Home Crime ವಿವಾಹಿತೆ ಜೊತೆ ಪೊಲೀಸಪ್ಪನ ಲವ್ವಿಡವ್ವಿ..!? ಅಕ್ರಮ ಸಂಬಂಧವಿಟ್ಟುಕೊಂಡು ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲಾಕ್ ಮೇಲ್.!?

ವಿವಾಹಿತೆ ಜೊತೆ ಪೊಲೀಸಪ್ಪನ ಲವ್ವಿಡವ್ವಿ..!? ಅಕ್ರಮ ಸಂಬಂಧವಿಟ್ಟುಕೊಂಡು ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲಾಕ್ ಮೇಲ್.!?

16647
0
SHARE

ಅವನದು ಶೋಷಣೆಗೆ ಒಳಗಾದವರಿಗೆ ನ್ಯಾಯ ಕೊಡಿಸಬೇಕಾದ ಆರಕ್ಷಕ ವೃತ್ತಿ. ಆದ್ರೆ, ಈ ಪೋಲಿ ಪೇದೆ ಮಾತ್ರ ಮಹಿಳೆ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡು ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದನಂತೆ. ಕೊನೆಗೂ ಪೇದೆಯ ಗ್ರಹಚಾರ ಕೆಟ್ಟು ಸಿಕ್ಕುಬಿದ್ದಿದ್ದಾನೆ. ಹಾಗಿದ್ರೆ ಪೊಲೀಸಪ್ಪನ ಪೊಲಿ ಪುರಾಣವನ್ನು ನೀವೂ ಒಮ್ಮೆ ಈ ಸ್ಟೋರಿ ಓದಿ.

ಕಳ್ಳನನ್ನು ಹಿಡಿದಂತೆ ಹಿಡಿದು ಊರಲ್ಲಿ ಮೆರವಣಿಗೆ. ನೂಕುತ್ತ ತಳ್ಳತ್ತು ಆಳಿಗೊಂದು ಏಟು ಕೊಟ್ಟು ಬುದ್ಧಿ ಹೇಳುತ್ತಿರುವ ಗ್ರಾಮಸ್ಥರು. ಹೀಗೆ ಹ್ಯಾಪ್ ಮೋರೆ ಹಾಕಿಕೊಂಡು ವಾಹನದಲ್ಲಿ ಕುಳಿತಿರುವವನನ್ನೊಮ್ಮೆ ನೋಡಿಬಿಡಿ. ಇವನು ರಾಮನಗರದ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಲೋಕೇಶ್. ಕಳ್ಳರನ್ನು ಹಿಡಿಬೇಕಾದ ಈತ ಈಗ ಕಳ್ಳರಂತೆ ಸಿಕ್ಕಿ ಬಿದ್ದು, ಹಣ್ಣುಗಾಯಿ ನೀರುಗಾಯಿ ಆಗಿದ್ದಾನೆ.ಹಣ್ಣುಗಾಯಿ ನೀರುಗಾಯಿ ಆಗಿದ್ದಾನೆ.

ರಾಮನಗರ ತಾಲ್ಲೂಕಿನ ಗಿರೇನಹಳ್ಳಿಯ ಲೊಕೇಶ್ ಪಕ್ಕದ ಚಿಕ್ಕಹಳ್ಳಿಯ ಯುವತಿ ಜೊತೆ ಫೇಸ್ ಬುಕ್ ಮತ್ತು ವಾಟ್ಸಪ್ ಮೂಲಕ ಸಂಪರ್ಕ ಬೆಳೆಸಿದ್ದನಂತೆ. ಪೊಲೀಸ್ ದೈಹಿಕ ಪರೀಕ್ಷೆಗೆಂದು ರಾಮನಗರಕ್ಕೆ ತೆರಳಿದ್ದಾಗ ಯುವತಿಯ ಜತೆ ಸಂಬಂಧ ಬೆಳೆಸಿದ್ದು ಮದುವೆ ಆಗಿ ಹಿರಿಯೂರಿಗೆ ಬಂದ ಬಳಿಕವೂ ಅಕ್ರಮ ಸಂಬಂಧವನ್ನು ಮುಂದುವರೆಸಿದ್ದನಂತೆ.

ಮಾರುವೇಷದಲ್ಲಿ ಹಿರಿಯೂರು ತಾಲ್ಲೂಕಿನ ಕೆ.ಕೆ.ಹಟ್ಟಿಗೆ ಬಂದು ಹೋಗುತ್ತಿದ್ದನಂತೆ. ಈ ವಿಚಾರ ಆಕೆ ಗಂಡನಿಗೆ ಗೊತ್ತಾಗಿ, ಅನೇಕ ಸಲ ಮನೆಯಲ್ಲಿ ಪತಿ-ಪತ್ನಿ ನಡುವೆ ಗಲಾಟೆ ನಡೆದಿದೆ. ಬಳಿಕ ಕುಟುಂಬದ ಹಿರಿಯರು ಕುಳಿತು ರಾಜಿ ಸಂಧಾನ ಮಾಡಿದ್ದರಂತೆ. ಆದ್ರೆ, ಕಳೆದ ವಾರವಷ್ಟೇ ಕಾರಿನಲ್ಲಿ ಮತ್ತೆ ಗ್ರಾಮಕ್ಕೆ ಬಂದಿದ್ದ ಲೊಕೇಶ್, ಎಲ್ಲಾ ಮುಗಿಸಿ, ಎಸ್ಕೇಪ್ ಆಗಿದ್ದಾನೆ.

ಆದ್ರೆ ಇಂದು ಅವನ ಗ್ರಹಚಾರ ಕೆಟ್ಟಿತ್ತು ಅನ್ಸತ್ತೆ, ಮಹಿಳೆಯ ಪತಿ ಹಾಗೂ ಗ್ರಾಮಸ್ಥರು ಫೇಸ್ ಬುಕ್ ನಲ್ಲಿ ಲೋಕೇಶನ ಫೋಟೋ ನೋಡಿ ಗುರುತು ಹಿಡಿದು ಧರ್ಮದೇಟು ನೀಡಿದ್ದಾರೆ.ಪೇದೆ ಲೊಕೇಶ್ ಮಹಿಳೆಯ ಜೊತೆ ಅಕ್ರಮ ಸಂಪರ್ಕ ಇಟ್ಟುಕೊಂಡಿದ್ದಷ್ಟೇ ಅಲ್ಲದೆ, ಆಕೆಯ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನೂ ಇಟ್ಕೊಂಡಿದ್ದ.

ಹೀಗಾಗಿ ಆಕೆಗೆ ಬ್ಲಾಕ್ ಮೇಲ್ ಮಾಡ್ತಿದ್ದನಾ ಎಂಬ ಸಂಶಯಲೂ ವ್ಯಕ್ತವಾಗಿದೆ. ಇದೀಗ ಪೊಲೀ ಪೇದೆಗೆ ಗ್ರಾಮಸ್ಥರು ಬುದ್ದಿ ಕಲಿಸಿದ್ದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.ತಪ್ಪಿತಸ್ಥರನ್ನು ಹಿಡಿಬೇಕಾದ ಪೇದೆ, ಈಗ ತಪ್ಪು ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ. ಕಳ್ಳರನ್ನು ಜೈಲು ಸೇರಿಸ್ತಿದ್ದವನು ಈಗ ತಾನೇ ಜೈಲು ಸೇರಿದ್ದಾನೆ.

 

LEAVE A REPLY

Please enter your comment!
Please enter your name here