Home Crime ಸಂಪುಟ ಪುನಾರಚನೆ ಬೆನ್ನಲ್ಲೇ ಅಸಮಾಧಾನ ಸ್ಪೋಟ..! ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಬಿ.ಸಿ.ಪಾಟೀಲ್, ಅಜಯ್ ಸಿಂಗ್...

ಸಂಪುಟ ಪುನಾರಚನೆ ಬೆನ್ನಲ್ಲೇ ಅಸಮಾಧಾನ ಸ್ಪೋಟ..! ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಬಿ.ಸಿ.ಪಾಟೀಲ್, ಅಜಯ್ ಸಿಂಗ್ ಅತೃಪ್ತಿ..! ಹಾವೇರಿ, ಕಲಬುರಗಿಯಲ್ಲಿ ಬೆಂಬಲಿಗರಿಂದ ಆತ್ಮಹತ್ಯೆ ಯತ್ನ…

736
0
SHARE

ಮೈತ್ರಿ ಸರ್ಕಾರದ ಸಚಿವ ಸಂಪುಟ ಪುನಾರಚನೆ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಭಿನ್ನಮತ ಭುಗಿಲೆದ್ದಿದೆ… ಪ್ರಬಲ ಸಚಿವ ಆಕಾಂಕ್ಷಿಗಳಾಗಿದ್ದ ಬಿಸಿ ಪಾಟೀಲ್, ಅಜಯ್ ಸಿಂಗ್, ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವು ಶಾಸಕರು ರಾಜ್ಯ ನಾಯಕರು ಮತ್ತು ಹೈಕಮಾಂಡ್ ವಿರುದ್ಧ ಬಹಿರಂಗವಾಗಿ ಬಂಡಾಯದ ಬಾವುಟ ಹಾರಿಸಿದ್ದಾರೆ.. ಇನ್ನೂ ಬಿಸಿ ಪಾಟೀಲ್ ಮತ್ತು ಅಜಯ್ ಸಿಂಗ್ ಬೆಂಬಲಿಗರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ..

ಅಳೆದು ತೂಗಿ ಮೈತ್ರಿ ಸರ್ಕಾರದ ಸಂಪುಟ ಪುನಾರಚನೆ ಮಾಡಲಾಗಿದೆ… ಕಾಂಗ್ರೆಸ್ ಪಾಲಿನ ಸಚಿವ ಸ್ಥಾನಗಳು ಇದೀಗ ಭರ್ತಿಯಾಗಿದ್ದು, ಕೇವಲ ಜೆಡಿಎಸ್ ಪಾಲಿನ 2 ಸಚಿವ ಸ್ಥಾನಗಳ ಮಾತ್ರ ಖಾಲಿ ಇವೆ… ಸಂಪುಟ ಪುನಾರಚನೆಯಾಗುತ್ತಿದ್ದಂತೆ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟವಾಗಿದೆ… ಸಚಿವ ಆಕಾಂಕ್ಷಿಗಳು ಬಹಿರಂಗವಾಗಿ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದು, ಹೈಕಮಾಂಡ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಹಾವೇರಿಯಲ್ಲಿ ಮಾತನಾಡಿದ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಮಾತನಾಡಿ ಸಿದ್ದರಾಮಯ್ಯ ವಿರುದ್ಧ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ…

ಸಿದ್ದರಾಮಯ್ಯನವರನ್ನು ಅಪಾರವಾಗಿ ನಂಬಿದ್ದೆ ಆದ್ರೆ ಅವರು ನನ್ನನ್ನು ನಡುನೀರಿನಲ್ಲಿ ಕೈಬಿಟ್ರು ಎಂದು ಕಿಡಿಕಾರಿದ್ದಾರೆ.ಮತ್ತೊಂದೆಡೆ, ಬಿ.ಸಿ ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅವರ ಅಭಿಮಾನಿಗಳು ಹಾವೇರಿಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿ.ಸಿ. ಪಾಟೀಲ್ ಮನೆ ಎದುರೇ ಅಭಿಮಾನಿಗಳು ಪ್ರತಿಭಟನೆ ನಡೆಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ರು….

ಇದೇ ವೇಳೆ, ಪುಟ್ಟೇಶ ಗೊರವರ ಎಂಬಾತ ನೀರಿನ ಟ್ಯಾಂಕ್ ಏರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ನಡೆಸಿದ.. ಕೂಡಲೇ ಪೊಲೀಸ್ರು ಆತನನ್ನು ಟ್ಯಾಂಕ್ ನಿಂದ ಕೆಳಗಿಳಿಸಿ ಹಿರೆಕೇರೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ಮಾಜಿ ಸಿಎಂ ಧರಂ ಸಿಂಗ್ ಪುತ್ರ ಶಾಸಕ ಅಜಯ್ ಸಿಂಗ್ ಗೆ ಮಂತ್ರಿ ಸ್ಥಾನ ಸಿಗಲಿಲ್ಲ ಅಂತಾ ಜೇವರ್ಗಿಯಲ್ಲಿ ಅವರ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ರು… ಈ ಸಂದರ್ಭದಲ್ಲಿ ಜೇವರ್ಗಿ ನಿವಾಸಿ ಮುಜೀಬ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇನ್ನೂ ರಸ್ತೆ ಮಧ್ಯದಲ್ಲೇ ಟೈಯರ್ ಗೆ ಬೆಂಕಿ ಹಚ್ಚಿ ಅಜಯ್ ಸಿಂಗ್ ಬೆಂಬಲಿಗರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು.ಕಾಂಗ್ರೆಸ್‌ ಅತ್ಯಂತ ಹಿರಿಯ ಶಾಸಕರಲ್ಲಿ ಶಾಮನೂರು ಶಿವಶಂಕರಪ್ಪ ಪ್ರಮುಖರು. ಆದರೆ ಈಗ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಕಾಂಗ್ರೆಸ್‌ನ ಲಿಂಗಾಯತ ನಾಯಕರಾದ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ.. ಈ ವೇಳೆ ಪ್ರತಿಕ್ರಿಯೆ ನೀಡಿರೋ ಶಾಮನೂರು, ಸಚಿವ ಸ್ಥಾನ ಬೇಕೆಂದು ಯಾರಲ್ಲೂ ಭಿಕ್ಷೆ ಬೇಡುವುದಿಲ್ಲ ಎಂದು ಗರಂ ಆಗಿದ್ದಾರೆ.

ಇನ್ನೂ ಕುಷ್ಟಗಿ ಸಾಸಕ ಅಮರೆಗೌಡ ಪಾಟೀಲ್ ಬಯ್ಯಾಪೂರ, ಅಫ್ಜಲ್ ಪುರ ಶಾಸಕ ಎಂ.ವೈ ಪಾಟೀಲ್ ಕೂಡ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸಚಿವ ಸ್ಥಾನ ಕೈತಪ್ಪಿದ ಕೆಲವು ಶಾಸಕರು ತಂತಮ್ಮ ಸಮುದಾಯದಲ್ಲಿ, ರಾಜಕೀಯ ವಲಯದಲ್ಲಿ, ಹೈಕಮಾಂಡ್‌ ಮಟ್ಟದಲ್ಲಿ ಭಾರಿ ಪ್ರಭಾವ ಉಳ್ಳವರೇ ಆಗಿದ್ದು, ಈ ಶಾಸಕರ ಮುಂದಿನ ನಡೆಯ ಮೇಲೆ ಸಮ್ಮಿಶ್ರ ಸರ್ಕಾರದ ಭವಿಷ್ಯ ನಿಂತಿದೆ.

LEAVE A REPLY

Please enter your comment!
Please enter your name here