Home Cinema ಶಿವ.. ಶಿವ.. ವಿಜಯಲಕ್ಷ್ಮೀಗೆ ಆ ನಾಯಕನಿಂದಾಯ್ತಾ ಲೈಂಗಿಕ ಕಿರುಕುಳ..? ಸಹಾಯದ ನೆಪದಲ್ಲಿ ಆತ ಮಾಡಿದ್ದ ಕೆಲ್ಸಕ್ಕೆ...

ಶಿವ.. ಶಿವ.. ವಿಜಯಲಕ್ಷ್ಮೀಗೆ ಆ ನಾಯಕನಿಂದಾಯ್ತಾ ಲೈಂಗಿಕ ಕಿರುಕುಳ..? ಸಹಾಯದ ನೆಪದಲ್ಲಿ ಆತ ಮಾಡಿದ್ದ ಕೆಲ್ಸಕ್ಕೆ ವಿಜಯಲಕ್ಷ್ಮೀ ತಳಮಳ..!?

3984
0
SHARE

ಅರೆರೆ. ಇದೆನಪ್ಪ .ದಿನೇದಿನೇ ನಟಿ ವಿಜಯಲಕ್ಷ್ಮೀ ಹೆಸರು ಚಾಲ್ತಿಯಲ್ಲಿರೋದು ನೋಡಿ ಎಲ್ಲರೂ ವಿಜಯಲಕ್ಷ್ಮಿ ಹೆಸರಿನ ಜಪಮಾಡೋ ಹಾಗಾಗಿದೆಯಲ್ಲ ಅಂತ ಯೋಚನೆ ಮಾಡ್ತಾ ಇದ್ದೀರಾ?

ಪರಿಸ್ಥಿತಿ ಅನ್ನೋದು ಮನುಷ್ಯನನ್ನ ಯಾವ ಹಂತಕ್ಕೆ ತೆಗೆದುಕೊಂಡು ಬರುತ್ತೆ ಅನ್ನೋದಕ್ಕೆ ವಿಜಯಲಕ್ಷ್ಮಿ ಲೈಫ್ ಹಿಸ್ಟರಿಯೇ ಒಂದು ಗುಡ್ ಎಕ್ಸಾಂಪಲ್. ಚಿತ್ರರಂಗದಲ್ಲಿ ಒಂದು ಟೈಮ್‌ನಲ್ಲಿ ಟಾಪ್ ನಟಿಯರ ಸ್ಥಾನದಲ್ಲಿ ಮಿಂಚ್ತಿದ್ದ ವಿಜಯಲಕ್ಷ್ಮಿ ಆಮೇಲೆ ತಮ್ಮ ವೈಯಕ್ತಿಕ ಕಷ್ಟಗಳಿಂದಲೇ ಪಾತಾಳ ಸೇರಿಕೊಂಡಿದ್ದು ನಿಜಕ್ಕೂ ವಿಷಾದನೀಯ. ಸಕ್ಸಸ್ ಕಳೆದುಕೊಂಡ ಮೇಲಿನ ವಿಜಯಲಕ್ಷ್ಮೀ ಕಂಡಿಶನ್ ಯಾರಿಗೂ ಬೇಡ ಬಿಡಿ.’ಸೂರ್ಯವಂಶ’ ಸೇರಿದಂತೆ ನಲವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ವಿಜಯಲಕ್ಷ್ಮಿ ಸಿನಿಮಾರ್ಕೆಟ್ ಬೇರೆನೇ ಇತ್ತು ಕಣ್ರೀ. ಅವಕಾಶಗಳು ಸಿಕ್ತಿದ್ದಂತೆ ಕ್ರಮೇಣ ತೆಲುಗು ಹಾಗೂ ತಮಿಳಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾದ ವಿಜಯಲಕ್ಷ್ಮಿಗೆ ನಂತರ ಚಾನ್ಸ್‌ಗಳು ಸಿಗಲೇ ಇಲ್ಲ. ಸಿನಿಮಾ ಇಲ್ಲದೇ ಮನೆಯಲ್ಲಿ ಖಾಲಿ ಕೂತ ವಿಜಯಲಕ್ಷ್ಮಿಗೆ ಪರ್ಸನಲ್ ಲೈಫ್ ಕೂಡ ಕೈ ಕೊಡ್ತು. ಅತ್ತ ಸಿನಿಮಾನೂ ಇಲ್ಲ, ಇತ್ತ ನೆಮ್ಮದಿಯೂ ಇಲ್ಲ ಎನ್ನುವ ಪರಿಸ್ಥಿತಿಗೆ ವಿಜಯಲಕ್ಷ್ಮಿ ಬಂದುಬಿಟ್ರು.

ತಮ್ಮ ಬದುಕನ್ನ ಸರಿಪಡಿಸಿಕೊಳ್ಳೊಕೆ ವಿಜಯಲಕ್ಷ್ಮಿ ಪಟ್ಟಪಾಡು ಅಷ್ಟಿಷ್ಟಲ್ಲ. ಬಾಯಿಬಿಟ್ಟು ಮಾಧ್ಯಮಾಗಳ ಮುಂದೆ ’ನನಗೆ ಸಿನಿಮಾದಲ್ಲಿ ಪಾತ್ರ ಕೊಡಿ, ನಾನು ಬದುಕಬೇಕು’ ಎನ್ನುವ ವಿಜಯಲಕ್ಷ್ಮಿ ಕಣ್ಣಿರು ನೋಡೊಕೆ ಯಾರಿಂದಲೂ ಸಾಧ್ಯವಾಗಲಿಲ್ಲ.ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ವಿಜಯಲಕ್ಷ್ಮೀ ಹೆಸರು ಓಡಾಡಿದ್ದು ಆಶ್ಚರ್ಯಕರವೇ ಸರಿ. ಯಾಕಂದ್ರೆ ವಿಜಯಲಕ್ಷ್ಮೀ ಒಂದು ಕಾಲದ ಸ್ಟಾರ್‌ನಟಿ. ಈಗ ಸದ್ಯಕ್ಕೆ ಸೂಕ್ತ ಸಿನಿಮಾಗಳ ಅವಕಾಶಗಳ ಕೊರತೆಯಿಂದ ಸಿಕ್ಕಾಪಟ್ಟೆ ನೋವು ಅನುಭವಿಸಿ ಆಸ್ಪತ್ರೆಗೆ ಸೇರಿ ಸುದ್ಧಿಯಾಗಿಬಿಟ್ರು. ಈಗೇನೂ ಸಿನಿಮಾ ಮಾಡದೇ ಹೋದ್ರು ತಮ್ಮ ವಿಡಿಯೋಗಳ ಮೂಲಕವೇ ಫೇಮಸ್ ಆಗಿರುವ ವಿಜಯಲಕ್ಷ್ಮೀ ಬಾಳಿನಲ್ಲಿ ಹೊಸ ಸುನಾಮಿ ಎದ್ದಿದೆ. ವಿಡಿಯೋ ಮಾಡಿ ಗೋಳೊ ಎಂದಿದ್ದ ವಿಜಯಲಕ್ಷ್ಮಿ, ಸ್ಯಾಂಡಲ್‌ವುಡ್‌ನ ಘಟನುಘಟಿಗಳಾದ ಪುನೀತ್,ದರ್ಶನ್,ಶಿವರಾಜ್‌ಕುಮಾರ್ ಹಾಗೂ ಯಶ್‌ಗೂ ತಮಗೆ ಸಹಾಯ ಮಾಡುವಂತೆ ಕೈ ಮುಗಿದಿದ್ರು. ಇಷ್ಟುದಿನಗಳ ಕಾಲ ನನ್ನ ಆರೋಗ್ಯ ಸರಿಯಿಲ್ಲ, ನಾನು ಕನ್ನಡ ಚಿತ್ರರಂಗದಲ್ಲಿ ಅನಾಥಳಾಗಿದ್ದೇನೆ.

ನನಗೆ ಯಾರಾದ್ರೂ ಸಹಾಯ ಮಾಡಿ ಅಂತ ಕಣ್ಣಿರಿಟ್ಟ ವಿಜಯಲಕ್ಷ್ಮೀಗೆ ಸ್ಯಾಂಡಲ್‌ವುಡ್‌ನ ಕೆಲವು ನಟರಿಂದ ಆರ್ಥಿಕ ಸಹಾಯ ಸಿಕ್ಕಿದ್ದು ನಿಜಕ್ಕೂ ಒಂದು ಆರೋಗ್ಯಕರ ಡೆವೆಲಪ್‌ಮೆಂಟ್.ಆದರೆ ಎಲ್ಲಿ ಒಳ್ಳೆದು ಇರುತ್ತೊ ಅಲ್ಲಿ ಕೆಟ್ಟದ್ದು ತನ್ನ ಪಾತ್ರ ತೋರಿಸುತ್ತೆ ಅನ್ನೊದಕ್ಕೆ ವಿಜಯಲಕ್ಷ್ಮಿ ಕೇಸ್ ಕೂಡ ಹೊರತಾಗಿಲ್ಲ. ಯಾವಾಗ ವಿಜಯಲಕ್ಷ್ಮೀ ಆಸ್ಪತ್ರೆಗೆ ಸೇರಿಕೊಂಡ್ರೋ ಆಗ ಅನುಕಂಪದ ಮಹಾಪೂರವೇ ಹರಿದುಬಂತು. ಚಿಕಿತ್ಸೆಗೆ ಕಿಚ್ಚ ಸುದೀಪ್ ೧ ಲಕ್ಷ ಕೊಟ್ಟು ವಿಜಯಲಕ್ಷ್ಮೀ ಕಣ್ಣೀರನ್ನ ಕೊಂಚ ಕಮ್ಮಿ ಮಾಡಿದ್ರು. ಅದರ ಬೆನ್ನಲ್ಲೇ ಈ ರವಿಪ್ರಕಾಶ್ ಎನ್ನುವ ವ್ಯಕ್ತಿ ಕೂಡ ವಿಜಯಲಕ್ಷ್ಮೀಗೆ ಒಂದು ಲಕ್ಷ ಕೊಟ್ಟಿದ್ರರಂತೆ. ಆದರೆ ಆ ಸಹಾಯವೇ ಈಗ ದೊಡ್ಡ ಕಾಂಟ್ರವರ್ಸಿಗೆ ತುತ್ತಾಗಿಹೋಗಿದೆ. ’ರವಿಪ್ರಕಾಶ್ ನನಗೆ ಸಹಾಯ ಮಾಡೋ ನೆಪದಲ್ಲಿ ಸುಮ್ಮನೇ ತೊಂದರೆ ಕೊಡ್ತಿದಾರೆ. ನನ್ನನ್ನ ಬಳಸಿಕೊಳ್ಳೊದಕ್ಕೆ ಬಂದ್ರೆ ಪರಿಣಾಮ ನೆಟ್ಟಗಿರಲ್ಲ. ಸುದೀಪ್ ಕೂಡ ನನಗೆ ೧ ಲಕ್ಷ ಕೊಟ್ಟಿದಾರೆ .ಹಾಗಂತ ಅವರೇನು ನನ್ನ ತಲೆ ಮೇಲೆ ಕೂತಿದಾರ’ ಎಂದು ರವಿಪ್ರಕಾಶ್‌ಗೆ ಚಳಿ ಬಿಡಿಸಿದ್ದಾರೆ ವಿಜಯಲಕ್ಷ್ಮೀ.ಹಾಗಂತ ವಿಜಯಲಕ್ಷ್ಮಿ ವಿಡಯೋ ಮಾಡಿ ಸುಮ್ಮನಾಗಿಲ್ಲ.

ನಟ ರವಿಪ್ರಕಾಶ್ ವಿರುದ್ಧ ಪುಟ್ಟೇನಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಲ್ಯ ಆಸ್ಪತ್ರೆಯಲ್ಲಿ ವಿಜಯಲಕ್ಷ್ಮಿ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದಾಗ ರವಿಪ್ರಕಾಶ್ ಒಂದು ಲಕ್ಷ ಕೊಟ್ಟಿದ್ರಂತೆ. ಅಲ್ಲದೇ ಇದನ್ನೇ ಯೂಸ್ ಮಾಡಿಕೊಂಡು ಪದೇಪದೇ ಕಾಲ್ ಮಾಡಿ, ಮೆಸೆಜ್ ಮಾಡಿ ಫುಲ್ ಕ್ವಾಟ್ಲೆ ಕೊಡ್ತಿದ್ರಂತೆ ಈ ರವಿಪ್ರಕಾಶ್. ಆರೋಗ್ಯ ವಿಚಾರಿಸುವ ನೆಪದಲ್ಲಿ ಆಗಾಗ ಬಂದು ರವಿಪ್ರಕಾಶ್ ವಿಜಯಲಕ್ಷಮೀಗೆ ದರ್ಶನ ಕೊಡ್ತಿದ್ರಂತೆ. ಆಗ ವಿಜಯಲಕ್ಷ್ಮಿ ನನಗೆ ಇದೆಲ್ಲ ಸುತಾರಂ ಇಷ್ಟವಾಗೋಲ್ಲ. ನನ್ನನ್ನ ಮಿಸ್‌ಯೂಸ್ ಮಾಡಿಕೊಳ್ಳೊ ಐಡಿಯಾ ಏನಾದ್ರೂ ನಿಮ್ಮ ತಲೆಯಲ್ಲಿದ್ರೆ ಈ ಕೂಡಲೇ ನಿಮ್ಮ ತಲೆಯಿಂದ ತೆಗೆದುಹಾಕಿ ಅಂತ ರವಿಪ್ರಕಾಶ್‌ಗೆ ವಿಜಯಲಕ್ಷ್ಮಿ ಬಿಸಿ ಮುಟ್ಟಿಸಿದ್ದಾರೆ. ’ಇನ್ನು ಇಂತಹ ಕೆಟ್ಟ ಉದ್ದೇಶಗಳನ್ನ ಇಟ್ಕೊಂಡು ಸಹಾಯ ಮಾಡೋದೇ ಆದ್ರೆ ನನಗೆ ಯಾರ ಹೆಲ್ಪ್ ಬೇಕಾಗೇಇಲ್ಲ. ರವಿಪ್ರಕಾಶ್ ಒಂದು ಲಕ್ಷ ಕೊಟ್ಟು ನನ್ನ ಪ್ರಾಣ ತೆಗಿತಿದಾನೆ. ಇಂತಹ ಜನಗಳನ್ನ ತುಂಬಾ ನೋಡಿದ್ದೀನಿ. ನಾನು ಕೂಡ ಈ ಮಣ್ಣಿನ ಹುಡುಗಿ. ನನ್ನ ಜೊತೆ ಅಸಭ್ಯವಾಗಿ ನಡೆದುಕೊಳ್ಳೊ ಪ್ಲಾನ್ ಮಾಡಿದ್ರೆ ಇಡೀ ಕರ್ನಾಟಕ ನನ್ನ ಸಪೋರ್ಟ್‌ಗೆ ಬರುತ್ತೆ. ರವಿಪ್ರಕಾಶ್ ನನ್ನನ್ನ ಸುಮ್ಮನೇ ಕೆಣಕುತ್ತಿದ್ದಾನೆ.

ಒಂದು ಲಕ್ಷ ಕೊಟ್ಟು ನಾನು ಆತ ಹೇಳಿದಹಾಗೇ ಕೇಳಬೇಕು ಅಂದ್ರೆ ಚಪ್ಪಲಿ ತೆಗೋಂಡು ಹೊಡಿತೀನಿ. ಈ ರೀತಿಯ ಬೆಳವಣಿಗೆಗಳು ನನಗೆ ಇಷ್ಟವಾಗೋಲ್ಲ. ಇನ್ನು ಮೂರೇ ದಿನಗಳಲ್ಲಿ ಚಿಕಿತ್ಸೆ ಪಡೆದು ಆಚೆ ಬರ‍್ತೀನಿ. ಆಗ ರವಿಪ್ರಕಾಶ್‌ಗೆ ತಕ್ಕ ಪಾಠ ಕಲಿಸ್ತೀನಿ’ ಅಂತ ರವಿಪ್ರಕಾಶ್‌ಗೆ ವಾರ್ನಿಂಗ್ ಕೊಟ್ಟಿದಾರೆ ವಿಜಯಲಕ್ಷ್ಮಿ.ಇಷ್ಟೆಲ್ಲಾ ಪುರಾಣಗಳು ನಡೆದ ಮೇಲೆ ವಿಜಯಲಕ್ಷ್ಮಿ ಮೂರು ಆಸ್ಪತ್ರೆಗಳನ್ನ ಚೇಂಜ್ ಮಾಡಿದಾರೆ. ಸದ್ಯದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗ್ತೀರೊ ವಿಜಯಲಕ್ಷ್ಮಿ ಕಾನೂನು ಹೋರಾಟಕ್ಕೂ ರೆಡಿಯಾಗಿದ್ದಾರಂತೆ. ಅದೇನೋ ಹೇಳ್ತಾರಲ್ಲ, ಕರೆದು ಕೇರದಲ್ಲಿ ಹೊಡೆಸಿಕೊಡ್ರು ಅಂತ, ಹಾಗೇ ಈ ಕಥೇಯಲ್ಲೂ ಯಾರು ಪ್ರಾಮಾಣಿಕರು ಅಂತ ಪತ್ತೆ ಹಚ್ಚೊದು ಪೋಲಿಸರಿಗಿರೋ ಮುಂದಿನ ಸವಾಲು. ಈ ಎಲ್ಲ ಘಟನೆಗಳಿಂದ ವಿಜಯಲಕ್ಷ್ಮಿ ಹಾಗೂ ರವಿಪ್ರಕಾಶ್‌ಗೆ ಬ್ಯಾಡ್ ನೇಮ್ ಬಂದಿರೋದಂತೂ ಇಬ್ಬರಿಗೂ ಆಗಿರೋ ದೊಡ್ಡ ನಷ್ಟನೇ ಎನ್ನಬಹುದು. ವಿಜಯಲಕ್ಷ್ಮಿ ಆಸ್ಪತ್ರೆಯಂದ ಆಚೆ ಬಂದಮೇಲೆ ಯಾವ ಬಾಂಬ್ ಹಾಕ್ತಾರೆ ಎನ್ನುವುದಷ್ಟೇ ಸದ್ಯದ ಕ್ಯುರ‍್ಯಸಿಟಿ.

ನಾಗಮಂಡಲದ ನಾಗಕನ್ನಿಕೆಯಂತಾಗಿರುವ ವಿಜಯಲಕ್ಷ್ಮೀ ಸದ್ಯ ರವಿಪ್ರಕಾಶ್ ಎಂಬ ನಟನ ಮೇಲೆ ವಿಷಕಾರ್ತಿದ್ದಾರೆ. ಇಷ್ಟು ದಿನ ನಮ್ಮಗೆ ಹಣದ ಅವಶ್ಯಕತೆ ಇದೆ ಎಂದು ವಿಡಿಯೋ ಮುಂದೆ ಕಣ್ಣಿರುಡುತ್ತಿದ್ದ ವಿಜಯಲಕ್ಷ್ಮೀ ಸಹಾಯ ಮಾಡಿರುವ ನಟ ರವಿಪ್ರಕಾಶ್ ಮೇಲೆ ವಿರುದ್ದ ತಿರುಗಿ ಬಿದ್ದಿದ್ದು. ಸ್ಯಾಂಡಲ್‌ವುಡ್‌ನಲ್ಲಿ ಅಚ್ಚರಿ ಬೆಳವಣಿಗೆಗೆ ಕಾರಣರಾಗಿದ್ದಾರೆ.ಯಸ್.. ಇತ್ತೀಚೆಗೆ ವಿಜಯಲಕ್ಷ್ಮೀ ಪರಿಸ್ಥಿತಿ ನೋಡಿ ಮರುಗಿನ ಎಷ್ಟೋ ಮಂದಿಯಲ್ಲಿ ಮೂಲತಃ ನಟರಾಗಿರುವ ರವಿಪ್ರಕಾಶ್ ಅವರು ಕೂಡ ಮರುಗಿದ್ರು. ಮೇಘವೇ ಮೇಘವೇ, ರಮ್ಯ ಚೈತ್ರ ಕಾಲ, ಡೈರೆಕ್ಟರ್ ಸ್ಪೆಷಲ್ ಸಿನಿಮಾಗಳಲ್ಲಿ ರವಿ ಪ್ರಕಾಶ್ ನಟಿಸಿದ್ದಾರೆ. ರವಿಪ್ರಕಾಶ್ ಒಬ್ಬ ನಟಿ ನೋವಿನಲ್ಲಿರುವ ಸಂಗತಿ ತಿಳಿದ ಬಳಿಕ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯಲಕ್ಷ್ಮೀ ಅವರ ಆರೋಗ್ಯ ವಿಚಾರಿಸಿಲು ತೆರಳಿದ್ರು. ಅಸಹಾಯಕ ಪರಿಸ್ಥಿತಿಯಲ್ಲಿದ್ದ ವಿಜಯಲಕ್ಷ್ಮೀಯವರಿಗೆ ಒಂದು ಲಕ್ಷ್ಮ ಹಣ, ಬಟ್ಟೆ, ಅಗತ್ಯವಾದ ಎಲ್ಲಾ ವಸ್ತುಗಳನ್ನು ಪೂರೈಸಿದ್ರು. ಇಷ್ಟೆಲ್ಲಾ ಸಹಾಯ ಮಾಡುವಾಗ ರವಿಪ್ರಕಾಶ್ ಜೊತೆಗೆ ತಂಗಿ ಸತ್ಯ ಮತ್ತು ಅವರ ಗಂಡ ಕೂಡ ತೆರಳಿದ್ದು. ಇಷ್ಟೆಲ್ಲಾ ಸಹಾಯ ಮಾಡಿ ಅವರ ನೆರವಿಗೆ ನಿಂತವರ ಮೇಲೆ ವಿಜಯಲಕ್ಷ್ಮೀ ಮತ್ತು ಅವರ ಅಕ್ಕ ಉಷಾದೇವಿ ತಿರುಗಿ ಬಿದಿದ್ದು. ನಟನ ಬೆನ್ನಿಗೆ ಬೇತಾಳದಂತೆ ಕಾಡೋದಕ್ಕೆ ಶುರು ಮಾಡಿದ್ದಾರೆ.

ಈಗ ವಿಜಯಲಕ್ಷ್ಮೀಗೆ ಮಾನಸಿಕ ಹಿಂಸೆ ನೀಡಿರುವ ಆರೋಪವನ್ನು ರವಿ ಪ್ರಕಾಶಸ್ ಸದ್ಯ ಎದುರಿಸುತ್ತಿದ್ದಾರೆ. ಹೌದು.. ವಿಜಯಲಕ್ಷ್ಮೀ ಸದ್ಯ ರವಿಪ್ರಕಾಶ್ ಮೇಲೆ ಮಾನಸಿಕ ಕಿರುಕುಳದ ಆರೋಪ ಮಾಡ್ತಿದ್ದಾರೆ. ಹಣಕಾಸಿನ ನೆರವು ನೀಡುವ ನೆಪದಲ್ಲಿ ಮಾನಸಿಕ ಕಿರುಕುಳ ನೀಡ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದು. ಪದೇ ಪದೇ ಪೋನ್ ಮಾಡಿ ಆರೋಗ್ಯ ವಿಚಾರಿಸುವುದು. ತಮ್ಮ ತಾಯಿಯ ಬಗ್ಗೆ ವಿಚಾರಿಸುವುದು ಕಿರಿಕಿರಿ ಉಂಟು ಮಾಡ್ತಿದೆ ಎಂದು ಆರೋಪಿಸಿರುವ ವಿಜಯಲಕ್ಷ್ಮೀ ರವಿಪ್ರಕಾಶ್ ಮೂಲಕ ಕಾನೂನಿನ ಚಾಟಿ ಬೀಸಿದ್ದಾರೆ. ಅಂದಹಾಗೆ, ವಿಜಯಲಕ್ಷ್ಮಿ ಮಾಡಿರುವ ಆರೋಪಕ್ಕೆ ಸ್ಪಷ್ಟನೆ ನೀಡಿರುವ ರವಿಪ್ರಕಾಶ್ ಮಾಧ್ಯಮಗಳಲ್ಲಿ ನಟಿ ವಿಜಯಲಕ್ಷ್ಮೀ ಅವರ ಸುದ್ದಿ ಬಂದಿದ್ದು ಕೇಳಿ ಅವರಿಗೆ ಸಹಾಯ ಮಾಡಲು ಬಂದೆ ಎನ್ನವ ರವಿಪ್ರಕಾಶ್. ಅವರ ಚಿಕಿತ್ಸೆಗೆ ಒಂದು ಲಕ್ಷ ಹಣ ಸಹಾಯ ಮಾಡಿದ್ದು. ಬಟ್ಟೆ ,ಊಟ, ಮಾತ್ರೆ ಎಲ್ಲವನ್ನು ಮಾನವೀಯತೆಯ ದೃಷ್ಟಿಯಿಂದ ನೀಡಿದೆ ಎಂದಿದ್ದಾರೆ. ಅಲ್ಲದೆ ವಿಜಯಲಕ್ಷ್ಮೀ ಮಾಡಿರುವ ಗಂಭೀರ ಆರೋಪಕ್ಕೆ ಸ್ಪಷ್ಟನೆ ನೀಡಿರುವ ರವಿಪ್ರಕಾಶ್ ತಮ್ಮ ಬಳಿಯಲ್ಲಿದ್ದ ಮೆಸೇಜ್ ಸ್ಕ್ರೀನ್ ಶಾಟ್ಸ್ ಮತ್ತು ಆಡಿಯೋ ರೆಕಾರ್ಡ್‌ಗಳನ್ನು ರಿಲೀಸ್ ಮಾಡಿದ್ದು. ವಿಜಯಲಕ್ಷ್ಮೀ ಅವರು ನಮಗೆ ಸಿನಿಮಾ ಸ್ಟೈಲ್‌ನಲ್ಲಿ ಕುಂತಂತ್ರ ಮಾಡಿದ್ದಾರೆ.

ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ತಮ್ಮ ವಿರುದ್ದ ಬಂದ ಆರೋಪವನ್ನು ತಳ್ಳಿ ಹಾಕಿದ್ದಾರೆ. ಇನ್ನು ವಿಜಯಲಕ್ಷ್ಮೀ ಅವರು ಮಾಡ್ತಿರುವ ಆರೋಪಗಳಿಗೆ ಆಡಿಯೋ ರೆಕಾರ್ಡ್ ಬಿಡುಗಡೆ ಮಾಡಿರುವ ರವಿಪ್ರಕಾಶ್.. ತಮ್ಮ ಮತ್ತು ವಿಜಯಲಕ್ಷ್ಮೀ ಅಕ್ಕ ಉಷಾದೇವಿ ಸಂಭಾಷಣೆಯನ್ನು ರಿಲೀಸ್ ಮಾಡಿದ್ದಾರೆ. ಇನ್ನು ವಿಜಯಲಕ್ಷ್ಮೀ ಅವರನು ಆಸ್ಪತ್ರೆಯಲ್ಲಿ ಎರಡು ದಿನದಲ್ಲಿ, ಮೂರು ಬಾರಿ ಮಾತ್ರ ಮಾತನಾಡಿದ್ದು ಎನ್ನುವ ರವಿಪ್ರಕಾಶ್. ವಿಜಯಲಕ್ಷ್ಮೀಯವರು ಆಸ್ಪತ್ರೆಯಲ್ಲಿ ನಮ್ಮ ನೆರವಿಗೆ ಬರುವಂತೆ ಮನವಿ ಮಾಡಿಕೊಂಡಿದ್ರು. ಅಲ್ಲದೆ ನಮ್ಮ ತಂದೆಯನ್ನು ನೋಡಿದಂತೆ ಆಯ್ತು ಎನ್ನುವ ಬಣ್ಣದ ಮಾತುಗಳನ್ನಾಡಿದ್ರು. ಅವರು ಹಾಡಿನ ಮಾತಿನಲ್ಲಿ ನನಗೆ ಮೋಸದ ಕಾಣಿಸಲಿಲ್ಲ.ಆಗಾಗಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸಹಾಯ ಮಾಡಿದೆ ಎನ್ನುವುದು ರವಿಪ್ರಕಾಶ್ ವಿಜಯಲಕ್ಷ್ಮೀ ಆರೋಪದಿಂದ ಬೇಸರಗೊಂಡಿದ್ದಾರೆ. ಈಗ ರವಿಪ್ರಕಾಶ್ ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡಿರುವ ವಿಜಯಲಕ್ಷ್ಮೀ. ರವಿಪ್ರಕಾಶ್ ಅವರಿಗೆ ಸೇರಬೇಕಾದ ಕೆಲ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದು. ಯಾವುದೇ ಸೂಚನೆ ನೀಡದೆ ಬೇರೆ ಆಸ್ಪತ್ರೆಗೆ ಶಿಫ್ಟ್ ಆಗಿರುವುದು ಅವರ ಸಂಸ್ಕೃತಿಗೆ ತೋರಿಸುತ್ತದೆ ಎಂದಿದ್ದು. ಸದ್ಯ ಅವರು ಪುಟ್ಟೇನಹಳ್ಳಿ ಪೋಲೀಸರ ಬಳಿಯಲ್ಲಿ ನನ್ನ ಬಗ್ಗೆ ಈ ರೀತಿ ಆರೋಪ ಮಾಡಿದ್ದು. ಒಂದು ವೇಳೆ ಕಂಪ್ಲೇಟ್ ಕೊಟ್ರೆ ನಾನು ಕಾನೂನು ರೀತಿಯ ಕ್ರಮ ಕೈಗೊಳ್ಳಲು ಸಿದ್ದರಾಗಿರುವುದಾಗಿ ತಿಳಿಸಿದ್ರು.

ಇನ್ನು, ಅಣ್ಣನ ಜೊತೆಗೆ ವಿಜಯಲಕ್ಷ್ಮೀ ಅವರ ಸಹಾಯಕ್ಕೆ ಅಂತ ಹೋಗಿದ್ದ ರವಿಪ್ರಕಾಶ್ ತಂಗಿ ಸತ್ಯ, ಸದ್ಯ ಅಣ್ಣನ ಮೇಲೆ ಆರೋಪ ಕೇಳಿ ಶಾಕ್ ಆಗಿದ್ದಾರೆ. ಮೊದಲಿಗೆ ವಿಜಯಲಕ್ಷ್ಮಿ ಅವರನ್ನು ಭೇಟಿಯಾಗಿ ಒಂದೇ ಘಂಟೆಯಲ್ಲಿ ಅವರು ನಡೆದುಕೊಂಡ ರೀತಿಯೇ ನನಗೆ ಅನುಮಾನ ಮೂಡಿಸಿತ್ತು ಎನ್ನುವ ರವಿ ತಂಗಿ ಸತ್ಯ. ನಮ್ಮ ಅಣ್ಣನಿಗೆ ವಿಜಯಲಕ್ಷ್ಮೀ ಮತ್ತು ಅವರ ಅಕ್ಕ ಉಷಾ ದೇವಿಯವರು ಮನೆ ಮಾಡಿಕೊಡಿ, ಟ್ರಿಪ್‌ಗೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ರು. ಆಗ ನನಗೆ ಆಶ್ಚರ್ಯವಾಗಿತ್ತು. ಈಗ ನೋಡಿದ್ರೆ ನಮ್ಮ ಅಣ್ಣನ ಮೇಲೆ ಆರೋಪ ಮಾಡಿರುವುದು ನಮ್ಮ ಮನಸ್ಸಿಗೆ ಬೇಸರವಾಗ್ತಿದೆ ಅಂತಾರೆ ಕಿಡಿಕಾರಿದ್ದಾರೆ. ಸದ್ಯ ಆಸ್ಪತ್ರೆಯಿಂದ ಆಸ್ಪತ್ರೆಗೆ ಶಿಫ್ಟ್ ಆಗ್ತಿರುವ ವಿಜಯಲಕ್ಷ್ಮೀ ತಮ್ಮ ಗೋಳಿನ ಕಥೆಕೇಳಿದ ಮಂದಿ ಲಕ್ಷ ಲಕ್ಷ ಹಣದ ಹೊಳೆ ತಮ್ಮ ಅಕೌಂಟ್‌ಗೆ ಬಂದು ಬೀಳಬಹುದೆನ್ನುವ ಊಹೆ ಇಟ್ಟುಕೊಂಡಿದ್ರು. ಆದ್ರೆ ಅದ್ಯಾವುದು ಅವರು ಅಂದುಕೊಂಡಂತೆ ಆಗದೆ ಇದ್ದು. ಸದ್ಯ ಜಯದೇವ ಆಸ್ಪತೆಯಿಂದ್ಲೂ ಶಿಫ್ಟ್ ಆಗಿದ್ಧಾರೆ. ಸದ್ಯ ಬನ್ನೇರು ಘಟ್ಟದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಯುತ್ತಿದ್ಧಾರೆ. ಈಗೆ ಕೆಲದಿನಗಳಿಂದ ಆರೋಗ್ಯವ ವಿಚಾರದಿಂದ ಸಿನಿಪ್ರೇಕ್ಷಕರ ಮನಸ್ಸಿನಲ್ಲಿ ಕನಿಕರ ಮೂಡಿಸಿದ್ದ ನಾಗಮಂಡಲದ ಚೆಲುವೆ ಸದ್ಯ ರವಿಪ್ರಕಾಶ್ ಮೇಲೆ ಮಾಡಿರುವ ಆರೋಪದಿಂದ ವಿಜಯಮೇಲಿನ ಸಿಂಪತಿ ಕಡಿಮೆ ಮಾಡುವಂತೆ ಮಾಡಿದ್ದು. ತಾವು ಮಾಡಿರುವ ಆರೋಪದಿಂದ ಹಿಂದೆ ಸರಿಯುತ್ತಾರಾ ಅಥವ ಕಾನೂನು ಪ್ರಕಾರ ರವಿಪ್ರಕಾಶ್ ಕ್ರಮ ಕೈಗೊಳ್ತಾರಾ ಕಾದುನೋಡುವಂತೆ ಮಾಡಿದೆ.

LEAVE A REPLY

Please enter your comment!
Please enter your name here