Home District ವಿಭೂತಿ-ಶಿವಲಿಂಗ ಮುಟ್ಟಿಸಿ ಎಂ.ಬಿ.ಪಾಟೀಲ್‌ಗೆ ಮತ ಹಾಕದಂತೆ ತಾಕೀತು..!?ಎಂ.ಬಿ. ಪಾಟೀಲ್ ವಿರುದ್ಧ ತಿರುಗಿ ಬಿದ್ದ ವೀರಶೈವ ಸ್ವಾಮೀಜಿಗಳು..?

ವಿಭೂತಿ-ಶಿವಲಿಂಗ ಮುಟ್ಟಿಸಿ ಎಂ.ಬಿ.ಪಾಟೀಲ್‌ಗೆ ಮತ ಹಾಕದಂತೆ ತಾಕೀತು..!?ಎಂ.ಬಿ. ಪಾಟೀಲ್ ವಿರುದ್ಧ ತಿರುಗಿ ಬಿದ್ದ ವೀರಶೈವ ಸ್ವಾಮೀಜಿಗಳು..?

3288
0
SHARE

ರಾಜ್ಯ ಚುನಾವಣೆಯಲ್ಲಿಯೇ ಹೈವೋಲ್ಟೆಜ್ ಮತಕ್ಷೇತ್ರ ಅಂತ ಕರೆಯಿಸಿಕೊಳ್ತಿರೋ ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ ಕ್ಷೇತ್ರದಲ್ಲಿ ಧರ್ಮರಾಜಕಾರಣ ಆರಂಭವಾಗಿದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ನಡೆಸಿದ ಎಂ.ಬಿ. ಪಾಟೀಲ್ ವಿರುದ್ಧ ವೀರಶೈವ ಸ್ವಾಮೀಜಿಗಳು ಹಾಗೂ ಜಗದ್ಗುರುಗಳು ತಿರುಗಿ ಬಿದ್ದಿದ್ದಾರೆ.

 

ನೀತಿ ಸಂಹಿತೆ ಉಲ್ಲಂಘಿಸಿ ಧರ್ಮದ ಆಧಾರದ ಮೇಲೆ ಬಿಜೆಪಿ ಪರ ಮತ ಯಾಚಿಸುತ್ತಿರೋ ಕಾಶಿ ಜಗದ್ಗುರುಗಳ ವಿರುದ್ಧ ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ್ ಚುನಾವಣಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ. ಜಾತಿ-ಧರ್ಮದ ಆಧಾರದ ಮೇಲೆ ಮತ ಯಾಚನೆ ಹಾಗೂ ಬಿಜೆಪಿಗೆ ಮತ ನೀಡುವಂತೆ ಮತದಾರರ ಮೇಲೆ ಒತ್ತಡ ಹಾಕುತ್ತಿರೋ ಪಂಚಪೀಠಾಧಿಕಾರಿಗಳ ಪೈಕಿ ಕಾಶಿ ಹಾಗೂ ಶ್ರೀಶೈಲ ಜಗದ್ಗುರುಗಳು ಬಬಲೇಶ್ವರದ ಮಹಾದೇವ ಶಿವಾಚಾರ್ಯ ಸ್ವಾಮೀಜಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.. ಸ್ವಾಮೀಜಿಗಳ ಭೇಟಿ, ಪೂಜಾ ಕಾರ್ಯಗಳನ್ನ ವಿಡಿಯೋ ಚಿತ್ರೀಕರಣ ಮಾಡಬೇಕು. ಅವರ ವಾಹನಗಳನ್ನು ಪರಿಶೀಲಿಸಬೇಕು ಎಂದು ಕೋರಿದ್ದಾರೆ..

ಇತ್ತ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷೆ ಚುನಾವಣಾಧಿಕಾರಿಗಳಿಗೆ ದೂರು ನೀಡುತ್ತಿದ್ದಂತೆ ಡಾ. ಚಂದ್ರಶೇಖರ್ ಶಿವಾಚಾರ್ಯ ಜಗದ್ಗುರುಗಳು ದೂರನ್ನು ಅಲ್ಲೆಗಳೆದಿದ್ದಾರೆ. ಪಂಚ ಪೀಠಗಳು, ಅದರ ಅಡಿಯಲ್ಲಿರುವ ಪೀಠಗಳು ಯಾವಾಗಲೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿರುತ್ತವೆ. ಧಾರ್ಮಿಕ ಕಾರ್ಯಕ್ಕಾಗಿಯೇ ಬಬಲೇಶ್ವರದ ಭಕ್ತರ ಮನೆಯಲ್ಲಿ ಪಾದ ಪೂಜೆಗೆ ಹೋಗಿದ್ದೆವು. ಎಲ್ಲಿಯೂ ಮತಯಾಚನೆ ಮಾಡಿಲ್ಲ. ಇಂಥವರಿಗೆ ಮತ ನೀಡಿ ಅಂತ ಕೇಳಿಲ್ಲ. ಧಾರ್ಮಿಕ ಕಾರ್ಯಗಳನ್ನ ನೆರವೇರಿಸೋದು ನೀತಿ ಸಂಹಿತೆಯ ಉಲ್ಲಂಘನೆ ಅಲ್ಲ ಎಂದಿದ್ದಾರೆ.

 

ಜೊತೆಗೆ ನಾವು ಯಾವುದೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುವಂತಹ ಕಾರ್ಯಗಳನ್ನ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.ಬಿ.ಎಸ್. ಯಡಿಯೂರಪ್ಪ ಹಾಗೂ ಎಂ. ಬಿ. ಪಾಟೀಲ್ ನಡುವಿನ ತಿಕ್ಕಾಟದಿಂದ ಬಬಲೇಶ್ವರ ಮತಕ್ಷೇತ್ರ ಪುಲ್ ಹಾಟ್ ಹಾಟಾಗಿದೆ. ಈ ಮಧ್ಯೆ ರಾಜಕಾರಣಿಗಳ ಪರವಾಗಿ ಸ್ವಾಮೀಜಿಗಳು, ಜಗದ್ಗುರುಗಳು ಪೀಲ್ಡಿಗೆ ಎಂಟ್ರಿ ಕೊಟ್ಟಿರೋದು ಕುತೂಹಲಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here