Home Crime ವೈದ್ಯರ ನಿರ್ಲಕ್ಷ್ಯಕ್ಕೆ ತುಂಬು ಗರ್ಭಿಣಿ ಸಾವು..! ಆಸ್ಪತ್ರೆ ಬಳಿ ಮುಗಿಲು ಮುಟ್ಟಿದ ಕುಟುಂಸ್ಥರ ಆಕ್ರಂದನ..!

ವೈದ್ಯರ ನಿರ್ಲಕ್ಷ್ಯಕ್ಕೆ ತುಂಬು ಗರ್ಭಿಣಿ ಸಾವು..! ಆಸ್ಪತ್ರೆ ಬಳಿ ಮುಗಿಲು ಮುಟ್ಟಿದ ಕುಟುಂಸ್ಥರ ಆಕ್ರಂದನ..!

827
0
SHARE

ಆತ ಪ್ರೀತಿಸಿ ಮದುವೆಯಾಗಿದ್ದ…ತನ್ನ ಅಪ್ಸರೆಯನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದ.. ಸುಖವಾದ ಸಂಸಾರದಲ್ಲಿ ಒಂದು ಗುಡ್ ನ್ಯೂಸ್ ಕೂಡ ಸಿಕ್ಕಿತ್ತು.. ಅದೇ ಆತನಿಗೆ ತಂದೆಯಾಗೋ ಸೌಭಾಗ್ಯ..ಇನ್ನೇನೂ ಡೆಲಿವರಿ ಟೈಮ್ ಬಂತು ಅಂಥ ಪತ್ನಿಯನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದ…ಆದ್ರೆ ವಾಪಾಸ್ ನೋಡಿದ್ದು ಪತ್ನಿ ಶವವನ್ನ… ಹಾಗಿದ್ರೆ ಅಲ್ಲೇನಾಯ್ತು ಗೊತ್ತಾ..?

ಈಎಸ್ಐ ವೈದ್ಯರ ನಿರ್ಲಕ್ಷ್ಯದಿಂದಾಗಿ ಎರಡು ಪ್ರಾಣಗಳು ಬಲಿಯಾಗಿವೆ. ಈಕೆಯ ಹೆಸ್ರು ಅರ್ಪಿತಾ.. 9 ತಿಂಗಳ ತುಂಬು ಗರ್ಭಿಣಿ.. ಪೀಣ್ಯಾದ ನಿವಾಸಿಯಾಗಿರುವ ಈಕೆಗೆ ನಿನ್ನೆ ಬೆಳಗ್ಗೆ ಲೈಟಾಗಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈಗಾಗಿ ಅರ್ಪಿತಾಳನ್ನು ಕುಟುಂಬಸ್ಥರು ಈಎಸ್ಐ ಆಸ್ಪತ್ರೆಗೆ ದಾಖಲಿಸಿದ್ರು. ಮಧ್ಯಾಹ್ನದ ತನಕ ಚೆನ್ನಾಗಿದ್ದ ಅರ್ಪಿತಾಳನ್ನ 3.30ಕ್ಕೆ ವೈದ್ಯರು ಚೆಕ್ ಮಾಡಿದ್ರು.. ನಂತರ ಅದೇನಯ್ತೋ ಏನೋ ತೀವ್ರ ಹೊಟ್ಟೆ ನೋವು ಶುರುವಾಗಿತ್ತು..

ಆದ್ರೆ ಹೊಟ್ಟೆನೋವಿನಿಂದ ಬಳಲುತ್ತಿದ್ದ ರೋಗಿಯನ್ನ ಯಾರೂ ಕೂಡ ಚೆಕ್ ಮಾಡುವುದಕ್ಕಿರಲಿ, ನೋಡೋದಕ್ಕೂ ಬಂದಿರಲಿಲ್ಲ.. ವೈದ್ಯರ ಬಳಿ ತಿಳಿಸಿದ್ರೂ ಏನೇನೂ ಸಬೂಬು ಹೇಳಿ ಸುಮ್ಮನಾಗಿದ್ರು.. ನಂತರ ನಿನ್ನೆ ರಾತ್ರಿ ವೈದ್ಯರು ಡ್ರಿಪ್ಸ್ ನೀಡಿದ ಕೂಡಲೇ ಅರ್ಪಿತಾ ಉಸಿರಾಟ ನಿಂತು ಹೋಗಿತ್ತು.. ಇನ್ನೂ ಅರ್ಪಿತಾ ಸಾವನ್ನಪ್ಪಿದ್ದ ವಿಚಾರವನ್ನ ವೈದ್ಯರು ಕುಟುಂಬಸ್ಥರಿಗೆ ತಿಳಿಸದೆ ಮುಚ್ಚಿಟ್ಟಿದ್ರು..

ಕುಟುಂಬಸ್ಥರು ತಡರಾತ್ರಿ 2.30 ಗೆ ಅರ್ಪಿತಾಳನ್ನ ನೋಡಿದಾಗ ಆಕೆ ಶವವಾಗಿ ಬಿದ್ದಿದ್ಲು. ಅಲ್ಲಿ ತನಕ ಪತ್ನಿ ಕ್ಷೇಮವಾಗಿದ್ದಾಳೆ ಅಂದುಕೊಂಡಿದ್ದ ಆಕೆಯ ಪತಿ ಜಯರಾಮ್ ಗೆ ಹೃದಯ ನಿಂತು ಹೋಗುವಂತಾಗಿತ್ತು. ಇನ್ನೂ ಈ ಬಗ್ಗೆ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳನ್ನ ಕೇಳಿದ್ರೆ ಯಾರು ತಲೆಕೆಡಿಸಿಕೊಳ್ಳುತ್ತಿಲ್ಲ.

ಇತ್ತ ನೊಂದ ಕುಟುಂಬ ಆರ್ ಎಂಸಿ ಯಾರ್ಡ್ ಠಾಣೆಗೆ ದೂರು ದಾಖಲಿಸಿದ್ದು, ತಾಯಿ ಮಗು ಸಾವಿಗೆ ನ್ಯಾಯ ಕೊಡಿಸಿ ಅಂಥ ಅಂಗಲಾಚಿದ್ದಾರೆ.. ಮತ್ತೊಂದೆಡೆ ತಾಯಿ ಮಗುವನ್ನ ಉಳಿಸಲಾಗದ ಡಾಕ್ಟರ್ ಗಳಿಗೆ ಹಿಡಿ ಶಾಪ ಹಾಕಿದ್ದಾರೆ.ಯಾರೋ ಮಾಡಿದ ತಪ್ಪಿಗೆ,ತಾಯಿ ಹಾಗೂ ಇನ್ನೂ ಜಗತ್ತೇ ನೋಡದ ಮಗು ಹೆಣವಾಗಿದ್ದು ನಿಜಕ್ಕೂ ದುರಂತವೇ ಸರಿ..

LEAVE A REPLY

Please enter your comment!
Please enter your name here