Home Cinema ಶೃತಿ ಹರಿಹರನ್ ಕಾರು ಬಿಟ್ಟು ಆಟೋ ಹತ್ತಿದ್ಯಾಕೆ..!? “ಜೀವಭಯ”ದಲ್ಲಿದುವ “ಶ್ರುತಿ”ಗೆ “ಆಸರೆ”ಯಾಗಿದ್ದು ಅದ್ಯಾರು..!

ಶೃತಿ ಹರಿಹರನ್ ಕಾರು ಬಿಟ್ಟು ಆಟೋ ಹತ್ತಿದ್ಯಾಕೆ..!? “ಜೀವಭಯ”ದಲ್ಲಿದುವ “ಶ್ರುತಿ”ಗೆ “ಆಸರೆ”ಯಾಗಿದ್ದು ಅದ್ಯಾರು..!

697
0
SHARE

ಶ್ರುತಿ ಹರಿಹರನ್.. ಮೀ ಟೂ ಸುನಾಮಿಯನ್ನ, ಸ್ಯಾಂಡಲ್ವುಡ್‌ಗೆ ಕರೆತಂದ ನಟಿ. ಅರ್ಜುನ್ ಸರ್ಜಾಗೆ ಮೀಟೂ ಅಂದ ಶ್ರುತಿ, ಸದ್ಯ ಕಾನೂನೂ ಹೋರಾಟ ನಡೆಸಿದ್ದಾರೆ. ನ್ಯಾಯ ಸಿಗುತ್ತೆ ಅನ್ನುವ ವಿಶ್ವಾಸದಲ್ಲಿದ್ದಾರೆ. ಹೀಗಿರುವಾಗ್ಲೇ.. ಶ್ರುತಿಗೀಗ ಜೀವಭಯ ಶುರುವಾಗಿದೆ.
ಹೌದು, ಅಸಲಿಗೆ ಅರ್ಜುನ್ ಸರ್ಜಾಗೆ ಶ್ರುತಿ ಮೀ ಟೂ ಅಂದ ಬೆನ್ನೇಟಿಗೆ, ಶ್ರುತಿ ಹರಿಹರನ್ ಅಲವತ್ತುಕೊಂಡಿದ್ದರು.

ಸರ್ಜಾ ಫ್ಯಾನ್ಸ್‌ಗಳಿಂದ ಸಾಲು ಸಾಲು ಬೆದರಿಕೆ ಕರೆಗಳು ಬರ‍್ತಿವೆ ಅಂದಿದ್ದರು. ಎಷ್ಟೇ ಕಷ್ಟ ಆಗ್ಲಿ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಅಂದಿದ್ದರು. ಇಂಥ ಗಟ್ಟಿಗಿತ್ತಿ ಶ್ರುತಿ ಇದೀಗ ಆಟೋದಲ್ಲಿ ಓಡಾಡಲು ಶುರುಮಾಡಿದ್ದಾರೆ.ಹೌದು, ಶ್ರುತಿಗೆ ಪ್ರಾಣ ಬೆದರಿಕೆ ಹೆಚ್ಚಾದ ಬೆನ್ನಲ್ಲೇ, ಶ್ರುತಿ ಆಸರೆಗಾಗಿ ಆಟೋರಿಕ್ಷಾ ಹತ್ತುತ್ತಿದ್ದಾರೆ. ಯಸ್, ಕೇಳಲು ಕಷ್ಟ ಅನಿಸಿದ್ರೂ ಇದು ಶ್ರುತಿ ಹೇಳಿದ ಸತ್ಯ.

ಸೆಲೆಬ್ರೀಟಿಯಾಗಿದ್ದೂ ತನ್ನ ಕಾರಿನಲ್ಲಿ ಓಡಾಡದ ಸ್ಥಿತಿಯಲ್ಲಿ ಶ್ರುತಿ ಇದೀಗ ಇದ್ದಾರಂತೆ. ಅಸಲಿಗೆ, ಅರ್ಜುನ್ ಸರ್ಜಾಗೆ ಮೀ ಟೂ ಅಂದ್ಮೇಲೆ ಬಂದಿದ್ದ ಬೆದರಿಕೆ ಕರೆಗಳ ಬಗ್ಗೆ ಶ್ರುತಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು. ಆಗ ಶ್ರುತಿಯ ಸ್ನೇಹಿತರು, ಹಿತೈಶಿಗಳು ಶ್ರುತಿಗೆ ಸಾರ್ವಜನಿಕ ಸಾರಿಗೆ ಬಳಸುವಂತೆ ಸಲಹೆ ನೀಡಿದ್ದರು.ಸ್ನೇಹಿತರು ಕೊಟ್ಟ ಸಲಹೆಯನ್ನೇ ಸಿರಿಯಸ್ ಆಗಿ ತೆಗೆದುಕೊಂಡಿರುವ ಶ್ರುತಿ ಆಟೋ ಸವಾರಿಗೆ ಮುಂದಾಗಿದ್ದಾರೆ.

ಇದೇ ವಿಚಾರವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿರುವ ಶ್ರುತಿ ಹರಿಹರನ್, ಆಲ್ ಇಸ್ ವೆಲ್ ಅಂದಿದ್ದಾರೆ. ನಾನು ಸುರಕ್ಷಿತವಾಗಿದ್ದೇನೆ ಅಂದಿದ್ದಾರೆ.ನಾನು ಸುರಕ್ಷಿತಳಾಗಿದ್ದೇನೆ:ನಾನು ಸದ್ಯ ಜೀವ ಭಯದಲ್ಲಿ ಇದ್ದೇನೆ. ತಮ್ಮ ಸಲಹೆಗಳಿಗೆ ನನ್ನ ಧನ್ಯವಾದಗಳು. ಇಷ್ಟರಲ್ಲೇ ಸತ್ಯ ಗೊತ್ತಾಗಲಿದೆ. ನಾನು ಸುರಕ್ಷಿತವಾಗಿದ್ದೇನೆ. ಮೊದಲಿಗಿಂತಾ ಇನ್ನಷ್ಟು ಧೈರ್ಯವಾಗಿದ್ದೇನೆ.

ಹೀಗೆ ಶ್ರುತಿ ತಮ್ಮ ಅಭಿಮಾನಿಗಳಿಗೆ ಈ ಮೂಲಕ ಸಂದೇಶವನ್ನ ರವಾನಿಸಿದ್ದಾರೆ. ಅಷ್ಟೇ ಅಲ್ಲ ಗೊಡ್ಡು ಬೆದರಿಕೆಗಳಿಗೆ ಹೆದರುವ ಹೆಣ್ಣು ನಾನಲ್ಲ ಅನ್ನುವ ಸಂದೇಶವನ್ನೂ ಈ ಮೂಲಕ ಕೊಟ್ಟಿದ್ದಾರೆ ಶ್ರುತಿ ಹರಿಹರನ್.ಇನ್ನೂ ಶ್ರುತಿ, ಆಟೋದಲ್ಲಿ ಓಡಾಟ ಮಾಡ್ತಿರೋದು.. ಸರ್ಜಾ, ವಿರುದ್ಧ ದಾಖಲೆಗಳನ್ನ ಕಲೆ ಹಾಕಲು ಅನ್ನುವ ಗುಮಾನಿನೂ ಅನೇಕರಲ್ಲಿದೆ. ತಾನೆಲ್ಲಿ ಹೋಗ್ತಿದ್ದೇನೆ ಅನ್ನುವದು ಯಾರಿಗೂ ಗೊತ್ತಾಗಬಾರದು ಅಂತಲೇ ಶ್ರುತಿ ಆಟೋದಲ್ಲಿ ಸವಾರಿ ಮಾಡ್ತಿದ್ದಾರೆ ಅನ್ನೋದು ಶ್ರುತಿಯ ಆಪ್ತರ ಅಂಬೋಣ.

ಇದೆಲ್ಲದ್ರ ನಡುವೆ, ನಿನ್ನೆ ಅರ್ಜುನ್ ಸರ್ಜಾ ಪೊಲೀಸರ ವಿಚಾರಣೆಯನ್ನೂ ಎದುರಿಸಿದ್ದಾರೆ. ಪೊಲೀಸರು ಕೇಳಿದ ನಲವತ್ತಕ್ಕೂ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಅದು, ಭರ್ತಿ ಎರಡು ಘಂಟೆಗಳ ಕಾಲ. ಸದ್ಯಕ್ಕೆ.. ಅರ್ಜುನ್ ಹೇಳಿಕೆಗಳನ್ನ ದಾಖಲಿಸಿಕೊಂಡಿರುವ ಪೊಲೀಸರು, ಅರ್ಜುನ್‌ರನ್ನ ಬಿಟ್ಟು ಕಳುಹಿಸಿದ್ದಾರೆ.

ಅಗತ್ಯ ಬಿದ್ದರೆ ಮತ್ತೆ ವಿಚಾರಣೆಗೆ ಕರೆಯುತ್ತೇವೆ ಅಂದಿದ್ದಾರೆ.ಅದೇನೆ ಇರ‍್ಲಿ, ಸದ್ಯ ಅರ್ಜುನ್ ಸರ್ಜಾ & ಶ್ರುತಿ ಹರಿಹರನ್ ಮೀ ಟೂ ವಿವಾದ ದಿನಕ್ಕೊಂದು ತಿರುವನ್ನ ಪಡೆಯುತ್ತಿದೆ. ಇದೇ ಭಯಾನಕ ತಿರುವು ಯಾರ ಸಿನಿಜೀವನ ಬಲಿ ತೆಗೆದುಕೊಳ್ಳುತ್ತೇ ಅನ್ನೋದಕ್ಕುತ್ತರ, ಕೋರ್ಟ್‌ನಲ್ಲಿ ಸತ್ಯ ಬಯಲಾದಾಗ್ಲೇ ಗೊತ್ತಾಗಲಿದೆ. ಅಲ್ಲಿವರೆಗೂ ಸತ್ಯದ ನಿರೀಕ್ಷೆಯಲ್ಲಿ ಕಾಯಬೇಕಷ್ಟೇ…

LEAVE A REPLY

Please enter your comment!
Please enter your name here