Home Crime ಶೋಕಿಗಾಗಿ ಕಳ್ಳತನದ ಹಾದಿ ಹಿಡಿದ ವಿದ್ಯಾರ್ಥಿಗಳು… ಹಣ ಮಾಡಲು ಅಡ್ಡದಾರಿ ಹಿಡಿದಿದ್ದ ಖತರ್ನಾಕ್‌ಗಳು ಅಂದರ್

ಶೋಕಿಗಾಗಿ ಕಳ್ಳತನದ ಹಾದಿ ಹಿಡಿದ ವಿದ್ಯಾರ್ಥಿಗಳು… ಹಣ ಮಾಡಲು ಅಡ್ಡದಾರಿ ಹಿಡಿದಿದ್ದ ಖತರ್ನಾಕ್‌ಗಳು ಅಂದರ್

2128
0
SHARE

ಇವರೆಲ್ಲ ತಮ್ಮ ಪಾಡಿಗೆ ತಾವು ವಿದ್ಯಾಬ್ಯಾಸ ಮಾಡಿಕೊಂಡಿದ್ದರೇ ಇಂದು ಎಲ್ಲಾ ವಿದ್ಯಾರ್ಥಿಗಳ ರೀತಿ ಇರುತ್ತಿದ್ದರು.. ಆದ್ರೆ ಸುಮ್ಮನಿರದವನು ಇರುವೆ ಬಿಟ್ಟುಕೊಂಡ ಅನ್ನೋ ಹಾಗಾಗಿದೆ..

ಶೋಕಿಗೆ ಬಿದ್ದ ಇವರು ಸುಲಭವಾಗಿ ಹಣ ಮಾಡಲು ಅಡ್ಡದಾರಿ ಹಿಡಿದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.. ಹಾಗಿದರೇ ಯಾರು ಆ ವಿದ್ಯಾರ್ಥಿಗಳು, ಅವರು ಏನು ಮಾಡಿದ್ದಾರೆ. ಮಾಡಬಾರದ ಕೆಲಸ ಮಾಡಿ ಪೊಲೀಸರ ಅತಿಥಿಯಾಗಿರುವ ಖತರ್ನಾಕ್‌ಗಳು ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲ್ಲೂಕಿ ಕಾಲೇಜು ವಿಧ್ಯಾರ್ಥಿಗಳು. ಕಾಲೇಜಿಗೆ ಹೋಗಿ ಓದಿ ವಿದ್ಯಾವಂತರಾಗುವ ಬದಲು ಶೋಕಿ ಮಾಡಲು ಹೋಗಿ ಈಗ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ. ಶೋಕಿ ಮಾಡಲು ಹಣಕ್ಕಾಗಿ ಅಡ್ಡದಾರಿ ಹಿಡಿದಿದ್ರು. ರೆಡ್ ಪಲ್ಸರ್ ಬೈಕ್‌ನಲ್ಲಿ ಏರಿ ಮಹಿಳೆಯರ ಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗುತ್ತಿದ್ದರು.

ಕದ್ದ ಮಾಲ್ ನಿಂದ ಬಂದಿರುವ ಹಣದಿಂದ ಶೋಕಿ ಜೀವನ ಮಾಡುತ್ತಿದ್ದರು.ಇದೇ ರೀತಿ ಹಾವೇರಿ ಜಿಲ್ಲೆಯ ರಾಣೇಬೆನ್ನೂರು, ದಾವಣಗೆರೆಯ ವಿದ್ಯಾನಗರ ಸೇರಿದಂತೆ ನಾಲ್ಕು ಕಡೆ ಸರಗಳ್ಳತನ ಮಾಡಿ, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ… ಸರಗಳ್ಳತನ ಮಾಡುತ್ತಿದ್ದ ವಿಶ್ವನಾಥ್,ಗಣೇಶ್,ಸೈಯದ್ ಹಾಗೂ ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ಕು ಜನರನ್ನು ಪೊಲೀಸರು ಬಂದಿಸಿದ್ದಾರೆ. ಬಂಧಿತರಿಂದ 1,75 ಲಕ್ಷ ಮೌಲ್ಯದ 58 ಗ್ರಾಂ ಬಂಗಾರವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.ಎರಡು ಬೈಕ್ ಗಳನ್ನು ಕಳ್ಳತನ ಮಾಡಿ ನಾಲ್ಕುಜನ ಯುವಕರು ಅವುಗಳನ್ನು ಬಳಸಿಕೊಂಡು ಸರಗಳ್ಳತನ ಮಾಡುತ್ತಿದ್ದರು..

ಮಹಿಳೆಯರ ಮಾಂಗಲ್ಯ ಸರಗಳನ್ನು ಎಗರಿಸುತ್ತಿದ್ದ ಕಳ್ಳರನ್ನು ಇದೀಗ ಪೊಲೀಸರು ಬಂದಿಸಿದ್ದು, ಕಳ್ಳತನವಾಗಿದ್ದ ಎರಡು ಬೈಕ್ ಗಳ ಜೊತೆಗೆ ಆರೋಪಿಗಳ ಒಂದು ಬೈಕ್ ಸೇರಿ ಒಟ್ಟು ಮೂರು ಬೈಕ್ ಸೇರಿದಂತೆ 4,20,800 ರೂ ಮೌಲ್ಯದ ಸ್ವತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಾವಾಯ್ತು ತಮ್ಮ ಪಾಡಾಯ್ತು ಎಂದು ಚೆನ್ನಾಗಿ ಓದಿದ್ದರೇ ಇವರು ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗುತ್ತಿದ್ದರು.. ಅದನ್ನು ಬಿಟ್ಟು ಶೋಕಿಗೆ ಬಿದ್ದ ಯುವಕರು ಸರಗಳ್ಳತನ ಮಾಡಿ ಸಿಕ್ಕಿ ಬಿದ್ದು ಇದೀಗ ಪೊಲೀಸರು ಅತಿಥಿಯಾಗಿರೋದು ಮಾತ್ರ ವಿಪರ್ಯಾಸ.

LEAVE A REPLY

Please enter your comment!
Please enter your name here