Home Crime ಶಿಕ್ಷಕರ ಬುದ್ದಿವಾದಕ್ಕೆ ಮನನೊಂದ ವಿದ್ಯಾರ್ಥಿ..! ಡೆತ್ ನೋಟ್ ಬರೆದು ಹೇಳಿದ ಪ್ರಪಂಚಕ್ಕೆ ಗುಡ್ ಬೈ..!

ಶಿಕ್ಷಕರ ಬುದ್ದಿವಾದಕ್ಕೆ ಮನನೊಂದ ವಿದ್ಯಾರ್ಥಿ..! ಡೆತ್ ನೋಟ್ ಬರೆದು ಹೇಳಿದ ಪ್ರಪಂಚಕ್ಕೆ ಗುಡ್ ಬೈ..!

1849
0
SHARE

ವಿದ್ಯೆ ಕೊಡುವ ಶಿಕ್ಷಕ, ಜೀವನ ರೂಪಿಸುವ ದೇವರಿದ್ದಂತೆ, ನಮ್ಮ ನಾಡಿನಲ್ಲಿ ಗುರುವಿಗೋಂದು ಶ್ರೇಷ್ಟ ಸ್ಥಾನವಿದೆ, ಆದ್ರೆ ಇಲ್ಲೊಬ್ಬ ಶಿಕ್ಷಕ ಮಾಡಿದ ಸಣ್ಣ ತಪ್ಪಿನಿಂದ, ವಿದ್ಯಾರ್ಥಿಯೊರ್ವ ನೇಣಿಗೆ ಶರಣಾಗಿದ್ದಾನೆ…

ಹೀಗೆ ಶಾಲೆ ಬಿಟ್ಟು ಬಂದಿರುವ ನೂರಾರು ವಿದ್ಯಾರ್ಥಿಗಳನ್ನ ನೋಡಿದ್ರೆ ಕರಳು ಚುರ್ ಅನ್ನುತ್ತೆ, ತಮ್ಮ ಸಹಪಾಠಿಯ ಮುಖವನ್ನ ಕೊನೆ ಸಲ ನೋಡಬೆಕು ಅಂತಾ ಬಂದಿರುವ ಸ್ನೇಹಿತರು ಇವರುಗಳು. ಹೀಗೆ ಪ್ರಾಣ ಕಳೆದುಕೊಂಡ ಬಾಲಕನ ಹೆಸರು ಧನುಷ್. ಶಾಲೆಯಲ್ಲಿ ಶಿಕ್ಷಕ ಎಲ್ಲರೆದುರು ಬುದ್ದಿವಾದ ಹೇಳಿದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಉತ್ತರಹಳ್ಳಿಯ ವೈಎಎಸ್ ನ್ಯಾಶನಲ್ ಸ್ಕೂಲ್ ನಲ್ಲಿ 10ನೇ ತರಗತಿ ಓದುತ್ತಿದ್ದ, ಅಷ್ಟೇ ಚುರುಕಾಗಿ ಇದ್ದ ಹುಡಗ ಧನುಶ್.ಶಿಕ್ಷಕರು ಬೈದಿದ್ರಿಂದ ನನಗೆ ಅವಮಾನವಾಗಿದೆ ಅಂತಾ ಭಾವಿಸಿ ಇಹಲೋಕ ತ್ಯಜಿಸಿದ್ದಾನೆ.ಧನುಶ್ ತುಂಬಾ ಒಳ್ಳೆ ಹುಡಗ, ಡ್ಯಾನ್ಸರ್,ಬುದ್ದಿವಂತ, ಕೂಡ ಹೌದು. ಕಡು ಬಡತನವಿದ್ದ ಕಾರಣ ಬೆಳಗ್ಗೆ ಪೇಪರ್ ಹಾಕಿ ನಂತರ ಶಾಲೆಗೆ ತೆರಳುತ್ತಿದ್ದ.

ಇತ್ತೀಚಿಗೆ ಅದೇ ಸ್ಕೂಲ್ ನ ಹುಡಗಿಯೊಬ್ಬಳ ಜೊತೆ ಅತಿಯಾಗಿ ಹರಟೆ ಹೊಡೆಯತ್ತಿದ್ದ ಅಂತೆ, ಇದೆ ಕಾರಣಕ್ಕೆ ಎನೋ ಬಾಲಕೃಷ್ಣ ಮೇಷ್ಟು ಹೊಡೆದ ಬೈದು ಬುದ್ದಿ ಹೇಳಿದ್ದಾರೆ. ಇದೇ ಕಾರಣಕ್ಕೆ ಮನನೊಂದ ಧನುಶ್ ಕೊನೆಗೆ ನೇಣಿಗೆ ಕೊರಳೊಡ್ಡಿದ್ದಾನೆ.

ಸದ್ಯ ತಲಘಟ್ಟಪುರ ಪೊಲೀಸ್ರು ಪ್ರಕರಣ ದಾಖಲಿಕೊಂಡಿದ್ದಾರೆ, ಶಾಲಾ ಆಡಳಿತ ಮಂಡಳಿ 2 ದಿನ ಇಗಾಗಲೆ ರಜೆ ಘೊಷಿಸಿ ಪೊಲೀಸ್ರರಿಗೆ ಸಬೂಬು ಕೊಡಲು ಸಜ್ಜಾಗುತ್ತಿದೆ.ಇನ್ನು ಧನುಶ್ ಸಾಯುವ ಮುನ್ನ ಡೆತ್ ನೋಟ್‌ನಲ್ಲಿ ಕ್ಷಮಿಸು ಬಿಡು ಪವಿ ನಾನು ನಿನ್ನ ಬಿಟ್ಟು ಹೋಗ್ತಾ ಇದ್ದೇನೆ ಎಂದು ಬರೆದಿದ್ದಾನೆ. ಎಲ್ಲಾ ದಿಕ್ಕುಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here