Home Crime ‘ವಿಷ ಪ್ರಸಾದ’ ತಿಂದು ಸಾವನ್ನಪ್ಪಿದವರ ಸಂಖ್ಯೆ 17ಕ್ಕೆ ಏರಿಕೆ..! ಪ್ರಸಾದ ಸೇವಿಸಿದ್ದ ಐದು ತಿಂಗಳ ಗಭಿ೯ಣಿಗೆ...

‘ವಿಷ ಪ್ರಸಾದ’ ತಿಂದು ಸಾವನ್ನಪ್ಪಿದವರ ಸಂಖ್ಯೆ 17ಕ್ಕೆ ಏರಿಕೆ..! ಪ್ರಸಾದ ಸೇವಿಸಿದ್ದ ಐದು ತಿಂಗಳ ಗಭಿ೯ಣಿಗೆ ಗಭ೯ಪಾತ..!

1806
0
SHARE

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಾರ್ಟಳ್ಳಿ ಸಮೀಪದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ವಿಷ ಮಿಶ್ರಿತ ಪ್ರಸಾದ ಸೇವೆನೆಯಿಂದ ಮಾಡಿದವರ ಸರಣಿ ಸಾವು ಮುಂದುವರಿದಿದೆ. ಪ್ರಕರಣದ ಪ್ರಮುಖ ಆರೋಪಿಗಳನ್ನು ತನಿಖೆ ನಡೆತ್ತಿರುವ ಪೊಲೀಸರು ಶುಕ್ರವಾರ ತಡರಾತ್ರಿ ಜಿಲ್ಲೆಯ ಕೊಳ್ಳೇಗಾಲದ ನ್ಯಾಯಾದೀಶರ ಮುಂದೆ ಹಾಜರುಪಡಿಸಲಾಗಿದ್ದು ಕಾರಾಗೃಹ ಬಂಧನಕ್ಕೆ ಆರೋಪಿಗಳನ್ನು ನೀಡಿದ್ದಾರೆ.

ಸುಳ್ವಾಡಿ ಮಾರಮ್ಮ ದೇಗುಲದ ವಿಷ ಪ್ರಸಾದ ತಿಂದು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ರೆ. ಇತ್ತ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗಿದೆ. ಸಾವಿನ ಸರಣಿ ಮುಂದುವರಿದಿದೆ. ಮಕ್ಕಳಾಗಲಿ ಎಂದು ಮಾರಮ್ಮನಿಗೆ ಹರಕೆ ಮಾಡಿಕೊಂಡಿದ್ದ ಮಹಿಳೆ ವಿಷ ಪ್ರಸಾದವನ್ನು ಸೇವಿಸಿದ್ದ ಪರಿಣಾಮ ಗರ್ಭಪಾತವಾಗಿದೆ.

ಬಿದರಳ್ಳಿ ಗ್ರಾಮದ ಸೌಂದರ್ಯ ಪ್ರತಿ ಶುಕ್ರವಾರ ಕಿಚ್ಚಗುತ್ತಿ ಮಾರಮ್ಮ ದೇವಾಲಯಕ್ಕೆ ಹರಕೆ ಹೊತ್ತಿ ಬರುತ್ತಿದ್ದರು, ಅದರಂತೆ ಐದು ತಿಂಗಳ ಗರ್ಭಿಣಿಯಾಗಿದ್ದ ಸೌಂದರ್ಯ ಕಳೆದ ಶುಕ್ರವಾರವೂ ಸಹ ಕಿಚ್ಚಗುತ್ತಿ ಮಾರಮ್ಮಳಿಗೆ ಹರಕೆಯಂತೆ ಹೋಗಿ ದೇವಿ ದರ್ಶನ ಪಡೆದು ಅಲ್ಲಿ ನೀಡಿದ್ದ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಮೈಸೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಅಲ್ಲಿಂದ ಬಿದರಳ್ಳಿಗೆ ಬಂದು ಇರುವಾಗ ಶುಕ್ರವಾರ ಕಾಣಿಸಿಕೊಂಡ ಹೊಟ್ಟೆನೋವುನಿಂದ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಕರೆ ತರುವಾಗಲೇ ಗರ್ಭಪಾತವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಇತ್ತ ಮೈಸೂರಿನ ಸುಯೋಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಂಗನ್ ಎಂಬುವವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇತ್ತ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ 41 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 19 ಜನ ಇನ್ನೂ ವೆಂಟಿಲೇಟರ್​ನಲ್ಲಿದ್ರೆ, ಅವರಲ್ಲಿ 6-7 ಮಂದಿ ಅಸ್ಪಸ್ಥರ ಸ್ಥಿತಿ ಗಂಭೀರವಾಗಿದೆ.ಚಾಮರಾಜನಗರ ಜಿಲ್ಲೆಯ ಪೊಲೀಸರು ತ್ವರಿತಗತಿಯಲ್ಲಿ ತನಿಖೆ ನಡೆಸಿ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡು ಮತ್ತಷು ವಿಚಾರಣೆ ನಡೆಸಿ ಮತ್ತಷ್ಟು ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಶುಕ್ರವಾರ ತಡರಾತ್ರಿ ತನಿಖಾ ತಂಡದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾಪ್ರಸನ್ನ ಹಾಗೂ ಕೊಳ್ಳೇಗಾಲದ ಡಿವೈಎಸ್‍ಪಿ ಪುಟ್ಟಮಾದಯ್ಯರವರು ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳನ್ನ 14 ದಿನಗಳ‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ನಾಲ್ವರು ಆರೋಪಿಗಳು ಮೈಸೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಆರೋಪಿಗಳಾದ ಹಿಮ್ಮಡಿ ಮಹದೇವಸ್ವಾಮಿ , ಅಂಬಿಕಾ , ಮಾದೇಶ ದೊಡ್ಡಾಯ್ಯ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪೊಲೀಸ್ ಕಸ್ಟಡಿಯ ಅವಧಿಗೂ ಮುನ್ನವೇ ತನಿಖಾಧಿಕಾರಿಗಳು ಸುಳ್ವಾಡಿ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಅವರನ್ನು ಕಾರಾಗೃಹಕ್ಕೆ ಕಳುಹಿಸಿದ್ದು ಅನುಮಾನ ವಾಗಿದ್ದರೂ ಸಹ, ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆ ಆರೋಪಿಗಳು ತನಿಖಾಧಿಕಾರಿಗಳಿಗೆ ಬಹಳಷ್ಟು ಮಾಹಿತಿಯನ್ನು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಪ್ರಮುಖ ಆರೋಪಿಯಾಗಿರುವ ಅಂಬಿಕಾ ತಾನು ವಾಸ ಮಾಡುತ್ತಿರುವ ಮನೆಯಲ್ಲಿ ಪೊಲೀಸರು ನಕಲಿ ಕೀಲಿ ಬಳಸಿಕೊಂಡು ವಿಷದ ಬಾಟಲ್ ಇಟ್ಟಿದ್ದಾರೆ ಎಂದು ರಂಪಾಟ ಮಾಡಿದ್ದಾರೆ. ಇತ್ತ ಪ್ರಕರಣದ ಎ1 ಆರೋಪಿ ಇಮ್ಮಡಿ ಮಹದೇವಸ್ವಾಮಿ ಪೊಲೀಸರ ಮುಂದೆ ತನಗೆ ಎದೆ ನೋವು ಎಂದು ನಾಟಕವಾಗಿದ್ದಾರೆ.ಒಟ್ಟಿನಲ್ಲಿ ಯಾರದೋ ಕಿಚ್ಚಿಗೆ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ವಿಷ ಮಿಶ್ರಿತ ಪ್ರಸಾದದಿಂದ ಇದುವೆರೆಗೂ 17 ಮಂದಿ ಸಾವನ್ನಪ್ಪಿದ್ದು ಮಾತ್ರ ದುರಂತವೇ ಸರಿ.

LEAVE A REPLY

Please enter your comment!
Please enter your name here