Home Cinema ಶ್ರೀಕೃಷ್ಣದೇವರಾಯನಾಗಿ ದರ್ಶನ್..! ದರ್ಶನ್ ಕೈ ಇಟ್ಟಿರೋ ಹೊಸ ಚಾಲೆಂಜ್ ಕೇಳಿದ್ರೆ ಇಡೀ ಭಾರತೀಯ ಚಿತ್ರರಂಗವೇ ಶೇಕ್..!!

ಶ್ರೀಕೃಷ್ಣದೇವರಾಯನಾಗಿ ದರ್ಶನ್..! ದರ್ಶನ್ ಕೈ ಇಟ್ಟಿರೋ ಹೊಸ ಚಾಲೆಂಜ್ ಕೇಳಿದ್ರೆ ಇಡೀ ಭಾರತೀಯ ಚಿತ್ರರಂಗವೇ ಶೇಕ್..!!

1872
0
SHARE

ಹೊಸ ಚಾಲೆಂಜ್‌ಗಳಿಗೆ ’ವಿತ್ ಔಟ್ ಫಿಯರ್’ ಕೈ ಹಾಕುವ ಸ್ವಭಾವಕ್ಕೆ ತಾನೇ ದರ್ಶನ್‌ರನ್ನ ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ಅನ್ನೋದು. ಈಗ ದರ್ಶನ್ ಕೈ ಇಟ್ಟಿರೋ ಹೊಸ ಚಾಲೆಂಜ್ ಕೇಳಿದ್ರೆ ಇಡೀ ಭಾರತೀಯ ಚಿತ್ರರಂಗವೇ ಶೇಕ್ ಆಗುತ್ತೆ.

ಯಾವಾಗಲೂ ತಮ್ಮ ಬಿಂದಾಸ್ ಆಟಿಟ್ಯೂಡ್‌ನಿಂದ ಎಲ್ಲರಿಗೂ ಚಮಕ್ ಕೊಡೊ ದರ್ಶನ್ ಈಗ ತಮ್ಮ ಸಾಹಸಿ ನೇಚರ್‌ನಿಂದ ಎಲ್ಲರ ಗಮನ ಸೆಳೆದಿದಾರೆ. ಮೊನ್ನೆ ನಡೆದ ಹಂಪಿ ಉತ್ಸವದಲ್ಲಿ ಡಿ ಬಾಸ್ ಅಭಿಮಾನಿಗಳು ಕುಣಿದು ಕುಪ್ಪಳಿಸುವಂತಹ ಹ್ಯಾಪಿ ಸ್ಟೇಟ್‌ಮೆಂಟ್ ಕೊಟ್ಟಿದಾರೆ. ಪೌರಾಣಿಕ ಪಾತ್ರಗಳನ್ನ ನೀರು ಕುಡಿದಂತೆ ಮಾಡುವ ಕ್ಯಾಪಸಿಟಿ ಹೊಂದಿರೋ ದಾಸನಿಗೆ ಯಾಕೋ ಮತ್ತೆ ಒಂದು ದೊಡ್ಡಮಟ್ಟದ ಪೌರಾಣಿಕ ಸಿನಿಮಾ ಮಾಡಬೇಕು ಎನ್ನುವ ಆಸೆ ಉಂಟಾಗಿದೆಯಂತೆ.

ಸದ್ಯದಲ್ಲೇ ಕರ್ನಾಟಕ ಇತಿಹಾಸದಲ್ಲೇ ಹೊಸ ಭಾಷ್ಯ ಬರೆದ ವಿಜಯನಗರ ಸಾಮ್ರಾಜ್ಯದ ಒಡೆಯ ಶ್ರೀಕೃಷ್ಣದೇವರಾಯನಾಗಿ ಮಿಂಚುವ ಗ್ರೀನ್ ಸಿಗ್ನಲ್ ಕೊಟ್ಟಿದಾರೆ ಈ ಬಾಕ್ಸ್ ಆಫೀಸ್ ಸುಲ್ತಾನ್..
ಈ ಸ್ವೀಟ್ ನ್ಯೂಸ್ ಕೇಳಿದ ದಚ್ಚು ಫ್ಯಾನ್ಸ್ ಈಗ ಹಬ್ಬ ಮಾಡ್ತಿದಾರೆ ಬಿಡಿ. ಯಾಕಂದ್ರೇ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕುರುಕ್ಷೇತ್ರ ಏಪ್ರಿಲ್ ಐದಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗ್ತಿದೆ. ಇದರ ಬೆನ್ನಲ್ಲೇ ಈ ಸಂತಸದ ಸುದ್ಧಿ ಅಭಿಮಾನಿಗಳ ಪಾಲಿಗೆ ಅರಗಿಸಿಕೊಳ್ಳಲಾಗದ ಸಿಹಿಯನ್ನೇ ಉಣಬಡಿಸಿದೆ.

ಈಗಾಗಲೇ ಶ್ರೀ ಕೃಷ್ಣದೇವರಾಯನ ಕ್ಯಾರೆಕ್ಟರ್‌ನಲ್ಲಿ ದರ್ಶನ್ ಹೇಗೆ ಕಾಣಿಸ್ತಾರೆ? ಗೆಟಪ್ ಯಾವ ರೀತಿ ಇರುತ್ತೆ? ಹಾಗೂ ಮುಖ್ಯವಾಗಿ ಸಿನಿಮಾದ ಬಜೆಟ್ ಲೆಕ್ಕಚಾರವೇನು ಎನ್ನುವ ಕುತೂಹಲಗಳ ಸುರಿಮಳೆಯೇ ಸುರಿದುಬಿಟ್ಟಿದೆ.ಹಾಗೇ ನೋಡಿದ್ರೆ ದರ್ಶನ್‌ಗೆ ಪೌರಾಣಿಕ ಸಿನಿಮಾ ಜಾನರ್ ಹೊಸತೇನಲ್ಲ. ದರ್ಶನ್ ಅಲ್‌ರೆಡಿ ಪ್ರೇಕ್ಷಕನ ಮುಂದೆ ’ಸಂಗೊಳ್ಳಿ ರಾಯಣ್ಣ’ನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ’ಕುರುಕ್ಷೇತ್ರ’ದಲ್ಲಿ ದುರ್ಯೋಧನ ಪಾತ್ರಕ್ಕೆ ಪರಕಾಯ ಪ್ರವೇಶ ಪಡೆದಿದ್ದಾರೆ. ’ಮದಕರಿ ನಾಯಕ’ನ ತಯಾರಿ ಕೂಡ ಜೋರಾಗೇ ಇದೆ.

ಇದರ ಮಧ್ಯೆಯೇ ಈಗ ದರ್ಶನ್ ಶ್ರೀ ಕೃಷ್ಣದೇವರಾಯನಾಗಿ ಎಂಟ್ರಿ ಕೊಡ್ತಿರೋ ನ್ಯೂಸ್ ಗಾಂಧಿನಗರದಲ್ಲಿ ಬಹುಚರ್ಚಿತ ವಿಷಯವಾಗಿಹೋಗಿದೆ. ಅಕಸ್ಮಾತ್ ಕೃಷ್ಣದೇವರಾಯನ ಲೈಫ್ ಹಿಸ್ಟರಿ ಏನಾದ್ರೂ ತೆರೆಮೇಲೆ ಬಂದ್ರೆ ದರ್ಶನ್ ಬಿಟ್ಟು ಬೇರೆ ಯಾರು ಮಾಡೋಕೆ ಚಾನ್ಸೆ ಇಲ್ಲ ಎನ್ನುವ ಓಪಿನಿಯನ್‌ಗಳು ಓಡಾಡ್ತಿವೆ.’ನನಗೆನಪ್ಪ ನಾನು ಒಬ್ಬ ನಟನಾಗಿ ಶ್ರೀಕೃಷ್ಣದೇವರಾಯ ಪಾತ್ರ ಮಾಡೋಕೆ ಓಕೆ ಅಂತೀನಿ. ಆದರೆ ನಿರ್ಮಾಪಕ ಮುನಿರತ್ನ ಅವರು ಸಿನಿಮಾ ನಿರ್ಮಾಣಕ್ಕೆ ಮುಂದಾಗಬೇಕಲ್ಲ’ ಅಂತ ಸ್ಮೈಲ್ ಕೊಟ್ಟಿದಾರೆ ಈ ದಚ್ಚು.

ಅಂದ್ರೇ ಮುನಿರತ್ನ ಏನಾದ್ರೂ ಪ್ರೊಡ್ಯೂಸ್ ಮಾಡೋಕೆ ಮನಸ್ಸು ಮಾಡಿದ್ರೆ ದರ್ಶನ್ ಕೃಷ್ಣದೇವರಾಯನಾಗಿ ಸ್ಯಾಂಡಲ್‌ವುಡ್‌ನ ರೂಲ್ ಮಾಡೋದಂತೂ ಫಿಕ್ಸ್ ಎನ್ನಿ. ಶ್ರೀ ಕೃಷ್ಣದೇವರಾಯ ಸಿನಿಮಾ ಮಾಡುವ ವಿಚಾರದಲ್ಲಿ ನಿರ್ಮಾಪಕ ಮುನಿರತ್ನ ಫೋನ್‌ಕಾಲ್‌ಗಾಗಿ ಕಾಯ್ತಿದಾರೆ ದರ್ಶನ್. ಆದರೆ ಪಾತ್ರಕ್ಕೆ ಜೀವ ತುಂಬಬಲ್ಲೆ ಎನ್ನುವುದು ಮಾತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ ಭರವಸೆಯ ಮಾತುಗಳು. ಅಂತೂ ಹಂಪಿ ಉತ್ಸವವೇ ಈ ಪ್ರಾಮೀಸ್‌ಗೆ ಸಾಕ್ಷಿಯಾಗಿದ್ದು ಕಾಕತಾಳೀಯ ಎನ್ನಬಹುದೇನೊ..

ಇನ್ನು ನಿರ್ಮಾಪಕ ಮುನಿರತ್ನ ಕೂಡ ಚಿತ್ರ ನಿರ್ಮಾಣದ ವಿಷಯವಾಗಿ ಹಿಂದೆ ಬಿದ್ದಿಲ್ಲ. ಮುನಿರತ್ನ ಶ್ರೀಕೃಷ್ಣದೇವರಾಯನ ಜೀವನವನ್ನ ಸಿನಿಮಾ ಮಾಡೋದಕ್ಕೆ ಸಾಕಷ್ಟು ಹೊಂವರ್ಕ್ ಬೇಕು ಅಂತಾರೆ. ಇತಿಹಾಸಕರಿಂದ ಸಿನಿಮಾ ನಿರ್ಮಿಸೋಕೆ ಇನ್ನಷ್ಟು ಮಾಹಿತಿಯನ್ನ ಮುನಿರತ್ನ ಕಲೆಹಾಕುತ್ತಿದ್ದರಂತೆ. ವಿಜಯನಗರ ಸಾಮ್ರಾಜ್ಯದ ಕಂಪ್ಲೀಟ್ ರೆಕಾರ್ಡ್‌ಗಳನ್ನೂ ಸಂಗ್ರಹಿಸಬೇಕಾಗಿದೆಯಂತೆ. ಎಲ್ಲರಿಗೂ ಗೊತ್ತಿರೋ ಹಾಗೇ ಶ್ರೀಕೃಷ್ಣ ದೇವರಾಯನ ಜೀವನವನ್ನ ಸಿನಿಮಾ ಮಾಡೋದು ಅಷ್ಟು ಸುಲಭದ ಕೆಲಸವಲ್ಲ. ಈ ಸಿನಿಮಾಗೆ ದೊಡ್ಡ ಸ್ಟಾರ್ ಕಾಸ್ಟ್ ಇರಬೇಕು.

ತಾಂತ್ರಿಕ ವರ್ಗ ಕೂಡ ಭಾರೀ ದೊಡ್ಡದಾಗಿ ಸದ್ದು ಮಾಡಬೇಕು. ಲೊಕೆಷನ್‌ಗಳ ಹುಡುಕಾಟಕ್ಕೆ ವರ್ಷಗಳು ಕಳೆದುಹೋಗುತ್ವೆ. ಅಂತಹುದರಲ್ಲಿ ಈಗ ದರ್ಶನ್ ನೀಡಿರೋ ಸ್ಟೇಟ್‌ಮೆಂಟ್ ಕುತೂಹಲಗಳ ಜೊತೆಗೆ ಕೆಲವು ಪ್ರಶ್ನೆಗಳನ್ನೂ ಸೃಷ್ಟಿಸಿದೆ. ಹಂಪಿ ಉತ್ಸವ ದರ್ಶನ್ ಮನಸ್ಸಿನ ಆಸೆಗೆ ವೇದಿಕೆಯಾಗಿದೆಯಷ್ಟೇ. ಅದು ರಿಯಾಲಿಟಿ ರೂಪವನ್ನ ಪಡೆದುಕೊಳ್ಳಲು ವರ್ಷಗಳೇ ಕಳೆಯಬಹುದು.

ಅಂತೂ ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ವರನಟ ಡಾ.ರಾಜ್‌ಕುಮಾರ್ ನಂತರ ದರ್ಶನ್ ಶ್ರೀಕೃಷ್ಣದೇವರಾಯನ ಪಾತ್ರಕ್ಕೆ ಕೈ ಹಾಕಿರುವುದು ಧೈರ್ಯದ ಸಂಕೇತವಲ್ಲದೇ ಬೇರೆನೂ? ಅದಷ್ಟು ಬೇಗ ಶ್ರೀಕೃಷ್ಣದೇವರಾಯನಾಗಿ ದರ್ಶನ್ ಪರದೆ ಮೇಲೆ ಆರ್ಭಟಿಸಲಿ ಎನ್ನುವುದಷ್ಟೇ ದಚ್ಚು ಅಭಿಮಾನಿಗಳ ಒಂದು ಮಹದಾಸೆ.

LEAVE A REPLY

Please enter your comment!
Please enter your name here