Home Cinema ಶೃತಿ ಮೇಲೆ ಲೈಗಿಂಕ ಕಿರುಕುಳ ಆರೋಪದಡಿ ಸಿಲುಕಿರುವ ಅರ್ಜುನ್ ಸರ್ಜಾ ಮೇಲೆ ಹರಿಹಾಯ್ದ ಸಂಯುಕ್ತ ಹೆಗ್ಡೆ..?!

ಶೃತಿ ಮೇಲೆ ಲೈಗಿಂಕ ಕಿರುಕುಳ ಆರೋಪದಡಿ ಸಿಲುಕಿರುವ ಅರ್ಜುನ್ ಸರ್ಜಾ ಮೇಲೆ ಹರಿಹಾಯ್ದ ಸಂಯುಕ್ತ ಹೆಗ್ಡೆ..?!

2395
0
SHARE

ಇದೇ ಧೈರ್ಯ ಹೇಳುವ ಭರದಲ್ಲಿ, ಕಿರಿಕ್ ಕ್ವೀನ್ ಸಂಯುಕ್ತಾ ಹೆಗ್ಡೆ ಅರ್ಜುನ್ ಸರ್ಜಾ ಮೇಲೆ ಹರಿಹಾಯ್ದಿದ್ದಾರೆ. ದುಡ್ಡು, ಕೌಟುಂಬಿಕ ಹಿನ್ನೆಲೆ, ಅಧಿಕಾರ ಇದೆ ಅಂದ ಮಾತ್ರಕ್ಕೆ ಏನ್ ಬೇಕಾದ್ರೂ ಮಾಡಬಹುದಾ ಅನ್ನುವ ಪ್ರಶ್ನೆಯನ್ನ ಕೇಳಿದ್ದಾರೆ..ಏನ್ ಬೇಕಾದ್ರೂ ಮಾಡಬಹುದಾ-ಸಂಯುಕ್ತಾ:ಈ ಇಂಡಸ್ಟ್ರಿಯಲ್ಲಿ ಹೊರಬಂದು ಮಾತಾಡಿದ್ರೆ ಹೆದರಿಸ್ತಾರೆ,

ನಿನ್ನ ಧೈರ್ಯ ಮೆಚ್ಚಬೇಕು. ನೀನು ಇದರ ಬಗ್ಗೆ ಹೊರಬಂದು ದನಿ ಎತ್ತಿರುವೆ. ಯಾಕಂದ್ರೆ ಈ ಧೈರ್ಯ ಮಾಡಿದ ಹೆಣ್ಣುಮಕ್ಕಳ ವಿರುದ್ಧ ಟ್ರೋಲ್‌ಗಳಾಗ್ತವೆ, ಟೀಕೆಗಳು ಕೇಳಿಬರ್ತವೆ. ಶ್ರುತಿ ಎಲ್ಲರ ವಿರೋಧ ಕಟ್ಟಿಕೊಳ್ಳಬೇಕು ಅಲ್ವಾ..ಹೌದು ಮಿಸ್ಟರ್ ಅರ್ಜುನ್ ಸರ್ಜಾ ಅವ್ರಿಗೆ ಕೌಟುಂಬಿಕ ಹಿನ್ನೆಲೆ ಇದೆ, ದುಡ್ಡಿದೆ, ಅಧಿಕಾರ ಇದೆ, ಇಂಡಸ್ಟ್ರಿಯಲ್ಲಿರೋ ಜನರ ಬೆಂಬಲ ಇದೆ.

ಆದ್ರೆ ಇವೆಲ್ಲವೂ ಯಾರೊಬ್ಬರಿಗೆ ಆದ್ರೂ ಇಷ್ಟು ಚೀಪ್ ಆಗಿ ವರ್ತಿಸೋದಕ್ಕೆ ಪರ್ಮಿಶನ್ ಹೇಗ್ ಕೊಡ್ತವೆ. ನಾವು ಒಂದು ಇಂಡಸ್ಟ್ರಿಗಿಂತ ಹೆಚ್ಚಾಗಿ ವೈಯಕ್ತಿಕವಾಗಿ ಸೋತಿದ್ದೇವೆ. ಸಾಮಾಜಿಕವಾಗಿ ಸೋತಿದ್ದೇವೆ.ನಾನು ಒಂದು ಟಿವಿ ಇಂಟರ್‌ವ್ಯೂನಲ್ಲಿ ನೋಡ್ತಾ ಇದ್ದೆ, ಅಲ್ಲಿ ಒಬ್ರು ಮಾತನಾಡ್ತಾ ಇದ್ರು. ಇಂಥಾ ಹೆಣ್ಣು ಮಕ್ಕಳು ಹೇಳೋದೆಲ್ಲಾ ಸುಳ್ಳು.

ಅದ್ರಲ್ಲೂ ಎಲ್ಲಿಂದಲೋ ಬಂದವರು, ಕನ್ನಡ ಮಾತನಾಡಲು ಬರದವರು ಈ ರೀತಿ ಮಾಡ್ತಾರೆ ಅಂದ್ರು. ಲೈಂಗಿಕ ಶೋಷಣೆಗೂ ಈ ವಿಷಯಕ್ಕೂ ಎಲ್ಲಿಂದೆಲ್ಲಿಯ ಸಂಬಂಧ..? ಹೀರೋಯಿನ್‌ಗಳಾದ ನಮಗೆ ಅವಕಾಶಗಳೂ ಸಿಗೋದಿಲ್ಲ. ಸಿಕ್ಕ ಕೆಲಸಕ್ಕೆ ಸಮನಾದ ಸಂಭಾವನೆಯೂ ಸಿಗೋದಿಲ್ಲ. ಆದ್ರೆ ನಾವು ಅದಕ್ಕಾಗಿ ಹೋರಾಟ ಮಾಡಿಲ್ಲ.

ನಾವು ಬಯಸೋದು ಕಡೆ ಪಕ್ಷ ಎಲ್ಲರ ಗೌರವ ಹಾಗೂ ಬೆಂಬಲ. ಇಲ್ಲಿ ಒಬ್ಬ ನಟಿಯನ್ನ ಬಹಿಷ್ಕರಿಸೋದು ಸುಲಭ. ಆಕೆಯ ಪರವಾಗಿ ನಿಂತು ಸಪೋರ್ಟ್ ಮಾಡೋ ಬದಲು ಅದೇ ಜಾಗದಲ್ಲಿ ಹೊಸ ಹೀರೋಯಿನ್ ಕರೆತರಬಹುದು. ಯಾರೆಲ್ಲಾ ಅವಳ ಬಗ್ಗೆ ಕೆಟ್ಟದಾಗಿ ಮಾತಾನಾಡ್ತಾ ಇದ್ದೀರೋ, ಬೈತಾ ಇದ್ದೀರೋ ನೀವೆಲ್ಲೂ ಊಹೆ ಮಾಡಿ ಇದೇ ನಿಮಗೋ, ನಿಮ್ಮ ಕುಟುಂಬದವರಿಗೋ ಅಥವಾ ಸ್ಮೇಹಿತರಿಗೋ ಆಗಿದ್ದರೆ ಇದೇ ಥರಾ ಪ್ರತಿಕ್ರಿಯಿಸ್ತಾ ಇದ್ರಾ. ಖಂಡಿತ ಇಲ್ಲ.

ನಾವೇನು ಕಪಟವೇಷಧಾರಿಗಳಾ.. ಹಾಗಿದ್ಯಾ ನಮ್ಮ ನಡವಳಿಕೆ, ಈಗಾಗ್ಲೆ ನಾವು ಹೊರಬಂದು ಮಾತಾಡೋದೆ ಕಷ್ಟವಾಗಿದೆ. ಇದು ಸಕಾಲ ನಾವು ಮಹಿಳೆಯರು ಒಬ್ಬರಿಗೊಬ್ಬರು ಸಪೋರ್ಟ್ ಆಗಿ ನಿಲ್ಲಬೇಕು. ನಾವು ಆಗ್ತಾ ಇರೋ ತಪ್ಪಿನ ವಿರುದ್ಧ ನಿಂತು ಹೋರಾಡದೇ ಹೋದರೆ, ಈ ಆಂದೋಲನದ ಉದ್ದೇಶ ಸಂಪೂರ್ಣವಾಗಿ ನಾಶವಾಗುತ್ತೆ.

ಬೇಸರದ ವಿಷಯ ಏನಪ್ಪ ಅಂದ್ರೆ ಹುಡುಗರು ಇದರ ಪರವಾಗಿ ನಿಂತು ಮಾತಾಡ್ತಿಲ್ಲ ಅನ್ನೋದಕ್ಕಿಂತ ಒಳ್ಳೆಯದನ್ನೇನು ಮಾತನಾಡ್ತಿಲ್ಲ ಅನ್ನೋದು. ಇದೇ ಒಳ್ಳೆ ಟೈಮ್ ನಾವು ಸರಿಯಾಗಿರೋದ್ರ ಪರ ನಿಲ್ಲೋದಕ್ಕೆ..!ಬರೀ ಸಂಯುಕ್ತಾ ಹೆಗ್ಡೆ ಅಷ್ಟೇ ಅಲ್ಲ, ಗಾಳಿಪಟದ ಗೋರಿ ನೀತು ಕೂಡಾ ಶ್ರುತಿ ಹರಿಹರನ್ ಧೈರ್ಯವನ್ನ ಮೆಚ್ಚಿಕೊಂಡಿದ್ದಾರೆ. ಶ್ರುತಿಗೆ ನನ್ನ ಬೆಂಬಲವಿದೆ ಅಂದಿದ್ದಾರೆ

LEAVE A REPLY

Please enter your comment!
Please enter your name here