Home Cinema ಸಂಕ್ರಾತಿ ಹಬ್ಬಕ್ಕೆ ’ಡಿ ಬಾಸ್’ ಸ್ಪೆಷಲ್ ಉಡುಗೊರೆ..! ಸಂಗೀತಪ್ರಿಯರಿಗೆ ಸಿಗಲಿದೆ ಪ್ರೀತಿಯ ಅಕ್ಕರೆ..!

ಸಂಕ್ರಾತಿ ಹಬ್ಬಕ್ಕೆ ’ಡಿ ಬಾಸ್’ ಸ್ಪೆಷಲ್ ಉಡುಗೊರೆ..! ಸಂಗೀತಪ್ರಿಯರಿಗೆ ಸಿಗಲಿದೆ ಪ್ರೀತಿಯ ಅಕ್ಕರೆ..!

1678
0
SHARE

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಸಂಕ್ರಾತಿ ಪ್ರಯುಕ್ತ ವಿಶೇಷ ಗಿಫ್ಟ್ ಒಂದನ್ನ ನೀಡುತ್ತಿದ್ದಾರೆ. ಥಿಯೆಟರ್‌ಗಳಿಗೆ ಲಗ್ಗೆ ಇಡದೇ ಸುಮಾರು ದಿನಗಳಿಂದ ತಮ್ಮ ಫ್ಯಾನ್‌ಗಳನ್ನ ವೈಟ್ ಮಾಡಿಸಿದ ಡಿ ಬಾಸ್ ಕೊನೆಗೂ ಎಲ್ರೂ ಶಿಳ್ಳೆ ಹೊಡೆಯೋ ಸ್ವೀಟ್ ನ್ಯೂಸ್ ಕೊಟ್ಟಿದಾರೆ. ಈ ಹ್ಯಾಪಿ ನ್ಯೂಸ್ ಕೇಳಿದ ದಚ್ಚು ಫ್ಯಾನ್ಸ್ ಕುಣಿದಾಡಿಬಿಟ್ಟಿದಾರೆ. ದರ್ಶನ್ ಕೊಟ್ಟಿರೋ ಗಿಫ್ಟ್ ಸಂಕ್ರಾತಿಯ ದಿನ ಅಭಿಮಾನಿಗಳ ಕಿವಿಯನ್ನ ತಲುಪಲಿದೆಯಂತೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳು ಬಂದ್ರೆ ಅಭಿಮಾನಿಗಳ ಕಣ್ಣಿಗೆ ಹಬ್ಬದೂಟ. ದರ್ಶನ್ ಯಾವ ಸಿನಿಮಾ ಮುಟ್ಟಿದ್ರೂ ಅದು ಚಿನ್ನನೇ ಎಂದುಕೊಳ್ಳುವ ಕಟ್ಟಾ ಫ್ಯಾನ್‌ಗಳಿಗೇನೂ ಕೊರತೆ ಇಲ್ಲ. ಹಾಗೇ ನೋಡಿದ್ರೆ ಹಿಂದಿನ ವರ್ಷ ದರ್ಶನ್ ಸೌಂಡ್ ಮಾಡಿದ್ದು ಕೊಂಚ ಕಡಿಮೆನೇ. ಆದರೆ ಈ ವರ್ಷ ಥಿಯೆಟರ್‌ಗಳಲ್ಲಿ ಅಬ್ಬರಿಸೋಕೆ ದರ್ಶನ್ ತಮ್ಮ ಬ್ರಹ್ಮಾಸ್ತ್ರವನ್ನ ತಯಾರು ಮಾಡಿಕೊಳ್ತಿದ್ರು. ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಎನಿಸಿಕೊಂಡಿರುವ ’ಕುರುಕ್ಷೇತ್ರ’ದ ರಿಲೀಸ್ ಹತ್ತಿರ ಬರುತ್ತಿದ್ದಂತೆ ಇದೀಗ ’ಯಜಮಾನ’ನ ದರ್ಬಾರ್ ಶುರುವಾಗಿದೆ.

ತನ್ನ ಶೂಟಿಂಗ್ ಟೈಮ್‌ನಿಂದಲೂ ಸಿಕ್ಕಾಪಟ್ಟೆ ಕುತೂಹಲ ಹುಟ್ಟುಹಾಕಿರೋ ’ಯಜಮಾನ’ ಈಗ ಹೊಸ ಹ್ಯಾಪಿ ನ್ಯೂಸ್ ಕೊಟ್ಟಿದ್ದಾನೆ. ಇದೇ ಸಂಕ್ರಾತಿ ಹಬ್ಬದ ಪ್ರಯುಕ್ತ ಜನೆವರಿ ೧೫ ಕ್ಕೆ ’ಯಜಮಾನ’ ಸಿನಿಮಾದ ಬ್ರಾಂಡ್ ನ್ಯೂ ಸಾಂಗ್ ಒಂದು ಲೋಕಾರ್ಪಣೆಯಾಗಲಿದೆ. ಡಿ ಬಿಟ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಈ ಹೊಸ ಹಾಡು ಎಂಟ್ರಿ ಕೊಡಲಿದೆ. ’ಶಿವನಂದಿ’ ಎನ್ನುವ ಟೈಟಲ್ ಹೊಂದಿರೋ ಈ ಸ್ಪೆಷಲ್ ಹಾಡಿಗೆ ಮ್ಯೂಸಿಕ್ ಮಾಸ್ಟರ್‌ಪೀಸ್ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

ಬಹದ್ದೂರ್ ಚೇತನ್ ಲೇಖನಿಯಲ್ಲಿ ಈ ಸಾಂಗ್ ಮೂಡಿ ಬಂದಿದೆ.ಇನ್ನು ಈ ರೋಮಾಂಟಿಕ್ ನಂಬರ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಸಕತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರಂತೆ. ಈ ಹಾಡಿನ ಚಿತ್ರೀಕರಣ ಸ್ವೀಡನ್ ದೇಶದ ಬ್ಯೂಟಿಫುಲ್ ಲೊಕೆಷನ್‌ಗಳಲ್ಲಿ ಶೂಟ್ ಆಗಿದೆ. ನೈಸರ್ಗಿಕ ಸುಂದರತಾಣಗಳು ಈ ಹಾಡಿನ ಸೌಂದರ್ಯವನ್ನ ಹೆಚ್ಚಿಸಿಬಿಟ್ಟಿದೆ ಅನ್ನುತ್ತೆ ಚಿತ್ರತಂಡ. ಮೊದಲಬಾರಿಗೆ ಆನ್‌ಸ್ರ್ಕೀನ್ ಪೇರ್ ಆಗಿರುವ ದರ್ಶನ್-ರಶ್ಮಿಕಾ ಜೋಡಿಯ ಸೂಪರ್ ಡ್ಯಾನ್ಸ್ ನೋಡಲು ಗಾಂಧಿನಗರ ಕೂಡ ಸಕತ್ ವೈಟ್ ಮಾಡ್ತಿದೆ.

ಚಾಲೆಂಜಿಂಗ್‌ಸ್ಟಾರ್ ಸಿನಿಮಾ ಆಕ್ಷನ್‌ಪ್ರಿಯರಿಗೆ ಮಜಾ ಕೊಟ್ರು, ಮನಸ್ಸಿಗೆ ಮುದ ನೀಡುವ ಇಂಪಾದ ಹಾಡುಗಳಿಗೇನೂ ಬರ ಇರಲ್ಲ. ಆಕ್ಷನ್‌ಗೂ ಸೈ, ರೋಮಾನ್ಸ್‌ಗೂ ಜೈ ಎನ್ನುವ ’ಡಿಬಾಸ್’ ಖದರ್ ನೋಡೋಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಜಪ ಮಾಡ್ತಾರೆ. ಹಾಗೇ ಈಗ ಯಜಮಾನ ಸಿನಿಮಾದ ಸಾಂಗ್ ಕೇಳಿ ಪಾವನರಾಗೋಕೂ ದರ್ಶನ್ ಫ್ಯಾನ್ಸ್ ಕೌಂಟ್‌ಡೌನ್ ಶುರು ಹಚ್ಚಿಕೊಂಡವ್ರೆ. . !ಯಜಮಾನ ಸಿನಿಮಾದ ಪೋಷಕಪಾತ್ರಗಳಲ್ಲಿ ತಾನ್ಯಾ ಹೋಪ್, ರವಿಶಂಕರ್, ಡಾಲಿ ಧನಂಜಯ್, ಸಾಧುಮಹಾರಾಜ್ ಹಾಗೂ ದೇವರಾಜ್ ಕಾಣಿಸಿಕೊಂಡಿದ್ದಾರೆ. ಈ ಯುನಿಕ್ ಕಾಂಬಿನೇಷನ್‌ನಿಂದಲೇ ’ಯಜಮಾನ’ ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿಬಿಟ್ಟಿದಾನೆ.

ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಆಗೀರೊ ಮೈನ್ ರೀಸನ್‌ಗೆ ದರ್ಶನ್ ಪಾತ್ರದ ಮೇಲೂ ಟಾಕ್ ಕ್ರಿಯೆಟ್ ಆಗಿದೆ. ’ಯಜಮಾನ’ ಸಿನಿಮಾದ ಮೂಲಕ ದರ್ಶನ್ ಮತ್ತೆ ಪ್ಯೂರ್ ಮನರಂಜನೆಯನ್ನ ನೀಡೊಕೆ ಸ್ಕೆಚ್ ಹಾಕಿದಾರೆ. ಇನ್ನು ಶಶಿಧರ್ ಅಡಪ ಕಲಾನಿರ್ದೆಶನ ಕೂಡ ಈ ಹೊಸ ಹಾಡಿನ ಮೈನ್ ಅಟ್ರಾಕ್ಷನ್. ಬಾಕ್ಸ್ ಆಫೀಸ್ ಸುಲ್ತಾನನ ಹೊಸ ಅವತಾರದ ಜೊತೆಗೆ ’ಶಿವಾನಂದಿ’ ಹಾಡಿನ ಸೊಬಗನ್ನ ನೋಡಿ ಆನಂದಿಸಲು ಸಂಕ್ರಾತಿಯವರೆಗೂ ಕಾಯೋದು ಬಿಟ್ರೆ ದಚ್ಚು ಫ್ಯಾನ್ಸ್‌ಗೆ ಬೇರೆ ದಾರಿ ಇಲ್ಲ ಅನ್ನಬಹುದೇನೊ. . !

LEAVE A REPLY

Please enter your comment!
Please enter your name here