Home Cinema ಶುರು ಮಾಡಿದ್ರ ಭಟ್ರು “ಪಂಚತಂತ್ರ” ಕಥೆಯ..! ಶೃಂಗಾರದ ಹೊಂಗೆ ಮರ ಕೊನೆಗೂ ಬಿಟ್ಟಿತು ಹೂವು..! ಮನ್ಮಥನ...

ಶುರು ಮಾಡಿದ್ರ ಭಟ್ರು “ಪಂಚತಂತ್ರ” ಕಥೆಯ..! ಶೃಂಗಾರದ ಹೊಂಗೆ ಮರ ಕೊನೆಗೂ ಬಿಟ್ಟಿತು ಹೂವು..! ಮನ್ಮಥನ ಹಾವಳಿಯಿಂದ ಬಚಾವಾಗಲು ಸಾಧ್ಯವಿಲ್ಲ ನೀವು..!

621
0
SHARE

ಕೊನೆಗೂ ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ. ನಾಚಿಕೆ ನಮ್ಮ ಜೊತೆ ಠೂ ಬಿಟ್ಟಿದೆ. ಯಸ್.. ಇದೊಂದು ಪಂಚತಂತ್ರ ಚಿತ್ರದಲ್ಲಿನ ಇದೊಂದು ಹಾಡಿಗೆ ಕಾಯುತ್ತಿದ್ದ ಪಡ್ಡೆಗಳೂ ಅದೆಷ್ಟೋ.
ಬರೀ ಸಾಲುಗಳಿಂದನೇ ಪಡ್ಡೆಗಳ ಹೃದಯವನ್ನ ಬಿಸಿ ಮಾಡಿದ್ದ, ಯೋಗರಾಜ್ ಭಟ್ರು ಇದೀಗ ಹಾಡು ಬಿಡುಗಡೆ ಮಾಡಿದ್ದಾರೆ. ತಮ್ಮ ಮನ್ಮಥನೊಂದಿಗೆ ಹಾವಳಿ ಇಡಲು ಶುರುವಿಟ್ಟುಕೊಂಡಿದ್ದಾರೆ. ಇವ್ರ ಇದೇ ಹಾವಳಿನಿಂದ ಪಡ್ಡೆಗಳು ಅದ್ರಲ್ಲೂ ಯುವಜೋಡಿಗಳೂ ಬಚಾವಾಗಲು ಸಾಧ್ಯವೇ ಇಲ್ಲ
ಇನ್ನೂ ಅರೆಮುಚ್ಚಿದ ಕಂಗಳ ಕವಿತೆಯಾಗಿ ಇಲ್ಲಿ ಸೋನಲ್ ಕಾಣಿಸಿಕೊಂಡಿದ್ದಾರೆ.

ಪಡ್ಡೆಗಳ ಹೃದಯಕ್ಕೆ ಆಗ್ಲೇ ತನ್ನ ಸೌಂದರ್ಯದ ಮೂಲಕ ಕನ್ನ ಹಾಕಿರುವ ಸೋನಲ್‌ಗೆ, ಮುಂದಿನ ದಿನಗಳಲ್ಲಿ ಎಲ್ಲರೂ ಹುಚ್ಚೆದ್ದು ಹಾಡು ಹೇಳಬಹುದೇ ಒಳಗಿನ ದನಿಯು ಅನ್ನುವ ಪ್ರಶ್ನೆ ಕೇಳಿದ್ರೂ ಅಚ್ಚರಿ ಇಲ್ಲ.ಅಂದ ಹಾಗೇ ಉಷ್ಣಾಂಶದ ಬೆಚ್ಚನೆಯ ಲಂಚ ಕೊಟ್ಟು ಸೋನಲ್ ಜೊತೆ ಜಂಟಿ ಕಾರ್ಯಾಚರಣೆ ಮಾಡಿರೋದು ವಿಹಾನ್ ಗೌಡ. ಹಿಂದೆ ಕಾಲ್ ಕೆ.ಜಿ.ಪ್ರೀತಿ ಹಂಚಿದ್ದ ವಿಹಾನ್, ಇಲ್ಲಿ ಬೆನ್ನಿಗೆ ಬೆರಳು ಸೋಕಿ ಕಣ್ಣೆರಡು ಕೇಳಿವೆ ಬಾಕಿ ಅನ್ನುತ್ತಾ ತುಂಟ ಮೌನಾಚರಣೆ ಮಾಡಿದ್ದಾರೆ.

ಸದ್ಯ, ತುಟಿಗಾಯಕೆ ಕಾರಣ ಯಾರು ಅನ್ನುವ ಪ್ರಶ್ನೆಯನ್ನ ಒಬ್ಬರಿಗೊಬ್ಬರು ಕೇಳಿಕೊಳ್ಳುತ್ತಿರುವ ವಿಹಾನ್ ಹಾಗೂ ಸೋನಲ್ ಕಂಡು ಸಿನಿಪ್ರಿಯರು, ಹೋಗಿ ಬಂತು ಪ್ರಾಣ ಅನ್ನುತ್ತಿದ್ದಾರೆ. ಇಬ್ಬರ ಕೆಮೆಸ್ಟ್ರೀ ನೋಡಿ ಪ್ರಣಯಕ್ಕೊಂದು ಬೇರೆ ಮುಖವಿದೆ ಅನ್ನುತ್ತಿದ್ದಾರೆ.ಇಮ್ರಾನ್ ಸರ್ದಾರಿಯಾ ಹಾಡಿಗೊಂದು ಸುಂದರ ರೂಪ ಕೊಟ್ಟಿದ್ದಾರೆ. ಚಿತ್ರೀಕರಣಕ್ಕೂ ಮುನ್ನ ವಿಹಾನ್ ಹಾಗೂ ಸೋನಲ್‌ರಿಂದ ರಿಹರ್ಸಲ್ ಮಾಡಿಸಿದ ಪರಿಣಾಮವೆನ್ನುವಂತೆ, ಜೋಡಿ ಮತ್ತಷ್ಟು ಮೋಡಿ ಮಾಡುತ್ತಿದೆ. ಮನಸಿಗೆ ಹತ್ತಿರವಾಗುತ್ತಿದೆ.

ಇನ್ನೂ ಯೋಗರಾಜ್ ಭಟ್ರ ಬಗ್ಗೆಯಂತೂ ಮಾತನಾಡಲು ಇಲ್ಲಿ ಪದಗಳ ಕೊರತೆ ಕಾಡುತ್ತೆ. ಬಹುಶ, ಇದೇ ಕಾರಣಕ್ಕೋ ಏನೋ.. ಭಟ್ಟರಿಗೆ ಭಟ್ರೇ ಸಾಟಿ ಅನ್ನುತ್ತಿರುವ ಕಲಾರಸಿಕರು, ಕ್ರೇಝಿಸ್ಟಾರ್ ರವಿಚಂದ್ರನ್ ಏನಾದ್ರೂ ಯೋಗರಾಜ್ ಭಟ್ರ ಮೈಯಲ್ಲಿ ಬಂದಿದಾರಾ ಏನು ಅನ್ನುವ ಪ್ರಶ್ನೆಯನ್ನೂ ಕೇಳುತ್ತಿದ್ದಾರೆ.ಚಳಿಗಾಲಕ್ಕೆ ಯುವಜೋಡಿಗಳಿಗೆ ಬೆಚ್ಚಗೆಯ ಉಡುಗೊರೆಯನ್ನ ಕೊಟ್ಟಿರುವ ಭಟ್ರಿಗೆ, ಗಾಯಕರಾಗಿ ಓನ್ಸ್ ಅಗೈನ್ ವಿಜಯ್ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕರಾಗಿ ವಿ ಹರಿಕೃಷ್ಣ ಸಾಥ್ ನೀಡಿದ್ದಾರೆ. ಇದಕ್ಕಿಂತ ಇನ್ನೇನು ಬೇಕು..

ಹಾಡು ಹಿಟ್ ಆಗಲು. ಸಿನಿಪ್ರಿಯರು ಹುಚ್ಚೆದ್ದು ಕುಣಿಯಲು. ಹಾಡು ಪದೇ ಪದೇ ಕೇಳಲು. ಹರಿಪ್ರಸಾದ್ ಜಯಣ್ಣ ಹಾಗೂ ಹೇಮಂತ್ ಚಿತ್ರದ ನಿರ್ಮಾಪಕರು. ರೊಮ್ಯಾಂಟಿಕ್ ಹಾಡಿಗೆ ಬೇಕಿರುವ ಅಗತ್ಯತೆಗಳನ್ನೆಲ್ಲಾ ಪೂರೈಸಿರುವ ನಿರ್ಮಾಪಕರು, ಚಿತ್ರದ ಕ್ವಾಲಿಟಿ ವಿಚಾರದಲ್ಲೂ ಎಲ್ಲೂ ಕಾಂಪ್ರಮೈಸ್ ಆಗಿಲ್ಲ.

ಅದೇನೆ ಇರ‍್ಲಿ,ಸದ್ಯ..ಯೋಗರಾಜ್ ಭಟ್ರು ಬಿಟ್ಟಿರುವ ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ. ನಾಚಿಕೆ ನಮ್ಮ ಜೊತೆ ಠೂ ಬಿಟ್ಟಿದೆ ಅನ್ನುವ ಹರಿತವಾದ ಮಧುರವಾದ ಬಾಣ ಎಲ್ಲರ ಹೃದಯಕ್ಕೆ ನಾಟಿದೆ. ಸದ್ದು ಮಾಡಲು ಶುರುವಿಟ್ಟುಕೊಂಡಿದೆ. ನೀವ್ ಇನ್ನೂ ಹಾಡು ಕೇಳಿಲ್ಲ ನೋಡಿಲ್ಲ ಅಂದ್ರೆ ಒಮ್ಮೆ ನೋಡಿ ಬಿಡಿ. ಯಾಕಂದ್ರೆ ಇದು ಭಟ್ರು ಮಾಡಿರುವ ಪ್ರೀತಿಯ ಪ್ರವಚನ.

LEAVE A REPLY

Please enter your comment!
Please enter your name here