Home District ಶ್ರೀರಾಮುಲು ಗಂಡ್ಸಾಗಿದ್ರೆ ಇಲ್ಲಿ ಗೆದ್ದು ತೋರಿಸಲಿ ಎಂದು ತಿಪ್ಪೇಸ್ವಾಮಿ ಓಪನ್ ಚಾಲೆಂಜ್..??? ತಾರಕಕ್ಕೇರಿದೆ ಕೋಟೆನಾಡಿನ ಜಿದ್ದಾಜಿದ್ದು..!!

ಶ್ರೀರಾಮುಲು ಗಂಡ್ಸಾಗಿದ್ರೆ ಇಲ್ಲಿ ಗೆದ್ದು ತೋರಿಸಲಿ ಎಂದು ತಿಪ್ಪೇಸ್ವಾಮಿ ಓಪನ್ ಚಾಲೆಂಜ್..??? ತಾರಕಕ್ಕೇರಿದೆ ಕೋಟೆನಾಡಿನ ಜಿದ್ದಾಜಿದ್ದು..!!

538
0
SHARE


ನಿನ್ನೆ ಮೊಳಕಾಲ್ಮೂರಿನಲ್ಲಿ ನಡೆದ ಪ್ರತಿಭಟನೆ ಬಿಸಿ ಇನ್ನು ಆರಿಲ್ಲ. ಸಂಸದ ಶ್ರೀರಾಮುಲು, ಶಾಸಕ ತಿಪ್ಪೇಸ್ವಾಮಿ ನಡುವಿನ ಸಮರ ಇನ್ನು ಮುಂದುವರಿದಿದೆ. ಮೊಳಕಾಲ್ಮೂರಿನಲ್ಲಿ ನಾನು ಗೆದ್ದೆ ಗೆಲ್ತೇನೆ ಅಂತಾ ಶ್ರೀರಾಮುಲು ಪಂಥ್ವಾಹಾನ ನೀಡಿದ್ರೆ, ಇನ್ನು, ತಿಪ್ಪೇಸ್ವಾಮಿ ಶ್ರೀರಾಮುಲು ವಿರುದ್ಧ ಸವಾಲ್ ಹಾಕಿದ್ದು, ಶ್ರೀರಾಮುಲು ಗಂಡಸಾಗಿದ್ರೆ ನನ್ನ ವಿರುದ್ಧ ಗೆಲ್ಲಿ ತೋರಿಸಲಿ ಎಂದು ತೊಡೆ ತಟ್ಟಿದ್ದಾರೆ.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದೆ. ಮೊದಲು ಒಂದೇ ಪಕ್ಷದಲ್ಲಿದ್ದು ಬಳ್ಳಾರಿಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಕಟ್ಟಿದವರು ಇಂದು ಇಬ್ಬರು ಒಬ್ಬರಿಗೊಬ್ಬರು ಕಂಡರೇ ಕೆಂಡ ಕಾರುವಂತಾಗಿದ್ದಾರೆ.

ಇನ್ನೂ ಕೊನೆಯದಾಗಿ ಹೇಳ್ತಿನಿ ನನ್ನ ಬಗ್ಗೆ ಮಾತಾಡಿದರೆ ನಿಮ್ಮ ಜಾತಕ ಎಳೆ ಎಳೆಯಾಗಿ ಬಿಚ್ಚಿಡುವೆ.ನಿಮ್ಮ ಪಾಡಿಗೆ ನೀವು ಇದ್ದರೆ ಸೂಕ್ತ ಎಂದು ಶ್ರೀರಾಮುಲುಗೆ ತಿಪ್ಪೇಸ್ವಾಮಿ ಎಚ್ಚರಿಕೆ ನೀಡಿದ್ದಾರೆ…


ಮೊಳಕಾಲ್ಮೂರು ಕ್ಷೇತ್ರದಲ್ಲಿ ತಿಪ್ಪೇಸ್ವಾಮಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ತಮ್ಮ ಮುಂದಿನ ನಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಇಂದು ಸ್ವಗ್ರಾಮ ನೇರಲಗುಂಟೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ರು, ಈ ವೇಳೆ ಕಾಂಗ್ರೆಸ್‌ನಿಂದ ಆಹ್ವಾನ ಬಂದ್ರೆ ಕಾಂಗ್ರೆಸ್ ಪರವಾಗಿ ಅಥವಾ ಪಕ್ಷೇತರವಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಂಡ್ರು. ಹಾಗೂ ರಾಮುಲುಗೆ ಬಳ್ಳಾರಿಯಲ್ಲಿ ಗೆಲ್ಲುವ ತಾಕತ್ತಿಲ್ಲ, ಆದಕ್ಕೆ ಇಲ್ಲಿ ಬಂದು ಸ್ಪರ್ಧಿಸುತ್ತಿದ್ದಾರೆ. ಶ್ರೀರಾಮುಲು ಗಂಡ್ಸಾಗಿದ್ರೆ ಇಲ್ಲಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ್ರು.

ಬಿಜೆಪಿಗೆ ಯಾರು ಓಟು ಕೊಡಬೇಡಿ ನೀನು ಏನು ಕಿಸಿಯುತ್ತಿಯಾ ಇಲ್ಲಿ ಬಂದು ಮನುಷ್ಯತ್ವ ಇದ್ದರೆ ವಿಶ್ವಾಸ ಗಳಿಸಬೇಕು.ಇಲ್ಲಿನ ಜನ ತಕ್ಕ ಪಾಠ ಕಲಿಸುತ್ತಾರೆ.ಮ್ಯಾಸ ನಾಯಕರನ್ನ ಅಲ್ಲಡಿಸಲು ಬಂದಿದ್ದಿಯಾ…ಇಲ್ಲಿ ನಡೆಯಲ್ಲ ಬಳ್ಳಾರಿಯಲ್ಲಿ ನೋಡಿಕೋ.ನಾಗೇಂದ್ರ, ಆನಂದ್ ಸಿಂಗ್ ಎಲ್ಲಿ ಹೋದರು…ನಿನ್ನ ಜೊತೆಗೆ ಇದ್ದವರನ್ನೆ ತುಳಿಯಲು ಮುಂದಾಗಿದ್ದಿಯಾ.ಎಲ್ಲಿ ಹೋಗಿದೆ ಶ್ರೀರಾಮುಲು ನಿನ್ನ ನಾಲಗೆ ಎಂದು ಕಿಡಿಕಾರಿದ್ದಾರೆ..

ನಿನ್ನೆ ಮೊಳಕಾಲ್ಮೂರು ಕ್ಷೇತ್ರ ಪ್ರಚಾರದ ವೇಳೆ ನಾಯಕನಹಟ್ಟಿಯಲ್ಲಿ ನಡೆದ ಗಲಭೆ ಬಗ್ಗೆ ಸಂಸದ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು, ನಿನ್ನೆ ನಡೆದ ಘಟನೆ ನನಗೆ ಮತ್ತು ನಮ್ಮ ಸಮಾಜಕ್ಕೆ ಮಾಡಿದ ಅಪಮಾನ. ಘಟನೆಯಲ್ಲಿ ನನ್ನ ಶರ್ಟ್ ಹರಿದು ಹಲ್ಲೆ ಮಾಡಿದ್ದಾರೆ ಅನ್ನೋದು ಸುಳ್ಳು. ನನ್ನ ಹುಡುಗರ ಮೇಲೆ ಹಲ್ಲೆಯಾಗಿದೆ ಅಷ್ಟೆ.ನನ್ನ ಕಾರಿ ಜಖಂ ಆಗಿದೆ. ಘಟನೆಯ ಬಗ್ಗೆ ಪಕ್ಷದ ನಾಯಕರು ಮಾಹಿತಿ ಪಡೆದಿದ್ದಾರೆ ಎಂದ್ರು. ಅಲ್ಲದೇ ತಿಪ್ಪೇಸ್ವಾಮಿಗೆ ಬಹಿರಂಗ ಸವಾಲು ಹಾಕಿರುವ ರಾಮುಲು, ಶಾಸಕ ತಿಪ್ಪೇಸ್ವಾಮಿಗೆ 2013ರಲ್ಲಿ ನಾನು ಅವರ ಕೈ ಹಿಡಿದು ಗೆಲ್ಲಿಸಿದೆ. ತಿಪ್ಪೇಸ್ವಾಮಿಗೆ ಶಕ್ತಿ ಇದ್ದರೇ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಲಿ ಸ್ಪರ್ಧಿಸಲಿ, ಇಲ್ಲವೇ ಬೇರೆಯವರಿಗೆ ಬೆಂಬಲ ನೀಡಿ ಗೆದ್ದು ತೋರಿಸಲಿ ಎಂದ್ರು. ಇನ್ನು ಕಾಂಗ್ರೆಸ್ ವಿರುದ್ಧ ಹರಿಹಾಯ್ದು ರಾಮುಲು, ಎಸ್ ಸಿ, ಎಸ್ ಟಿ ಮತಗಳಿಗೋಸ್ಕರ ಕಾಂಗ್ರೆಸ್ ನನ್ನನ್ನು ಕಟ್ಟಿ ಹಾಕುವ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ನವರೂ ಏನೇ ಷಂಡ್ಯತ್ರ ಮಾಡಿದ್ರೂ ನಾನು ಜಗ್ಗುವುದಿಲ್ಲ. ಮೊಳಕಾಲ್ಮೂರು ಕ್ಷೇತ್ರದಿಂದ ನಾನು ಕೇವಲ ನಾಮಪತ್ರ ಹಾಕಿ 2-3 ದಿನ ಮಾತ್ರ ಪ್ರಚಾರ ಮಾಡ್ತೀನಿ. ಕ್ಷೇತ್ರದಲ್ಲಿ ಸ್ವಲ್ಪ ದಿನ ಪ್ರಚಾರ ಮಾಡುವೆ…

ಒಟ್ಟಾರೆ ನಾಯಕ ಸಮುದಾಯದ ನಾಯಕ ಎಂದೆ ಬಿಂಬಿತವಾಗಿರುವ ಶ್ರೀರಾಮುಲು ಹಾಗೂ ಪ್ರಭಾವಿ ಶಾಸಕ ತಿಪ್ಪೇಸ್ವಾಮಿ ಇಬ್ಬರ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ಇದರ ನಡುವೆ ಪಕ್ಷೇತರ ಎಂದು ಹೇಳಿದ ತಿಪ್ಪೇಸ್ವಾಮಿಗೆ ಕಾಂಗ್ರೆಸ್ ನಿಂದ ಬುಲಾವ್ ಬಂದಿದೆ ಎನ್ನುವ ಮಾಹಿತಿಯೂ ದೊರೆಯುತ್ತಿದೆ. ಇಬ್ಬರ ಜಗಳದಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

LEAVE A REPLY

Please enter your comment!
Please enter your name here