Home Crime ಸದಾ ಫೋನ್ ನಲ್ಲಿ ಬ್ಯುಸಿಯಾಗಿರ್ತಿದ್ಲು WIFE.! ಸಾಫ್ಟ್ ವೇರ್ ಸಂಸಾರದಲ್ಲಿ ಮೂಡಿತ್ತು ಅನುಮಾನ..! ಗಂಡನೇ ...

ಸದಾ ಫೋನ್ ನಲ್ಲಿ ಬ್ಯುಸಿಯಾಗಿರ್ತಿದ್ಲು WIFE.! ಸಾಫ್ಟ್ ವೇರ್ ಸಂಸಾರದಲ್ಲಿ ಮೂಡಿತ್ತು ಅನುಮಾನ..! ಗಂಡನೇ ಪತ್ನಿಗೆ ಕೊಟ್ಟಿದ್ದ ಸಾವಿನ ಬಹುಮಾನ..!

1845
0
SHARE

 

ಹೊಸದಾಗಿ ಆಗಿರೋ ಮದುವೆ, ಕೈತುಂಬಾ ಸಂಬಳ, ಮನಸ್ಸಿಗೆ ಬೇಕು ಅನ್ನೋದನ್ನೆಲ್ಲಾ ತೆಗೆದುಕೊಳ್ಳುವಂತಹ  ಶಕ್ತಿಯಿತ್ತು. ಹೀಗಾಗಿ ಬೆಂಗಳೂರಲ್ಲಿ ಇಬ್ಬರು ರಾಯಲ್ ಆಗಿಯೇ ಬದುಕ್ತಿದ್ರು. ಇಬ್ಬರು ಒಂದಷ್ಟಿ ದಿನ ಚೆನ್ನಾಗಿಯೇ ಇದ್ರು. ಆದ್ರೆ ಅದ್ಯಾಕೋ ಅವರಿಬ್ಬರ ಮಧ್ಯೆ ಸಣ್ಣಗೆ ಅನುಮಾನ ಹುಟ್ಟಿಕೊಳ್ಳೋದಕ್ಕೆ ಶುರುವಾಯ್ತು. ಅವತ್ತು ಸಣ್ಣದಾಗಿದ್ದ ಅನುಮಾನವನ್ನ ಅವತ್ತೇ ಇಬ್ಬರು ಕೂತು ಬಗೆಹರಿಸಿಕೊಂಡಿದ್ರೆ ಮುಗಿದು ಹೋಗಿತ್ತು.

ಆದ್ರೆ ಅವತ್ತು ಹಾಗೆ ಮಾಡಲಿಲ್ಲ, ಅದನ್ನ ಹಾಗೆ ಬೆಳೆಯೋದಕ್ಕೆ ಬಿಟ್ಟಿದ್ರು. ನಿಧಾನಕ್ಕೆ ಪತ್ನಿಗೂ ಗಂಡನ ಮೇಲಿನ ಆಸಕ್ತಿ ಕಡಿಮೆಯಾಗಿ ಹೋಗಿತ್ತು. ಆಕೆ ಬೇರೆ ಅದ್ಯಾರ ಜೊತೆಗೋ ಫೋನ್ ನಲ್ಲಿ ಮಾತನಾಡಿಕೊಂಡು ವಾಟ್ಸಾಪ್ ನಲ್ಲಿ ಚಾಟ್ ಮಾಡ್ಕೊಂಡು ಇರೋದಕ್ಕೆ ಶುರುಮಾಡಿದ್ಲು. ಅಲ್ಲಿಗೆ ಅವರ ಸಂಸಾರ ಹಾಳಾಗೋದಕ್ಕೆ ಏನು ಬೇಕಿತ್ತೋ ಅದೆಲ್ಲಾ ಆಗೋದಕ್ಕೆ ಶುರುವಾಗಿತ್ತು.ಜೊತೆಯಲ್ಲಿ ಇರಬೇಕಾದ ಪತ್ನಿ ಇನ್ಯಾರದ್ದೊ ಜೊತೆ ಬ್ಯುಸಿಯಾಗಿದ್ದಾಳೆ ಅನ್ನೋದು ಗೊತ್ತಾಗ್ತಿದ್ದ ಹಾಗೆ ಗಂಡನಿಗೆ ಉರಿಯಬಾರದ್ದ ಜಾಗದಲ್ಲೆಲ್ಲಾ ಉರಿದು ಹೋಗಿತ್ತು. ಅದಕ್ಕೆ ಆಕೆಯ ಬಳಿ ಅದ್ಯಾರು ಅಂತ ಕೇಳಿದ್ದಾನೆ. ಆದ್ರೆ ಆಕೆ ಸರಿಯಾದ ಉತ್ತರವನ್ನ ನೀಡಿರಲಿಲ್ಲ. ಹೀಗಾಗಿ ಅವರಿಬ್ಬರ ಮಧ್ಯೆ ಜಗಳ ಶುರುವಾಗಿ ತುಂಬಾನೆ ದಿನವಾಗಿ ಹೋಗಿತ್ತು.

ಅಲ್ಲದೆ ಮದುವೆಯಾದ ಹೊಸದರಲ್ಲಿ ವೀಕೆಂಡ್ ನಲ್ಲಿ ಮೂವಿ, ಶಾಪಿಂಗ್ ಅಂತ ಹೋಗ್ತಿದ್ದವರು ಈಗ ವೀಕೆಂಡ್ ಬಂತು ಅಂದ್ರೆ ಅದನ್ನ ಫುಲ್ ಟೈಂ ಜಗಳಕ್ಕೆ ಅಂತಾನೆ ಮೀಸಲಾಗಿ ಇಟ್ಕೊಂಡಿದ್ರು. ಅಲ್ಲಿಗೆ ಅವ್ರು ಒಂದೇ ಮನೆಯಲ್ಲಿದ್ರು ದುಷ್ಮನ್ ಗಳ ಹಾಗೆ ಇರೋದಕ್ಕೆ  ಶುರುಮಾಡಿದ್ರು.ಇತ್ತೀಚೆಗೆ ಮತ್ತು ಸಾಫ್ಟ್ ವೇರ್ ಸಂಸಾರದಲ್ಲಿ ಗಲಾಟೆ ನಡೆದಿತ್ತು. ಆಗ ಗಂಡ ಹೆಂಡ್ತಿ ಜೋರಾಗಿ ಕಿತ್ತಾಡಿಕೊಂಡಿದ್ದಾರೆ. ಅವತ್ತು ಶ್ರೀನಿವಾಸ್ ಗೆ ಇನ್ನಿಲ್ಲದ ಸಿಟ್ಟು ಬಂದಿತ್ತು. ಅದೇ ದಿನ ಆತ ತನ್ನ ಪತ್ನಿಗೆ ಪ್ರೀತಿಯಿಂದ ಕೊನೆಯದಾಗಿ ಒಂದು ಗ್ಲಾಸ್ ಜ್ಯೂಸ್ ಮಾಡಿಕೊಟ್ಟಿದ್ದ. ಅಯ್ಯೋ ಗಂಡ ಜ್ಯೂಸ್ ಕೊಟ್ಟ ಅಂತಾನೋ ಅಥವಾ ಜಗಳ ಮಾಡಿ ಸುಸ್ತಾಗಿದ್ದ ಕಾರಣಕ್ಕೋ ಆಕೆ ಜ್ಯೂಸ್ ಕುಡಿದಿದ್ಲು. ಆ ಜ್ಯೂಸ್ ಕುಡಿತಾ ಇದ್ದ ಹಾಗೆ ಆಕೆಗೆ ಮೈ ಮೇಲೆ ಪ್ರಜ್ಞೆಯೇ ಇರಲಿಲ್ಲ. ಯಾಕಂದ್ರೆ ಆತ ಜ್ಯೂಸ್ ನಲ್ಲಿ ನಿದ್ದೆ ಮಾತ್ರೆ ಹಾಕಿ ಕೊಟ್ಟಿದ್ದ.

ಆಕೆಗೆ ಗಾಢವಾದ ನಿದ್ದೆ ಬರ್ತಿದ್ದ  ಹಾಗೆ ಆತ ಆಕೆಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಅಲ್ಲದೆ ಆಕೆ ಸತ್ತಿದ್ದಾಳೋ ಬದುಕಿದ್ದಾಳೋ ಅನ್ನೋದನ್ನ ನೋಡೋದಕ್ಕೆ ಅಂತ ಮುಖದ ಮೇಲೆ ನೀರನ್ನ ಹಾಕಿ ಟೆಸ್ಟ್ ಮಾಡಿದ್ದ. ನಂತ್ರ ಆ ಬಾಡಿಯನ್ನ ನಿಧಾನವಾಗಿ ಎಳ್ಕೊಂಡು ಹೋಗಿ ತನ್ನ ಬಾತ್ ರೂಂ ನಲ್ಲಿ ಹಾಕಿದ್ದ. ನಂತ್ರ ಏನು ಮಾಡಬೇಕು ಅನ್ನೋದು ಗೊತ್ತಾಗದೆ  ಸ್ವಲ್ಪ ಹೊತ್ತು ಹಾಗೆ ಯೋಚನೆ ಮಾಡುತ್ತಾ ಕೂತಿದ್ದ.ಶ್ರೀನಿವಾಸ ರೆಡ್ಡಿ ಕೊಲೆ ಮಾಡಿದ ನಂತ್ರ ಸಾಕಷ್ಟು ಹೊತ್ತು ಪತ್ನಿಯ ಶವದ ಮುಂದೆಯೇ ಸುಮ್ಮನೆ ಕುಳಿತು ಮುಂದೇನು ಮಾಡೋದು ಅಂತ ಯೋಚನೆ ಮಾಡಿದ್ದ. ಆಗ ಅವನಿಗೆ ಒಂದು ಐಡಿಯಾ ಬಂದಿತ್ತು. ನಂತ್ರ ಆತ ತನ್ನ ಮನೆಯಲ್ಲಿದ್ದ ವಾಟರ್ ಹೀಟರ್ ಅನ್ನ ತಂದು ಆಕೆಯ ಕೈಯಲ್ಲಿಟ್ಟು ಸ್ವಿಚ್ ಆನ್ ಮಾಡಿದ್ದ.

ನಂತ್ರ ಆಕೆಗೆ ಶಾಕ್ ಹೊಡೆದ ನಂತ್ರ ಅದನ್ನ ಆಫ್ ಮಾಡಿದ್ದ. ಅಲ್ಲದೆ ಅದರ ಒಂದು ಫೋಟೋವನ್ನ ತೆಗೆದು ತನ್ನ ಅತ್ತೆ ಮಾವರಿಗೆ ಕಳುಹಿಸಿದ್ದ. ಅಷ್ಟೇ ಅಲ್ಲ ತಕ್ಷಣವೇ ಒಂದು ವ್ಯಾನ್ ಬುಕ್ ಮಾಡಿ ತನ್ನ ಪತ್ನಿಯ ಶವವನ್ನ ಅದ್ರಲ್ಲಿ ಹಾಕ್ಕೊಂಡು ಅದನ್ನ ಊರಿಗೆ ತೆಗೆದುಕೊಂಡು ಹೋಗಿದ್ದ. ಅಲ್ಲಿ ಇವಳಿಗೆ ಕರೆಟ್ ಶಾಕ್ ಹೊಡೆದು ಸತ್ತು ಹೋಗಿದ್ದಾಳೆ. ನನ್ನ ಹೆಂಡ್ತಿಯನ್ನ ಬಿಟ್ಟು ನನಗೆ ಇರೋದಕ್ಕೆ ಆಗೋದಿಲ್ಲ ಅಂತ ಹೇಳಿ ಆತ ಕಣ್ಣೀರು ಹಾಕಿ ಡ್ರಾಮಾ ಮಾಡಿದ್ದ. ಮನೆಯವರೆಲ್ಲಾ ಇವನ ಕಣ್ಣೀರಿಗೆ ಕರಗಿ ಹೋಗಿದ್ರು. ಅಯ್ಯೋ ಹೆಂಡ್ತಿಯನ್ನ ಎಷ್ಟು ಪ್ರೀತಿ ಮಾಡ್ತದ್ದ ಪಾಪ ಅಂತ ಅವನನ್ನ ಸಮಾಧಾನ ಮಾಡಿದ್ದರು. ಅಲ್ಲದೆ ಆಕೆಯ ಶವಸಂಸ್ಕಾರಕ್ಕೆ ಅಂತಿಮ ಸಿದ್ಧತೆ ಮಾಡಿಕೊಂಡಿದ್ರು. ಆದ್ರೆ ಅವತ್ತು ಇನ್ನೇನು ಸಂಸ್ಕಾರ ಮಾಡಬೇಕು ಅನ್ನೋ ಹೊತ್ತಿಗೆ ವೆಂಗಮ್ಮನ ತಾಯಿಗೆ ಒಂದು ಅನುಮಾನ ಬಂದಿತ್ತು. ಆಗ ಆಕೆ ಇಗಲೇ ಸಂಸ್ಕಾರ ಮಾಡೋದು ಬೇಡ ಯಾವುದಕ್ಕೂ ಒಮ್ಮೆ ಪೊಲೀಸ್ರಿಗೆ ವಿಷಯ ತಿಳಿಸೋಣ ಅಂತ ಹೇಳಿ ವಿಷಯ ತಿಳಿಸಿದ್ರು.

ಆಗ ಆಕೆ ನೆಲ್ಲೂರು ಪೊಲೀಸ್ರಿಗೆ ವಿಷಯ ತಿಳಿಸಿದ್ರು. ನೆಲ್ಲೂರು ಪೊಲೀಸ್ರು ಬಂದು ಮನೆಯವರಿಂದ ಮಾಹಿತಿ ಪಡೆದಿದ್ರು. ಅಲ್ಲದೆ ಆಕೆ ಸತ್ತು ಹೋಗಿರೋದು ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ನಲ್ಲಿ ಆಗಿದ್ರಿಂದ ಇಲ್ಲಿನ ಪೊಲೀಸ್ರಿಗೆ ಮಾಹಿತಿ ನೀಡಿದ್ರು. ಆ ಮಾಹಿತಿಯನ್ನ ಪಡೆದ ಪೊಲೀಸ್ರು ಶ್ರೀನಿವಾಸ್ ನನ್ನ ಕರೆದು ವಿಚಾರಣೆ ನಡೆಸಿದ್ರು. ಆದ್ರೆ ಮೊದಲಿಗೆ ಆತ ಯಾವುದೇ ಸತ್ಯವನ್ನ ಬಾಯಿಬಿಡಲಿಲ್ಲ. ಅದ್ಯಾವಾಗ ಪೊಲೀಸ್ರು ಅವನಿಗೆ ತಮ್ಮ ಭಾಷೆಯಲ್ಲಿ ಮಾತನಾಡಿಸಿದ್ರೋ ಆಗ ಆತ ತಾನೇ ತನ್ನ ಪತ್ನಿಯನ್ನ ಕೊಲೆ ಮಾಡಿದ್ದೀನಿ ಅಂತ ಸತ್ಯ ಒಪ್ಪಿಕೊಂಡಿದ್ದ. ಇದೀಗ ಸಾಫ್ಟ್ ವೇರ್ ಇಂಜಿನಿಯರ್ ಜೈಲಲ್ಲಿ ಹಾರ್ಡ್ ವೇರ್ ಖೈದಿಯಾಗಿ ಜೀವನ ನಡೆಸ್ತಿದ್ದಾನೆ.ಇದು ಒಂದು ಹೈಫೈ ಸಂಸಾರದ ಕಥೆಯಾದ್ರೆ ಇನ್ನೊಂದು ಸಂಸಾರದ ಕಥೆ ಇದಕ್ಕಿಂತ ಭಿನ್ನವಾಗಿದೆ. ಇಲ್ಲಿ ಮದುವೆ ಆಗ್ಲಿ ಅನ್ನೋ ಉದ್ದೇಶಕ್ಕೆ ಗಂಡು ಅನಿಸಿಕೊಂಡ ಪಾಪಿ ಸುಳ್ಳು ಹೇಳಿ ಮದುವೆಯಾಗಿದ್ದ. ಅಲ್ಲಿ ಬದುಕೋದಕ್ಕೆ ಎಲ್ಲವೂ ಇತ್ತು.

ಆದ್ರೆ ಇಲ್ಲಿ ಬದುಕೋದಕ್ಕೆ ಏನೇನು ಇರಲಿಲ್ಲ. ಅವನು ಗಂಡಸು ಅನ್ನೋ ಒಂದು ಅರ್ಹತೆ ಬಿಟ್ರೆ ಬೇರೇನು ಇಲ್ಲ. ಈ ಫೋಟೋದಲ್ಲಿ ಫೋಸ್ ಕೊಟ್ಟುಕೊಂಡು ನಿಂತಿದ್ದಾನಲ್ಲ ಇವನು ಅಶೋಕ್ ಅಂತ. ಇವನು ಕೋಲಾರದ ಬಂಗಾರಪೇಟೆಯವನು. ಈತ ಮೂರು ತಿಂಗಳ ಹಿಂದೆ ಕೋಲಾರದ ಮುಳಬಾಗಿಲುವಿನ ರಂಜಿತಾ ಅನ್ನೋ ಹುಡುಗಿಯನ್ನ ಮದುವೆಯಾಗಿದ್ದ. ಆ ಮಹಾತಾಯಿ ಈ ಅಯೋಗ್ಯನನ್ನ ಮದುವೆಯಾಗಿದ್ದೆ ಒಂದು ದುರಂತವಾಗಿತ್ತು. ಮದುವೆಯಾಗೋ ಸಮಯದಲ್ಲಿ ಈ ಭೂಪ ತಾನು ಎಲೆಕ್ಟ್ರಿಕಲ್ ಕಾಂಟ್ರಕ್ಟರ್ ಅಂತ ಹೇಳಿ ಮದುವೆಯಾಗಿದ್ದ. ರಂಜಿತಾಳ ಮನೆಯವರು ಕೂಡಾ ಹುಡುಗ ಒಳ್ಳೇ ಸಂಪಾದನೆ ಮಾಡ್ತಾನೆ ಅಂತ ಹೇಳಿ ಅವನ ಜೊತೆ ಮದುವೆ ಫಿಕ್ಸ್ ಮಾಡಿದ್ರು. ಅಲ್ಲದೆ ಮದುವೆಯಲ್ಲಿ ಅಶೋಕನಿಗೆ ಹುಡುಗಿ ಮನೆಯವರು ಒಂದಷ್ಟು ವರದಕ್ಷಿಣೆ ಅಂತ ಹೇಳಿ ಹಣ ಮತ್ತು ಚಿನ್ನಾಭರಣಗಳನ್ನ ಕೊಟ್ಟು ಮದುವೆ ಮಾಡಿದ್ರು.

ಮದುವೆ ಆಗೋವರೆಗೂ ಆತ ನಾನು ಒಳ್ಳೇ ಕೆಲಸದಲ್ಲಿ ಇದ್ದೀನಿ ಅಂತ ಹೇಳಿ ಫೋಸ್ ಕೊಟ್ಟಿದ್ದ. ನಂತ್ರ ತನ್ನ ಪತ್ನಿಯನ್ನ ಕರೆದುಕೊಂಡು ಬಂದು ಕೆಆರ್ ಪುರಂನ ದೇವಸಂದ್ರಕ್ಕೆ ಬಂದು ಮನೆಯೊಂದನ್ನ ಮಾಡಿ ಸಂಸಾರ ಮಾಡೋದಕ್ಕೆ ಶುರುಮಾಡಿದ್ದ. ಮದುವೆಯಾದ ಹೊಸದರಲ್ಲಿ ಆತ ಚೆನ್ನಾಗಿಯೇ ಇದ್ದ. ಅಲ್ಲದೆ ಹುಡುಗಿ ಮನೆಯಲ್ಲಿ ಒಂದಷ್ಟು ಹಣ ಒಡವೆ ಕೊಟ್ಟಿದ್ರಲ್ಲ ಅಂತ ಆಕೆಯನ್ನ ಚೆನ್ನಾಗಿಯೇ ನೋಡಿಕೊಳ್ತಿದ್ದ. ಆದ್ರೆ ಮಾವನ ಮನೆಯಲ್ಲಿ ಕೊಟ್ಟಿದ್ದ ಹಣವೆಲ್ಲಾ ಯಾವಾಗ ಖಾಲಿಯಾಗೋದಕ್ಕೆ ಶುರುವಾಯ್ತೋ ಆಗ ಹೊಸ ಗಂಡ ತನ್ನ ಹಳೆ ಬುದ್ಧಿಯನ್ನ ತೋರಿಸೋದಕ್ಕೆ ಶುರುಮಾಡಿದ್ದ.ಅಶೋಕ್ ಮತ್ತು ರಂಜಿತಾ ಅದ್ಯಾವ ಮುಹೂರ್ತದಲ್ಲಿ ಮದುವೆಯಾದ್ರೋ ಗೊತ್ತಿಲ್ಲ. ಇವನ ಮದುವೆಗ ಅದ್ಯಾರು ಮುಹೂರ್ತ ಫಿಕ್ಸ್ ಮಾಡಿದ್ರು ಅನ್ನೋದು ಗೊತ್ತಿಲ್ಲ. ಇವರಿಬ್ಬರ ಮದುವೆ ಆಗದೇ ಇದ್ದಿದ್ರೆ ಚೆನ್ನಾಗಿರ್ತಿತ್ತು ಅನ್ಸುತ್ತೆ.

ಅಲ್ಲದೆ ಆ ಮದುವೆ ಆಗದೇ ಇದ್ದಿದ್ರೆ ಆಕೆ ಜೀವಂತವಾಗಿ ಎಲ್ಲಾದ್ರು ಒಂದು ಕಡೆ ನೆಮ್ಮದಿಯಾಗಿ ಇರ್ತಿದ್ಲು ಅಂತ ಅನ್ಸುತ್ತೆ. ಮದುವೆಯಾದ ನಂತ್ರ ಕೆಆರ್ ಪುರಂ ಗೆ ಬಂದು ಆತ ಪತ್ನಿಯೊಂದಿಗೆ ಸೆಟ್ಲ್ ಆಗಿದ್ದ. ಆದ್ರೆ ಇವನು ದಿನಪೂರ್ತಿ ಮನೆಯಲ್ಲೇ ಇರ್ತಿದ್ದರಿಂದ ಆಕೆಗೆ ಮೊದಲು ಏನು ಅನುಮಾನ ಬರಲಿಲ್ಲ. ಆದ್ರೆ ನಿಧಾನಕ್ಕೆ ಇವ್ರು ಯಾಕೆ ಕೆಲಸಕ್ಕೆ ಹೋಗ್ತಿಲ್ಲ ಅಂತ ಅನುಮಾನ ಬಂದಿದೆ. ಆಗ ಆತ ನನಗೆ ಮಾಡೋದಕ್ಕೆ ಯಾವುದೇ ಕೆಲಸ ಇಲ್ಲ ಈಗ ಕೆಲಸ ಹುಡುಕ್ತಿದ್ದೀನಿ ಅಂತ ಹೇಳಿದ್ದ. ಆಗ ಅವನ ಕೈಯಲ್ಲಿ ಹಣ ಇತ್ತಲ್ವಾ ಅದಕ್ಕೆ ಆತನು ತಲೆ ಕೆಡಿಸಿಕೊಳ್ಳದೆ ಮನೆಯಲ್ಲಿ ಟಿವಿ ನೋಡಿಕೊಂಡು ಚೆನ್ನಾಗಿದ್ದ.ಅದ್ಯಾವಾಗ ಕೈಯಲ್ಲಿರೋ ಹಣ ಖಾಲಿಯಾಗೋದಕ್ಕೆ ಶುರುವಾಯ್ತೋ ಆಗ ಆತ ತನ್ನ ಅಸಲಿ ಬಣ್ಣವನ್ನ ತೋರಿಸೋದಕ್ಕೆ ಶುರುಮಾಡಿದ. ಅದೇನಪ್ಪ ಅಂದ್ರೆ ನಾನು ಅಂಗಡಿ ಇಡ್ತೀನಿ ಅದಕ್ಕೆ ಮನೆಯಿಂದ ಹಣ ತಗೊಂಡು ಬಾ ಅಂತ ಹೇಳೋದಕ್ಕೆ ಶುರುಮಾಡಿದ.

ಪತ್ನಿಯನ್ನ ಕೊಂದು ಆತ ಕೂಡಾ ಆತ್ಮಹತ್ಯೆಯ ನಾಟಕವಾಡಿದ್ದಾನೆ ಅಂತ ಆಕೆಯ ಪೋಷಕರು ಹೇಳ್ತಿದ್ದಾರೆ. ಇತ್ತ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ಅವನನ್ನ ವಿಚಾರಣೆ ನಡೆಸ್ತಿದ್ದಾರೆ. ವೀಕ್ಷಕರೇ ನಿಮಗೆ ಎರಡು ಕಥೆಯನ್ನ ಹೇಳಿದ್ದೀವಿ. ಎರಡರಲ್ಲೂ ಕಥೆಗಳು ಭಿನ್ನವಾದ್ರು ಅಲ್ಲಿ ಸತ್ತವರು ಇಬ್ಬರು ಹೆಣ್ಣು. ಒಂದು ಕಥೆಯಲ್ಲಿ ಪತ್ನಿಯದ್ದೇ ತಪ್ಪು ಎದ್ದು ಕಾಣುತ್ತೆ. ಇನ್ನೊಂದರಲ್ಲಿ ಪಾಪದ ಹುಡುಗಿಯ ಕರುಣಾಜನಕ ಸ್ಟೋರಿ ಕಣ್ಮುಂದೆ ಬಂದು ನಿಲ್ಲುತ್ತೆ. ಒಬ್ಬರು ಹೊಂದಾಣಿಕೆ ಮಾಡ್ಕೊಂಡು ತಗ್ಗಿಬಗ್ಗಿ ಅನುಸರಿಕೊಂಡು ಹೋಗಿದ್ರೆ ಅವರ ಸಂಸಾರ ಚೆನ್ನಾಗಿಯೇ ಇರ್ತಿತ್ತು. ಆದ್ರೆ ಈ ಸಂಸಾರದಲ್ಲಿ ಮಾತ್ರ ನಿಜಕ್ಕೂ ಒಬ್ಬ ಅಯೋಗ್ಯನಿಗೆ ಆ ಹುಡುಗಿಯನ್ನ ಮದುವೆ ಮಾಡಿಕೊಟ್ಟು ತಪ್ಪು ಮಾಡಿದ್ರು. ಇಬ್ಬರ ಕಥೆಗಳು ಸಾವಿರಾರು ಜನರಿಗೆ ಪಾಠ ಹೇಳುವಂತಹದ್ದು. ಇಂತಹ ದುರಂತಗಳು ಯಾವುದೇ ಮನೆಯಲ್ಲಿ ನಡೆಯುವಂತಹ ಸನ್ನಿವೇಶವಿದ್ರು ಅದನ್ನ ಆದಷ್ಟು ಬೇಗ ಸರಿಮಾಡಿಕೊಂಡ್ರೆ ಮುಂದೆ ಒಳ್ಳೆಯದಾಗಬುಹುದು. ಇಲ್ಲದಿದ್ರೆ ಸಂಸಾರದ ಗಂಡಾಗುಂಡಿಯಲ್ಲಿ ಅನಾಹುತಗಳು ನಡೆಯುತ್ತಲೇ ಇರುತ್ತೆ.

LEAVE A REPLY

Please enter your comment!
Please enter your name here