Home Cinema ಶಿವಣ್ಣ ಕೊಟ್ಟ ಎಚ್ಚರಿಕೆಯನ್ನೂ ಲೆಕ್ಕಿಸದೇ ಅಭಿಮಾನಿಗಳ ಗದ್ದಲ..! ಅಯ್ಯೋ,ಶಿವಭಕ್ತರು ಆಗಿದ್ದೇಕೆ ಪ್ರೇಮ್ ಮೇಲೆ ಕೆಂಡಾಮಂಡಲ..!

ಶಿವಣ್ಣ ಕೊಟ್ಟ ಎಚ್ಚರಿಕೆಯನ್ನೂ ಲೆಕ್ಕಿಸದೇ ಅಭಿಮಾನಿಗಳ ಗದ್ದಲ..! ಅಯ್ಯೋ,ಶಿವಭಕ್ತರು ಆಗಿದ್ದೇಕೆ ಪ್ರೇಮ್ ಮೇಲೆ ಕೆಂಡಾಮಂಡಲ..!

2103
0
SHARE

ದಿ ವಿಲನ್ ಬೆಂಕಿ ಗಾಂಧಿನಗರದ ಗಲ್ಲಿಗಳಲ್ಲಿ ಧಗಧಗನೆ ಉರಿಯುತ್ತಿದೆ. ಅಭಿಮಾನಿಗಳ ಕಿತ್ತಾಟ ಹಾಗೂ ಗುದ್ದಾಟಕ್ಕೆ ಕಾರಣವಾಗಿದೆ. ಯಸ್, ನಿನ್ನೆ ತೆರೆಗೆ ಬಂದ ದಿ ವಿಲನ್, ಶಿವಣ್ಣ ಅಭಿಮಾನಿಗಳನ್ನ ಕೆರಳಿಸಿದೆ. ಇದುವೇ ಇದೀಗ ಧಿಕ್ಕಾರದ ಕೂಗಿಗೂ ಕಾರಣವಾಗಿದೆ.ಯಸ್, ಅಸಲಿಗೆ ದಿ ವಿಲನ್ ಮೇಲೆ ತಣ್ಣನೆಯಾದ ಅಸಹನೆ ಅಸಮಾಧಾನ, ಮೊದಲಿಂದನೂ ಶಿವಣ್ಣ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಇದಕ್ಕೆ ಕಾರಣ ಪ್ರತಿಯೊಂದು ಹಂತದಲ್ಲೂ ಸುದೀಪ ಅವ್ರನ್ನ ವಿಜೃಂಭಿಸಲಾಗ್ತಿದೆ ಅನ್ನುವದಷ್ಟೇ.

ಇದೇ ಕಾರಣಕ್ಕೆ, ಶಿವಣ್ಣ ಅಭಿಮಾನಿಗಳಲ್ಲಿ ಮನವಿಯನ್ನೂ ಮಾಡಿಕೊಂಡಿದ್ದರು. ಚಿತ್ರ ಬಿಡುಗಡೆಯಾದ್ಮೇಲೆ ಗಲಾಟೆ ಮಾಡಿದ್ರೆ ತಾಯಾಣೆ ಚಿತ್ರಮಂದಿರಕ್ಕೆ ಕಾಲಿಡಲ್ಲ ಅಂದಿದ್ದರು. ಹೀಗಿದ್ದೂ ಇದೀಗ ಶಿವಭಕ್ತರು ಕೆರಳಿದ್ದಾರೆ. ಪ್ರೇಮ್ ಮೇಲೆ ತಮಗಿರುವ ಆಕ್ರೋಶವನ್ನ ಹೊರ ಹಾಕ್ತಿದ್ದಾರೆ.ಅಷ್ಟಕ್ಕೂ ಶಿವಣ್ಣ ಅಭಿಮಾನಿಗಳು ಗರಂ ಆಗಿದ್ದೇಕೆ, ಹೀಗೊಂದು ಪ್ರಶ್ನೆಗುತ್ತರ ಹುಡುಕಲು ಹೊರಟ್ರೆ ಚಿತ್ರದಲ್ಲಿನ ಒಂದು ದೃಶ್ಯ ಕಣ್ಣು ಕೆಂಪಾಗಲು ಅನ್ನುವ ಉತ್ತರ ಬರುತ್ತೆ. ಹೌದು, ಅಸಲಿಗೆ ಚಿತ್ರದಲ್ಲಿ ಒಂದು ದೃಶ್ಯವಿದೆ.

ಅದು, ಸುದೀಪ ಶಿವಣ್ಣಗೆ ಹೊಡೆಯುವ ದೃಶ್ಯ. ಇದೇ ದೃಶ್ಯವನ್ನ ಕಂಡ ಶಿವಣ್ಣ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ಚಿತ್ರದಲ್ಲಿನ ಈ ದೃಶ್ಯ ಅನವಶ್ಯಕವಾದದ್ದು, ಕೂಡಲೇ ಆ ದೃಶ್ಯ ತೆಗೆದು ಹಾಕಬೇಕೆನ್ನೋ ಅಭಿಮಾನಿಗಳು ಇಂದು ಬೆಂಗಳೂರಿನ ನರ್ತಕಿ ಚಿತ್ರಮಂದಿರದ ಎದುರು ಪ್ರತಿಭಟನೆಯನ್ನೂ ಮಾಡಿದ್ದಾರೆ. ಪ್ರೇಮ್‌ಗೆ ಧಿಕ್ಕಾರ ಹಾಕಿದ್ದಾರೆ. ಅಷ್ಟೇ ಅಲ್ಲ.. ಸೋಮವಾರದೊಳಗೆ ಚಿತ್ರದಲ್ಲಿನ ದೃಶ್ಯಕ್ಕೆ ಕತ್ತರಿ ಹಾಕದೇ ಇದ್ದಲ್ಲಿ, ಪ್ರೇಮ್ ಮನೆ ಮುಂದೆ ಪ್ರತಿಭಟನೆ ಮಾಡುವದಾಗಿಯೂ ಹೇಳಿದ್ದಾರೆ ಶಿವಣ್ಣ ಅಭಿಮಾನಿಗಳು ಬರೀ ಪ್ರತಿಭಟನೆ ಮಾಡುವದ್ರ ಮೂಲಕವಷ್ಟೇ ತಮ್ಮ ಆಕ್ರೋಶವನ್ನ ಅಭಿಮಾನಿಗಳು ಹೊರ ಹಾಕುತ್ತಿಲ್ಲ.

ಬದ್ಲಿಗೆ.. ಸಾಮಾಜಿಕ ಜಾಲತಾಣದಲ್ಲಿ ಪ್ರೇಮ್‌ರನ್ನ ತರಾಟೆಗೆ ತಗೆದುಕೊಳ್ತಿದ್ದಾರೆ ಅಭಿಮಾನಿಗಳು. ಹೌದು, ಸುದೀಪ ಬಳಿ ಶಿವಣ್ಣರನ್ನ ಪ್ರೇಮ್ ಹೊಡೆಸಿದ ತಪ್ಪಿಗೆ, ಹೀನಾಮಾನವಾಗಿ ಅಭಿಮಾನಿಗ ಳಿಂದ ಬಯಸಿಕೊಳ್ಳುವಂತಾಗಿದೆ. ಅದು, ಕೇಳಿಸಿಕೊಳ್ಳಲಾಗದ ಭಾಷೆಗಳಲ್ಲಿ.ಶಿವಣ್ಣ ಅಭಿಮಾನಿಗಳ ಇದೇ ಆಕ್ರೋಶದ ನುಡಿಗಳೂ, ಇದೀಗ ಅಭಿನಯ ಚಕ್ರವರ್ತಿ ಸುದೀಪ ಸಿಟ್ಟಿಗೂ ಕಾರಣವಾಗಿದೆ. ಹಾಗಾಗೇ, ದಾವಣಗೆರೆಯಲ್ಲಿ ಇಂದು ತಮ್ಮ ಆಕ್ರೋಶವನ್ನೂ ಹೊರ ಹಾಕಿದ, ಬೇಸರವನ್ನೂ ವ್ಯಕ್ತಪಡಿಸಿದ ಸುದೀಪ ಸಿನಿಮಾವನ್ನ ಸಿನಿಮಾ ರೀತಿ ನೋಡಬೇಕು ಅಂದಿದ್ದಾರೆ.

ಶಿವಣ್ಣ ಪ್ರೇಮ್‌ಗೆ ಹೇಳಿ ಆ ಸೀನ್ ಕಟ್ ಮಾಡಿಸಲಿ ಅಂದಿದ್ದಾರೆ. ಶಿವಣ್ಣ ಏನು ದಡ್ಡರಾ ಅನ್ನುವ ಪ್ರಶ್ನೆಯನ್ನೂ ಕೇಳಿದ್ದಾರೆ.ಇನ್ನೂ ದಿ ವಿಲನ್ ಮೇಲೀನ ತಮ್ಮ ಸಿಟ್ಟನ್ನ ಹೊರ ಹಾಕ್ತಿರುವ ಅಭಿಮಾನಿಗಳು, ಶಿವಣ್ಣರ ಪಾತ್ರ ತುಂಬಾ ಚಿಕ್ಕದಾಗಿ ಅನ್ನುತ್ತಿದ್ದಾರೆ. ಯಸ್, ಮೊದಲೇ ಬಿಂಬಿಸಿದಂತೆ ಇದು ಮಲ್ಟಿಸ್ಟಾರ್ ಕಾಸ್ಟ್ ಸಿನಿಮಾ. ಹೀಗಿದ್ಮೇಲೆ ಇಬ್ಬರಿಗೂ ಸಮಾನವಾದ ಪ್ರಾಮುಖ್ಯತೆಯನ್ನ ನೀಡಬೇಕು. ಬಟ್, ದಿ ವಿಲನ್ ವಿಚಾರದಲ್ಲಿ ಇದಾಗಿಲ್ಲ. ಸುದೀಪಗೆ ಹೆಚ್ಚಿನ ಒತ್ತನ್ನ ನೀಡಿ..

ಶಿವಣ್ಣ ಅವ್ರನ್ನ ಪೋಷಕ ಪಾತ್ರಧಾರಿಯಂತೆ ಬಳಸಿಕೊಂಡಿರೊದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಅನೇಕ ಅಭಿಮಾನಿಗಳ ವಾದ ಹಾಗೂ ಆರೋಪ.ದಿ ವಿಲನ್ ಚಿತ್ರದಲ್ಲಿ ಶಿವಣ್ಣಗೆ ಜಾನಕಿನೂ ಸಿಗಲ್ಲ. ತಾಯಿನೂ ಸಿಗಲ್ಲ. ಇದು ಕೂಡಾ ಅಭಿಮಾನಿಗಳ ಸಿಟ್ಟಿಗೆ ಇನ್ನೊಂದು ಕಾರಣ. ನೂರು ಚಿತ್ರಗಳ ಸರದಾರನಾದ ಶಿವಣ್ಣಗೆ ಇಂಥ ಪಾತ್ರ ಹೆಣೆದಿದ್ದೇ ತಪ್ಪು ಅನ್ನುತ್ತಿರುವ ಅಭಿಮಾನಿಗಳು ಶಿವಣ್ಣ ಅವ್ರ ಪಾತ್ರದ ಲುಕ್ ಬಗ್ಗೆಯೂ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ನಿಮಗೆ ಗೊತ್ತಿರಲಿ, ದಿ ವಿಲನ್ ಚಿತ್ರ ನೋಡಿ ಅಭಿಮಾನಿಗಳು ಎಷ್ಟರ ಮಟ್ಟಿಗೆ ಸಿಟ್ಟಾಗಿದ್ದರೆ, ಬೇಸರವಾಗಿದ್ದಾರೆ ಅನ್ನೋದಕ್ಕೆ ಅಭಿಮಾನಿಗಳು ಪ್ರೇಮ್ ಬಗ್ಗೆ ಮಾಡ್ತಿರುವ ವ್ಯಂಗ್ಯನೇ ಸಾಕ್ಷಿ. ಹೌದು, ಚಿತ್ರ ನೋಡಿ ಹೊರಬಂದ ಅಭಿಮಾನಿಗಳು ಪ್ರೇಮ್ ತಲೆಗೆ ೨೦೦೬ರಲ್ಲೆ ಪೆಟ್ಟು ಬಿದ್ದಿತ್ತು ಅನ್ನುತ್ತಿದ್ದಾರೆ. ಅಷ್ಟೇ ಅಲ್ಲ, ಪ್ರೇಮ್ ಮಾಡಿರುವ ಗ್ರಾಫಿಕ್ಸ್‌ಗಳನ್ನೂ ಆಡಿಕೊಳ್ತಿದ್ದಾರೆ. ಇನ್ನೂ ಆಮಿ ಜಾಕ್ಸನ್ ಬದಲು ರಕ್ಷಿತಾರನ್ನೇ ಪ್ರೇಮ್ ನಾಯಕಿಯನ್ನಾಗಿ ಮಾಡಬಹುದಿತ್ತು ಅನ್ನುವ ಮೂಲಕ ಪ್ರೇಮ್ ಕಾಲ್ ಎಳೆಯುತ್ತಿದ್ದಾರೆ ಅಭಿಮಾನಿಗಳು.

ಅಂದ್ರೆ, ಪ್ರೇಮ್ ಅವ್ರ ವ್ಯಂಗ್ಯವನ್ನೂ ಇಲ್ಲಿ ಮಾಡಲಇದೆಲ್ಲದ್ರ ನಡುವೆ, ಸಾಮಾಜಿಕ ಜಾಲತಾಣದಲ್ಲಿ ದೊಡ್ಮನೆ ಅಭಿಮಾನಿಗಳು ಶಿವಣ್ಣ ಬಳಿ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಳ್ತಿದ್ದಾರೆ. ಶಿವಣ್ಣ ದಯವಿಟ್ಟು ಹೀಗೆ ಮಾಡಬೇಡಿ ಅನ್ನುತ್ತಿದ್ದಾರೆ.ಅದೇನೆ ಇರ‍್ಲಿ, ಸದ್ಯ ದಿ ವಿಲನ್ ಚಿತ್ರ ವಿವಾದದಿಂದ ಸದ್ದು ಮಾಡ್ತಿದೆ ಸುದ್ದಿಯಾಗ್ತಿದೆ. ಮುಂದಿನ ದಿನಗಳಲ್ಲಿ ಇದು ಇನ್ನೆಲ್ಲಿ ಹೋಗಿ ಮುಟ್ಟುತ್ತೋ ಕಾದು ನೋಡಬೇಕು..

LEAVE A REPLY

Please enter your comment!
Please enter your name here