Home Cinema ವಿಷ್ಣು ಅಳಿಯನ ಮಾತಿಗೆ HDK ಕೆಂಡಾಮಂಡಲ “ವಿಷ್ಣು ಅಳಿಯನ ಮಾತು ಅತೀವ ನೋವು ತಂದಿದೆ, ಪದಬಳಕ...

ವಿಷ್ಣು ಅಳಿಯನ ಮಾತಿಗೆ HDK ಕೆಂಡಾಮಂಡಲ “ವಿಷ್ಣು ಅಳಿಯನ ಮಾತು ಅತೀವ ನೋವು ತಂದಿದೆ, ಪದಬಳಕ ಸರಿಯಾಗಿರಲಿ”…

1140
0
SHARE

ವಿಷ್ಣುವರ್ಧನ್ ಸ್ಮಾರಕ ‌ವಿಚಾರದಲ್ಲಿ ಅಳಿಯ ಅನಿರುದ್ಧ್ ಹೇಳಿಕೆಗೆ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಮಾತನಾಡುವಾಗ ಪದಬಳಕೆ ಸರಿಯಾಗಿರಲಿ ಎಂದಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ವಿಷ್ಣು ಕೊಡುಗೆ ಅರಿತು ನಾವೇನು ಮಾಡಬೇಕು ಅದನ್ನು ಮಾಡಿದ್ದೇವೆ, ವಿಷ್ಣು ನಿಧನರಾದಾಗ ನಾನು ಸಿಎಂ ಆಗಿರಲಿಲ್ಲ. ಆದ್ರೆ ಅನಿರುದ್ಧ್ ಹೇಳಿಕೆ ನನಗೆ ಅತೀವ ನೋವು ತಂದಿದೆ ಎಂದು ಕುಮಾರಸ್ವಾಮಿ ಹೇಳಿದ್ರು. ಇನ್ನೂ ಬನಶಂಕರಿ ಚಿತಾಗಾರದಲ್ಲಿ ವಿಷ್ಣು ಅಂತ್ಯಸಂಸ್ಕಾರ ಬೇಡ ಎಂದು ನಾನೇ ಹೇಳಿದ್ದೆ…

ಅಂದಿನ ಸಿಎಂ ಗೆ ಫೋನ್ ಮಾಡಿ ಸರಕಾರದಿಂದಲೇ ಗೌರವ ಕೊಡಿ ಎಂದು ಮನವಿ ಮಾಡಿದ್ದೆ, ಅಂಬರೀಶ್ ಅವರಿಗೂ ಈ ಬಗ್ಗೆ ಸಲಹೆ ಕೊಟ್ಟಿದ್ದೂ ನಾನೆ ಎಂದು ಕುಮಾರಸ್ವಾಮಿ ಹೇಳಿದ್ರು. ಅನಿರುದ್ಧ ನನ್ನನ್ನ ಉಡಾಫೆ ಸಿಎಂ‌ ಎಂದಿದ್ದಾರೆ, ಅವರು ನನ್ನನ್ನು ಕೇಳಿ ಬಂದಿದ್ರಾ? ನಮ್ಮ ಮೇಲೆ ಈ ರೀತಿ ದಬ್ಬಾಳಿಕೆ ಮಾಡಬೇಡಿ ಎಂದು ಕಿಡಿಕಾರಿದ್ರು.

ಇನ್ನು ನನ್ನೊಂದಿಗೆ ಅನಿರುದ್ಧ ಚರ್ಚೆ ಮಾಡಿದ್ರಾ ಎಂದು ಪ್ತಶ್ನೆ ಮಾಡಿದ ಕುಮಾರಸ್ವಾಮಿ, ಗೊಂದಲ ಬೇಡ, ಚರ್ಚೆ ಮಾಡೋಣ ಎಂದರೂ ದರ್ಪ ತೋರೋದು ಬೇಡ, ನಾವು ಕೊಟ್ಟಿರುವ ಗೌರವಕ್ಕೆ ಕೃತಜ್ಞತೆ ಇರಬೇಕು ಎಂದ್ರು. ಇನ್ನೂ ವಿಷ್ಣುವರ್ಧನ್ ಜೊತೆ ನನಗೆ ಭಾವನಾತ್ಮಕ ಸಂಬಂಧ ಇತ್ತು ಎಂದು ಇದೇ ವೇಳೆ ಸಿಎಂ ಹೇಳಿದ್ರು.

ವಿಷ್ಣುವರ್ದನ್ ಸ್ಮಾರಕ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ವಿಷ್ಣು ಅಳಿಯ ಅನಿರುದ್ಧ್ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಕಾರಣಕ್ಕೂ ವಿಷ್ಣು ಸ್ಮಾರಕ ಸ್ಥಳಾಂತರವೇ ಇಲ್ಲ.. ಇದಕ್ಕೆ ನಮ್ಮ ಕುಟುಂಬ ಒಪ್ಪಿಗೆ ಸಹ ಇಲ್ಲ.

ಮೊದಲು ಸರ್ಕಾರ ಅಭಿಮಾನ್ ಸ್ಟುಡಿಯೋ ವಿವಾದದ ಜಾಗ ಇತ್ಯರ್ಥಗೊಳಿಸಿ..ನಮ್ಮನ್ನು ಒಳ್ಳೆತನದಿಂದಲೇ ಸ್ಮಾರಕ ನಿರ್ಮಾಣಕ್ಕೆ ಅನುಕೂಲ ಮಾಡಿಕೊಂಡಲಿ ಅಂತ ವಿಷ್ಣು ವರ್ದನ್ ಅಳಿಯ ಅನಿರುದ್ಧ್ ಪ್ರಜಾಟಿವಿಗೆ ಪ್ರತಿಕ್ರಿಯಿಸಿದ್ದಾರೆ.ಅಂತ ವಿಷ್ಣು ವರ್ದನ್ ಅಳಿಯ ಅನಿರುದ್ಧ್ ಪ್ರಜಾಟಿವಿಗೆ ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here