Home District ಶ್ರೀಗಳ ಅಗಲಿಕೆಗೆ ಕರುನಾಡು ಸ್ಥಬ್ದ..! ಎಲ್ಲೆಡೆ ಮೌನಾಚರಣೆ ಮೂಲಕ ಮೆರವಣಿಗೆ..! ಮುಗಿಲು ಮುಟ್ಟಿದ ಭಕ್ತರ ಆಕ್ರಂದನ…

ಶ್ರೀಗಳ ಅಗಲಿಕೆಗೆ ಕರುನಾಡು ಸ್ಥಬ್ದ..! ಎಲ್ಲೆಡೆ ಮೌನಾಚರಣೆ ಮೂಲಕ ಮೆರವಣಿಗೆ..! ಮುಗಿಲು ಮುಟ್ಟಿದ ಭಕ್ತರ ಆಕ್ರಂದನ…

555
0
SHARE

ಶತಾಯುಷಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ನಿನ್ನೆ ಬೆಳಗ್ಗೆ 11:45ಕ್ಕೆ ಲಿಂಗೈಕ್ಯರಾಗಿದ್ದಾರೆ. ನಡೆದಾಡುವ ದೇವರು ಲಿಂಗೈಕ್ಯರಾಗುತ್ತಿದ್ದಂತೆ ಮಠದಲ್ಲಿ ಬಡ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ರು. ಅಲ್ಲದೇ ರಾತ್ರಿಯಿಡೀ ನಾಡಿನಾದ್ಯಂತ ಭಕ್ತರು ಕಂಬನಿ ಮಿಡಿದಿದ್ದಾರೆ.ಸಾಂಸ್ಕೃತಿಕನಗರಿ ಮೈಸೂರಿನ ಪಾಠಶಾಲಾ ವೃತ್ತದಲ್ಲಿ ನಡೆದಾಡುವ ದೇವರಿಗೆ ಭಕ್ತಾಧಿಗಳು ಭಜನೆ ಮಾಡುವ ಮೂಲಕ ನಮನ ಸಲ್ಲಿಸಿದ್ದಾರೆ.

ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳಿಗೆ ಕುಂದಾನಗರಿಗರು ಕಂಬನಿ ಮಿಡದಿದ್ದಾರೆ. ನಗರದ ಚೆನ್ನಮ್ಮ ವೃತ್ತದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಕ್ಯಾಂಡಲ್ ದೀಪ ಹಚ್ಚಿ ಒಂದು ನಿಮಿಷ ಮೌನ ಆಚರಿಸುವ ಮೂಲಕ ಬೆಳಗಾವಿ ಜನತೆ ಕಂಬನಿ ಮಿಡಿದರು.ಇನ್ನೂ ಹಾಸನ ನಗರದಲ್ಲೂ ವೀರಶೈವ ಸಮಾಜ ಮತ್ತು ನಾಗರೀಕ ವೇದಿಕೆಯಿಂದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಶೃಂದ್ದಾಂಜಲಿ ಸಲ್ಲಿಸಲಾಯ್ತು. ಹೇಮಾವತಿ ಸರ್ಕಲ್ ನಲ್ಲಿ ಶ್ರೀಗಳ ಅನುಯಾಯಿಗಳು, ಭಕ್ತರು ದೀಪ ಬೆಳಗಿ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸಿದ್ರು.

ಇತ್ತ ಹಾವೇರಿಯ ಎಂಜಿ ವೃತ್ತದಲ್ಲಿ ಭಕ್ತಾಧಿಗಳು ಮೇಣದ ಬತ್ತಿ ಹಿಡಿದು, 2 ನಿಮಿಷಗಳ ಕಾಲ ಮೌನಾಚರಣೆ ಮಾಡಿದ್ರು. ಅಮರ ಶಿವಕುಮಾರ ಸ್ವಾಮೀಜಿ ಎಂದು ಘೋಷಣೆಗಳು ಮೊಳಗಿದವು.ಯಾದಗಿರಿ ನಗರದ. ವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ಗಾಂಧಿ ವೃತ್ತದವರೆಗೆ ಮೌನ ಮೆರವಣಿಗೆ ಮಾಡಿದ ನಂತ್ರ ಶ್ರೀಗಳ ಭಾವಚಿತ್ರದ ಮುಂದೆ ದೀಪ ಹಚ್ಚಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಚಾಮರಾಜನಗರದಲ್ಲೂ ಪರಮ ಪೂಜ್ಯ ನಡೆದಾಡುವ ದೇವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮೆಣದ ಬತ್ತಿ ಹಿಡಿದು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರದ್ದಾಂಜಲಿ ಸಲ್ಲಿಸಿದ್ರು.

ಅಲ್ಲದೇ ಬೆಳಗ್ಗೆ ಅಂಗಡಿಗಳನ್ನು ಬಂದ್ ಮಾಡಿ, ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದ್ದರು.ಕಲಬುರಗಿಯಲ್ಲೂ ಭಕ್ತಾಧಿಗಳು ಸೂಪರ್ ಮಾರ್ಕೆಟ್‌ನಿಂದ ಬಸ್ ನಿಲ್ದಾಣವರೆಗೆ ಮೆಣದ ಬತ್ತಿ ಮೆರವಣಿಗೆ ನಡೆಸಲಾಯಿತು. ಇದೇ ವೇಳೆ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದ್ರು.ದಾವಣಗೆರೆಯಲ್ಲೂ ಬಿಜೆಪಿ ಕಾರ್ಯಕರ್ತರು ಭಜನೆ ಮಾಡುವ ಮೂಲಕ ಶ್ರೀಗಳಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯ್ತು.

ಕೊಪ್ಪಳದಲ್ಲಿ ನಡೆದಾಡುವ ದೇವರಿಗೆ ಮೇಣದ ಬತ್ತಿ ಹಿಡಿದು ಮೌನ ಮೆರವಣಿಗೆ ನಡೆಸಲಾಯ್ತು.ಇನ್ನೂ ಹುಬ್ಬಳ್ಳಿ-ಧಾರವಾಡದಲ್ಲೂ ಶತಾಯುಷಿದೆ ಕಂಬಮಿ ಮಿಡಿದಿದ್ದಾರೆ. ಹುಬ್ಬಳ್ಳಿಯಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ರೆ, ಧಾರವಾಡದ ಕೆಲಗೇರಿಯಲ್ಲಿ ಮರಳಿನ ಮೂಲಕ ಶ್ರೀಗಳ ಕಲಾಕೃತಿ ಬಿಡಿಸಿ ನಮನ ಸಲ್ಲಿಸಿದ್ದಾರೆ.

ಹಗರಿಬೊಮ್ಮನಹಳ್ಳಿ, ಕುರುಗೋರು ಪಟ್ಟಣದಲ್ಲಿ ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಭಜನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.ಇನ್ನು ಶಿವಮೊಗ್ಗ, ಹಾಸನ, ಕೋಲಾರ,ಚಿಕ್ಕಬಳ್ಳಾಪುರ, ಚಿತ್ರದುರ್ಗ, ಮಂಗಳೂರು, ಉಡುಪಿ, ವಿಜಯಪುರ, ಬೀದರ್, ಚಿಕ್ಕಮಗಳೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲೂ ಶತಾಯುಷಿ ಭಾವಚಿತ್ರದ ಮುಂದೆ ಮೆಣದ ಬತ್ತಿ ಹಚ್ಚುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here