Home District “ಶಕುನಿ BJP ಯಲ್ಲೇ ಇದ್ದಾರೆ” ಎಂದು ಅಂದಿದ್ದು ಯಾರಿಗೆ ಪ್ರಿಯಾಂಕ ಖರ್ಗೆ..?! “ನಾನು ದುರ್ಯೋಧನ ಇರಬಹುದು,...

“ಶಕುನಿ BJP ಯಲ್ಲೇ ಇದ್ದಾರೆ” ಎಂದು ಅಂದಿದ್ದು ಯಾರಿಗೆ ಪ್ರಿಯಾಂಕ ಖರ್ಗೆ..?! “ನಾನು ದುರ್ಯೋಧನ ಇರಬಹುದು, ಶಕುನಿ ಮಾಮಾ ಅಲ್ಲಿಯೇ ಇದ್ದಾನೆ”

628
0
SHARE

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರ‌ ವಾಕ್ಸಮರ ಮತ್ತೆ ಶುರುವಾಗಿದೆ. ಹೇಳಿಕೇಳಿ ಕಲಬುರಗಿ ಲೋಕಸಭಾ ಕ್ಷೇತ್ರ ಲೋಕಸಭೆ ಕಾಂಗ್ರೆಸ್ ನಾಯಕ‌ ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಸುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಇಬ್ಬರು ಪ್ರಭಾವಿ ನಾಯಕರ ವಾಕ್ಸಮರಕ್ಕೆ‌ ಮತ್ತೆ ಸುದ್ದಿಯಾಗ್ತಾ ಹೈವೋಲ್ಟೇಜ್ ಕ್ಷೇತ್ರವಾಗ್ತಿದೆ.ಮಲ್ಲಿಕಾರ್ಜುನ ಖರ್ಗೆ… ಲೋಕಸಭೆ ಕಾಂಗ್ರೆಸ್ ನಾಯಕ…

ನಿರಂತರವಾಗಿ ಚುನಾವಣೆಯಲ್ಲಿ ಗೆಲ್ಲುತ್ತಾ ಸೋಲಿಲ್ಲದ ಸರದಾರ ಅನಿಸಿಕೊಂಡವರು… ಪುತ್ರ ಪ್ರಿಯಾಂಕ್ ಖರ್ಗೆ ಸಮಾಜ ಕಲ್ಯಾಣ ಸಚಿವ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು… ನಿನ್ನೆ ಪ್ರಿಯಾಂಕ್ ಖರ್ಗೆ ಅಫಜಲಪುರ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದ್ದಾರೆ… ವಿಧಾನಸಭೆ ಚುನಾವಣೆಯಲ್ಲಿ ಮಾಲೀಕಯ್ಯ ಗುತ್ತೇದಾರ್ ಇದೇ ಕ್ಷೇತ್ರದಲ್ಲಿ ಸೋತಿದ್ದರು. ಮಾಲೀಕಯ್ಯ ಗುತ್ತೇದಾರ್ ಸೋತಿದ್ದರೂ ಸಹ ಅವರ ಖದರ್ ಕಡಿಮೆ ಆಗಿಲ್ಲ.

ಇತ್ತೀಚೆಗಷ್ಟೇ ಲೋಕಸಭೆ ಚುನಾವಣೆಯಲ್ಲಿ ಖರ್ಗೆಗೆ ಸೋಲಿ‌ನ ರುಚಿ ತೋರಿಸ್ತೀವಿ ಅಂತಾ ಹೇಳಿಕೆಯೂ ಕೊಟ್ಟಿದ್ದರು.ಹೌದು, ಅಫಜಲಪುರದಲ್ಲಿ ಸ್ಥಳೀಯ ಮುಖಂಡರು ಪ್ರಿಯಾಂಕ್ ಖರ್ಗೆಗೆ ಬೆಳ್ಳಿ ಕಿರೀಟ, ಬೆಳ್ಳಿ ಖಡ್ಗಗಳನ್ನು ನೀಡಿ ಗೌರವಿಸಿದ್ದರು. ಇದಾದ ಬಳಿಕ ತಮ್ಮ ಭಾಷಣದಲ್ಲೇ ಪರೋಕ್ಷವಾಗಿ ಮಾಲೀಕಯ್ಯ ಗುತ್ತೇದಾರ್ ವಿರುದ್ಧ ಮಾತಿನ ಖಡ್ಗ ಬೀಸಿದರು. ಖರ್ಗೆ ಸಾಹೇಬ್ರಿಗೆ ದೃತರಾಷ್ಟ್ರ, ನನ್ನನ್ನು ದುರ್ಯೋದನ ಅಂತಾ ತಿರುಗಾಡೋರು ಬಿಜೆಪಿಯಲ್ಲಿದ್ದಾರೆ.

ಬಿಜೆಪಿಯವರಿಗೆ ಒಂದು ಕಿವಿಮಾತು ಹೇಳ್ತೀನಿ ನಾನು ದುರ್ಯೋಧನ ಇರಬಹುದು, ಶಕುನಿ ಮಾಮಾ ಅಲ್ಲಿಯೇ ಇದಾನೆ ಅಂತಾ ಟಾಂಗ್ ಕೊಟ್ರು.ಇನ್ನು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್ ಖರ್ಗೆ, “ಕಳೆದ ಬಾರಿ ನಮ್ಮ ಸರ್ಕಾರ ಇದ್ದಾಗ ಸಾಕಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದ್ವಿ. ಹಲವು ಜನಪರ ನೀತಿ, ಯೋಜನೆ ರೂಪಿಸಿದ್ದರೂ ಪ್ರಾಮಾಣಿಕತೆಗೆ ನಿರೀಕ್ಷೆಗೆ ತಕ್ಕ ಮತ ಬಂದಿಲ್ಲ.

ನಮ್ಮ ಯಾವುದೇ ನೀತಿ ನೋಡಿದರೂ ದುಡಿಯುವ ಕೈಗೆ ಬಲಕೊಡುವಂತಹ ಯೋಜನೆ ರೂಪಿಸಿದ್ದೆವು. ಯೋಜನೆ ಯಶಸ್ಸು ಕಂಡರೂ ನಾವು ಯಶಸ್ಸು ಕಾಣಲಿಲ್ಲ. ಅನಿವಾರ್ಯವಾಗಿ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಇಷ್ಟ ಪಟ್ಟು ಮಾಡಿಕೊಂಡ ಮೈತ್ರಿ ಅಲ್ಲ. ಬಿಜೆಪಿಯಂತಹ ಕೋಮುವಾದಿ ವಿಚಾರವನ್ನು ರಾಜ್ಯದಲ್ಲಿ ಬೆಳೆಸಬಾರದು, ನಮ್ಮ ಯುವ ಜನ ಸಮಾಜದಲ್ಲಿ ಜಾತ್ಯಾತೀತ ತತ್ವ ಉಳಿಯಬೇಕು ಎಂಬ ಒಂದೇ ಕಾರಣಕ್ಕೆ ರಾಜ್ಯದ ಜನರ ಹಿತದೃಷ್ಟಿ ಕಾಪಾಡಲು ಮೈತ್ರಿ ಮಾಡಿಕೊಂಡಿದ್ದೇವೆ” ಎಂದರು.

ವಿಧಾನಸಭೆ ಚುನಾವಣೆಯಾದ ಮೇಲೆ ಬಿಜೆಪಿಯವರಿಗೆ ಸಿಕ್ಕಿದ್ದು 104 ಸೀಟು, ಕಾಂಗ್ರೆಸ್, ಜೆಡಿಎಸ್, ಬಿಎಸ್ ಪಿ, ಎರಡು ಇಂಡಿಪೆಂಡೆಂಟ್ ಸೇರಿ 118 ಸೀಟು ನಮ್ಮ ಕಡೆ ಇದ್ದವು. ನಾವು 118 ಶಾಸಕರು ಸಹಿ ಮಾಡಿ ಗವರ್ನರ್ ಹತ್ತಿರ ಹೋಗಿ ಕೊಟ್ಟಿದ್ದೇವೆ. ನಮ್ಮ ಬಳಿ ಮೆಜಾರಿಟಿ ಇದೇ ಅಂದ್ರೆ ನಮ್ಮ ಗವರ್ನರ್ ಸಾಹೇಬರು ಪ್ರಧಾನಿ ಮೋದಿ ಮಾತು ಕೇಳಿದರು.

ಏನ್ ನಡೆದರೂ ಇಬ್ಬರಿಗೂ ಗೊತ್ತಾಗ್ತದ ಚೋರ್ ಗುರು ಚಾಂಡಾಲ್ ಶಿಷ್ಯರಿಗೆ ಅಂತಾ ಅಮಿತ್ ಷಾ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.ಅದೇನೇ ಇರಲಿ, ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ನಾಯಕರ ವಾಗ್ಯುದ್ಧ ಜೋರಾಗಿಯೇ ಶುರುವಾಗಿದ್ದು, ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮಾಲೀಕಯ್ಯ ಗುತ್ತೇದಾರ್ ಯಾವ ರೀತಿ ಗುಡುಗ್ತಾರೆ ಎಂಬುದನ್ನು ಕಾದು ನೋಡಬೇಕು.

LEAVE A REPLY

Please enter your comment!
Please enter your name here