Home District ಶತ್ರು ಸಂಹಾರಕ್ಕಾಗಿ HDK ಮೂರ್ಮೂರು ಹೋಮ..?! ಪೂಜಾ ಕೈಕಂರ್ಯರಿಂದ ತಪ್ಪುತ್ತಾ ಕುಮಾರಸ್ವಾಮಿಗೆ ಬಂದಿರೋ ಗಂಡಾಂತರ.! ದೈವಾನುಗ್ರಹದಿಂದ...

ಶತ್ರು ಸಂಹಾರಕ್ಕಾಗಿ HDK ಮೂರ್ಮೂರು ಹೋಮ..?! ಪೂಜಾ ಕೈಕಂರ್ಯರಿಂದ ತಪ್ಪುತ್ತಾ ಕುಮಾರಸ್ವಾಮಿಗೆ ಬಂದಿರೋ ಗಂಡಾಂತರ.! ದೈವಾನುಗ್ರಹದಿಂದ ಬಂದ ಕುರ್ಚಿ ಉಳಿಸಿಕೊಳ್ಳಲು ದೈವದ ಮೊರೆ.!?

2383
0
SHARE

ಸಿಎಂ ಕುಮಾರಸ್ವಾಮಿ ಕರ್ಚಿಗೆ ಕಂಟಕ ಬಂದಿದ್ಯಾ? ಹೀಗೊಂದು ಪ್ರಶ್ನೆ ಎದ್ದು ಸುಮಾರು ದಿನಗಳೇ ಕಳೆದು ಹೋಯ್ತು. ಇನ್ನೇನು ಆಪರೇಶನ್ ಕಮಲ ನಡೆಯುತ್ತೆ ದೋಸ್ತಿ ಸರ್ಕಾರ ಬಿದ್ದು ಹೋಗುತ್ತೆ ಅನ್ನೋ ಹಂತಕ್ಕೂ ತಲುಪಿತ್ತು. ಈ ನಡುವೆ ಕಾಂಗ್ರೆಸ್ ಶಾಸಕರೇ ಬಂಡಾಯ ಎದ್ದು ಕುಮಾರಸ್ವಾಮಿ ಸರ್ಕಾರವನ್ನ ಬೀಳಿಸುತ್ತಾರೆ ಅನ್ನೋ ವಾತವರಣವೂ ನಿರ್ಮಾಣವಾಯ್ತು. ಮೇಲಿಂದ ಮೇಲೆ ಬಂದಿರೋ ಸಂಕಟದಿಂದ ಕುಮಾರಸ್ವಾಮಿ ಒದ್ದಾಡಿದ್ದು ಮಾತ್ರ ಸುಳ್ಳ. ಆ ಕಾರಣಕ್ಕೆ ಶಕ್ಕಿ ಪೀಠ ಶೃಂಗೇರಿಗೆ ಕಾಲಿಟ್ಟಿದ್ದಾರೆ. ತನ್ನ ಕುರ್ಚಿನ್ನ ಉಳಿಸು ತಾಯಿ ಅಂತಾ ಬೇಡಿಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ಸಿಎಂ ಶೃಂಗೇರಿಯಲ್ಲ ಮಾಡಿದ್ದಾದ್ರು ಏನು? ತಮ್ಮ ಸ್ಥಾನ ಭದ್ರ ಪಡಿಸಲು ಯಾವೆಲ್ಲಾ ಯಜ್ಞಗಳನ್ನ ಮಾಡಿದ್ರು. ಸಾಂದರ್ಬಿಕ ಕಂದ ಕುಮಾರಸ್ವಾಮಿಗೆ ಕಷ್ಟಗಳು ಒಂದೇ ಎರಡೇ.. ಕಂಟಕಗಳು ಟಿಕೆಟ್ ತೆಗೆದುಕೊಂಡು ಕುಮಾರಸ್ವಾಮಿಯನ್ನ ಮೀಟ್ ಮಾಡಲು ಸಾಲು ಸಾಲಾಗಿ ನಿಂತಿವೆ, ಕಂಟಕಗಳಿಗೆ ಕೇರ್ ಆಫ್ ಅಡ್ರಸ್ ಕುಮಾರಸ್ವಾಮಿ ಆಗಿ ಹೋಗಿದ್ದಾರೆ…  ಒಂದಾದ ನಂತರ ಒಂದು ಸಮಸ್ಯೆ ಬಂದು ಕುಮಾರಣ್ಣನ ಎದೆಗೆ ಅಪ್ಪಳಿಸುತ್ತಿದೆ. ಒಂದು ಮುಗಿದರೇ ಮತ್ತೊಂದು , ಮತ್ತೊಂದು ಮುಗಿದರೇ ಮಗದೊಂದು, ಈ ಎಲ್ಲಾ ಕಷ್ಟ ಕೋಟಲೆ ಗಳಿಂದ ಸಿಎಂ ಜರ್ಝರಿತರಾಗಿರೋದು ಮಾತ್ರ ಸುಳ್ಳಲ್ಲ.

ಒಂದು ಕಡೆ ಬಿಜೆಪಿಯಿಂದ ಆಪರೇಷನ್ ಏಟು… ಮತ್ತೊಂದು ಕಡೆ ಕಾಂಗ್ರೆಸ್ ನಿಂದ ಕಿರುಕುಳ, ಮಗದೊಂದು ಕಡೆ ಆಡಳಿತ ನಡೆಸುವ ಜವಬ್ದಾರಿ, ಹೀಗೆ ಸಾಂಧರ್ಬಿಕ ಕಂದನಿಗೆ ನೂರೆಂಟ್ ವಿಘ್ನ…. ಈ ಎಲ್ಲಾ ವಿಘ್ನಗಳನ್ನ ನಿವಾರಿಸಿಕೊಂಡು ಹೆಚ್ಚು ದಿನಗಳ ಕಾಲ ಸಿಎಂ ಆಗಿರೋದಿಲ್ಲ ಅನ್ನೋ ಸತ್ಯ ಕುಮಾರಸ್ವಾಮಿಗೂ ತಿಳಿದು ಬಿಟ್ಟಿದೆ. ಆ ಕಾರಣಕ್ಕೆ ಈ ಎಲ್ಲಾ ಕಂಟಕಗಳಿಂದ ಪಾರಾಗಬೇಕು ಅಂದ್ರೆ ಅದಕ್ಕೆ ದೈವಾನುಗ್ರಹ ಇರಬೇಕು ,  ದೇವರ ಆಶೀರ್ವಾದ ಇದ್ರೆ ಮಾತ್ರ ಶತ್ರುಗಳನ್ನ ಸೆದೆ ಬಡಿದು, ದೀರ್ಘಕಾಲ ಅಧಿಕಾರದಲ್ಲಿ ಇರಬಹುದು.

ಆ ದೇವರ ಅನುಗ್ರಹ ಪಡೆಯಲೆಂದೇ ಕುಮಾರಸ್ವಾಮಿ ಸಧ್ಯ ಶೃಂಗೇರಿಯಲ್ಲಿ ಹೋಮ ಹವನಗಳನ್ನ ಮಾಡಿಸುತ್ತಿದ್ದಾರೆ. ಬಂದಿರೋ ಕಷ್ಟದಿಂದ ಪಾರು ಮಾಡು ಅಂತಾ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ.ಧಾರ್ಮಿಕವಾಗಿ ನಂಬಿಕೆಯನ್ನಿಟ್ಟಿರೋ ದೇವೇಗೌಡರ ಕುಟುಂಬ ತಮ್ಮ ಹಾಗೂ ಸಮ್ಮಿಶ್ರ ಸರ್ಕಾರದ ವಿರುದ್ಧವಾಗಿರೋ ಶತ್ರಗಳನ್ನು ನಾಶ ಮಾಡಿ, ಶತ್ರುಗಳೂ ಮಿತ್ರರಾಗಿಸೋವಂತಹ ಪ್ರತಿಕ್ರಿಯಾ ಶೂಲಿನಿಯಾಗವನ್ನು ಮಾಡಿದ್ರು, ತಮ್ಮ ಆಯಸ್ಸು ವೃದ್ಧಿಯಾಗಲೆಂದು ಮೃತ್ಯುಂಜಯಯಾಗ ಹಾಗೂ ಯಾವುದೇ ವಿಘ್ನಗಳು ಬಾರದೆಂದು ಗಣಪತಿ ಹಾಗೂ ದುರ್ಗಾಹೋಮಗಳನ್ನು ನಡೆಸಿದ್ರು.

ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಎಚ್.ಡಿ. ಕುಮಾರಸ್ವಾಮಿ, ನಾನು ಶೃಂಗೇರಿ ಕ್ಷೇತ್ರಕ್ಕೆ ಯಾವಾಗಲೂ ಬರುತ್ತೇನೆ, ನಾಡಿನ ಜನರಿಗೆ ಒಳ್ಳೆಯದಾಗಲೆಂದು ಪೂಜೆ ಸಲ್ಲಿಸಿದ್ದೇನೆ. ರಾಜ್ಯದಲ್ಲಿ ಬಂದಿರೋ ಬರಗಾಲ ಸಮಸ್ಯೆ ಬಗೆಹರಿಸೋದಕ್ಕೆ ಪೂಜೆ ಸಲ್ಲಿಸಿದ್ದೇನೆ ಎಂದ್ರು.ಎಂದಿನಂತೆ ಬಿಜೆಪಿ ಹಾಗೂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಕುಮಾರಸ್ವಾಮಿ, ನನ್ನ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರೋದು ಸಂತೋಷ, ರಾಜ್ಯಪಾಲರಿಗೆ ಈ ಬಗ್ಗೆ ನಾನು ಮಾಹಿತಿ ನೀಡುತ್ತೇನೆ ಎಂದ್ರು, ತಮ್ಮ ದಂಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ,

ನನ್ನ ದಂಗೆ ಹೇಳಿಕೆಯ ಅರ್ಥ ಪ್ರತಿಭಟನೆ ಅಂತಾ, ಅದಕ್ಕೆ ಆಕ್ರೋಶ ವ್ಯಕ್ತಪಡಿಸೋ ಅಗತ್ಯವಿಲ್ಲ. ಯಡಿಯೂರಪ್ಪನವರ ಹಾಗೆ ಬೆಂಕಿ ಹಚ್ಚಿಸುವ ಹೇಳಿಕೆ ನೀಡಿಲ್ಲ, ಅವರು ಬೆಂಕಿ ಹಚ್ಚುವ ಹೇಳಿಕೆ ನೀಡಿದ್ರೆ ಅದು ಪ್ರಜಾಪ್ರಭುತ್ವ, ನಾನು ಹೇಳಿದ್ರೆ ಪ್ರಜಾಪ್ರಭುತ್ವದ ವಿರೋಧನಾ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು. ಇಂದು ಸಂಜೆ ನಾನು ಹಾಸನದಲ್ಲಿಯೇ ವಾಸ್ತವ್ಯ ಹೂಡಲಿದ್ದು, ಹಾಸನದಲ್ಲಿ ನಡೆಯುತ್ತಿರೋ ಶಾಸಕಾಂಗ ಸಭೆಗೆ ಯಾವುದೇ ವಿಶೇಷತೆಯಿಲ್ಲ. ಎಲ್ಲಾ ಶಾಸಕರಿಗೂ ಸಭೆಗೆ ಆಹ್ವಾನ ನೀಡಿದ್ದು, ನಾನೂ ಕೂಡಾ ಸಭೆಯಲ್ಲಿ ಭಾಗಿಯಾಗುತ್ತೇನೆಂದ್ರು.ರಾಜ್ಯರಾಜಕಾರಣದಲ್ಲಿ ಸಧ್ಯ ಆಗುತ್ತಿರೋ ಬೆಳವಣಿಗೆ ನೋಡಿದ್ರೆ, ಸರ್ಕಾರಕ್ಕೆ ಕಂಟಕ ಇದೇ ಅನ್ನೋದಂತು ಸತ್ಯ.

ಯಾವ ಶಾಸಕರು ಎಲ್ಲಿ ದಂಗೆ ಏಳುತ್ತಾರೆ ಅನ್ನೋದೆ ಗೊತ್ತಾಗುತ್ತಿಲ್ಲ. ನಮ್ಮವರು ಎಂದುಕೊಂಡವರು ಅತೃಪ್ತರ ಬಳಗ ಸೇರಿಕೊಳ್ಳುತ್ತಿದ್ದಾರೆ. ಇಲ್ಲೇ ಇದ್ದಾರೆ ಎಂದುಕೊಂಡವರು ರೇಸಾರ್ಟ್ ಕಡೆ ಮುಖ ಮಾಡುತ್ತಿದ್ದಾರೆ. ಸಧ್ಯ ಪರಿಸ್ಥಿತಿಯಲ್ಲಿ ಕುಮಾರಣ್ಣನಿಗೆ ಶತ್ರುಗಳ ಕಾಟ ಬಲು ಜೋರಾಗಿದೆ. ಆ ಎಲ್ಲಾ ಕಂಟಕ ನಿವಾರಣೆ ಆಗಬೇಕು ಅಂದ್ರೆ ದೈವ ಶಕ್ತಿ ಬೇಕೆ ಬೇಕು ಅದೇ ಕಾರಣಕ್ಕೆ ಶಕ್ತಿ ಪೀಠದಲ್ಲಿ ಕೈ ಮುಗಿದಿದ್ದಾರೆ.ಇನ್ನು ಕುಮಾರಸ್ವಾಮಿ ಅವರು ಮೂರು ಯಾಗಗಳನ್ನ ಒಟ್ಟಿಗೆ ಮಾಡಿದ್ದಾರೆ ಅದ್ರಲ್ಲಿ ಅಯುಷ್ಯ ಹೋಮವೂ ಒಂದು. ಸಧ್ಯ ಕುಮಾರಸ್ವಾಮಿ ಆರೋಗ್ಯದಲ್ಲಿ ಕೊಂಚ ಸಮಸ್ಯೆ ಇದೆ.

ಆ ಕಾರಣಕ್ಕೆ ದೀರ್ಘಾಯುಷ್ಯವನ್ನ ದಯಪಾಲಿಸು ತಾಯಿ ಅಂತಾ ತಾಯಿ ಸನ್ನಿಧಿಯಲ್ಲಿ ಈ ಹೊಮವನ್ನ ಮಾಡಿದ್ದಾರೆ.ಸರ್ಕಾರಕ್ಕೆ ಸಧ್ಯ ಕಂಟಕ ಎದುರಾಗಿದೆ ಅದನ್ನ ನಿವಾರಿಕೊಳ್ಳೋದಕ್ಕೂ ಶಕ್ತಿ ಕೊಡುವಂತೆ ಶಕ್ತಿ ಸನ್ನಿಧಾನದಲ್ಲಿ ನಿಂತು ಬೇಡಿಕೊಂಡಿದ್ದಾರೆ.ಈ ಹಿಂದೆ ಅಂದ್ರೆ ಕರ್ನಾಟಕ ವಿಧಾನ ಸಭಾ ಚುನಾವಣೆಗೂ ಮುನ್ನ 12 ದಿನಗಳ ಕಾಲ ಇದೇ ಪುಣ್ಯಸ್ಥಳದಲ್ಲಿ ದೇವೇಗೌಡ್ರು ಅತಿರುದ್ರ ಯಾಗ ಮಾಡಿದ್ರು. ಈ ಇಳಿವಯಸ್ಸಿನಲ್ಲೂ ಉಪವಾಸವಿದ್ದು, ಮಾಡಿದ ಪೂಜೆಗೆ ದೇವಿ ಪ್ರಸನ್ನಳಾಗಿದ್ದಳು. ಆ ಕಾರಣಕ್ಕೆ ಫಲಿತಾಂಶದಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ರು ಕುಮಾರಸ್ವಾಮಿ ಮುಖ್ಯಮಂತ್ರಿಯಾದ್ರು.

ಈಗ ಮತ್ತೆ ತಮ್ಮ ಕುರ್ಚಿಗೆ ಸಂಚಕಾರ ಬಂದಿರೋ ವಿಷ್ಯ ಕುಮಾರಸ್ವಾಮಿಗೆ ತಿಳಿದಿದೆ. ಆದ್ದರಿಂದ ಕಾಪಾಡು ತಾಯಿ ಅಂತಾ ಮತ್ತೆ ದೇವಿಯ ಮೊರೆ ಹೋಗಿದ್ದಾರೆ. ಒಟ್ಟಾರೆ ಸಾಂದರ್ಬಿಕ ಕಂದನಿಗೆ ನೂರಾರು ಕಷ್ಟಗಳು ಎನ್ನುವಂತೆ. ಒಂದು ಕಡೆ ಸರ್ಕಾರದ ಕಾಟ, ಮತ್ತೊಂದು ಕಡೆ ವಿರೋಧ ಪಕ್ಷದ ಆಟ , ಹೀಗೆ ಸಾಲು ಸಾಲು ಕಷ್ಟಗಳು ಬಂದೆರಗುತ್ತಿದೆ, ಈ ಎಲ್ಲದರಿಂದಲೂ ಪಾರಾಗಿ ಕುರ್ಚಿ ಭದ್ರವಾಗಿರಬೇಕು ಅನ್ನೋದು ಕುಮಾರಸ್ವಾಮಿ ಬಯಕೆ, ಆದ್ದರಿಂದಲೇ ಶೃಂಗೇರಿ ಶಕ್ತಿ ಪೀಠಕ್ಕೆ ಶರಣಾಗಿದ್ದಾರೆ.  ಆಶ್ಚರ್ಯಕರ ರೀತಿಯಲ್ಲಿ ಸಿಎಂ ಆದ ಕುಮಾರಸ್ವಾಮಿಗೆ, ಈ ಬಾರಿಯೂ ಆ ತಾಯಿ ದಯೆ ತೋರುತ್ತಾಳ, ಬಂದೆರಗಿರೋ ಸಂಕಷ್ಟದಿಂದ ಕುಮಾರಸ್ವಾಮಿಯವರನ್ನ ಪಾರು ಮಾಡುತ್ತಾಳ, ಆ ಎಲ್ಲಾ ಪ್ರಶ್ನೆಗೂ ಕಾಲವೇ ಉತ್ತರಿಸಲಿದೆ.

LEAVE A REPLY

Please enter your comment!
Please enter your name here