Home District ಶೋಭಾ ಸ್ಪರ್ಧೆಗೆ ಸ್ವಪಕ್ಷದವರೆ ಅಡ್ಡಗಾಲು..! ಪ್ರಭಾವಿ ಶಾಸಕರಿಂದ ಕರಂದ್ಲಾಜೆ ಸ್ಪರ್ಧೆಗೆ ವಿರೋಧ.! ಹೊಸ ಅಭ್ಯರ್ಥಿ ಕಣಕ್ಕಿಳಿಸುತ್ತಾ...

ಶೋಭಾ ಸ್ಪರ್ಧೆಗೆ ಸ್ವಪಕ್ಷದವರೆ ಅಡ್ಡಗಾಲು..! ಪ್ರಭಾವಿ ಶಾಸಕರಿಂದ ಕರಂದ್ಲಾಜೆ ಸ್ಪರ್ಧೆಗೆ ವಿರೋಧ.! ಹೊಸ ಅಭ್ಯರ್ಥಿ ಕಣಕ್ಕಿಳಿಸುತ್ತಾ ಕಮಲ ಪಕ್ಷ..!

2062
0
SHARE

ಶೋಭಾ ಕರಂದ್ಲಾಜೆ ಸ್ಪರ್ಧೆಗೆ ಸ್ವಪಕ್ಷಲ್ಲಿ ವಿರೋಧ ವ್ಯಕ್ತವಾಗಿದೆ. ಪ್ರಭಾವಿ ಶಾಸಕರೊಬ್ಬರು ಶೋಭಾ ಸ್ಪರ್ಧೆಗೆ ಅಡ್ಡಗಾಲು ಹಾಕಿದ್ದಾರೆ ಎನ್ನಲಾಗಿದೆ. ಇತ್ತ ಕ್ಷೇತ್ರದಲ್ಲಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಗೆ ಲೋಕಸಭೆಗೆ ಟಿಕೆಟ್ ನೀಡಲಿ ಎಂದು ಕೆಲ ಮುಖಂಡರು ಆಗ್ರಹಿಸಿದ್ದಾರೆ.

ಈ ನಡುವೆ ಹೊಸ ಮುಖ ಪರಿಚಯಿಸಲು ಆರ್ ಎಸ್ ಎಸ್ ಮುಂದಾಗಿದೆ ಎನ್ನಲಾಗಿದೆ.ಶೋಭಾ ಕರಂದ್ಲಾಜೆ, ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮೋದಿ ಹೆಸ್ರಲ್ಲಿ ಗೆದ್ದು ಬೀಗಿದ್ರು ಶೋಭಾ. ಈ ಬಾರಿಯೂ ಮೋದಿ ಹೆಸ್ರಲ್ಲಿ ಗೆಲ್ಬೋದು ಅಂದುಕೊಂಡಿದ್ದ ಶೋಭಾಗೆ ಸ್ವಪಕ್ಷದಲ್ಲೇ ಭಾರೀ ವಿರೋಧ ವ್ಯಕ್ತವಾಗ್ತಿದೆ. ಈ ಹಿಂದೆ ಗೋ ಬ್ಯಾಕ್ ಶೋಭಕ್ಕ ಅಭಿಯಾನದಿಂದ ಮುಜುಗರಕ್ಕೆ ಒಳಗಾಗಿದ್ದ ಕರಂದ್ಲಾಜೆಗೆ ಈಗ ಕಾಫಿನಾಡಿನ ನಗರಸಭೆಯ ಬಿಜೆಪಿ ಸದಸ್ಯರೇ ಶಾಕ್ ನೀಡಿದ್ದಾರೆ.

ಚಿಕ್ಕಮಗಳೂರು ನಗರಸಭೆಯ ಬಿಜೆಪಿ ಸದಸ್ಯರು ಶೋಭಾ ಕರಂದ್ಲಾಜೆ ಸ್ಪರ್ಧೆಗೆ ವಿರೋಧ ವ್ಯಕ್ತಪಡಿದ್ದಾರೆ. ಶೋಭಾ ಅವರು ನಮ್ಮ ನೆಚ್ಚಿನ ನಾಯಕರು. ಆದ್ರೆ ಅವರು ನಮ್ಮ ಕೈಗೆ ಸಿಗಲ್ಲ. ರಾಷ್ಟ್ರ, ರಾಜ್ಯದ ರಾಜಕಾರಣದಲ್ಲಿ ಬ್ಯುಸಿ ಇರ್ತಾರೆ. ಶೋಭಾ ಸೌಜನ್ಯಕ್ಕೂ ಒಬ್ಬ ಸದಸ್ಯರನ್ನ ಮಾತನಾಡಿಸಲ್ಲ. ಅಲ್ಲದೇ ಬೆಂಗಳೂರಿಗೆ ಹುಡುಕಿಕೊಂಡು ಹೋಗಿ ಶೋಭಾ ಅವರನ್ನ ಮಾತನಾಡಿಸಲು ಸಾಧ್ಯವಿಲ್ಲ, ಹಾಗಾಗಿ ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.

ಇನ್ನು ಶಾಸಕ ಸಿ.ಟಿ.ರವಿ ಹಾಗೂ ಬೆಂಬಲಿಗರು ಬಿಜೆಪಿ ಮುಖಂಡ ಜಯಪ್ರಕಾಶ್ ಹಗ್ಡೆ ಪರವಾಗಿ ಪರೋಕ್ಷವಾಗಿ ಸಪೋರ್ಟ್ ಮಾಡ್ತಿದ್ದಾರ ಅನ್ನೋ ಅನುಮಾನ ಮೂಡಿದೆ. ಅಲ್ಲದೇ ಜಯಪ್ರಕಾಶ್ ಹೆಗ್ಡೆ ಜೊತೆ ಗುಪ್ತವಾಗಿ ಮಾತುಕತೆ ಸಹ ನಡೆಸಿದ್ದಾರೆ. ಮತ್ತೊಂದು ಕಡೆ ಆರ್.ಎಸ್.ಎಸ್ ಮುಖಂಡ ನಾಗೇಶ್ ಅಂಗೀರಸ ಶೋಭಾ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಗೊಂದಲ ಸೃಷ್ಟಿಯಾಗ್ತಿದೆ, ಇದಕ್ಕೆ ರಾಜ್ಯ ಮಟ್ಟದ ನಾಯಕರ ವೈಫಲ್ಯ ಕಾರಣ ಅಂತಾ ಕಿಡಿಕಾರಿದ್ದಾರೆ.

ಒಟ್ಟಾರೆ ಶೋಭಾ ಕರಂದ್ಲಾಜೆಗೆ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿದೆ. ಇತ್ತ ಹೈ ಕಮಾಂಡ್ ಜಯಪ್ರಕಾಶ್ ಹೆಗ್ಡೆಗೆ ಟಿಕೆಟ್ ಕೊಡಬೇಕೋ ಅಥವಾ ಹಾಲಿ ಸಂಸದರಿಗೆ ಟಿಕೆಟ್ ನೀಡಬೇಕಾ ಅನ್ನೋ ಗೊಂದಲದಲ್ಲಿದೆ. ಈ ನಡುವೆ ಕ್ಷೇತ್ರದಲ್ಲಿ ಹೊಸ ಮುಖ ಪರಿಚಯಿಸಿದ್ರೆ ಹೇಗೆ ಅನ್ನೋ ಚಿಂತನೆಯೂ ಬಿಜೆಪಿಯದ್ದಾಗಿದೆ. ಹೊಸ ಮುಖ ಪರಿಚಯಿಸಿದೆ ಉಡುಪಿಯ ಮೊಗವೀರ ಮುಖಂಡ ಯಶಪಾಲ್ ಸ್ಪರ್ಧೆ ಮಾಡೋ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ತಿಳಸಿವೆ.

LEAVE A REPLY

Please enter your comment!
Please enter your name here