Home Elections 2019 ವಿಶ್ವಕಪ್ ವಿಜೇತ “ಕಪಿಲ್ ದೇವ್” ರಾಜಕೀಯಕ್ಕೆ ಎಂಟ್ರಿ..!! ರಾಷ್ಟ್ರ ರಾಜಕರಣದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಜ್ಜು..

ವಿಶ್ವಕಪ್ ವಿಜೇತ “ಕಪಿಲ್ ದೇವ್” ರಾಜಕೀಯಕ್ಕೆ ಎಂಟ್ರಿ..!! ರಾಷ್ಟ್ರ ರಾಜಕರಣದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಜ್ಜು..

5999
0
SHARE

ಆತ ಭಾರತ ಕ್ರಿಕೆಟ್ ಕಂಡ ದಂತಕಥೆ… ಟೀಂ ಇಂಡಿಯಾಗೆ ಚೊಚ್ಚಲ ವಿಶ್ವಕಪ್ ಗೆಲ್ಲಿಸಿಕೊಟ್ಟ ಮಹಾನ್ ನಾಯಕ…. ದಶಕಗಳ ಕಾಲ ಭಾರತ ತಂಡದಲ್ಲಿ ಗ್ರೇಟ್ ಆಲ್ರೌಂಡರ್ ಆಗಿ ಅಭಿಮಾನಿಗಳ ಮನಗೆದ್ದಿದ್ದ ಆ ದಿಗ್ಗಜ ಕ್ರಿಕೆಟಿದ, ಇದೀಗ ರಾಜಕೀಯಕ್ಕೆ ಎಂಟ್ರಿಕೊಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಈ ಮೂಲಕ ರಾಷ್ಟ್ರ ರಾಜಕರಣದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ…

ಕಪಿಲ್ ದೇವ್…. ಈ ಹೆಸರನ್ನ ಕೇಳಿದ್ರೆ ನಮಗೆ…ನಿಮಗೆ ತಕ್ಷಣ ನೆನಪಾಗೋದು 1983ರ ವಿಶ್ವಕಪ್… ಬಲಿಷ್ಠ ವೆಸ್ಟ್ ಇಂಡೀಸ್ ತಂಡಕ್ಕೆ ನೀರು ಕೂಡಿಸಿ ಚೊಚ್ಚಲ ಬಾರಿಗೆ ವರ್ಲ್ಡ್ ಕಪ್ ಗೆದ್ದ ಆಕ್ಷಣ ಇಂದಿಗೂ ಭಾರತೀಯರ ಮನದಲ್ಲಿ ಹಚ್ಚಳಿಯದೇ ಉಳಿದಿದೆ. ಇನ್ನು ವಿಶ್ವಕಪ್ ಗೆಲ್ಲಿಸಿಕೊಟ್ಟ ಕಪಿಲ್ ದೇವ್ ಕೂಡ ಎಲ್ಲರ ಹಾಟ್ ಫೇವರಿಟ್ ಆಗಿದ್ದರು. ಇಂದಿಗೂ ಕ್ರಿಕೆಟ್ ದುನಿಯಾದಲ್ಲಿ ಕಪಿಲ್ ಹವಾ ಜೋರಾಗಿದೆ. ಅಭಿಮಾನಿಗಳು ಕೂಡ ಅಂದು ಕಪಿಲ್ ಮಾಡಿದ ಅದ್ವಿತೀಯ ಸಾಧನೆಗೆ ಸಲಾಂ ಮಾಡ್ತಿದ್ದಾರೆ…

ಕ್ರಿಕೆಟ್ ಜಗತ್ತಿನಲ್ಲಿ ಸಾಧನೆಯ ವೀರನಾಗಿ ಮೆರೆದಾಡಿದ ಕಪಿಲ್, ಭಾರತ ತಂಡದ ಪಾಲಿಗೆ ಬೆಸ್ಟ್ ಆಲ್ರೌಂಡರ್ ಆಗಿದ್ದರು. ಕಪಿಲ್ ದೇವ್ ಮೈದಾನದಲ್ಲಿದ್ದಾರೆ ಅಂದ್ರೆ ತಂಡಕ್ಕೆ ಗೆಲುವು ಖಚಿತ ಅನ್ನೋ ಮಾತಿತ್ತು. ಪ್ರಮುಖ ಸರಣಿಗಳಲ್ಲೂ ಕಪಿಲ್ ದೇವ್ ಮ್ಯಾಚ್ ವಿನ್ನಿಂಗ್ಸ್ ಪರ್ಫಾಮೆನ್ಸ್ ನೀಡಿ ಕ್ರಿಕೆಟ್ ಲೋಕವನ್ನ ನಿಬ್ಬೆರಗಾಗುವಂತೆ ಮಾಡಿದ್ದರು. ಕ್ರಿಕೆಟ್ ನಲ್ಲಿ ಸಾಕಷ್ಟು ದಾಖಲೆಗಳನ್ನ ಮಾಡಿರೋ ವಿಶ್ವಕಪ್ ಕ್ಯಾಪ್ಟನ್ ಕಪಿಲ್ ದೇವ್ ಇದೀಗ ರಾಜಕೀಯದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುವ ಪ್ಲಾನ್ ನಲ್ಲಿದ್ದಾರೆ…

ಹೌದು. ವಿಶ್ವಕಪ್ ಹಿರೋ ಕಪಿಲ್ ದೇವ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಘಿಸಿ 15 ವರ್ಷಗಳೇ ಕಳೆದುಹೋಗಿದೆ. ಹೀಗಿದ್ದರೂ ಕ್ರಿಕೆಟ್ ಜೊತೆಗಿನ ನಂಟು ಹರಿಯಾಣದ ಹರಿಕೇನ್ ಗೆ ಬಹಳಷ್ಟಿದೆ. ಅಭಿಮಾನಿಗಳು ಕೂಡ ಕಪಿಲ್ ಅಂದು ಮಾಡಿದ ಸಾಧನೆಯನ್ನ ಇಂದಿಗೂ ಕೊಂಡಾಡುತ್ತಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಮಿಂಚಿದ್ದ ಕಪಿಲ್ ದೇವ್ ಇದೀಗ ರಾಜಕೀಯದ ಮೂಲಕ ಜನರ ಸೇವೆಗೆ ಮುಂದಾಗಿದ್ದಾರೆ. ಅಲ್ಲದೇ ಬಿಜೆಪಿ ಜೊತೆ ಕೂಡ ಗುಪ್ತ್ ಗುಪ್ತ್ ಮಾತು ಕತೆ ನಡೆಸಿದ್ದಾರೆ ಎನ್ನಲಾಗ್ತಿದೆ…

ಕಪಿಲ್ ದೇವ್ ರಾಜಕೀಯಕ್ಕೆ ಎಂಟ್ರಿಕೊಡಲು ಸೂಕ್ತ ಸಮಯ ಇದಾಗಿದೆ. ಈಗಾಗ್ಲೆ ಅವರು ಪಂಜಾಬ್ ನ ಚಂಡಿಗಡದ ಮೂಲಕ ರಾಷ್ಟ್ರ ರಾಜಕರಣಕ್ಕೆ ಎಂಟ್ರಿಕೊಡಲು ತಯಾರಿ ನಡೆಸಿದ್ದಾರೆ ಅಂತಾ ಹೇಳಲಾಗ್ತಿದೆ. ಇನ್ನು ಭಾರತೀಯ ಜನತಾ ಪಾರ್ಟಿ ಕೂಡ ಕಪಿಲ್ ಆಗಮನಕ್ಕೆ ಹಸಿರು ನಿಶಾನೆ ತೋರಿದ್ದು, ಸದ್ಯದಲ್ಲೆ ಭಾರತ ತಂಡದ ದಿಗ್ಗಜ ಕ್ರಿಕೆಟಿಗ 2ನೇ ಇನ್ನಿಂಗ್ಸ್ ರಾಜಕೀಯದಲ್ಲಿ ಶುರುವಾಗಲಿದೆ…

ಆದ್ರೆ ಕಪಿಲ್ ದೇವ್ ಮುಂಬರುವ 2019ರ ಲೋಕಸಭಾ ಚುನಾವಣೆ ಮೂಲಕ ರಾಜಕೀಯಕ್ಕೆ ಎಂಟ್ರಿಕೊಡುವ ಸಾಧ್ಯತೆ ಕಡಿಮೆ ಇದೆ. ಯಾಕೆಂದ್ರೆ ಹರಿಯಾಣದ ಹರಿಕೇನ್ ರನ್ನ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆ ಮಾಡುವ ಪ್ಲಾನ್ ನಲ್ಲಿ ಬಿಜೆಪಿ ಇದೆ..ಕಪಿಲ್ ಗೆ ಮುಂದಿನ ವರ್ಷ ರಾಜ್ಯಸಭಾ ಸದಸತ್ವ ನೀಡಿ, ಜನರ ಸೇವೆ ಮಾಡುವ ಅವಕಾಶವನ್ನ ನೀಡುತ್ತೆ ಅನ್ನೋ ಸುದ್ದಿ ಹರಿದಾಡ್ತಿದೆ. ಈಗಾಗ್ಲೆ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಕೂಡ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ…

ಇನ್ನು 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಕಪಿಲ್ ದೇವ್ ರಾಜಕೀಯಕ್ಕೆ ಪ್ರವೇಶಿಸುವ ಸುದ್ದಿ ಕೇಳಿ ಬಂದಿತ್ತು. ಆದ್ರೆ ಅಂದು ಪ್ರತಿಕ್ರಿಯಿಸಿದ್ದ ಕಪಿಲ್ ಈಗ ರಾಜಕೀಯ ಬರುವ ಯೋಚನೆ ಇಲ್ಲ ಅನ್ನೋ ಉತ್ತರ ನೀಡಿದ್ದರು. ಆದ್ರೀಗ ಕಪಿಲ್ ರಾಜಕೀಯಕ್ಕೆ ಎಂಟ್ರಿಕೊಡುವ ಸಮಯ ಒದಗಿ ಬಂದಿದ್ದು, ರಾಜಕರಣದಲ್ಲಿ ಭಾರತ ತಂಡದ ನಾಯಕನಿಗೆ ಅವಕಾಶ ಸಿಗುತ್ತಾ ಅನ್ನೋದನ್ನ ನೋಡಬೇಕಿದೆ…

LEAVE A REPLY

Please enter your comment!
Please enter your name here