Home District ಶಿವ ಸಾನ್ನಿಧ್ಯದಲ್ಲಿ ಶಿವರಾತ್ರಿಯಂದೇ ಅಪಚಾರ, ಅಪಶಕುನ..! ಉತ್ಸವ ನಡೀತಿದ್ದಾಗಲೇ ನೆಲಕ್ಕೆ ಬಿದ್ದ ದೇವರ ಮೂರ್ತಿ..!

ಶಿವ ಸಾನ್ನಿಧ್ಯದಲ್ಲಿ ಶಿವರಾತ್ರಿಯಂದೇ ಅಪಚಾರ, ಅಪಶಕುನ..! ಉತ್ಸವ ನಡೀತಿದ್ದಾಗಲೇ ನೆಲಕ್ಕೆ ಬಿದ್ದ ದೇವರ ಮೂರ್ತಿ..!

1058
0
SHARE

ಪುತ್ತೂರು ಮಹಾಲಿಂಗೇಶ್ವರನಂದ್ರೆ ಹತ್ತೂರಿಗೆ ಒಡೆಯ. ಏನೇ ಇಷ್ಟಾರ್ಥ ಬೇಡಿಕೊಂಡರೂ ಇಲ್ಲ ಎನ್ನದೆ ಕರುಣಿಸುವ ಕರುಣಾ ಮೂರ್ತಿ. ಇಂಥ ಶಿವ ಸಾನ್ನಿಧ್ಯದಲ್ಲಿ ಅಪಚಾರವೊಂದು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮೊನ್ನೆ ಶಿವರಾತ್ರಿಯಂದು ಘಟನೆ ನಡೆದಿದ್ದು, ದೇವಸ್ಥಾನದ ಆಡಳಿತ ಮಂಡಳಿ ಈ ವಿಚಾರವನ್ನು ಸದ್ದಿಲ್ಲದೆ ಮುಚ್ಚಿ ಹಾಕಿದೆ.ಹೌದು… ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಾಲಿಂಗೇಶ್ವರ ಸಾನ್ನಿಧ್ಯದಲ್ಲಿ ಅಪಚಾರ ನಡೆದುಹೋಗಿದೆ. ಶಿವನ ಜಾಗರಣೆಯ ಸಂದರ್ಭದಲ್ಲಿ ರಾತ್ರಿ ಬಲಿ ಉತ್ಸವ ನಡೆದಿದ್ದು, ಅರ್ಚಕರು ತಲೆಯಲ್ಲಿ ಹೊತ್ತು ಸವಾರಿ ಹೊರಟಿದ್ದಾಗ ಹಠಾತ್ತಾಗಿ ದೇವರ ಮೂರ್ತಿ ನೆಲಕ್ಕೆ ಉರುಳಿ ಬಿದ್ದಿದೆ.

ನಾಲ್ಕು ದಿನಗಳ ಹಿಂದೆ ಘಟನೆ ನಡೆದಿದ್ದು, ದೇವಸ್ಥಾನದ ಆಡಳಿತ ಮಂಡಳಿ ಪ್ರಕರಣವನ್ನ ಮುಚ್ಚಿ ಹಾಕಿದೆ.ಬಲಿ ಉತ್ಸವವನ್ನು ಫೇಸ್ಬುಕ್ ಲೈವ್ ನೀಡುತ್ತಿದ್ದ ಕಾರಣ ಈ ವಿಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದೆ. ಬಲಿ ಮೂರ್ತಿ ನೆಲಕ್ಕೆ ಬಿದ್ದಿರುವುದು ಅಪಶಕುನ ಎಂಬ ಮಾತು ಕೇಳಿಬರುತ್ತಿದೆ. ದೇವಸ್ಥಾನದ ಮುಂಭಾಗದ ಧ್ವಜಸ್ತಂಭದ ಬದಲಿಗೆ ಸ್ವರ್ಣ ಲೇಪಿತ ಸ್ತಂಭ ಸ್ಥಾಪಿಸುವುದಕ್ಕಾಗಿ ಧ್ವಜ ಸ್ತಂಭ ತೆಗೆಯಲಾಗಿತ್ತು.

ಧ್ವಜಸ್ತಂಭ ಇಲ್ಲದಿರುವಾಗ ಬಲಿ ಉತ್ಸವ ಆಗಲೀ, ದೇವರ ಮೂರ್ತಿಯನ್ನು ಹೊರಗೆ ತರುವುದಾಗಲೀ ನಿಷಿದ್ಧ ಎನ್ನೋದು ತಜ್ಞರ ಅಭಿಮತ. ಹೀಗಿದ್ದರೂ, ಆಡಳಿತ ಸಮಿತಿಯ ಕೆಲವರು ಮತ್ತು ಅರ್ಚಕರು ಸೇರಿ ಸಂಪ್ರದಾಯ ಬದಿಗೊತ್ತಿ ಬಲಿ ಉತ್ಸವ ನಡೆಸಿದ್ದರು. ಹೀಗಾಗಿ ಅಪಶಕುನವಾಗಿದೆ ಎನ್ನುವ ಮಾತು ಕೇಳಿ ಬಂದಿದೆ.

ಇಂಥ ಅಪಚಾರ ಆಗಿದ್ದರೂ, ದೇವರ ಮೂರ್ತಿಯನ್ನು ಶುದ್ಧಿ ಕಲಶ ಮಾಡದೆ ಮತ್ತೆ ಗರ್ಭಗುಡಿಯಲ್ಲಿ ಇರಿಸಲಾಗಿತ್ತು. ಇದರಿಂದ ಹತ್ತೂರ ಒಡೆಯ ಮಹಾಲಿಂಗೇಶ್ವರ ಮುನಿದರೆ ಊರಿಗೆ ಆಪತ್ತು ಬರಬಹುದು ಅನ್ನೋ ಆತಂಕ ಜನರಲ್ಲಿ ಮನೆ ಮಾಡಿದೆ. ಬಲಿ ಮೂರ್ತಿ ಯಾವತ್ತೂ ಅರ್ಚಕರ ಶಿರದಿಂದ ಕೆಳಕ್ಕೆ ಬಿದ್ದ ನಿದರ್ಶನ ಇಲ್ಲ. ಹೀಗಿರುವಾಗ ಇಂಥ ಅವಘಡ ಹೇಗಾಯ್ತು ಅನ್ನೋದು ಜನರ ಪ್ರಶ್ನೆಯಾಗಿದೆ.

LEAVE A REPLY

Please enter your comment!
Please enter your name here