Home Cinema ಶ್ರೀಮುರಳಿ, ಮಹೇಶ್ ಬಾಬು, ಸುದೀಪ-ಮಹಾ ಸಂಗಮ..! ಗೊತ್ತಾ..! ಮೂವರು ಸೂಪರ್ ಸ್ಟಾರ‍್ಸ್‌ಗಳ ಭೇಟಿ ಹಿಂದಿನ ಮರ್ಮ..!

ಶ್ರೀಮುರಳಿ, ಮಹೇಶ್ ಬಾಬು, ಸುದೀಪ-ಮಹಾ ಸಂಗಮ..! ಗೊತ್ತಾ..! ಮೂವರು ಸೂಪರ್ ಸ್ಟಾರ‍್ಸ್‌ಗಳ ಭೇಟಿ ಹಿಂದಿನ ಮರ್ಮ..!

468
0
SHARE

ಶ್ರೀಮುರಳಿ.. ಕನ್ನಡ ಚಿತ್ರರಂಗದ ರೋರಿಂಗ್ ಸ್ಟಾರ್. ಭರಾಟೆ ಮೂಲಕ ಅಭಿಮಾನಿಗಳಿಗೆ ಹಬ್ಬದೂಟ ಹಾಕಲು ಸಿದ್ಧವಾಗ್ತಿರುವ ಶ್ರೀಮುರಳಿ, ಇತ್ತೀಚಿಗೆ ಮಹೇಶ್ ಬಾಬು ಅವ್ರನ್ನ ಮೀಟ್ ಮಾಡಿದ್ದಾರೆ.

ಇದುವೇ ಇದೀಗ ರೋರಿಂಗ್ ಫ್ಯಾನ್ಸ್ ಮುಖದ ಕಳೆಯನ್ನೂ ಹೆಚ್ಚಿಸಿದೆ.ಯಸ್, ಶ್ರೀಮುರಳಿ ಹಾಗೂ ಮಹೇಶ್ ಬಾಬು ಭೇಟಿಯಾಗಿದ್ದಾರೆ. ಸುಮಾರು ಒಂದು ಘಂಟೆಗೂ ಅಧಿಕ ಕಾಲ ಕಷ್ಟ ಸುಖ ಹಂಚಿಕೊಂಡಿದ್ದಾರೆ. ಹಾಗಂಥ.. ಇಬ್ಬರೂ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ತಾರಾ ಅಂಥ ನೀವ್ ಅನ್ಕೊಳ್ಳೋ ಹಂಗಿಲ್ಲ. ಕಾರಣ, ಇದು ಜಸ್ಟ್ ಕ್ಯಾಶುವಲ್ ಮೀಟ್ & ಗ್ರೀಟ್ ಸೆಷನ್.ಹೌದು, ಅಸಲಿಗೆ ಶ್ರೀ ಮುರಳಿ ಅಭಿನಯದ ಭರಾಟೆ ಚಿತ್ರದ ಚಿತ್ರೀಕರಣ ಪಕ್ಕದ ಹೈದ್ರಾಬಾದ್‌ನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ.

ಇಲ್ಲೇ.. ಮಹೇಶ್ ಬಾಬು ಅಭಿನಯದ ಮಹರ್ಷಿಯ ಚಿತ್ರೀಕರಣನೂ ನಡೆಯುತ್ತಿದೆ. ಇದೇ ವೇಳೆ.. ಎರಡು ಚಿತ್ರಗಳ ಚಿತ್ರೀಕರಣದ ಬಿಡುವಿನ ವೇಳೆ ರೋರಿಂಗ್ ಸ್ಟಾರ್ & ಟಿಟೌನ್ ಪ್ರಿನ್ಸ್ ಸಂಗಮವಾಗಿದೆ.ಇನ್ನೂ, ಇದೇ ದಿವ್ಯ ಸಂಗಮದಿಂದ, ಅನೇಕ ವಿಷಯಗಳ ಬಗ್ಗೆ ಚರ್ಚೆಗಳನ್ನೂ ಸ್ಟಾರ್ ದ್ವಯರು ಮಾಡಿದ್ದಾರೆ. ಉಗ್ರಂ ನನ್ನ ನೆಚ್ಚಿನ ಸಿನಿಮಾಗಳಲ್ಲೊಂದು ಅನ್ನುವ ಕಾಂಪ್ಲಿಮೆಂಟ್‌ನ್ನ ಮಹೇಶ್ ಬಾಬು ಶ್ರೀಮುರಳಿಗೆ ನೀಡಿದ್ರೆ, ಶ್ರೀ ಮುರಳಿ ಶ್ರೀಮಂತುಡು ಇಸ್ ಮೈ ಫೇವರೆಟ್ ಮೂವಿ ಅನ್ನುವ ಮಾತುಗಳನ್ನಾಡಿದ್ದಾರೆ.

ಇದ್ರ ನಡುವೆ.. ಕೆ.ಜಿ.ಎಫ್ ಚಿತ್ರದ ರಣಕೇಕೆ. ವಿಸ್ತಾರವಾಗಿರುವ ಕನ್ನಡ ಚಿತ್ರರಂಗದ ಮಾರುಕಟ್ಟೆಯ ಬಗ್ಗೆಯೂ ಮಾತುಕಥೆ ಮಾಡಿದ್ದಾರೆ ಶ್ರೀಮುರಳಿ ಹಾಗೂ ಮಹೇಶ್ ಬಾಬು. ಇಷ್ಟೆಲ್ಲಾ ಚರ್ಚೆಗಳೂ ನಡೆಯುತ್ತಿರುವಾಗ ಡೈಲಾಗ್ ಕಿಂಗ್ ಸಾಯಿಕುಮಾರ್ ಕೂಡಾ ಇದ್ದರು ಅನ್ನೋದು ನಿಮಗೆ ಗೊತ್ತಿರಲಿ.ಬರೀ ಮಹೇಶ್ ಬಾಬು ಅಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಬಾದ್ ಷಾ ಸುದೀಪ ಜೊತೆನೂ, ಶ್ರೀಮುರಳಿ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡಿದ್ದಾರೆ.

ಹೌದು, ನಿಮಗೆ ಗೊತ್ತಿರಲಿ ಸುದೀಪ ಅಭಿನಯದ ಬಹುನಿರೀಕ್ಷೆಯ ಪೈಲ್ವಾನ್ ಚಿತ್ರದ ಚಿತ್ರೀಕರಣನೂ ಇದೇ ಹೈದ್ರಾಬಾದ್‌ನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಹೀಗಿರುವಾಗ ಕನ್ನಡದ ಕಂದಮ್ಮಗಳೂ ಭೇಟಿಯಾಗ್ದೇ ಇರಲು ಹೇಗೆ ಸಾಧ್ಯ. ಇನ್ನೂ ಹೇಳಿ ಕೇಳಿ ಸುದೀಪ ಹಾಗೂ ಶ್ರೀಮುರಳಿ ನಡುವೆ ಆತ್ಮೀಯತೆ ತುಂಬಾನೇ ಇದೆ. ಇವೆಲ್ಲ ಕಾರಣದಿಂದ ಇಬ್ಬರು ಭೇಟಿಯಾಗಿದ್ದಾರೆ. ಕುಶಲೋಪರಿ ವಿಚಾರಿಸಿದ್ದಾರೆ. ಪೈಲ್ವಾನ್ ಅಂಗಳದಲ್ಲಿ ಹರಟೆ ಹೊಡೆದಿದ್ದಾರೆ.ಇನ್ನೂ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿರುವ ಪೈಲ್ವಾನ್ ಚಿತ್ರದ ಚಿತ್ರೀಕರಣದಲ್ಲಿ ಸುನೀಲ್ ಶೆಟ್ಟಿನೂ ಭಾಗಿಯಾಗಿದ್ದಾರೆ.

ಹಾಗಾಗೇ, ಸುನೀಲ್ ಶೆಟ್ಟಿಯನ್ನೂ ಭೇಟಿಯಾಗಿರುವ ಶ್ರೀಮುರಳಿ, ಇದೇ ವೇಳೆ ಸುನೀಲ್ ಶೆಟ್ಟಿಗೆ ತಮ್ಮ ಭರಾಟೆ ಚಿತ್ರದ ಟೀಸರ್‌ನ್ನೂ ತೋರಿಸಿದ್ದಾರೆ. ಟೀಸರ್ ನೋಡಿದ ಸುನೀಲ್ ಶೆಟ್ಟಿಯ ದಿಲ್ ಖುಷಿಯಾಗಿದೆ ಅನ್ನೋದು ನೀವ್ ಗಮನಿಸಬೇಕಾದ ಸಂಗತಿ.ಅಂದ ಹಾಗೇ ಹೈದ್ರಾಬಾದ್‌ನಲ್ಲಿ ಬರೀ ಸುದೀಪ, ಶ್ರೀಮುರಳಿಯಷ್ಟೇ ಬೀಡು ಬಿಟ್ಟಿಲ್ಲ. ಪೊಗರು ತೋರಿಸಲು ಸಿದ್ಧವಾಗಿರುವ ಧ್ರುವಾನೂ ಹೈದ್ರಾಬಾದ್‌ನಲ್ಲೇ ಠಿಕಾಣಿ ಹೂಡಿದ್ದಾರೆ.

ಹೌದು, ಧ್ರುವಾ ಅಭಿನಯದ ಪೊಗರು ಚಿತ್ರದ ಚಿತ್ರೀಕರಣನೂ ಪೈಲ್ವಾನ್ ಹಾಗೂ ಭರಾಟೆಯ ಸೆಟ್‌ಗಳ ಸುತ್ತಮುತ್ತನೇ ನಡೆಯುತ್ತಿದೆ. ಹೀಗಿದ್ಮೇಲೆ.. ಚಿತ್ರರಂಗದ ಹಿರಿಯರನ್ನ ಭೇಟಿಯಾಗ್ದೇ ಇರಲು ಧ್ರುವಾರಿಂದ ಹೇಗೆ ಸಾಧ್ಯ. ಅದ್ರಲ್ಲೂ ಭರಾಟೆ, ಧ್ರುವಾನ ಕುಚಿಕೂ ದೋಸ್ತು ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರ‍್ತಿರುವ ಸಿನಿಮಾ. ಹಾಗಾಗಿ, ಸ್ನೇಹಿತನ ಸಿನಿಮಾ ಸೆಟ್‌ಗೂ ಧ್ರುವಾ ಭೇಟಿ ನೀಡಿದ್ದಾರೆ.

ಶ್ರೀಮುರಳಿ ಜೊತೆ ಕೆಲ ಕಾಲ ಕಳೆದಿದ್ದಾರೆ. ನೆನಪಿಗಾಗಿ.. ಫೋಟೊಗೂ ಫೋಸ್ ಕೊಟ್ಟಿದ್ದಾರೆ ಶ್ರೀಮುರಳಿ ಹಾಗೂ ಧ್ರುವಾ.ಅದೇನೆ ಇರ‍್ಲಿ, ಒಟ್ನಲ್ಲಿ ಹೈದ್ರಾಬಾದ್‌ನಲ್ಲಿ ಕನ್ನಡದ ಕಲಾವಿದರ ದಂಡು ಸೇರಿದೆ. ಒಟ್ಟಿಗೆ ಹರಟೆ ಹೊಡೆದಿದೆ. ಒಂದಷ್ಟು ನೆನಪುಗಳನ್ನ.. ತಮ್ಮ ನೆನಪಿನ ಬುತ್ತಿಯಲ್ಲಿರಿಸಿಕೊಂಡು ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದೆ. ಸಿಂಪಲ್ಲಾಗ್ ಹೇಳಬೇಕಂದ್ರೆ ಹೈದ್ರಾಬಾದ್‌ನಲ್ಲೀಗ ಕನ್ನಡ ಚಿತ್ರರಂಗದ್ದೇ ಭರಾಟೆ..!

LEAVE A REPLY

Please enter your comment!
Please enter your name here