Home District ಶಿವಕುಮಾರ ಸ್ವಾಮಿಗಳು ಮಂತ್ರ ಪಠಿಸುತ್ತಿರುವ ದೃಶ್ಯ ವೈರಲ್..! ಶ್ರೀಗಳ ಆರೋಗ್ಯ ಮತ್ತಷ್ಟು ಚೇತರಿಕೆ…

ಶಿವಕುಮಾರ ಸ್ವಾಮಿಗಳು ಮಂತ್ರ ಪಠಿಸುತ್ತಿರುವ ದೃಶ್ಯ ವೈರಲ್..! ಶ್ರೀಗಳ ಆರೋಗ್ಯ ಮತ್ತಷ್ಟು ಚೇತರಿಕೆ…

424
0
SHARE

ನಡೆದಾಡೋ ದೇವರ ಆರೋಗ್ಯ, ಭಕ್ತ ಗಣವನ್ನ ಬೆರಗು ಮೂಡಿಸಿದೆ,,ಪಿತ್ತಕೋಶದ ಶಸ್ತ್ರ ಚಿಕಿತ್ಸೆ ಬಳಿಕ ವಿಶ್ರಾಂತಿಯಲ್ಲಿರೋ ಶ್ರೀಗಳು ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ..ಹಾಸಿಗೆಯಲ್ಲೇ ಮಂತ್ರ ಪಠಣೆ ನಡೆಸಿರೋ ಶ್ರೀಗಳು ಶಿವಸ್ತುತಿ ಹೇಳಿ ಭಕ್ತರ ಆತಂಕವನ್ನ ದೂರಾಗಿಸಿದ್ದಾರೆ..ಈ ನಡುವೆ ಸಹ ಗಣ್ಯರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ‌.ನಡೆದಾಡುವ ದೇವರು, ಶತಾಯುಷಿ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಇನ್ನಷ್ಟು ಚೇತರಿಕೆ ಕಂಡಿದೆ. ಶ್ರೀಗಳ ಶ್ವಾಸಕೋಶದ ಸೋಂಕು ಕಡಿಮೆಯಾಗಿದೆ.

ಶ್ರೀಗಳಿಗೆ ಇಂದು ಸಹ ವೈದ್ಯರು ರಕ್ತ ಪರೀಕ್ಷೆ ನಡೆಸಿದ್ದು, ವರದಿಯಲ್ಲಿ ಸೋಂಕು ಕಡಿಮೆಯಾಗಿರೋದು ದೃಡಪಟ್ಟಿದೆ. ಮುಂಜಾನೆಯೇ ರಕ್ತ ತಪಾಸಣೆ, ಬ್ಲಡ್ ಪ್ರೆಶರ್, ಉಸಿರಾಟ ಸೇರಿದಂತೆ‌ ಎಲ್ಲವನ್ನೂ ತಪಾಸಣೆ ನಡೆಸಿರೋ ವೈದ್ಯರು, ಶ್ರೀಗಳ ಆರೋಗ್ಯ ಸ್ಥಿತಿ ಚೇತರಿಕೆಯಾಗಿರೋ ಕುರಿತಾಗಿ ಮಾಹಿತಿ ನೀಡಿದ್ದಾರೆ. ಇನ್ನೂ ನಾಲ್ಕು ದಿನ ಆಂಟಿ ಬಯೋಟಿಕ್ ಕೊಡಬೇಕಾಗಿದೆ. ಸದ್ಯ ದ್ರವರೂಪದ ಆಹಾರವನ್ನು ಶ್ರೀಗಳು ಸ್ವೀಕರಿಸುತಿದ್ದಾರೆ.

ಭಕ್ತಾಧಿಗಳು ಆತಂಕ ಪಡುವ ಅವಶ್ಯಕತೆ ಇಲ್ಲಾ ಅಂತಾ ಡಾ.ಪರಮೇಶ್ ಮಾಹಿತಿ ನೀಡಿದ್ದಾರೆ.
ಶ್ರೀಮಠಕ್ಕೆ ವಿವಿಧ ಗಣ್ಯರು ಭೇಟಿ ನೀಡಿದ್ದಾರೆ.ವಿಧಾನ ಪರಿಷತ್ ನ ವಿರೋಧ ಪಕ್ಷದ ಮುಖ್ಯ‌ಸಚೇತಕ ಮಹಂತೇಶ್ ಕೌಟಗಿ, ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ವಿ.ಸೋಮಣ್ಣ,ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಶ್ರೀಗಳು ಸೇರಿದಂತೆ ವಿವಿಧ ಗಣ್ಯರು ಸಿದ್ದಗಂಗಾ ಮಠಕ್ಕೆ ಭೇಟಿ‌ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ..

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಸಭಾ ಸದಸ್ಯ ಪ್ರಭಾಕರ್ ಕೋರೆ, ಶ್ರೀಗಳ ಜೊತೆಗೆ ಮಾತನಾಡುವ ಪ್ರಯತ್ನ ಮಾಡಿದ್ವಿ, ಅವರ ಮಾತುಗಳು ಸರಿಯಾಗಿ ಕೇಳಿಸಲಿಲ್ಲ..ಶ್ರೀಗಳಿಗೆ ಸೊಂಕು ಕಡಿಮೆಯಾಗಿದ್ದು,,ಶ್ರೀ ಗಳ ಆರೋಗ್ಯ ಇನ್ನೂ ಸ್ವಲ್ಪ ದಿನಗಳಲ್ಲಿ ಸರಿ ಹೋಗಲಿದೆ ಎಂದರು,ಇನ್ನೂ ಶ್ರೀಗಳು ತಮ್ಮ ವಿಶ್ರಾಂತಿ ನಡುವೆಯೂ ಹಾಸಿಗೆಯಲ್ಲೇ‌‌ ಮಂತ್ರ ಪಠಿಸಿ ಇಡೀ ಭಕ್ತ ಸಮೂಹವನ್ನ ನಿಭ್ಭೆರಗಾಗಿಸಿದ್ದಾರೆ.

ಇಷ್ಟಲಿಂಗ ಪೂಜೆ ವೇಳೆ ಶ್ರೀಗಳು ಮಂತ್ರ ಪಠಿಸಿದ್ದಾರೆ,ಇಷ್ಟಲಿಂಗ ಪೂಜೆ ವೇಳೆ ಶಿಷ್ಯರ ಶಿವಸ್ತುತಿಗೆ ಧ್ವನಿಗೂಡಿಸಿದ ಶ್ರೀಗಳು, ಅವರು ಹೇಳುತ್ತಿದ್ದ ಮಂತ್ರವನ್ನ ತಾವೂ ಸಹ ಪಠಿಸಿದ್ದಾರೆ..ಶ್ರೀಗಳ ಮಂತ್ರ ಪಠಣದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು,,ಭಕ್ತರಲ್ಲಿ ನಿರಾಳ ಭಾವ ಮೂಡಿಸಿದೆ..ಈ‌ ಮೂಲಕ ಶ್ರೀಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆಯಾಗಿದೆ ಅನ್ನೋದು ಸ್ಪಷ್ಟಪಡಿಸಿದಂತಿದೆ.

LEAVE A REPLY

Please enter your comment!
Please enter your name here