Home Crime ಶೋಭಾ ಕರಂದ್ಲಾಜೆ ಸಚಿವರಾಗಿದ್ದ ಅವಧಿಯ ಹಗರಣ ಬಯಲು..? ಇಂಧನ ವಿಚಾರವಾಗಿ ACBಯಲ್ಲಿ ದೂರು ದಾಖಲು…

ಶೋಭಾ ಕರಂದ್ಲಾಜೆ ಸಚಿವರಾಗಿದ್ದ ಅವಧಿಯ ಹಗರಣ ಬಯಲು..? ಇಂಧನ ವಿಚಾರವಾಗಿ ACBಯಲ್ಲಿ ದೂರು ದಾಖಲು…

2277
0
SHARE

ಸಂಸದೆ ಶೋಭ ಕರಂದ್ಲಾಜೆ ಇಂಧನ ಖಾತೆ ಸಚಿವರಾಗಿದ್ದ ಸಮಯದಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ಸುಮಾರು 90 ಕೋಟಿ ರೂಪಾಯಿ ಹಗರಣವಾಗಿದ್ದು,ಇವರಿಗೆ 12 ಜನ ಐಎಎಸ್,ಕೆಎಎಸ್ ಅಧಿಕಾರಿಗಳು ಕೈಜೋಡಿಸಿದ್ದಾರೆ ಎಂದು ಪುತ್ತೂರಿನ ನೀತಿ ಟ್ರಸ್ಟ್ ಆರೋಪಿಸಿದೆ.

ಈ ವಿಚಾರವಾಗಿ ಇಂದು ಎಸಿಬಿ ದೂರನ್ನು ಸಲ್ಲಿಸಿದ್ರು..2102-13 ನೇ ಸಾಲಿನಲ್ಲಿ ಬೆಸ್ಕಾಂ ಇಲಾಖೆಯಲ್ಲಿ ನಡೆದ ಎಲ್ ಟಿ ಹಾಗೂ ಎಚ್ ಟಿ ಬಂಚ್ ಕೇಬಲ್ ಕಾಮಗಾರಿಯಲ್ಲಿ ಕೋಟಿ ಕೋಟಿ ಅವ್ಯವಹಾರ ನಡೆದಿದ್ದು, ಆ ಸಮಯದಲ್ಲಿ ಇಂಧನ ಸಚಿವರಾಗಿದ್ದ ಶೋಭ ಕರಂದ್ಲಾಜೆ ಸೇರಿ ಒಟ್ಟು 12 ಉನ್ನತ ಶ್ರೇಣಿಯ ಅಧಿಕಾರಿಗಳು ನಿಗದಿ ಪಡಿಸಿದ ದರಕ್ಕಿಂತ ಹೆಚ್ಚು ದರವನ್ನು ನಮೂದಿಸಿ ಕೋಟಿ ಕೋಟಿ ಹಣ ನಷ್ಟ ಉಂಟು ಮಾಡಲು ಸಹಕರಿಸಿದ್ದು, ಕಾರಣ ಎಸಿಬಿಯವರ್ರು ತಕ್ಷಣವೇ ತನಿಖೆಯನ್ನು ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ನೀತಿ ಟ್ರಸ್ಟ್ ಸದಸ್ಯರು ಮನವಿ ಮಾಡಿದ್ರು.

ಕಾಮಗಾರಿ ಗುತ್ತಿಗೆ ಪಡೆದಿದ್ದ ಪೀಣ್ಯದ ಏಷ್ಯನ್ ಫ್ಯಾಬ್ ಟೆಕ್ ಲಿಮಿಟೆಡ್ ಕಂಪನಿಯು ಎಲೆಕ್ಟ್ರಿಕಲ್ ಡಿಸ್ಟ್ರಿಬ್ಯೂಷನ್ ಬಾಕ್ಸ್,ಕನೆಕ್ಟರ್ ಸ್ವಿಚ್ ಖರೀದಿಯಲ್ಲಿ ಕಡಿಮೆ ಮೌಲ್ಯದ ಎಲೆಕ್ಟ್ರಲ್ ಉಪಕರಣಗಳನ್ನು ಬಳಸಿ ಕೇವಲ 26 ಕೋಟಿಯಲ್ಲಿ ಕಾಮಗಾರಿಯನ್ನು ಮುಗಿಸಿದ್ದಾರೆಂದು ಆರೋಪಿಸಿದ್ರು.ಬೆಸ್ಕಾಂ ಒಂದು ಎಲೆಕ್ಟ್ರಿಕಲ್ ಡಿಸ್ಟ್ರಿಬ್ಯೂಷನ್ ಬ್ಯಾಕ್ಸ್ ನಿಗದಿ ಪಡಿಸಿದ ದರ 1987 ರೂಪಾಯಿಗಳಾದರೇ ಖರೀದಿ ಮಾಡಿರುವುದು 6000 ರೂಪಾಯಿಗಳೇ.

ಅಂದ್ರೇ ನಿಗದಿ ಪಡಿಸಿದ ದರಕ್ಕೂ ಖರೀದಿಸಿದ ದರಕ್ಕೂ 4013 ವ್ಯತ್ಯಾಸವಾಗಿದ್ದು, ಇಂತಹ 20 ಸಾವಿರ ಬಾಕ್ಸ್ ಗಳ ಖರೀದಿಯಲ್ಲಿ ಭಾರೀ ಗೋಲಾಮಾಲ್ ನಡೆದಿದೆ. ಈ ಸಮಿತಿಯಲ್ಲಿ ಸದ್ಯ ಸಿಎಂ ಆಪ್ತ ಕಾರ್ಯದರ್ಶಿ ಹಾಗೂ ಕೆಪಿಟಿಸಿಎಲ್ ಎಂಡಿಯಾಗಿರುವ ಸೆಲ್ವ ಕುಮಾರ್ ಸಹ ಒಬ್ಬ ಸದಸ್ಯರುವುದರಿಂದ ನ್ಯಾಯಯುತವಾದ ತನಿಖೆ ನಡೆಯುವುದು ಅನುಮಾನ ಎಂದು ಜಯನ್ ಆತಂಕ ವ್ಯಕ್ತಪಡಿಸಿದ್ರು.ಒಟ್ಟಿನಲ್ಲಿ ಬೆಸ್ಕಾಂ ನ ಬಂಚ್ ಕೇಬಲ್ ಕಾಮಗಾರಿಯಲ್ಲಿ ನಡೆದಿರುವ ಹಗರಣದ ಬಗ್ಗೆ ಎಸಿಬಿ ಸೂಕ್ತ ತನಿಖೆಯನ್ನು ನಡೆಸಿ ತಪ್ಪಿಸ್ಥರಿಗೆ ಶಿಕ್ಷೆಯಾಗಲಿ ಎನ್ನುವುದೇ ಸಾರ್ವಜನಿಕರ ಅನಿಸಿಕೆಯಾಗಿದೆ.

LEAVE A REPLY

Please enter your comment!
Please enter your name here