Home District ಶಿವಮೊಗ್ಗದಲ್ಲಿ ಗರಿಗೆದರಿದ ರಾಜಕೀಯ.. “ಕೈ” ಹಿಡಿಯಲಿದ್ದಾರಾ ಮಧು ಬಂಗಾರಪ್ಪ..?

ಶಿವಮೊಗ್ಗದಲ್ಲಿ ಗರಿಗೆದರಿದ ರಾಜಕೀಯ.. “ಕೈ” ಹಿಡಿಯಲಿದ್ದಾರಾ ಮಧು ಬಂಗಾರಪ್ಪ..?

3020
0
SHARE

ಮಧು ಬಂಗಾರಪ್ಪ ಜೆಡಿಎಸ್ ಗೆ ಗುಡ್ ಬೈ ಹೇಳೋದು ಖಚಿತ ಎನ್ನಲಾಗುತ್ತಿದೆ. ಶಿವಮೊಗ್ಗ ಕಾಂಗ್ರೆಸ್ ಮುಖಂಡರು ಮಧು ಆಗಮನಕ್ಕೆ ಅಸ್ತು ಎಂದಿದ್ದಾರೆ. ಭವಿಷ್ಯದ ರಾಜಕೀಯ ನೆಲೆ ಕಂಡುಕೊಳ್ಳಲು ಸೂಕ್ತ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆಂಬ ಮಾತುಗಳಿಗೆ ರೆಕ್ಕೆಪುಕ್ಕಗಳು ಸಿಕ್ಕಂತಾಗಿದೆ. ಮಲೆನಾಡು ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿ ಗೆದರಿದೆ.

ಶಿವಮೊಗ್ಗ ರಾಜಕಾರಣವನ್ನು ಮೂರು ದಶಕಗಳ ಕಾಲ ತಮ್ಮ ಅಂಕೆಯಲ್ಲಿ ಇಟ್ಟುಕೊಂಡವರು ಮಾಜಿ ಸಿಎಂ ಎಸ್.ಬಂಗಾರಪ್ಪ. ತಮ್ಮ ಕಿರಿಯ ಪುತ್ರ ಮಧು ಬಂಗಾರಪ್ಪರಿಗೆ ರಾಜಕೀಯ ಆಶ್ರಯ ಕೊಡಿಸುವ ಉದ್ದೇಶದಿಂದ ತಮ್ಮ ಕೊನೇ ಕಾಲದಲ್ಲಿ ಕ್ಷ ಜೆಡಿಎಸ್ ಗೆ ಹೋದ್ರು. ಆದರೆ ಮಧುಬಂಗಾರಪ್ಪ ಶಾಸಕರಾಗುವುದರೊಳಗೆ ಬಂಗಾರಪ್ಪ ನಿಧನರಾದರು. ತಂದೆಯ ನಿಧನ ಬಳಿಕ ಒಮ್ಮೆ ಶಾಸಕರಾಗಿದ್ದ ಮಧು ಬಂಗಾರಪ್ಪ ಜೆಡಿಎಸ್ ನಲ್ಲಿ ತಮ್ಮ ರಾಜಕೀಯ ನೆಲೆಯನ್ನ ಗಟ್ಟಿ ಮಾಡಿಕೊಂಡಿದ್ದರು. 2018 ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಅನೀರಿಕ್ಷಿತ ಸೋಲು ಕಂಡಿದ್ದ ಮಧು ಬಂಗಾಪ್ಪ , ಅದಾದ ಬಳಿಕ ಲೋಕಸಭೆಗೆ ನಡೆದ ಉಪ ಚುನಾವಣೆ ಹಾಗೂ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು.

ಇದೀಗ ಮಧು ಬಂಗಾರಪ್ಪ ಜೆಡಿಎಸ್ ತೊರೆಯಲು ಸಜ್ಜಾಗಿದ್ದಾರೆ ಎನ್ನಲಾಗಿದ್ದು. ಮಲೆನಾಡು ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಬಿರುಸಿನಿಂದ ಕೂಡಿದೆ.ಸತತ 3 ಚುನಾವಣೆ ಸೋಲು ಹಾಗೂ ಜೆಡಿಎಸ್ ಪಕ್ಷದಲ್ಲಿ ಸಕ್ರೀಯವಾಗಿ ಭಾಗಿಯಾಗದೆ ಇರುವ ಕಾರಣ ಮಧು ಅವರು ಜೆಡಿಎಸ್ ನಲ್ಲಿ ಭೌತಿಕವಾಗಿ ಮಾತ್ರ ಇದ್ದು, ಮಾನಸಿಕವಾಗಿ ಕಾಂಗ್ರೆಸ್ ಕಡೆ ವಾಲಿದ್ದಾರೆ ಎನ್ನಲಾಗುತ್ತಿದೆ. ಮಧು ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಬರಲಿದ್ದಾರೆ ಎನ್ನುವ ಮಾತುಗಳು ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲಿ ಕೇಳಿಬರುತ್ತಿವೆ. ಇತ್ತ ಮಧುಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ವಿಷಯ ಚರ್ಚೆಗೆ ಬಂದಿಲ್ಲ ಎಂದಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.

ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ಅಷ್ಟಾಗಿ ಬೇರು ಬಿಟ್ಟಿಲ್ಲ. ಹೀಗಾಗಿ ಮಧು ಬೆಂಬಲಿಗರಿಂದ ಭವಿಷ್ಯದ ದೃಷ್ಠಿಯಿಂದ ಕಾಂಗ್ರೆಸ್ ಗೆ ಸೇರಿದ್ರೆ ಒಳಿತು ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಇತ್ತ ಕಾಂಗ್ರೆಸ್ನಲ್ಲಿದ್ದ ಸಹೋದರ ಕುಮಾರ ಬಂಗಾರಪ್ಪ ಬಿಜೆಪಿಯಿಂದ ಶಾಸಕರಾಗಿದ್ದರಿಂದ ಸೊರಬ ಕಾಂಗ್ರೆಸ್ ನಲ್ಲಿ ರಾಜಕೀಯ ನಿರ್ವಾತ ಸನ್ನಿವೇಶ ನಿರ್ಮಾಣವಾಗಿದೆ. ಇದಕ್ಕೆ ಪೂರಕ ಎಂಬಂತೆ ಮಧು ಬಂಗಾರಪ್ಪ ಸೊರಬದ ಕಾಂಗ್ರೆಸ್ ಮುಖಂಡರನ್ನು ಈಗಾಗಲೇ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸಹ ಮಧು ಕಾಂಗ್ರೆಸ್ ಗೆ ಬಂದ್ರೆ ಸ್ವಾಗತ ಎಂದು ಹೇಳಿದ್ದಾರೆ.

ಇನ್ನು ಮಧು ಬಂಗಾರಪ್ಪ ಪಕ್ಷ ಸೇರ್ಪಡೆ ಮಾಡಲು ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಉತ್ಸುಕರಾಗಿದ್ದಾರೆ. ಮಧು ಬಂಗಾರಪ್ಪ ಕಾಂಗ್ರೆಸ್ ಸೇರಿದ್ರೆ ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ಮಿಂಚಿನ ಸಂಚಾರವಾಗುತ್ತೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here