುಮಾರು 16 ವಿಧವೆಯರಿಗೆ ಟೋಪಿ ಹಾಕಿದ್ದಾನೆ.

ಹೌದು ಈ ಕಾಮುಕ ನನಗೆ ಮದುವೆಯಾಗಿ ವಿಚ್ಚೇಧನವಾಗಿದೆ.. ನಾನೊಬ್ಬ ಸರ್ಕಾರಿ ನೌಕರ ಹಾಗೂ ಉದ್ಯಮಿ ಆ ಗರ್ಬ ಶ್ರೀಮಂತ, ನನಗೆ ವಿಚ್ಚೇಧಿತ ಮಹಿಳೆಯರು ಬೇಕಾಗಿದ್ದಾರೆ ಎಂದು ವಿವಿಧ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾನೆ. ಈಗೆ ಜಾಹಿರಾತು ನಂಬಿ ಕರೆ ಮಾಡೋ ಮಹಿಳೆಯರನ್ನ ಖಾಸಗಿ ಹೋಟೆಲ್ ಗೆ ಬರುವಂತೆ ಹೇಳುತ್ತಾನೆ. ನಂತರ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಮದುವೆಗೆ ಪೋಟೋ ಹಾಗೂ ಆಧಾರ್ ಕಾರ್ಡ್ ಪಡೆದುಕೊಳ್ಳತ್ತಾನೆ.

ನಂತರ ಅದೇ ಪೋಟೋ ಹಾಗೂ ಆಧಾರ್ ಕಾರ್ಡ್ ಬಳಸಿಕೊಂಡು ಹೊಸ ಸಿಮ್ ತೆಗೆದುಕೊಂಡು ಮತ್ತೆ ಜಾಹೀರಾತು ನೀಡುತ್ತಾನೆ. ಈಗೆ ರಾಜ್ಯಾದ್ಯಂತ ಸುಮಾರು 16 ಮಹಿಳೆಯರಿಗೆ ಮೋಸ ಮಾಡಿದ್ದಾನೆ.ಇನ್ನೂ ಬೆಂಗಳೂರಿನ ಮಹಿಳೆಯೊಬ್ಬರಿಗೂ ಇದೇ ರೀತಿ ಮೋಸ ಮಾಡಿದ್ದು, ಆಕೆಯನ್ನ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಮಹಿಳೆಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಸುಮಾರು 26 ಲಕ್ಷ ಪೀಕಿದ್ದಾನೆ.

ಸದ್ಯ ಮೋಸ ಹೋದ ಮಹಿಳೆ ಶೇಷಾದ್ರಿಪುರಂ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಕೊಂಡಿದ್ದ ಪೋಲೀಸ್ರು ಆರೋಪಿಯನ್ನ ಎಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅದೇನೆ ಇರ್ಲಿ ಪತ್ರಿಕೆಗಳಲ್ಲಿ ಬರುವ ಜಾಹೀರಾತುಗಳನ್ನ ನಂಬಿ ಮೋಸ ಹೋಗುವ ಮುನ್ನ ಸತ್ಯಾ ಸತ್ಯತೆಗಳನ್ನ ಪರಿಶೀಲಸುವುದು ಒಳಿತು.

LEAVE A REPLY

Please enter your comment!
Please enter your name here