Home Elections 2018 ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ವಿವಾದ ತಾರಕಕ್ಕೇರಿದೆ..?! ಸುಪ್ರೀಂಕೋರ್ಟ್‌ನಲ್ಲಿ ಪುನರ್ ಪರಿಶೀಲನೆ ಅರ್ಜಿ ಸಲ್ಲಿಕೆ, ಬಿಜೆಪಿ,ಆರ್ಎಸ್...

ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ವಿವಾದ ತಾರಕಕ್ಕೇರಿದೆ..?! ಸುಪ್ರೀಂಕೋರ್ಟ್‌ನಲ್ಲಿ ಪುನರ್ ಪರಿಶೀಲನೆ ಅರ್ಜಿ ಸಲ್ಲಿಕೆ, ಬಿಜೆಪಿ,ಆರ್ಎಸ್ ವಿರುದ್ಧ ಕೇರಳ CM ಕಿಡಿ..!?

216
0
SHARE

ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ವಿವಾದ ತಾರಕಕ್ಕೇರಿದೆ. ಮತ್ತೆ ಈ ವಿವಾದ ಮೆಟ್ಟಿಲೇರಿದೆ. ಶಬರಿ ಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶಕೊಟ್ಟಿರೋದನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಲಾಗಿದೆ. ಇನ್ನೂ, ಸುಪ್ರೀಂಕೋರ್ಟ್ ಆದೇಶ ಪಾಲಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಹಾಗೂ ಆರ್ ಎಸ್ಎಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶಕ್ಕೆ ಆಕ್ಷೇಪ- ಸುಪ್ರೀಂಕೋರ್ಟ್‌ನಲ್ಲಿ ಪುನರ್ ಪರಿಶೀಲನೆ ಅರ್ಜಿ ಸಲ್ಲಿಕೆ- ಬಿಜೆಪಿ,ಆರ್ಎಸ್ ವಿರುದ್ಧ ಕೇರಳ ಸಿಎಂ ಕಿಡಿ.ಕೇರಳದ ಶಬರಿ ಮಲೆ ದೇವಾಲಯಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿರೋದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಸರ್ವೊಚ್ಚ ನ್ಯಾಯಾಲಯದ ನಡೆಯುತ್ತಿವೆ. ಈಗ ತೀರ್ಪನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಸುಪ್ರೀಂಕೋರ್ಟ್ ತೀರ್ಪಿನಿಂದ ಲಕ್ಷಾಂತರ ಅಯ್ಯಪ್ಪ ಭಕ್ತರ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರಲಿದೆ.ಹೀಗಾಗಿ ಮಹಿಳೆಯರ ವಯೋಮಿತಿ ವಿಚಾರವಾಗಿ ನೀಡಲಾಗಿರೋ ಆದೇಶವನ್ನು ತೆರವುಗೊಳಿಸಬೇಕೆಂದು ರಾಷ್ಟ್ರೀಯ ಅಯ್ಯಪ್ಪ ಭಕ್ತಾಧಿಗಳ ಸಂಘ ಅರ್ಜಿಯಲ್ಲಿ ಉಲ್ಲೇಖಿಸಿದೆ.ಇದೇ ವೇಳೆ, ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿರೋದ್ರಿಂದ ಉಂಟಾಗಿರೋ ಪ್ರತಿಭಟನೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆದಿದ್ದ ಸಭೆಗೆ ದೇವಾಲಯ ಪ್ರತಿನಿಧಿಗಳು ಗೈರು ಹಾಜರಾಗಿದ್ರು.

ಸಭೆಯಲ್ಲಿ ಮಾತನಾಡಿದ ಪಿಣರಾಯಿ ವಿಜಯನ್, ಸುಪ್ರೀಂಕೋರ್ಟ್ ಆದೇಶವನ್ನು ಜಾರಿಗೆ ತರಲಾಗುವುದು ಎಂದಿದ್ದಾರೆ.ನಂಬಿಕಸ್ಥರ ವಿರುದ್ಧ ಹೋರಾಟ ನಡೆಸಲು ಇದೇನು ಸರ್ಕಾರದ ನೀತಿಯಲ್ಲ. ಅವರ ಹಿತಾಸಕ್ತಿಯನ್ನು ಕಾಪಾಡಲಾಗುವುದು ಎಂದಿದ್ದಾರೆ. ಭೀಕರ ಪ್ರವಾಹ ಪರಿಸ್ಥಿತಿಯಲ್ಲಿ ಕೇರಳ ಜನತೆ ಒಗ್ಗಟ್ಟಾಗಿದ್ದರು. ಆದ್ರೆ, ಉದ್ದೇಶ ಪೂರ್ವಕವಾಗಿಯೇ ಒಗ್ಗಟ್ಟು ಮತ್ತು ಜಾತ್ಯಾತೀತ ನೆಲೆಯನ್ನು ನಾಶ ಮಾಡಲಾಗುತ್ತಿದೆ ಎಂದು ವಿಜಯನ್ ಆರೋಪಿಸಿದ್ದಾರೆ.

ಅಕ್ಟೋಬರ್ 17ರಂದು ಅಯ್ಯಪ್ಪ ದೇವಾಲಯ ತೆರೆಯಲಾಗುತ್ತಿದ್ದು, ಋತುಚಕ್ರಕ್ಕೊಳಗಾಗುವ ಮಹಿಳೆಯರು ದೇವಾಲಯ ಪ್ರವೇಶಕ್ಕೆ ತಡೆಯಲು ಅಯ್ಯಪ್ಪ ಧರ್ಮ ಸೇನೆ ಮುಂದಾಗಿದೆ. ಅಂದಿನಿಂದ ದೇವಾಲಯ ಮುಂಭಾಗದಲ್ಲಿ ಮಲಗಲು ಸೇನೆಯ ಭಕ್ತಾಧಿಗಳು ಮುಂದಾಗಿದ್ದಾರೆ. ಸದ್ಯಕ್ಕೆ ಕೇರಳ ಸರ್ಕಾರ ಅಡಕತ್ತರಿಯಲ್ಲಿ ಸಿಲುಕಿದೆ. ಒಂದು ಕಡೆ ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕಾಗಿದೆ. ಮತ್ತೊಂದು ಕಡೆ ಅಯ್ಯಪ್ಪ ಭಕ್ತರ ಪ್ರತಿಭಟನೆ ಎದುರಿಸಬೇಕಾಗಿದೆ.

LEAVE A REPLY

Please enter your comment!
Please enter your name here