Home District ಸಚಿವ ಸಂಪುಟ ರಚನೆ ಗೊಂದಲಗಳ ಬಗ್ಗೆ H.D.ದೇವೇಗೌಡ ತೀವ್ರ ಅಸಮಾಧಾನ..!! “ನಿರ್ಧಾರ ನಿಯೋಜಿತ ಮುಖ್ಯಮಂತ್ರಿ...

ಸಚಿವ ಸಂಪುಟ ರಚನೆ ಗೊಂದಲಗಳ ಬಗ್ಗೆ H.D.ದೇವೇಗೌಡ ತೀವ್ರ ಅಸಮಾಧಾನ..!! “ನಿರ್ಧಾರ ನಿಯೋಜಿತ ಮುಖ್ಯಮಂತ್ರಿ HDK ತೆಗೆದುಕೊಳ್ಳುತ್ತಾರೆ”…

672
0
SHARE

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ರಚನೆ ಕುರಿತಂತೆ ಉಂಟಾಗಿರುವ ಗೊಂದಲಗಳ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ಶೃಂಗೇರಿಗೆ ತೆರಳುವ ಮುನ್ನ ದೇವೇಗೌಡರು ಮಾಧ್ಯಮ ಹೇಳಿಕೆ ನೀಡಿದ್ದಾರೆ…ತಾವು ಸಮ್ಮಿಶ್ರ ಸರ್ಕಾರದ ಯಾವುದೇ ನಿರ್ಧಾರಗಳ ಬಗ್ಗೆ ಮಧ್ಯ ಪ್ರವೇಶ ಮಾಡುವುದಿಲ್ಲ. ಡಿ.ಕೆ.ಶಿವಕುಮಾರ್ ಹಾಗೂ ಎಂ.ಬಿ.ಪಾಟೀಲ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಜೆಡಿಎಸ್ ವಿರೋಧ ವ್ಯಕ್ತಪಡಿಸಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿ ಸತ್ಯಕ್ಕೆ ದೂರವಾದುದು… ಸಚಿವ ಸಂಪುಟ ರಚನೆಗೂ ಮುನ್ನ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಕಾಂಗ್ರೆಸ್ ನಾಯಕರೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳುತ್ತಾರೆ…ಇದರಲ್ಲಿ ತಾವು ಯಾವುದೇ ರೀತಿಯಲ್ಲೂ ಹಸ್ತ ಕ್ಷೇಪ ನಡೆಸುವುದಿಲ್ಲ ಎಂದು ಹೆಚ್.ಡಿ.ದೇವೇಗೌಡರು ಸ್ಪಷ್ಟ ಪಡಿಸಿದ್ದಾರೆ…

LEAVE A REPLY

Please enter your comment!
Please enter your name here