Home Cinema “ಸಂಗೀತಾ ಭಟ್” ಮೇಲೂ ಬಿದ್ದಿತ್ತಾ “ಅರ್ಜುನ್ ಸರ್ಜಾ” ಕಣ್ಣು..!? MeToo ಸುಳಿಯಲ್ಲಿ ಸಿಕ್ಕಿಕೊಂಡ ಸೌಥ್ ಸಿನಿ...

“ಸಂಗೀತಾ ಭಟ್” ಮೇಲೂ ಬಿದ್ದಿತ್ತಾ “ಅರ್ಜುನ್ ಸರ್ಜಾ” ಕಣ್ಣು..!? MeToo ಸುಳಿಯಲ್ಲಿ ಸಿಕ್ಕಿಕೊಂಡ ಸೌಥ್ ಸಿನಿ ದುನಿಯಾದ ಅಭಿಮನ್ಯು..!

4126
0
SHARE

ಶ್ರುತಿ ಹರಿಹರನ್ ನಿನ್ನೆ ಬಾಂಬ್ ಸಿಡಿಸಿದ್ರು. ಅರ್ಜುನ್ ಸರ್ಜಾ ನನಗೆ ಲೈಂಗಿಕ ಕಿರುಕಳ ನೀಡಿದ್ರು ಅನ್ನುವ ಆರೋಪ ಮಾಡಿದ್ದರು. ಇದೀಗ ಆರೋಪ ಮಾಡಿದ ಬೆನ್ನಲ್ಲೇ ಶ್ರುತಿ ಹರಿಹರನ್ ಇಂದು ಮಾಧ್ಯಮದ ಮುಂದೆ ಪ್ರತ್ಯಕ್ಷರಾಗಿದ್ದರು.ಯಸ್, ಅಸಲಿಗೆ ನಿನ್ನೆ ಮೀ ಟೂ ಅಭಿಯಾನದಡಿ ಆರೋಪ ಮಾಡಿದ್ದ ಶ್ರುತಿ ಹರಿಹರನ್ ಇಂದು ಮಾಧ್ಯಮಗಳ ಮುಂದೆ ಬಂದಿದ್ದರು. ನಿಮಗೆ ಗೊತ್ತಿರಲಿ ಅಸಲಿಗೆ ನಿನ್ನೆ ಆರೋಪ ಮಾಡಿದ್ದ ಶ್ರುತಿ, ನನ್ನ ಬಳಿ ಅರ್ಜುನ್ ಸರ್ಜಾ ಮಾಡಿದ ಕೆಲ್ಸಗಳ ಬಗ್ಗೆ ಪುರಾವೆ ಇದೆ ಅನ್ನುವ ಮಾತುಗಳನ್ನಾಡಿದ್ದರು.

ಹಾಗಾಗಿ, ಸಣ್ಣದೊಂದು ಕೂತುಹಲ ಹಾಗೂ ಕೌತುಕ ಎಲ್ಲರಲ್ಲಿ ಇದ್ದಿದ್ದು ಸುಳ್ಳಲ್ಲ. ಬಟ್, ಇದೇ ಸಾಕ್ಷಿ ಇವತ್ತೂ ಶ್ರುತಿ ನೀಡಲಿಲ್ಲ. ಹೌದು, ಸಮಯ ಬಂದಾಗ ಎಲ್ಲ ಹೇಳ್ತೀನಿ, ಸಾಕ್ಷಿ ಮುಂದಿಡ್ತೀನಿ ಅನ್ನುವ ಶ್ರುತಿ.. ಅರ್ಜುನ್ ಸರ್ಜಾ ವಿರುದ್ಧ ಕಾನೂನು ಸಮರ ನಡೆಸಲು ಸದ್ಯ ಮುಂದಾಗಿದ್ದಾರೆ.
ಇನ್ನೂ ದಕ್ಷಿಣ ಭಾರತೀಯ ಚಿತ್ರರಂಗದ ದೊಡ್ಡ ನಟನ ಮೇಲೊಂದು ಗಂಭೀರ ಆರೋಪ ಮಾಡೋದು ಸರಿಯಲ್ಲ.

ಹೀಗೊಂದು ಮಾತನ್ನ ಚಿತ್ರರಂಗ ನಿನ್ನೆ ಶ್ರುತಿ ಬಾಂಬ್ ಸಿಡಿಸಿದ ಮರುಕ್ಷಣದಿಂದನೇ ಹೇಳುತ್ತಿದೆ. ಇದೇ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿರುವ ಶ್ರುತಿ ಹರಿಹರನ್, ಚಿತ್ರರಂಗ ನನ್ನ ಕೈ ಬಿಡಲ್ಲ ಅನ್ನುವ ಭರವಸೆ ವ್ಯಕ್ತಪಡಿಸುತ್ತಾರೆ. ಪ್ರತಿವರ್ಷ ಸಿನಿಮಾ ಮಾಡಿಯೇ ಮಾಡುತ್ತೇನೆ ಅನ್ನುವ ವಿಶ್ವಾಸದ ನುಡಿಗಳನ್ನೂ ಆಡ್ತಾರೆ.ಅಂದ ಹಾಗೇ ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಆರೋಪ ಮಾಡಿದ ಬೆನ್ನಲ್ಲೇ, ಅನೇಕರು.. ಶ್ರುತಿ ಅವತ್ಯಾಕೆ ಮಾತನಾಡಲಿಲ್ಲ ಅನ್ನುವ ಪ್ರಶ್ನೆಗಳನ್ನ ಕೇಳ್ತಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಮುಂದಾಗುವ ಶ್ರುತಿ ಅವತ್ತೂ ನನಗೆ ಧೈರ್ಯ ಇರಲಿಲ್ಲ ಅನ್ನುತ್ತಾರೆ. ಮೀ ಟೂ ಅಭಿಯಾನದಿಂದ ನನಗೀಗ ಧೈರ್ಯ ಬಂದಿದೆ ಅನ್ನುತ್ತಾರೆ.
ಇದೆಲ್ಲದ್ರ ನಡುವೆ, ಅರ್ಜುನ್ ಸರ್ಜಾ ಕ್ಷಮೆ ಕೇಳಿದ್ರೆ ಅಷ್ಟೇ ಸಾಲಲ್ಲ, ಈ ಘಟನೆ ದೊಡ್ಡ ಮೈಲಿಗಲ್ಲು ಆಗಬೇಕೆನ್ನುವ ಶ್ರುತಿ ಹರಿಹರನ್, ಮುಂದೆ.. ಚಿತ್ರರಂಗದಲ್ಲಿ ಇಂಥ ಘಟನೆಗಳೂ ಆಗಲೇಬಾರದು ಅಂದಿದ್ದಾರೆ

ಸಂಗೀತಾ ಭಟ್ ಮೇಲೂ ಬಿದ್ದಿತ್ತಾ ಅರ್ಜುನ್ ಸರ್ಜಾ ಕಣ್ಣು..!:ಯಸ್, ಶ್ರುತಿ ಹರಿಹರನ್ ಬಾಂಬ್ ಸಿಡಿಸಿದ ಬೆನ್ನಲ್ಲೇ, ಇಂಥಹದ್ದೊಂದು ಚರ್ಚೆ ಇದೀಗ ಕಾವೇರಿದೆ. ಸಂಗೀತಾ ಭಟ್‌ಗೂ ಅರ್ಜುನ್ ಸರ್ಜಾ ಕಾಡಿದ್ದರಾ ಅನ್ನುವ ಚರ್ಚೆ ರಂಗೇರಿದೆ. ಹೌದು, ಸಂಗೀತಾ ಭಟ್ ಕಳೆದ ಹದಿನೈದು ದಿನದ ಹಿಂದೆ ತಮಗಾದ ಕಹಿ ಅನುಭವವನ್ನ ಹಂಚಿಕೊಂಡಿದ್ದರು. ಬಟ್, ಎಲ್ಲೂ ತಮಗೆ ಕಿರುಕಳ ಕೊಟ್ಟವರ ಹೆಸರನ್ನ ಶ್ರುತಿ ಹೇಳಿರಲಿಲ್ಲ. ಹಾಗಂತ ಅಡ್ಡ ಗೋಡೆ ಮೇಲೆ ದೀಪನೂ ಇಟ್ಟಿರಲಿಲ್ಲ. ಸಣ್ಣದೊಂದು ಸುಳಿವನ್ನ ಸಂಗೀತಾ ಕೊಟ್ಟಿದ್ದರು.

ಖ್ಯಾತ ಬಹುಭಾಷಾ ನಟ ಅನ್ನುವ ಮಾತುಗಳನ್ನ ಹೇಳಿದ್ದರು. ಇದೀಗ ಆ ಬಹುಭಾಷಾ ನಟ, ಅರ್ಜುನ್ ಸರ್ಜಾನೇನಾ ಅನ್ನುವ ಅಭಿಮತವನ್ನ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಇದ್ರ ಬೆನ್ನಲ್ಲೇ.. ಅರ್ಜುನ್ ಸರ್ಜಾ ಮೇಲೆ ನಾನೊಬ್ಳೇ ಆರೋಪ ಮಾಡ್ತಿಲ್ಲ, ಇನ್ನೂ ನಾಲ್ಕು ನಾಯಕಿಯರು ತಮಗಾದ ಅನುಭವವನ್ನ ಹಂಚಿಕೊಂಡಿದ್ದಾರೆ ಅನ್ನುವ ಮೂಲಕ ಶ್ರುತಿ ಹರಿಹರನ್, ಅರ್ಜುನ್ ಸರ್ಜಾಗಿರುವ ಕಂಟಕವನ್ನ ಮತ್ತಷ್ಟು ಹೆಚ್ಚಿಸಿದ್ದಾರೆ

ಇನ್ನೂ ಮೀ ಟೂ ಅಭಿಯಾನ ಹಾಗೂ ಶ್ರುತಿ ಹರಿಹರನ್ ಧೈರ್ಯವನ್ನ, ರಾಗಿಣಿ ಮೆಚ್ಚಿಕೊಂಡಿದ್ದಾರೆ. ನಿಜವಾಗಿಯೂ ಶ್ರುತಿ ಮೇಲೆ ದೌರ್ಜನ್ಯವಾಗಿದ್ದರೆ, ತಪ್ಪೆಸಗಿದವರಿಗೆ ಶಿಕ್ಷೆಯಾಗಬೇಕು ಅಂದಿದ್ದಾರೆ. ಮೀ ಟೂ ಹೆಸರನ್ನ ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಅನ್ನುವ ಮಾತುಗಳನ್ನೂ ಆಡಿದ್ದಾರೆ ರಾಗಿಣಿ.ಇನ್ನು, ಶ್ರುತಿ ಹರಿಹರನ್ ಮೀ ಟೂ ಬಾಂಬ್ ಸಿಡಿಸಿದ ಬಳಿಕ, ನಟಿ ನೀತೂನೂ.. ಮೀ ಟೂ ಅಂದಿದ್ದಾರೆ. ಬಾಂಬ್ ಸಿಡಿಸಿದ್ದಾರೆ. ಹೌದು, ಇಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಯೊಂದನ್ನ ಕೇಳಿರುವ ನೀತು.. ನನಗೂ ಚಿತ್ರರಂಗದಲ್ಲಿ ಕಹಿ ಅನುಭವ ಆಗಿತ್ತು ಅಂದಿದ್ಧಾರೆ

ಇನ್ನೂ ಅರ್ಜುನ್ ಸರ್ಜಾ, ನಾನವನಲ್ಲ ಅಂತೇಳಿದ್ರೂ ಶ್ರುತಿ ಹರಿಹರನ್ ಮಾತ್ರ.. ಇಲ್ಲ, ಅರ್ಜುನ್ ಸರ್ಜಾ ವಿಸ್ಮಯವಾದ ಇನ್ನೊಂದು ರೂಪ ನಿಮಗೆ ಗೊತ್ತೇ ಇಲ್ಲ ಅನ್ನುವ ಮಾತುಗಳನ್ನಾಡಿದ್ರು. ಇವತ್ತೂ ಕೂಡಾ ಅರ್ಜುನ್ ಸರ್ಜಾ ಬಗ್ಗೆ ಶ್ರುತಿ ಹರಿಹರನ್ ಮಾತನಾಡಿದ್ದಾರೆ. ಅರ್ಜುನ್ ಸರ್ಜಾ ಎಂಥಹ ವ್ಯಕ್ತಿ ಗೊತ್ತಾ ಅಂದಿದ್ದಾರೆ. ಇನ್ನೂ ಇದೆಲ್ಲದ್ರ ನಡುವೆ ಬಹುತೇಕ ಚಿತ್ರರಂಗದ ಮಂದಿ.. ಶ್ರುತಿ ಮೇಲೆ ಕೆಂಡಾಮಂಡಲವಾಗ್ತಿದ್ದಾರೆ.

ನಿರ್ಮಾಪಕ ಮುನಿರತ್ನ, ಸಾ.ರಾ,ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರು. ಎಲ್ಲರೂ ಶ್ರುತಿಯನ್ನ ತರಾಟೆಗೆ ತೆಗೆದುಕೊಳ್ತಿದ್ದಾರೆ. ಇದ್ರ ನಡುವೆ.. ಪ್ರಕಾಶ್ ರೈ, ಶ್ರುತಿ ಹರಿಹರನ್ ಬೆಂಬಲಕ್ಕೆ ನಿಂತಿದ್ದಾರೆ.ಶ್ರುತಿ ಹರಿಹರನ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತೆ. ದಿಟ್ಟ ಹೆಣ್ಣು. ಅರ್ಜುನ್ ಸರ್ಜಾ ಅವರು ಕನ್ನಡ ಹೆಮ್ಮೆ. ಹಿರಿಯ ನಟರೂ ಎಂಬುದನ್ನ ಮರೆಯದಿರೋಣ. ಆದರೆ ಶ್ರುತಿಯವರ ಆರೋಪದ ಹಿನ್ನೆಲೆಯಲ್ಲಿ.. ಆ ಹೆಣ್ಣು ಅನುಭವಿಸಿದ ಅಸಾಹಯಕತೆ.. ಅವಮಾನ.. ಇಷ್ಟು ದಿನಗಳ ಕಾಲ ತನ್ನೊಳಗೆ ಹುದುಗಿಸಿಟ್ಟ ಆ ಗಾಯದ ನೋವನ್ನ ಅರ್ಥ ಮಾಡಿಕೊಳ್ಳಬೇಕಾಗಿದೆ.

ಅರ್ಜುನ್ ಅವರು ಈ ಆರೋಪವನ್ನ ಅಲ್ಲಗೆಳೆದರೂ, ಅವರ ಆ ದಿನದ ವರ್ತನೆ ಆಕೆಯಲ್ಲಿ ಉಂಟು ಮಾಡಿದ ನೋವಿಗೆ ಕ್ಷಮೆ ಕೇಳುವದು ದೊಡ್ಡ ತನದ ಲಕ್ಷಣ. ಅರಿತೋ ಅರಿಯದೆಯೋ ನಾವು ಗಂಡಸರು ಹುಟ್ಟಿನಿಂದಲೇ ಹೆಣ್ಣಿನ ಬೇಕು ಬೇಡಗಳ ಬಗ್ಗೆ ಸೂಕ್ಷ್ಮತೆಯನ್ನ ಕಳೆದುಕೊಂಡಿರೋದು ನಿಜ. ಹೆಣ್ಣುಮಕ್ಕಳೂ ತಮ್ಮ ಹಕ್ಕನ್ನು ಅರಿಯದೆ ಇರುವದು ಅಷ್ಟೇ ನಿಜ. ಪ್ರಸ್ತುತ ಹೆಣ್ಣುಮಕ್ಕಳ ಈ ಮೀ ಟೂ ಅಭಿಯಾನ ಮುಂದಿನ ದಿನಗಳಲ್ಲಾದ್ರೂ ನಮ್ಮ ಸಮಾಜದಲ್ಲಿ ಅವರ ಮೇಲಿನ ಶತಮಾನಗಳ ದೌರ್ಜನ್ಯಕ್ಕೆ .. ಅವಮಾನಗಳಿಗೆ.. ಅಸಹಾಯಕತೆಗೆ.. ಕೊನೆಯನ್ನು ಕಾಣಲಿ. ನಾನು ಶ್ರುತಿ ಹರಿಹರನ್ ಪರವಾಗಿ.. ಈ ಮೂಲಕ ಎಲ್ಲಾ ನೊಂದ ಹೆಣ್ಣು ಮಕ್ಕಳ ಪರವಾಗಿ ನಿಲ್ಲುತ್ತೇನೆ..

ಇಷ್ಟೇ ಅಲ್ಲ, ಅಷ್ಟಕ್ಕೂ ಈಕೆಯನ್ನು ನಟಿಯಾಗಿ ನೆಲೆ ನಿಲ್ಲುವಂತೆ ಮಾಡಿದ್ದೇ ಕನ್ನಡ ಚಿತ್ರರಂಗ. ಆ ನಂತರ ಇಲ್ಲಿ ನಟಿಯಾಗಿ ಒಂದಷ್ಟು ಅವಕಾಶವನ್ನು ಪಡೆಯುತ್ತಲೇ ಆಕಾಶದಲ್ಲಿ ತೇಲಾಡಲಾರಂಭಿಸಿದ್ದ ಶ್ರುತಿ ನಖರಾ ಆರಂಭಿಸಿದ್ದಳೆಂಬ ಆರೋಪ ಯಾವತ್ತಿನಿಂದಲೂ ಕೇಳಿ ಬರುತ್ತಿದೆ. ಈಗ ಆಕೆಯ ಬಳಿ ಯಾವ ಅವಕಾಶಗಳೂ ಇಲ್ಲ. ಬೇರೆ ಭಾಷೆಗಳಲ್ಲಿಯೂ ಇದೇ ಕಥೆ. ಹೀಗಿರುವಾಗ ಒಂದಷ್ಟು ಪ್ರಚಾರ ಗಿಟ್ಟಿಸಿ ಅದೇ ಪ್ರಭೆಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಇರಾದೆಯಿಂದಲೇ ಶ್ರುತಿ ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದಾಳೆಂಬುದು ಸಾರ್ವತ್ರಿಕ ಅಭಿಪ್ರಾಯ.

ಅದೇನೆ ಇರ‍್ಲಿ, ಸದ್ಯ ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೇಲೊಂದು ಬಾಂಬು ಹಾಕಿದ್ದಾರೆ. ಈ ಮೂಲಕ ಅರ್ಜುನ್ ಸರ್ಜಾ ಸಭ್ಯಸ್ಥ ನಟ ಅನ್ನುವರಿಗೊಂದು ಶಾಕ್ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಮೀ ಟೂ ಅಭಿಯಾನದಡಿ ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಗುದ್ದಾಟ ಎಲ್ಲಿ ಹೋಗಿ ಮುಟ್ಟುತ್ತೆ, ಅರ್ಜುನ್ ಸರ್ಜಾ ಇನ್ಯಾವ ಪೇಚಿಗೆ ಸಿಲುಕುತ್ತಾರೆ, ಮೀ ಟೂ ಸುಳಿಯಲ್ಲಿ ಚಿತ್ರರಂಗದ ಇನ್ಯಾವ ದೊಡ್ಡ ಮೀನು ಸಿಲುಕಿಕೊಳ್ಳುತ್ತೆ ಅನ್ನೋದಕ್ಕುತ್ತರ ಕಾಲವೇ ನೀಡಲಿದೆ.

LEAVE A REPLY

Please enter your comment!
Please enter your name here