Home Cinema “ಶ್ರುತಿ ಹರಿಹರನ್” ಈಗ ಭಾವಿ ಪತಿಯೊಂದಿಗೆ ಸೇರ್ಕೊಂಡು ಪ್ರೀತಿ ಭಜನೆ..?! ಸಿಕ್ಕಾಪಟ್ಟೆ ವೈರಲ್ ಆಯ್ತು ಆ...

“ಶ್ರುತಿ ಹರಿಹರನ್” ಈಗ ಭಾವಿ ಪತಿಯೊಂದಿಗೆ ಸೇರ್ಕೊಂಡು ಪ್ರೀತಿ ಭಜನೆ..?! ಸಿಕ್ಕಾಪಟ್ಟೆ ವೈರಲ್ ಆಯ್ತು ಆ ಸಾಂಗ್ ಜಾಲತಾಣಗಳಲ್ಲಿ..?!

2179
0
SHARE

ಶ್ರುತಿ ಹರಿಹರನ್, ಸೂಪರ್ ಹಿಟ್ ಲೂಸಿಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರತಿಭಾನ್ವಿತ ನಟಿ..ಚೊಚ್ಚಲ ಸಿನಿಮಾದಲ್ಲೆ ಕನ್ನಡಿಗರ ಮನಗೆದ್ದ ಶ್ರುತಿ, ಸ್ಯಾಂಡಲ್‌ವುಡ್‌ನಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದಾರೆ…ಈ ಬ್ಯೂಟಿಫುಲ್ ಮನಸಿನ ಬೆಡಗಿ ಅಮೋಜ್ಞವಾಗಿ ಅಭಿನಯಿಸುವ ಜೊತೆಗೆ ಉತ್ತಮ ನೃತ್ಯಗಾರ್ತಿಯೂ ಹೌದು,ಅಷ್ಟೆಯಲ್ಲ ಒಂದು ಕಿರು ಚಿತ್ರವನ್ನು ನಿರ್ಮಾಣ ಮಾಡಿ ನಿರ್ಮಾಪಕಿ ಕೂಡ ಆಗಿದ್ದಾರೆ…

ಹೀಗೆ ತನ್ನದೆ ಆದ ರೀತಿಯಲ್ಲಿ ಗುರುತಿಸಿಕೊಂಡಿರೊ ಶ್ರುತಿ ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಸಖತ್ ಬ್ಯುಸಿಯಸ್ಟ್ ನಟಿ.. ಇಷ್ಟೆಲ್ಲದರ ನಡುವೆಯೂ ಹರಿಹರನ್ ಈಗ ಮತ್ತೊಂದು ವಿಶ್ಯಕ್ಕೆ ಸುದ್ದಿಯಾಗಿದ್ದಾರೆ.. ಯೆಸ್, ಶ್ರುತಿ ಹರಿಹರನ್ ಈಗ ಭಾವಿ ಪತಿಯೊಂದಿಗೆ ಸೇರ್ಕೊಂಡು ಪ್ರೀತಿ ಭಜನೆ ಮಾಡ್ತಿದ್ದಾರೆ..ಏನಪ್ಪ ಅಂತೀರಾ, ಶ್ರುತಿ ಹರಿಹರನ್ ತಮ್ಮ ಭಾವಿ ಪತಿಯೊಂದಿಗೆ ಅಭಿಮಾನಿಗಳ ಮುಂದೆ ಬಂದಿದ್ದಾರೆ…ಅಂದ್ರೆ ಶ್ರುತಿ ಮತ್ತು ಪ್ರಿಯತಮ ರಾಮ್ ಕುಮಾರ್ ಇಬ್ಬರು ಸಿನಿಮಾ ಮಾಡ್ತಿದ್ದಾರಾ ಅಂತ ಅಂದ್ಕೊಬೇಡಿ…

ಇಬ್ಬರು ಸೇರಿ ಒಂದು ಅಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ…ಪ್ರೇಮ ಅಂತ ಟೈಟಲ್ ಇರೊ ಈ ಆಲ್ಬಂ ಸಾಂಗ್ ಈಗ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ..ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೆ ಶ್ರುತಿ ಹರಿಹರನ್ ತನಗೊಬ್ಬ ಪ್ರಿಯಕರನಿದ್ದಾನೆ ಅನ್ನೋ ವಿಶ್ಯವನ್ನ ಬಹಿರಂಗ ಪಡಿಸಿದ್ರು…ಅಷ್ಟೆಯಲ್ಲ, ತಾನು ದಶಕದಿಂದ ಒಬ್ಬ ಹುಡುಗನನ್ನು ಪ್ರೀತಿಸುತಿದ್ದೇನೆ ಅವರನ್ನೆ ಮದುವೆ ಕೂಡ ಆಗ್ತೀನಿ ಅಂತ ಓಪನ್ ಆಗಿಯೆ ಹೇಳಿಕೊಂಡು ಯುವಕರ ಹಾರ್ಟ್ ಬ್ರೇಕ್ ಮಾಡಿದ್ರು.

ಲೂಸಿಯಾ ಸುಂದರಿ ತಮ್ಮ ಲವ್ ಮ್ಯಾಟ್ರು ಬಗ್ಗೆ ಹೇಳುತ್ತಿದಂತೆ, ಯಾರಾತ ಅಂತ, ಒಂದಿಷ್ಟು ದಿನಗಳ ಕಾಲ ಅಭಿಮಾನಿಗಳು ತಲೆಗೆ ಹುಳಬಿಡ್ಕೊಂಡು ಓಡಾಡ್ತಿದ್ರು..ಆದ್ರೀಗ ಆ ಕುತೂಹಲಕ್ಕೆ ಪುಲ್ ಸ್ಟಾಪ್ ಇಟ್ಟು ಅಭಿಮಾನಿಗಳಿಗೆ ಸರ್ಪೈಸ್ ನೀಡಿದ್ದಾರೆ ಶ್ರುತಿ..ಯೆಸ್, ಒಂದು ವೀಡಿಯೋ ಸಾಂಗ್ ಮೂಲಕ ಮೊದಲ ಬಾರಿಗೆ ಬಾವಿ ಪತಿ ಜೊತೆ ತೆರೆ ಹಂಚಿಕೊಂಡಿರೊ ಶ್ರುತಿ, ಆ ಹಾಡನ್ನು ರಿಲೀಸ್ ಮಾಡುವ ಮೂಲಕ ಪ್ರೇಕ್ಷಕರಿಗೆ ಅಚ್ಚರಿಮೂಡಿಸಿದ್ದಾರೆ..

ಪ್ರೇಮ ಅನ್ನೋ ಹೆಸರಿನ ಈ ಹಾಡನ್ನು ಸದ್ದಿದದಲ್ಲೆ ಚಿತ್ರೀಕರಣ ಮಾಡಿ ಈಗ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ ಶ್ರುತಿ ಮತ್ತು ರಾಮ್ ಕುಮಾರ್..ಕಳೆದ ಕೆಲವು ದಿನಗಳಿಂದ ಪ್ರೇಮ ಹಾಡಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ರು ಶ್ರುತಿ ಅಂಡ್ ಪ್ರಿಯಕರ ರಾಮ್…ಈ ಹಾಡಿನಲ್ಲಿ ಇಬ್ಬರು ಗಂಡ ಹೆಂಡತಿಯಾಗಿ ಕಾಣಿಸಿಕೊಂಡಿದ್ದಾರೆ..ಇಲ್ಲಿ ಪ್ರೀತಿಯ ಜೊತೆಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡಿದ್ದಾರೆ..

ಮೊಬೈನಲ್ಲಿ ಮಾಡನಾಡುತ್ತ,ಕಿತ್ತಾಡಿಕೊಂಡು ಕಾರು ಚಲಾಯಿಸುತ್ತಿರುವ ಇಬ್ಬರು ಆಕ್ಸಿಡೆಂಡ್ ಮಾಡಿಕೊಂಡು ಆಸ್ಪತ್ರೆ ಸೇರುತ್ತಾರೆ…ಆಸ್ಪತ್ರೆ ಸೇರಿದ ನತರ ಇಬ್ಬರ ಫ್ಲಾಶ್ ಬ್ಯಾಕ್ ಕಥೆ ಸಾಗುತ್ತೆ…ಆಗ ಶುರುವಾಗುವುದೆ ಮೌನ ನೀರವ ಮೌನದಲ್ಲಿ ಸಿಲುಕಿ… ಅನ್ನೋ ಸುಂದರ ಹಾಡು..ಈ ಹಾಡಿನ ಮೂಲಕವೆ ಅನಾವರಣವಾಗುತ್ತಾ ಹೋಗುತ್ತೆ ಇಬ್ಬರ ಪ್ರೀತಿ, ಕಾಳಜಿ, ನರಳಾಟ ಎಲ್ಲವು..ಅದ್ಭುತವಾಗಿ ಮೂಡಿಬಂದಿರೊ ಈ ಹಾಡನ್ನು ಚೆನ್ನೈನ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ..

ಅಂದಹಾಗೆ ಈ ಹಾಡನ್ನು ಈ ಹಿಂದೆ ಸಂಗೀತ ಕ್ಷೇತ್ರದಲ್ಲಿ ಬಹಳಷ್ಟು ಫೇಮಸ್ ಆಗಿದ್ದ ನೀನೇ ಮ್ಯೂಸಿಕ್ ವಿಡಿಯೋ ಆಲ್ಬಂ ಮಾಡಿದ್ದ ತಂಡವೇ ಪ್ರೇಮ ವಿಡಿಯೋ ಹಾಡನ್ನು ತಯಾರು ಮಾಡಿದೆ.. ಗೊಮ್ಮಟೇಶ್ ಈ ಹಾಡಿನ ನಿರ್ದೇಶನ ಮಾಡಿದ್ರೆ. ಯಾಮಿನಿ ಯಾಗಮೂರ್ತಿ ಅವ್ರ ಕ್ಯಾಮೆರಾ ವರ್ಕ್ ಇದೆ..ಇನ್ನು ಫಾನೀ ಕಲ್ಯಾಣ್ ಸಂಗೀತ ನಿರ್ದೇಶನ ಈ ಪ್ರೇಮ ಹಾಡಿಗಿದೆ…ಈಗಾಗಲೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಪ್ರೇಮ ಹಾಡು ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ತಯಾರಾಗಿದೆ..ಈ ಹಾಡನ್ನು ನೀವು ಕೇಳಿ ಎಂಜಾಯ್ ಮಾಡಿ..

LEAVE A REPLY

Please enter your comment!
Please enter your name here