Home Crime ವಿಹರಿಸುತ್ತಿದ್ದ ಪ್ರೇಮಿಗಳ ಪೋಟೋ ತೆಗೆದ ದುರುಳರು..! ವಿಷ ಕುಡಿದ ಪ್ರಿಯಕರ ಸಾವು, ಪ್ರೇಯಸಿ ಚಿಂತಾಜನಕ..!

ವಿಹರಿಸುತ್ತಿದ್ದ ಪ್ರೇಮಿಗಳ ಪೋಟೋ ತೆಗೆದ ದುರುಳರು..! ವಿಷ ಕುಡಿದ ಪ್ರಿಯಕರ ಸಾವು, ಪ್ರೇಯಸಿ ಚಿಂತಾಜನಕ..!

827
0
SHARE

ಆ ಪ್ರೇಮಿಗಳಿಬ್ಬರು ಜೊತೆಯಾಗಿರುವುದನ್ನು ಅನ್ಯಕೋಮಿನ ಯುವಕರು ಮೊಬೈಲ್ ನಲ್ಲಿ ಪೋಟೋ ತೆಗೆದು ಹೆದರಿಸಿದ್ದೇ..ಮುಳುವಾಯ್ತು…ನಮ್ಮ ಮಾನ ಮರ್ಯಾದೆ ಸೋಷಿಯಲ್ ಮೀಡಿಯಾದಲ್ಲಿ ಹರಾಜಾಗುತ್ತೆ ಎಂದು ನೊಂದ ಪ್ರೇಮಿಗಳಿಬ್ಬರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ರು.ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಪ್ರೇಮಿ ಸಾವನ್ನಪ್ಪಿದರೆ,ಪ್ರೇಯಸಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ…

ಶಿವಮೊಗ್ಗ ತಾಲೂಕಿನ ಕುಂಸಿ ಠಾಣಾ ವ್ಯಾಪ್ತಿಯಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿತ್ತು. ಆದರೆ ಇಂದು ಪ್ರೇಮಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದಾಗ ಘಟನೆ ಕಾವು ಪಡೆದುಕೊಂಡಿತು. ಅನ್ಯಕೋಮಿನ ಯುವಕರ ಕಿರುಕುಳಕ್ಕೆ ಬೇಸೆತ್ತ ಪ್ರೇಮಿಗಳು ವಿಷ ಕುಡಿದು ಆಸ್ಪತ್ರೆ ಸೇರಿದ್ದರು. ಆದರೆ ಇಂದು ಪ್ರಿಯಕರ ಸಾವನ್ನಪ್ಪಿದರೆ.. ಪ್ರೇಯಸಿ, ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ.

ಕುಂಸಿ ಠಾಣಾ ವ್ಯಾಪ್ತಿಯ ಮಂಡಘಟ್ಟದ ಬಳಿ ಸಂಜಯ್ ತನ್ನ ಪ್ರೇಯಸಿಯೊಂದಿಗೆ ಬೈಕ್ ನಲ್ಲಿ ಬಂದಿದ್ದ. ಅಲ್ಲೇ ಸನಿಹದ ಬ್ರಿಡ್ಜ್ ಬಳಿ ಮಾತನಾಡುತ್ತಿದ್ದಾಗ ಯಾಸಿನ್, ಆಸಿಫ್ ಮತ್ತು ಸನ್ಮಾನ್ ಎಂಬ ಮೂವರು ಯುವಕರ ಗುಂಪು ದಾಳಿ ಮಾಡಿದೆ. ಪ್ರೇಮಿಗಳಿಬ್ಬರು ಒಟ್ಟಿಗೆ ಇರುವುದನ್ನು ವಿಡಿಯೋ ಮತ್ತು ಪೋಟೋ ಮಾಡಿಕೊಂಡು ಹೆದರಿಸಿದ್ದಾರೆ. ನೀವು ಹಣ ನೀಡದಿದ್ದರೆ ಪೇಸ್ ಬುಕ್ ವಾಟ್ಸಾಪ್ ನಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ.

ಆದರೆ ಬಡವನಾಗಿದ್ದ ಸಂಜಯ್ ಗೆ ಯುವಕರು ಬೇಡಿಕೆ ಇಟ್ಟ ಹಣವನ್ನು ಹೊಂಚಿಸಲು ಸಾಧ್ಯವಾಗಲಿಲ್ಲ. ಹಣವನ್ನು ನೀಡಲಾಗದ ಸ್ಥಿತಿ ತಲುಪಿದಾಗ. ಆತ್ಮಹತ್ಯೆ ನಿರ್ದಾರ ಮಾಡಿದ್ದಾರೆ.
ಸಂಜಯ್ ತನ್ನ ಪ್ರೇಯಸಿಯೊಂದಿಗೆ ಸೋಮವಾರ ಕುಂಸಿ ಠಾಣಾ ವ್ಯಾಪ್ತಿಯ ಮಸರಗಟ್ಟಿ ಗ್ರಾಮದ ಬಳಿ ಬಂದಿದ್ದಾರೆ. ಇಬ್ಬರು ಅಲ್ಲಿ ವಿಷ ಸೇವಿಸಿದ್ದಾರೆ. ತಕ್ಷಣ ಸ್ಥಳೀಯರು ನೋಡಿ ಪ್ರೇಮಿಗಳಿಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮಿ ಸಂಜಯ್ ಸಾವನ್ನಪ್ಪಿದ್ದಾನೆ. ಆದರೆ ಪ್ರೇಯಸಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾಳೆ.ಘಟನೆಗೆ ಸಂಬಂಧಿಸಿದಂತೆ ಕುಂಸಿ ಪೊಲೀಸರು ಯಾಸಿನ್ ಎಂಬುವನನ್ನು ಬಂಧಿಸಿದ್ದಾರೆ. ಇನ್ನು ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ. ಘಟನೆಯನ್ನು ಹಿಂದುಪರ ಸಂಘಟನೆಗಳು ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತಾಗಿ ಹೋರಾಟ ಪ್ರತಿಭಟನೆ ನಡೆಸಲು ಅಣಿಯಾಗಿವೆ.

LEAVE A REPLY

Please enter your comment!
Please enter your name here