Home District ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಒಬ್ಬರೇ ಬಂದ್ರೇ ನೋ ಎಂಟ್ರಿ.! ನಿಮ್ಮ ಜೊತೆ ನಿಮ್ಮ ಜೋಡಿ ಜೊತೆಯಾಗಿ ಬಂದ್ರೆ...

ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಒಬ್ಬರೇ ಬಂದ್ರೇ ನೋ ಎಂಟ್ರಿ.! ನಿಮ್ಮ ಜೊತೆ ನಿಮ್ಮ ಜೋಡಿ ಜೊತೆಯಾಗಿ ಬಂದ್ರೆ ಮಾತ್ರ ಪ್ರವೇಶ..! ಅತ್ಮಹತ್ಯೆ ಪ್ರಕರಣಗಳ ಹೆಚ್ಚಳ ಹಿನ್ನಲೆ ಒಬ್ಬಂಟಿಗರಿಗೆ ನಿರ್ಬಂಧ..!

633
0
SHARE

ಅದು ವಿಶ್ವವಿಖ್ಯಾತ ಪ್ರವಾಸಿ ಧಾಮ.. ಪ್ರೀತಿ ಪ್ರೇಮ, ಪ್ರಣಯಕ್ಕೆ ಹೆಸರುವಾಸಿಯಾದ ಗಿರಿಧಾಮ.. ಎಲ್ಲಿ ನೋಡಿದ್ರೂ ಪ್ರೇಮಿಗಳ ಪಿಸುಮಾತಿನ ಕಲರವ, ಹಂಗಂತ ನೀವು ಒಬ್ಬರೇ ಆಪ್ರೇಮಧಾಮಕ್ಕೆ ಹೋಗುವಂತಿಲ್ಲ. ಪ್ರೀತಿಸಿದ ಹುಡುಗಿಯ ಕೈ ಹಿಡಿದು ಜೊತೆ ಜೊತೆಯಾಗಿ ಹೋದ್ರೇ ಮಾತ್ರ ನಿಮಗೆ ಮುಕ್ತ ಅವಕಾಶ. ಪ್ರೀತಿಸಿದ ಹುಡುಗ ಕೈಕೊಟ್ಟ, ಹುಡುಗಿ ಮೋಸ ಮಾಡಿದಳು, ಅಂತ ನೀವು ಒಬ್ಬರೇ ಆ ಪ್ರೇಮಧಾಮಕ್ಕೆ ಏನಾದ್ರೂ ಪ್ರವೇಶ ಮಾಡೋಕೆ ಹೋದ್ರೇ ನಿಮಗೆ ಅಲ್ಲಿ ನಿಮಗೆ ನೋ ಎಂಟ್ರಿ..!

ಪ್ರೀತಿ ಪ್ರೇಮ, ಪ್ರಣಯ ಸೇರಿದಂತೆ ಆಹ್ಲಾದಕರ ವಾತಾವರಣಕ್ಕೆ ಹೆಸರುವಾಸಿಯಾಗಿರೋ ಇದು, ವಿಶ್ವಪ್ರಸಿದ್ದ ಪ್ರವಾಸಿ ತಾಣ ನಂದಿಗಿರಿಧಾಮ, ಇಂಥ ಮನಮೋಹಕ ಗಿರಿಧಾಮದಲ್ಲಿ ಚುಮು ಚುಮು ಚಳಿ, ರಮಣೀಯ ಸೂರ್ಯೋದಯದ ಸವಿಯ ಜೊತೆ ನಲ್ಲ-ನಲ್ಲೆ ಹೆಜ್ಜೆ ಹಾಕುತ್ತಾ ಪಿಸು ಮಾತುಗಳನ್ನಾಡೋದೆ ಪ್ರೇಮಿಗಳ ಪಾಲಿಗೆ ಅಕ್ಷರಶಃ ಸ್ವರ್ಗವೇ ಧರೆಗಿಳಿದು ಬಂದಂತಹ ಅನುಭವ, ಹೌದು ಪ್ರೀತಿ ಮಾಡೋವರಿಗೆ ನಂದಿಬೆಟ್ಟವೇ ಹಾಟ್ ಸ್ಪಾಟ್…. ಇಂಥ ಹಾಟ್ ಸ್ಮಾಟ್ ನಲ್ಲಿ ಪ್ರೇಮಿಗಳನ್ನ ರೊಮ್ಯಾಂಟಿಕ್ ಮೂಡ್ ಗೆ ಕೊಂಡೊಯ್ಯುತ್ತೆ ಅನ್ನೋದು ಸುಳ್ಳಲ್ಲ…

ಹಾಗಂತ ಯಾವುದೋ ಕಾರಣಕ್ಕೆ ಜೋಡಿಯನ್ನು ಬಿಟ್ಟು ಒಬ್ಬಂಟಿಯಾಗಿ ಮಾತ್ರ ನಂದಿಗಿರಿಧಾಮಕ್ಕೆ ಹೋಗೋ ಹಂಗಿಲ್ವಂತೆ.ಹೌದು ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಒಬ್ಬಂಟಿಯಾಗಿ ಯಾರೇ ಬಂದ್ರೂ ಪ್ರವೇಶ ನಿರ್ಬಂಧ ಹೇರಲಾಗಿದೆ,  ನಂದಿಗಿರಿಧಾಮದ ಟಿಕೇಟ್ ಕೌಂಟರ್ ಬಳಿಯೇ ನಿಮ್ಮನ್ನ ತಡೆದು ವಾಪಾಸ್ ಕಳಿಸಲಾಗುತ್ತೆ, ಎಷ್ಟೇ ಕಾಡಿ ಬೇಡಿ ದಮ್ಮಯ್ಯ ಅಂದ್ರೂ ನಿಮ್ಮನ್ನ ಒಳಗೆ ಪ್ರವೇಶ ಮಾಡೋಕೆ ಬಿಡಲ್ಲ ಇಲ್ಲಿನ ಸಿಬ್ಬಂದಿ. ಒಬ್ಬಂಟಿಗರಿಗೆ ಯಾಕೆ ಪ್ರವೇಶವಿಲ್ಲ ಅನ್ನೋದಕ್ಕೆ ಕಾರಣವೂ ಇದೆಯಂತೆ.. ಆ ಕಾರಣ ಏನು ಅಂತ ಅಲ್ಲಿನ ಅಧಿಕಾರಿಗಳ ಬಾಯಿಂದಲೇ  ಕೇಳಿ..

ಒಟ್ಟಿನಲ್ಲಿ ಪ್ರಕೃತಿ ರಮಣೀಯ ಆಹ್ಲಾದಕರ ವಾತಾವರಣದ ಸವಿದು ಮನಸ್ಸು ಹಗುರು ಮಾಡಿಕೊಳ್ಳೊಣ ಅಂತ ದೂರದ ಊರುಗಳಿಂದ ಬರ್ತಿರೋ ಒಬ್ಬಂಟಿ ಪ್ರವಾಸಿಗರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ನಿರಾಸೆಯಿಂದ ವಾಪಾಸ್ಸು ಹೋಗುತ್ತಿರೋದು ಸರ್ವೇಸಾಮಾನ್ಯವಾಗಿದೆ.. ಹೀಗಾಗಿ ನೀವೇನಾದ್ರೂ ಒಬ್ರೇ ನಂದಿಗಿರಿಧಾಮಕ್ಕೆ ಹೋಗೋ ಪ್ಲಾನ್ ಇದ್ರೇ ಸ್ವಲ್ಪ ಚೇಂಝ್ ಮಾಡಿಕೊಂಡ್ರೆ ಒಳ್ಳೇದು..

LEAVE A REPLY

Please enter your comment!
Please enter your name here