Home Cinema ಸಂಪ್ರದಾಯ ಸುಳ್ಳಾಗಿ,ಸುಮಕ್ಕ ಕೊರಳಿಗೆ ಬೀಳುತ್ತಾ ಗೆಲುವಿನ ಮಾಲೆ..? ಪತಿ ಆಶಯಕ್ಕೆ ವಿರುದ್ದ, ರಾಜಕೀಯಕ್ಕೆ ಸುಮಕ್ಕ ಬಂದ್ರಾ...

ಸಂಪ್ರದಾಯ ಸುಳ್ಳಾಗಿ,ಸುಮಕ್ಕ ಕೊರಳಿಗೆ ಬೀಳುತ್ತಾ ಗೆಲುವಿನ ಮಾಲೆ..? ಪತಿ ಆಶಯಕ್ಕೆ ವಿರುದ್ದ, ರಾಜಕೀಯಕ್ಕೆ ಸುಮಕ್ಕ ಬಂದ್ರಾ ಇಂದು..?

2679
0
SHARE

ಸುಮಲತಾ ಅಂಬರೀಶ್, ಸದ್ಯ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿರುವ ನಟಿ. ಹೌದು, ಕರ್ನಾಟಕದ ರಾಜಕೀಯ ಅಖಾಡ ಸುಮಲತಾ ಎಂಟ್ರಿನಿಂದ ತಲ್ಲಣಗೊಂಡಿದೆ. ಅದ್ರಲ್ಲೂ ಮಂಡ್ಯದ ನೆಲವಂತೂ ಕಾದ ಹಂಚಿನಂತಾಗಿದೆ.

ನಿಮಗೆ ಗೊತ್ತಿರಲಿ ಅಂಬರೀಶ್.. ಜನಾನುರಿಯಾಗಿ, ಜನರ ಪರವಾಗಿ ಕೆಲ್ಸ ಮಾಡಿ ಗೆದ್ದ ನಟ ಕಂ ರಾಜಕಾರಣಿ. ಎಲ್ಲರಿಗೂ ಗೊತ್ತಿದ್ದಂತೆ ಅಂಬರೀಶ್ ಮಂಡ್ಯದ ಹುಲಿ. ಮಂಡ್ಯದ ಜನರಿಗೆ ಅಂಬಿ ಮೇಲೆ ಇನ್ನಿಲ್ಲದ ಅಭಿಮಾನ ಹಾಗೂ ಪ್ರೀತಿ. ಇದೇ ಅಭಿಮಾನ ಹಾಗೂ ಪ್ರೀತಿಯ ಪ್ರತೀಕ ಅನ್ನುವಂತೆ ಅಂಬರೀಶ್ ಕೇಂದ್ರ ಸಚಿವರಾಗಿದ್ದರು. ಇಷ್ಟೇ ಅಲ್ಲ ಸಿದ್ಧರಾಮಯ್ಯ ಆಡಳಿತಾವಧಿಯಲ್ಲಿ ವಸತಿ ಸಚಿವರೂ ಆಗಿದ್ದರು ಅಂಬರೀಶ್.

ಇನ್ನೂ ಅಂಬರೀಶ್‌ಗೆ ಜನರ ಮೇಲೆ ಹಾಗೂ ನಾಡಿನ ಮೇಲೆ ಎಷ್ಟರ ಮಟ್ಟಿಗೆ ಪ್ರೀತಿ ಇತ್ತು ಅಂದ್ರೆ ಕಾವೇರಿ ವಿವಾದ ತಾರಕಕ್ಕೇರಿದಾಗ ಕೇಂದ್ರ ಸಚಿವ ಸ್ಥಾನವನ್ನೂ ಕಾಲಿನಿಂದ ಒದ್ದು ಬಂದಿದ್ದರು ಅಂಬರೀಶ್.ಸಿನಿಮಾದವ್ರಿಗೆ ರಾಜಕೀಯ ಹೊಸದೇನಲ್ಲ. ಅವಕಾಶ ಬಂದಾಗೆಲ್ಲಾ ಒಂದು ಕೈ ನೋಡೇ ಬಿಡೋಣ ಅಂಥ ಇಲ್ಲಿ ಪೊಲಿಟಿಕಲ್ ಫೀಲ್ಡ್‌ನಲ್ಲಿ ನಸೀಬು ಪರೀಕ್ಷೆಗೆ ಅನೇಕರು ಇಳಿದಿದ್ದರು. ಇವತ್ತಿಗೂ ಇಳಿತಿದ್ದಾರೆ.

ಆದ್ರೆ ಹೀಗೆ ಕನ್ನಡ ಚಿತ್ರರಂಗದಿಂದ ರಾಜಕೀಯ ರಣರಂಗಕ್ಕೆ ಧುಮುಕಿದವರಲ್ಲಿ ಜನಪ್ರಿಯತೆಯ ಆಧಾರದ ಮೇಲೆ ಗೆದ್ದೋರು ಬೆರಳಣಿಕೆಯಷ್ಟು ಜನ ಮಾತ್ರ.ಹೌದು, ರಾಜಕೀಯ ಎಲ್ಲರಿಗೂ ಒಗ್ಗುವಂಥದ್ದಲ್ಲ. ಕೆಲವೇ ಕೆಲವರಿಲ್ಲಿ ರಾಜಕೀಯದ ಚದುರಂಗದಲ್ಲಿ ಸರಿಯಾದ ದಾಳವನ್ನ ಮುನ್ನಡೆಸುತ್ತಾರೆ. ಹೀಗೆ ಮುನ್ನಡೆಸಿ, ಗೆದ್ದವರ್ರಲ್ಲಿ ಮೊದಲು ಕಣ್ಮುಂದೆ ಬರೋದೇ ರೆಬೆಲ್ ಸ್ಟಾರ್ ಅಂಬರೀಶ್.

ಇನ್ನೂ ರಜಿನಿ ರಾಜಕೀಯಕ್ಕೆ ಬರುವ ಮುನ್ನವೇ ಅವರ ಶಕ್ತಿ ಪ್ರದರ್ಶನದ ಒಂದು ಮಹತ್ತರ ಘಟನೆಗೆ ತಮಿಳುನಾಡು ಸಾಕ್ಷಿಯಾಗಿತ್ತು. ಅಸಲಿಗೆ ೧೯೯೦ರ ದಶಕದಲ್ಲಿ ತಮಿಳುನಾಡಿನಲ್ಲಿ ಚಾಲ್ತಿ ಇದ್ದ ಮೂರೇ ಮೂರು ಹೆಸರು ಅಂದ್ರೆ ಒಂದು ಜಯಲಲಿತಾ, ಎರಡನೇಯದ್ದು ಕರುಣಾನಿಧಿ ಮತ್ತೊಬ್ರು ಸೂಪರ್ ಸ್ಟಾರ್ ರಜಿನಿಕಾಂತ್. ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿದ್ದ ರಜಿನಿಗೆ ಕೋಟ್ಯಾಂತರ ಅಭಿಮಾನಿಗಳು ಇದ್ರು.

ಆಗಲೇ ರಜಿನಿ ರಾಜಕೀಯಕ್ಕೆ ಬರ್ತಾರೆ ಅನ್ನೋ ರೂಮರ್ ಕೂಡ ಜೋರಾಗಿತ್ತು. ಆದ್ರೆ ರಜಿನಿ ಮಾತ್ರ ರಾಜಕೀಯದಿಂದ ದೂರವೇ ಉಳಿದಿದ್ರು. ಆದ್ರೆ ಕರುಣಾನಿಧಿ ತಮ್ಮ ಚಾಣಾಕ್ಷತನದಿಂದ ರಜಿನಿಯನ್ನ ತಮ್ಮ ಪಾರ್ಟಿಗೆ ಸಪೋರ್ಟ್ ಮಾಡುವಂತೆ ಮಾಡಿದ್ರು.ಮೂಲ ತಮಿಳುನಾಡಿನವರಲ್ಲದ ಜಯಲಲಿತಾ ತಮಿಳಿಗರನ್ನ ಶೋಷಿಸ್ತಾ ಇದ್ದಾರೆ. ಜಯಾರನ್ನ ಮಣಿಸೋದಕ್ಕೆ ಮೂಲ ತಮಿಳಿಗನಾಗಿರೋ ತನಗೆ ಸಪೋರ್ಟ್ ನೀಡಿ ಅಂತ ಕರುಣಾನಿಧಿ ರಜಿನಿಯ ಮನವೊಲಿಸಿದ್ರು. ಆಗ ಕರುಣಾನಿಧಿ ಕೋರಿಕೆಗೆ ಒಪ್ಪಿದ ರಜಿನಿ ಓಪನ್ ಆಗಿ ಕರುಣಾನಿಧಿಯ ಡಿ.ಎಂ.ಕೆ ಪಾರ್ಟಿಗೆ ಸಪೋರ್ಟ್ ಮಾಡಿಬಿಟ್ರು.

ನೋಡ್ ನೋಡ್ತಾನೆ ೧೯೯೬ರ ಅಸೆಂಬ್ಲಿ ಎಲೆಕ್ಷನ್ ನಲ್ಲಿ ಡಿ.ಎಂ.ಕೆ ಜಯಭೇರಿ ಬಾರಿಸ್ತು. ರಜಿನಿಯ ಮಾತಿನ ಅಲೆ ಎದುರು ಜಯಲಲಿತಾ ಧೂಳಿಪಟವಾಗಿ ಹೋಗಿದ್ರು. ಇದೊಂದೇ ಘಟನೆ ಸಾಕು..ತಮಿಳುನಾಡಿನ ಜನರ ಮನಸ್ಥಿತಿಗೆ ಕೈಗನ್ನಡಿ ಹಿಡಿಯಲು. ಹೌದು, ತಮಿಳುನಾಡಿನ ಜನತೆ ಆಲೋಚನೆ ಕರ್ನಾಟಕದ ಜನತೆಗಿಂತ ಸಂಪೂರ್ಣ ಭಿನ್ನ. ಇದೇ ಕಾರಣಕ್ಕೆ.. ತಮಿಳುನಾಡಿನಲ್ಲಿ ರಾಜಕೀಯವನ್ನಾಳಿದ್ದು ಸಿನಿಮಾದವ್ರೇ.

ಹೌದು, ತಮಿಳುನಾಡಿನ ಜನರಿಗೆ ಸ್ಟಾರ್‌ಗಳ ಮೇಲೆ ವಿಶೇಷ ವ್ಯಾಮೋಹ ಇದೆ. ಇದೇ ವ್ಯಾಮೋಹದ ಸಾಕ್ಷಿಯನ್ನ ಕಲಾವಿದರು, ಮೇಕಪ್ ಕಳಚಿ.. ರಾಜಕೀಯ ಅಖಾಡಕ್ಕೆ ಧುಮುಕಿದಾಗ ಸಿಕ್ಕ ಗೆಲುವಿನ ಮಾಲೆಗಳೂ ಕೊಡುತ್ವೆ. ಅದು, ಎಂ.ಜಿ.ಆರ್ ಇರ‍್ಲಿ, ಎನ್. ಟಿ.ಆರ್ ಇರ‍್ಲಿ, ಶಿವಾಜಿಗಣೇಶನ್ ಇರ‍್ಲಿ, ಜಯಲಲಿತಾ ಇರ‍್ಲಿ, ಸಿನಿಮಾಕ್ಷೇತ್ರದಿಂದ ರಾಜಕೀಯ ಅಖಾಡಕ್ಕೆ ಕಣಕ್ಕಿಳಿದ ಎಲ್ಲ ತಾರೆಯರನ್ನೂ ತಮಿಳುನಾಡಿನ ಜನ ತಲೆ ಮೇಲೆ ಹೊತ್ತು ಮೆರೆಸಿದ್ದಾರೆ. ಸದ್ಯ ರಜಿನಿ ವಿಚಾರದಲ್ಲೂ ಇತಿಹಾಸ ಮರುಕಳಿಸುವ ಎಲ್ಲ ಸಾಧ್ಯತೆಗಳಿವೆ.

ಇನ್ನೂ ಕಮಲ್ ಹಾಸನ್ ವಿಚಾರದಲ್ಲೂ ಇಂಥಹದ್ದೇ ಒಂದು ಇತಿಹಾಸ ನಿರ್ಮಾಣವಾಗುವದು ಖಚಿತ ಅನ್ನುವ ಮಾತುಗಳೂ ಕೇಳಿ ಬರುತ್ತಿವೆ.ಇನ್ನೂ ತೆಲುಗು ನಾಡಿನಲ್ಲೂ ತಮಿಳುನಾಡಿನಂಥನೇ ವಾತಾವರಣ ಇದೆ. ಹೌದು, ಪವನ್ ಕಲ್ಯಾಣ್ ಹಾಗೂ ಮೆಘಾ ಸ್ಟಾರ್ ಚಿರಂಜೀವಿ ಭಾಷಣಗಳಿಗೆ ಸಿಗುವ ಚಪ್ಪಾಳೆ, ಸೇರುವ ಜನ, ಹಾಗೂ ಘೋಶವಾಕ್ಯಾಗಳೂ, ನಮ್ಮ ಕಲಾವಿದರಿಗೆ ಸಿಗುತ್ತ್ವಾ.. ಹೀಗೊಂದು ಊಹೆಯನ್ನೂ ಮಾಡಿಕೊಳ್ಳಲು ಅಸಾಧ್ಯ. ಅದ್ರಲ್ಲೂ ತೆಲುಗು ಮಾತನಾಡುವ ಸೀಮಾಂದ್ರ ಹಾಗೂ ತೆಲಂಗಾಣದಲ್ಲಿ ಪವನ್ ಕಲ್ಯಾಣ್ ಬರ‍್ತಾರೆ ಅಂದ್ರೆ ಸಾಕು, ಸಾಗರೋಪಾದಿಯಲ್ಲಿ ಜನ ಸೇರಿಕೊಳ್ತಾರೆ.

ಅಷ್ಟರ ಮಟ್ಟಿಗೆ ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ರ‍್ಯಾಲಿಗಳಿಗೆ, ಜನಸಾಗರಕ್ಕೆ, ತೆಲುಗುನೆಲ ಸಾಕ್ಷಿಯಾಗಿವೆ. ಹೀಗೆ ಜನರಿಂದ ಸಿಕ್ಕ ಅಭೂತಪೂರ್ವ ಬೆಂಬಲವನ್ನ ಚಿರಂಜೀವಿಯಾಗ್ಲಿ, ಪವನ್ ಕಲ್ಯಾಣ್ ಆಗ್ಲಿ ಸರಿಯಾಗಿ ಬಳಸಿಕೊಳ್ಳಲಿಲ್ಲ ಅನ್ನೋದೂ ಬೇರೆ ವಿಷಯವಾದ್ರೂ, ಇವತ್ತಿಗೂ ಪವನ್ ಕಲ್ಯಾಣ್ ಹಾಗೂ ಚಿರಂಜೀವಿಗೆ ಅಲ್ಲಿನ ಜನ ಮತ ನೀಡಲು ತುದಿಗಾಲಿನಲ್ಲಿ ನಿಂತಿರುತ್ತಾರೆ.
ಹೀಗೆ ಕರ್ನಾಟಕ. ತಮಿಳುನಾಡು, ಆಂಧ್ರಪ್ರದೇಶ.. ಮೂರು ರಾಜ್ಯಗಳಲ್ಲೂ ಸಿನಿಮಾದವರ ರಾಜಕೀಯ ವಿಚಾರದಲ್ಲಿ ಬೇರೆ ಬೇರೆ ತರಹದ ನಿಲುವುಗಳಿವೆ.

ತಮಿಳುನಾಡು ಹಾಗೂ ಆಂಧ್ರದ ಜನ ಸಿನಿಮಾ ನಾಯಕರನ್ನೇ ರಾಜಕೀಯ ನಾಯಕರನ್ನಾಗಿ ನೋಡುವ ಕನಸೊತ್ತರೇ, ಕನ್ನಡಿಗರು ಸಿನಿಮಾದವರನ್ನ ಬರೀ ಸಿನಿಮಾರಂಗದಲ್ಲೇ ನೋಡಲು ಇಷ್ಟಪಡುತ್ತಾರೆ. ಇಂಥ ವಾತಾವರಣದಲ್ಲೀಗ ಸುಮಲತಾ ರಾಜಕೀಯಕ್ಕೆ ಲೇಟೆಸ್ಟ್ ಆಗಿ ಎಂಟ್ರಿ ಕೊಡುತ್ತಿದ್ದಾರೆ.ಸುಮಲತಾಗೆ ಅಂಬಿಗೆ ಸಿಕ್ಕ ಪ್ರೀತಿ, ರಾಜಕೀಯದಲ್ಲೂ ಸಿಗುತ್ತಾ..? ಕನ್ನಡಿಗರು ಸುಮಲತಾರನ್ನ ರಾಜಕಾರಣಿಯನ್ನಾಗಿಸುತ್ತಾರಾ..?

ನೋವು, ಅವಮಾನಗಳನ್ನ ದಾಟಿ ಸುಮಕ್ಕ ರಾಜಕೀಯ ರಣರಂಗದಲ್ಲಿ ಗೆದ್ದು ಬರ‍್ತಾರಾ,? ಮಂಡ್ಯದ ಮಹಾಯುದ್ಧದ ಕ್ಲ್ಯೆಮ್ಯಾಕ್ಸ್‌ನ ಬಳಿಕನೂ ಸುಮಲತಾ ಪರ ಮಂಡ್ಯದವರು ಸದಾ ನಿಲ್ಲುತ್ತಾರಾ,? ಅಪ್ಪಿ ತಪ್ಪಿ ಹೆಚ್ಚು ಕಮ್ಮಿಯಾಗಿ ಸೋತ್ರೇ ರಾಜಕೀಯವನ್ನ ಸುಮಲತಾ ಮುಂದುವರೆಸುತ್ತಾರಾ, ? ಇದೆಲ್ಲದ್ರ ನಡುವೆ ಉಪ್ಪಿಯ ಪ್ರಜಾಕಾರಣವೇನಾಗುತ್ತೆ,? ಹೀಗೆ ಉತ್ತರವಿರದ ಅನೇಕ ಪ್ರಶ್ನೆಗಳಿಗೆ ಉತ್ತರ ಕಾಲವೇ ನೀಡಲಿದೆ. ಅಲ್ಲಿವರೆಗೂ ಕಾಯಬೇಕಷ್ಟೇ

LEAVE A REPLY

Please enter your comment!
Please enter your name here