Home Cinema ‘ಶಿವಣ್ಣ’ ತಲೆ ಬಾಗಿದ್ರು ಕಂಡು ‘ದೇವರ ಮಕ್ಕಳ’ಅಭಿಮಾನ..! ಮಕ್ಕಳೊಂದಿಗೆ ಮಗುವಾದ ಮಗು ಮನಸ್ಸಿನ ಶಿವಣ್ಣ.!!

‘ಶಿವಣ್ಣ’ ತಲೆ ಬಾಗಿದ್ರು ಕಂಡು ‘ದೇವರ ಮಕ್ಕಳ’ಅಭಿಮಾನ..! ಮಕ್ಕಳೊಂದಿಗೆ ಮಗುವಾದ ಮಗು ಮನಸ್ಸಿನ ಶಿವಣ್ಣ.!!

471
0
SHARE

ಡಾ. ಶಿವರಾಜ್ ಕುಮಾರ್ ಸರಳತೆಯ ಸಾಹುಕಾರ. ಯಾವ ಹಮ್ಮು ಬಿಮ್ಮು ಇರದ ನಟ. ತಮ್ಮ ವ್ಯಕ್ತಿತ್ವದಿಂದ ಎಂಥವರಿಗೂ ಇಷ್ಟವಾಗುವ ಶಿವಣ್ಣ ಇತ್ತೀಚಿಗೆ ಮಕ್ಕಳೊಂದಿಗೆ ಸೇರಿ ಮಗುವಾಗಿದ್ದಾರೆ. ಜೆ.ಪಿ ನಗರದ ರಮಣ ಮಹರ್ಷಿ ಅಂಧ ಮಕ್ಕಳ ಶಾಲೆಗೆ ತೆರಳಿದ ಶಿವರಾಜ್ ಕುಮಾರ್ ಮಕ್ಕಳೊಂದಿಗೆ ಟೀಸರ್ ಲಾಂಚ್ ಮಾಡಿದ್ರು. ಟೀಸರ್ ರಿಲೀಸ್ ಬಳಿಕ ಶಿವಣ್ಣ ಮಕ್ಕಳು ಕೇಳಿದ ಕೆಲವು ಪ್ರಶ್ನೆಗಳಿಗೆ ಮುಕ್ತಮನಸ್ಸಿನಿಂದ ಉತ್ತರಿಸಿದ್ದಾರೆ.

ಅಷ್ಟೇ ಅಲ್ಲ ಮಕ್ಕಳು ಹಾಡಿದ ವಜ್ರಕಾಯ ಚಿತ್ರದ ಉಸಿರೇ ನೀನಮ್ಮ ಹಾಡು ಕೇಳಿ ಭಾವುಕನೂ ಆಗಿದ್ದಾರೆ ಶಿವಣ್ಣ.ಇನ್ನು ನಾವಂದು ಕೊಂಡಂತೆ ಜೀವನ ಎಂದು ಇರುವುದಿಲ್ಲ. ನಾನು ಈ ಚಿತ್ರವನ್ನು ಒಪಿಕೊಂಡಿದ್ದೆ ಅಂಧ ಪಾತ್ರಕ್ಕಾಗಿ ಎನ್ನುವ ಶಿವಣ್ಣ. ಅಂಧನಾಗಿ ನಟಿಸುವಾಗಿ ಹೆಚ್ಚಾಗಿ ತಲೆ ನೋವು ಕಾಣಿಸಿಕೊಂಡಿತಂತೆ. ಕಣ್ಣು ಮಂಜಾಗುತ್ತಿತ್ತು ಎನ್ನುವ ಮೂಲಕ ಶೂಟಿಂಗ್ ಸಂದರ್ಭದಲ್ಲಿನ ಎಕ್ಸ್ ಪೀರಿಯನ್ಸ್‌ನ್ನು ಶೇರ್ ಮಾಡಿಕೊಂಡಿದ್ದಾರೆ.

ಒಬ್ಬ ಅಂಧ ವ್ಯಕ್ತಿಯನ್ನು ಗಮನಿಸಿ ಈ ಪಾತ್ರವನ್ನು ಮಾಡಿದ್ದೇನೆ. ಚಿತ್ರದ ಡಬ್ಬಿಂಗ್‌ನಲ್ಲಿ ಕಣ್ಣು ಬಿಟ್ಟು ನನ್ನ ಪಾತ್ರ ನೋಡಿ ಅನುಭವಿಸಿ, ಆನಂದಿಸಿ ಮಾತುಗಳನ್ನು ಜೋಡಿಸಿದೇನೆ. ತುಂಬಾ ಚೆನ್ನಾಗಿ ಮೂಡಿಬಂದಿದೆ ಅಂತಾರೆ ಶಿವಣ್ಣ.ಇತ್ತೀಚೆಗಷ್ಟೇ ಅಭಿಮಾನಿಗಳ ವಿರುದ್ದ ಮಾತನಾಡುವ ವ್ಯಕ್ತಿಗಳ ವಿರುದ್ದ ಪವರ್ ಸ್ಟಾರ್ ಪುನೀತ್ ಕಿಡಿ ಕಾರಿದ್ರು. ಟೀಸರ್ ಬಿಡುಗಡೆ ಸಮಾರಂಭದಲ್ಲಿ ಶಿವಣ್ಣ ಮಾತನಾಡಿ, ತಮ್ಮ ಅಭಿಮಾನಿಗಳಿಗೆ ನಮಗಿಂತ ನೀವೇ ಗ್ರೇಟ್ ಎಂದಿದ್ದಾರೆ. ಅಪ್ಪಾಜಿ ಹೇಳಿದ್ರು ಅಭಿಮಾನಿಗಳೇ ದೇವರು ಅಂತ.

ಅಪ್ಪಾಜಿ ರಾಜಕುಮಾರ ಆಗಿದ್ದು ನಿಮ್ಮಿಂದ, ನಿಮ್ಮಗಳ ಪ್ರೀತಿಯಿಂದ. ಸೋ ಹೋಗಬೇಕಾದ್ರೆ ನಮ್ಮ ಕಣ್ಣು ಬೇರೆಯವರಿಗೆ ಕವಚ ಆಗಬೇಕು ಹಾಗಾಗಿ ಕಣ್ಣುಗಳನ್ನು ದಾನ ಮಾಡಿಎಂದು ಶಿವಣ್ಣ ಅಭಿಮಾನಿಗಳಿಗೆ ಕರೆ ನೀಡಿದ್ರು.ಕವಚ ಶಿವಣ್ಣ ಅಭಿನಯದ ಮಹತ್ವದ ಸಿನಿಮಾ. ಇದೇ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಟೀಸರ್‌ನಲ್ಲಿ ಶಿವರಾಜ್ ಕುಮಾರ್‌ಗೆ ಕಣ್ಣಾಗಿ ಕಾಯುವ ಪಾತ್ರದಲ್ಲಿ ಪುಟ್ಟ ಹುಡುಗಿ ನಟಿಸಿದ್ದಾಳೆ.

ಒಪ್ಪಂನಲ್ಲಿ ಮೋಹನ್ ಲಾಲ್ ನಟಿಸಿದ್ದ ಪಾತ್ರಕ್ಕೆ ಶಿವಣ್ಣ ಜೀವ ತುಂಬಿದ್ದಾರೆ. ಅದನ್ನು ನಿರ್ದೇಶಕರು ಒಂದು ಪುಟ್ಟ ಟೀಸರ್‌ನಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಟೆಸ್ಟ್ ಮಾಡ್ಬೇಡಿ ಸರ್, ಐ ಅಮ್ಯ್ ಬ್ಲೈನ್ಡ್ ಎನ್ನುವ ಡೈ ಲಾಗ್ ಸಹ ಹೋಡೆದಿದ್ದಾರೆ. ಬಟ್ ನಾಟ್ ವೀಕ್ ಎನ್ನುವ ಡೈ ಲಾಗ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.ಭರ್ತಿ ಹದಿನೈದು ವರ್ಷಗಳ ಬಳಿಕ ಶಿವಣ್ಣ ರಿಮೇಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇಶಾ ಕೊಪ್ಪಿಕರ್, ವಸಿಷ್ಠ ಚಿತ್ರದ ತಾರಾಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಜೊತೆಗೆ ಇತಾ ಕೊಪ್ಪಿಕರ್ ನಾಯಕಿಯಾಗಿ ನಟಿಸಿದ್ದು ಖಾಕಿ ತೊಟ್ಟು ಖದರ್ ತೋರಿಸಿದ್ದಾರೆ.ಜಿ.ವಿ. ವಾಸು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ‘ ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಜಿವಿಆರ್ ವಾಸು ಈ ಚಿತ್ರದನ್ನು ನಿರ್ದೇಶನ ಮಾಡಿದ್ದು, ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಶಿವಣ್ಣ ಒಬ್ಬರು ವರ್ಸಟ್ಯಾಲ್ ನಟ ಎನ್ನುವ ಧನಂಜಯ್. ಟಗರು ಚಿತ್ರದಲ್ಲಿ ಶಿವಣ್ಣ ಒಬ್ಬ ತಮ್ಮನಂತೆ ನೋಡಿಕೊಂಡಿದ್ರು. ತಿದ್ದಿ ತಿಡಿದ್ರು. ಶಿವಣ್ಣ ಲಾಂಗ್ ಹಿಡಿಯೋದಕ್ಕೂ ಸೈ, ಪೋಲೀಸ್ ಆಗಿ ಮಿಂಚೋದಕ್ಕೂ ಜೈ. ನಮ್ಮೆಲ್ಲರಿಗೂ ಒಳ್ಳೆಯ ಮಾರ್ಗದರ್ಶಕರಾಗಿದ್ದಾರೆ. ಅವರ ಸಿನಿಮಾಗಳೆ ನಮಗೆ ಸ್ಪೂರ್ತಿ ಅಂತಾರೆ.ಇನ್ನು ಚಿತ್ರದಲ್ಲಿ ಕೃತಿಕಾ ಮತ್ತು ಹಿತಿ ನಾಯಕಿಯರು. ರೇವತಿ ಪಾತ್ರದಲ್ಲಿ ಪಂಜಾಬಿ ಬೆಡಗಿಯಾಗಿ ಕೃತಿ ನಟಿಸಿದ್ರೆ.

ಹಿತಿ ಬ್ಲೋಲ್ಡ್ ಹುಡುಗಿಯ ಪಾತ್ರದಲ್ಲಿ ನಟಿಸಿದ ಖುಷಿಯಲ್ಲಿ ತಮ್ಮ ಪಾತ್ರದ ಬಗ್ಗೆ ಹೇಳೋದು ಹೀಗೆ.ಇನ್ನುಳಿದಂತೆ ವಸಿಷ್ಠ ಸಿಂಹ, ಕೃತ್ತಿಕಾ, ರವೀಂದ್ರನಾಥ್, ರಾಜೇಶ್ ನಟರಂಗ, ಇತಿ ಆಚಾರ್ಯ, ಲಯೇಂದ್ರ, ತಬಲ ನಾಣಿ, ನವೀನ್, ರವಿಖಾಳೆಇನ್ನಷ್ಟು ಮಂದಿ ಉಳಿದ ತಾರಾಬಳಗದಲ್ಲಿ ನಟಿಸಿದ್ದಾರೆ. ರಾಹುಲ್ ಶ್ರೀವಾತ್ಸವ್ ಅವರ ಛಾಯಾಗ್ರಹಣ, ಅರ್ಜುನ್ ಜನ್ಯ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ, ಎಂ.ವಿ.ವಿ. ಸತ್ಯನಾರಾಯಣ್, ಎ.ಸಂಪತ್ ಕುಮಾರ್ ನಿರ್ಮಾಣ ಚಿತ್ರಕ್ಕಿದೆ.

ಸಾಗರ, ಬೆಂಗಳೂರು, ಮೈಸೂರು, ಮಡಿಕೇರಿ, ಊಟಿಯ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಡಬ್ಬಿಂಗ್ ಕೂಡ ಪೂರ್ಣಗೊಳಿಸಿ ಇನ್ನೊಂದು ವಾರದ ಒಳಗೆ ಹಾಡುಗಳ ಮೂಲಕ ಸದ್ದು ಮಾಡಲಿದೆ. ಅದೇನೇ, ಇದ್ರೂ ಸದ್ಯ ಟೀಸರ್ ಮೂಲಕ ಟಾಕ್ ಆಫ್ ದಿ ಟೌನ್ ಆಗಿರುವ ಕವಚ ಕರಾಮತ್ತು ಮುಂದಿನ ದಿನಗಳಲ್ಲಿ ಹೇಗಿರಲಿದೆ ಕಾದುನೋಡ್ಬೇಕಿದೆ.

 

LEAVE A REPLY

Please enter your comment!
Please enter your name here