Home District ಶುಭಘಳಿಗೆಯಲ್ಲಿ Nikhil ಹೆಸರು ಘೋಷಣೆ! ಮಂಡ್ಯ ರಂಗಪ್ರವೇಶ ಮಾಡಿದ HDK ಪುತ್ರ ನಿಖಿಲ್! ಸಾರ್ವಜನಿಕ ಸಭೆಯಲ್ಲಿ...

ಶುಭಘಳಿಗೆಯಲ್ಲಿ Nikhil ಹೆಸರು ಘೋಷಣೆ! ಮಂಡ್ಯ ರಂಗಪ್ರವೇಶ ಮಾಡಿದ HDK ಪುತ್ರ ನಿಖಿಲ್! ಸಾರ್ವಜನಿಕ ಸಭೆಯಲ್ಲಿ ನಿಖಿಲ್ ಹೆಸರು ಘೋಷಿಸಿದ ಸಚಿವ ಪುಟ್ಟರಾಜು!

277
0
SHARE

ಭಾರಿ ಕುತೂಹಲ ಮೂಡಿಸಿದ್ದ ಮಂಡ್ಯ ಜಿಲ್ಲೆಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನ ಕೊನೆಗೂ ಪ್ರಕಟಿಸಿದ್ದಾರೆ. ಜಿದ್ದಾಜಿದ್ದಿಯ ಕಣವಾಗಿದ್ದ ಸಕ್ಕರೆನಾಡು ಇದೀಗ ಒಂದು ಸ್ವರೂಪ ಪಡೆದುಕೊಂಡಿದೆ.

ಇದೇ ವೇಳೆ ಸಿಎಂ ಕುಮಾರಸ್ವಾಮಿಯವರು ಮಂಡ್ಯದ ಜನರ ಮನ ಗೆಲ್ಲಲು ಅಂಬರೀಶ್ ಅಂತ್ಯಕ್ರಿಯೆ ವಿಚಾರವನ್ನ ಪ್ರಸ್ತಾಪಿಸಿ ಮತ್ತೆ ಕೆಂಗಣ್ಣಿಗೆ ಗುರಿಯಾಗಿದ್ರು.ಭಾರೀ ಕುತೂಹಲ ಮೂಡಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿ ಸರಕಾರದ ಉಮೇದುವಾರಿಕೆಗೆ ತೆರೆ ಬಿದ್ದಿದೆ.

ಸಕ್ಕರೆ ಜಿಲ್ಲೆಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸಿಎಂ ಹೆಚ್ಡಿಕೆ ಪುತ್ರ ನಿಖಿಲ್ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.. ಮಾಜಿ ಪ್ರಧಾನಿ ದೇವೇಗೌಡರ ಆದೇಶದಂತೆ ಸಚಿವ ಸಿಎಸ್ ಪುಟ್ಟರಾಜು ಘೋಷಿಸಿದ್ರು… ದೇವೇಗೌಡರೇ ನಿಖಿಲ್‌ ಹೆಸರನ್ನು ಘೋಷಿಸುತ್ತಾರೆಂದೇ ನಿರೀಕ್ಷಿಸಲಾಗಿತ್ತು. ಆದರೆ ಹನ್ನೆರಡು ಗಂಟೆಯೊಳಗೆ ಅಭ್ಯರ್ಥಿಯ ಹೆಸರನ್ನು ಘೋಷಿಸಬೇಕಾಗಿದ್ದ ಅನಿವಾರ್ಯತೆ ಇದ್ದುದರಿಂದ ದೇವೇಗೌಡ್ರು, ಹೆಚ್ಡಿಕೆ ಅನುಪಸ್ಥಿತಿಯಲ್ಲಿ ನಿಖಿಲ್‌ ಹೆಸರನ್ನು ಪ್ರಕಟಿಸಲಾಯ್ತು.

ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ತಮ್ಮ ಪುತ್ರ ನಿಖಿಲ್ ನನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ.. ಇಂದು ಆತನನ್ನು ಬೆಂಬಲಿಸಿ ಮುಂದೆ ಆತ ನಿಮಗೆ ನೆರವಾಗುತ್ತಾನೆ ಎಂದರು.. ಯಾವುದೇ ಕಾರಣಕ್ಕೂ ಜನರ ಪ್ರೀತಿಯನ್ನ ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಎಂದ ಹೆಚ್ಡಿಕೆ, ತಮ್ಮ ಆರೋಗ್ಯ ಸರಿ ಇಲ್ಲದಿದ್ದರೂ ಈ ನಾಡಿನ ಋಣ ತೀರಿಸಲು ಬದುಕಿದ್ದೇನೆ ಎಂದು ಭಾವುಕರಾದ್ರು.ಇದೇ ವೇಳೆ, ರೆಬೆಲ್ ಸ್ಟಾರ್ ಅಂಬರೀಷ್ ಜೊತೆಗಿನ ಸಂಬಂಧವನ್ನ ಹೆಚ್ಡಿಕೆ ಮೆಲುಕು ಹಾಕಿದ್ರು…

ಅಂಬರೀಷ್ ಮೃತಪಟ್ಟ ಸುದ್ದಿ ತಿಳಿದಾಗ ಆಸ್ಪತ್ರೆಗೆ ತೆರಳಿ ತಡರಾತ್ರಿವರೆಗೆ ಅಲ್ಲೆ ಇದ್ದೆ.. ಅಂಬರೀಷ್ ಪಾರ್ಥೀವ ಶರೀರವನ್ನ ಮಂಡ್ಯಕ್ಕೆ ತೆಗೆದುಕೊಂಡು ಹೋಗುವುದು ಬೇಡ ಅಂತಾ ಕೆಲವರು ಅಂದಿದ್ರು.. ಆದ್ರೆ ಇಂದು ಅದೇ ಜನ ಮಂಡ್ಯ ಮಣ್ಣಿನ ಋಣದ ಬಗ್ಗೆ ಮಾತನಾಡ್ತಾರೆ ಎಂದು ಪರೋಕ್ಷವಾಗಿ ಸುಮಲತಾಗೆ ಟಾಂಗ್ ನೀಡಿದ್ರು.

ಸಮಾವೇಶದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ್ರು, ನಮ್ಮದು ಕುಟುಂಬ ರಾಜಕಾರಣ ಎಂದು ಹೀಯಾಳಿಸುತ್ತಿರುವುದಕ್ಕೆ ತುಂಬಾ ನೋವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ರು… ಈ ಬಾರಿಯ ಸಮ್ಮಿಶ್ರ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಬೇಕೆಂದು ದೆಹಲಿಯ ಹೈಕಮಾಂಡ್ ಗೆ ಹೇಳಿದ್ದೆ.

ಆದರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಒಪ್ಪಲಿಲ್ಲ ಎಂದು ದೇವೇಗೌಡ್ರು ಬಾಂಬ್ ಹಾಕಿದ್ರು.ಇನ್ನೂ ನಿಖಿಲ್ ಮಾತನಾಡಿ, ಮಂಡ್ಯ ಕ್ಷೇತ್ರದ ಜನರ ಸೇವೆ ಮಾಡಲು ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದ್ರು… ಮಂಡ್ಯದ 7 ಶಾಸಕರೂ ನಿಖಿಲ್ ರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಸಂಸತ್ ಗೆ ಕಳುಹಿಸುವುದಾಗಿ ದೇವೇಗೌಡ್ರು ಮತ್ತು ಹೆಚ್ಡಿಕೆ ಸಮ್ಮುಖದಲ್ಲಿ ಪ್ರತಿಜ್ಞೆ ಮಾಡಿದರು..

LEAVE A REPLY

Please enter your comment!
Please enter your name here