Home Elections 2019 ಸಣ್ಣ ರೈತರಿಗೆ ಮೋದಿ ಸರ್ಕಾರ ಬಿಗ್ ಗಿಫ್ಟ್..! ಕೃಷಿಕರ ಖಾತೆಗೆ ನೇರ 6 ಸಾವಿರ ರೂಪಾಯಿ...

ಸಣ್ಣ ರೈತರಿಗೆ ಮೋದಿ ಸರ್ಕಾರ ಬಿಗ್ ಗಿಫ್ಟ್..! ಕೃಷಿಕರ ಖಾತೆಗೆ ನೇರ 6 ಸಾವಿರ ರೂಪಾಯಿ ವರ್ಗ…

915
0
SHARE

2019-20ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಲ್ಲಿ 2 ಹೇಕ್ಟರ್ ಹೊಂದಿರುವ ರೈತರಿಗೆ 6 ಸಾವಿರ ನಗದನ್ನ ರೈತರ ಖಾತೆಗೆ ನೇರ ವರ್ಗಾವಣೆ ಮಾಡಲಾಗುವುದು.

ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಬಂಪರ್ ನೀಡಲಾಗಿದ್ದು, ಈ ಯೋಜನೆಯಿಂದ 12 ಕೋಟಿ ರೈತ ಕುಟುಂಬಕ್ಕೆ ಅನುಕೂಲ. ಈ ಯೋಜನೆಯಿಂದ ಸರ್ಕಾರಕ್ಕೆ 75 ಸಾವಿರ ಕೋಟಿ ಹೊರೆ ಬೀಳಿಲಿದೆ. ಪಶುಪಾಲನೆ, ಮೀನುಗಾರಿಕೆಗೆ 750 ಕೋಟಿ ಮೀಸಲಿಡಲಾಗಿದೆ. ರಾಷ್ಟ್ರೀಯ ಕಾಮಧೇನು ಯೋಜನೆಯನ್ನ ಜಾರಿಗೆ ತರಲಾಗಿದೆ.

ರಾಷ್ಟ್ರೀಯ ಕಾಮಧೇನು ಯೋಜನೆಯಡಿಯಲ್ಲಿ ಪಶುಪಾಲನೆ, ಮೀನುಗಾರಿಕೆಗೆ 750 ಕೋಟಿ ಮೀಸಲಿಡಲಾಗಿದೆ. ಮೀನುಗಾರಿಕೆಗೆ ಪ್ರತ್ಯೇಕ ವಿಭಾಗ ತೆರೆಯಲು ನಿರ್ಧಾರ ಮಾಡಲಾಗಿದೆ.ರೈತರು ಸಾಲ ಮರುಪಾವತಿ ಮಾಡಿದರೆ ಶೇ.3ರಷ್ಟು ಬಡ್ಡಿ ಮನ್ನಾ, ರೈತರ ನೆರವಿಗಾಗಿ 75 ಸಾವಿರ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ.

ದೇಶದ 12 ಕೋಟಿ ರೈತರಿಗೆ ಈ ಯೋಜನೆಯ ಲಾಭ ದೊರೆಯಲಿದೆ ಅಂತ ವಿತ್ತ ಸಚಿವ ಪಿಯೂಷ್ ಗೋಯಲ್ ಘೋಷಿಸಿದ್ದಾರೆ. 2019-20ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಬಡವರಿಗೆ ಶೇ.10ರಷ್ಟು ಮೀಸಲಾತಿಯನ್ನ ನೀಡಲಾಗಿದೆ.ಬಜೆಟ್‌ನಲ್ಲಿ ನರೇಗಾ ಯೋಜನೆಗೆ ಹೆಚ್ಚು ಅನುದಾನವನ್ನ ನೀಡಲಾಗಿದ್ದು, ನರೇಗಾ ಯೋಜನೆಗೆ 60 ಸಾವಿರ ಕೋಟಿ ಹಣವನ್ನ ಮೀಸಲಿಡಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗಿದ್ದು,ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕ್ಕೆ 19 ಸಾವಿರ ಕೋಟಿ ಅನುದಾನವನ್ನ ಮೀಸಲಿಡಲಾಗಿದೆ.ಕೇಂದ್ರ ಸರ್ಕಾರದಿಂದ ಮೆಗಾ ಕಾರ್ಮಿಕ ಯೋಜನೆ ತಂದಿದೆ. ಕಾರ್ಮಿಕರ ಪಿಂಚಣಿ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗುತ್ತೆ.

ಗ್ರಾಚುಟಿ ಮಿತಿ 10 ಲಕ್ಷದಿಂದ 30 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಮೃತ ಪಟ್ಟ ಕಾರ್ಮಿಕರಿಗೆ 6 ಲಕ್ಷದವರಗೆ ಪರಿಹಾರ ನೀಡಲಾಗುತ್ತೆ. ಸಂಘಟಿತ ವಲಯದ ಕಾರ್ಮಿಕರಿಗೆ ತಿಂಗಳಿಗೆ 3 ಸಾವಿರ ಪಿಂಚಣಿ ನೀಡಲಾಗುತ್ತೆ.

 

LEAVE A REPLY

Please enter your comment!
Please enter your name here